Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 24, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 161/2015 ಕಲಂ 87 Karnataka Police Act.     
ದಿ: 23-08-2015 ರಂದು 9-30 ಗಂಟೆಗೆ ಶ್ರೀ ಅಶೋಕ. ಎ.ಎಸ್.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರನ್ನು ನೀಡಿದ್ದು ಸದರಿ ದೂರಿನಲ್ಲಿ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ರಾತ್ರಿ 8-00 ಗಂಟೆಯ ಸುಮಾರಿಗೆ ಭಾಗ್ಯನಗರದ ಕೆ.ಎಚ್.ಡಿ.ಸಿ. ಕಾಲೋನಿಯ ಕೈಮಗ್ಗದ ಗುಡೌನ ಹತ್ತಿರ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  7300=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾಧಿಯನ್ನು ನೀಡಿದ್ದು ಇದು ಅಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ಸಿ.ಜೆ.ಎಮ್ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು 10-00 ಪಿ.ಎಮ್ ಗಂಟೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2015 ಕಲಂ. 143, 147, 323, 504, 506 ಸಹಿತ 149 ಐ.ಪಿ.ಸಿ ಹಾಗೂ 3(1)(10) ಎಸ್.ಎಸಿ/ಎಸ್.ಟಿ. ಕಾಯ್ದೆ.
ದಿ:23-08-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಉಡಚಪ್ಪ ತಂದೆ ಯಮನಪ್ಪ ಭೋವಿ. ವಯ: 36 ವರ್ಷ, ಜಾ: ವಡ್ಡರ [ಭೋವಿ], ಉ: ಮೇಸ್ತ್ರಿ ಕೆಲಸ, ಸಾ: ಟಣಕನಕಲ್ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿನಾಂಕ: 23.08.2015 ರಂದು ಬೆಳಿಗ್ಗೆ 8.30 ಗಂಟೆಗೆ ನಮ್ಮೂರ ಸೀಮಾದ ದನಕಾಯರ ಮಲ್ಲಣ್ಣ ಇವರ ಹೊಲದಲ್ಲಿರುವ ಕಲ್ಲು ಬಂಡೆಗಳಿಗೆ ತೂತು ಹಾಕುವ ಕೆಲಸಕ್ಕೆ ನಮ್ಮ ಕೆಲಸಗಾರರಾದ  ನಾಗರಾಜ ಹಾಗೂ ಇನ್ನೊಬ್ಬ ರುದ್ರೇಶ ಕೋಳೂರು ಕೂಡಿಕೊಂಡು ಹೋಗಿದ್ದರು. ಆಗ ಅಲ್ಲಿ ಕಲ್ಲುಬಂಡೆಗಳಿಗೆ ತೂತು ಹಾಕದಂತೆ ಅಲ್ಲಿದ್ದ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಇವರುಗಳು ಬಂದು ತಡೆಹಿಡಿದಿರುತ್ತಾರೆಂದು ಜಮೀನು ಮಾಲೀಕರಾದ ಮಲ್ಲಣ್ಣ ಇವರು ನನಗೆ ಪೋನ್ ಮಾಡಿ ತಿಳಿಸಿದರು. ಆಗ ನಾನು ನಮ್ಮೂರಿನ ಆಂಜನೇಯ ಸಣ್ಣಗೌಡರ ಹಾಗೂ ಕೃಷ್ಣ ಇವರೊಂದಿಗೆ ಮಲ್ಲಣ್ಣನವರ ಜಮೀನು ಹತ್ತಿರ ಹೋಗುವ ಮಾರ್ಗ ಮಧ್ಯದಲ್ಲಿ ಗವಿಸಿದ್ದಪ್ಪ ಹಾಗೂ ಹನುಮಂತಪ್ಪ ಕಟ್ಟಿ ನನ್ನ ಎದುರಿಗೆ ಬಂದಾಗ ಅವರಿಗೆ ನಾನು ಗವಿಸಿದ್ದಪ್ಪನಿಗೆ ಯಾಕೇ ಕೆಲಸ ಬಂದು ಮಾಡಿಸಿದ್ದಿರಿ ಎಂದು ಕೇಳಿದಾಗ ಆತನು ಏನೂ ಹೇಳದೇ ಊರಿನ ಕಡೆಗೆ ಹೊದರು. ಆಗ ನಾನು ಮಲ್ಲಣ್ಣನ ಹೊಲಕ್ಕೆ ಮುಂದೆ ಹೊಗುತ್ತಾ ಮತ್ತೇ ದಾರಿಯಲ್ಲಿ ರುದ್ರಗೌಡ ಹಾಗೂ ಮಂಜಪ್ಪ ಇವರುಗಳು ಗಾಡಿಯಲ್ಲಿ ಬಂದರು. ಆಗ ನಾನು ಅವರಿಗೆ ನಿಲ್ಲಿಸಿ ಯಾಕೋ ಈ ರೀತಿ ಕೆಲಸ ಬಂದು ಮಾಡಿಸಿರಿ ಅಂತ ಕೇಳಿದೆನು. ಆಗ ಅವರು ತಮ್ಮ ಹೊಲದ ಬಾಜು ನಮ್ಮ ಸಜ್ಜಿ ಹೊಲದಲ್ಲಿಯ ಬೆಳೆ ಲುಕ್ಸಾನ್ ಆಗುತ್ತದೆ ಅಂತ ಹೇಳಿದರು. ಆಗ ನಾನು ಹಾಗೇಯೇ ಮಲ್ಲಣ್ಣನವರ ಹೊಲಕ್ಕೆ ಹೋಗಿ ನೋಡಿದಾಗಿ ಕೆಲಸ ಬಂದಾಗಿತ್ತು. ನಂತರ ಮಲ್ಲಣ್ಣನವರಿಗೆ ಪೋನ್ ಮೂಲಕ ನಾನು ಜಾಗೆಯಲ್ಲಿ ನೊಡಿದ ಬಗ್ಗೆ ತಿಳಿಸಿದಾಗ ಅವರು ತಕರಾರು ಮಾಡುವವರು ಯಾರು ಇಲ್ಲ ಅಂದ್ರೆ ಕೆಲಸ ಚಾಲೂ ಮಾಡುವಂತೆ ಹೇಳಿದರು. ಆಗ ನಾನು ನಾಗರಾಜ ಹಾಗೂ ರುದ್ರೇಶ ಕೋಳೂರು ಇವರಿಂದ ಕಲ್ಲುಗಳಿಗೆ ತೂತು ಹಾಕುವ ಕೆಲಸ ಪ್ರಾರಂಭಿಸಿದೆನು. ನಂತರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಹಾಗೂ ಬಸವರಾಜ ಬಿಸನಳ್ಳಿ ಹೀಗೆ ಐದು ಜನ ಕೂಡಿ ಬಂದರು. ನೀವು ಯಾರನ್ನ ಕೇಳಿ ಕೆಲಸ ಚಾಲೂ ಮಾಡಿರಿ ಅಂತ ಬಾಯಿ ಮಾಡಿದರು. ಆಗ ಅಲ್ಲಿಯೇ ಕಟ್ಟಿಗೆ ಆರಿಸಲು ಬಂದಿದ್ದ ಹನುಮಂತ ಭೋವಿ ಬಂದು ಯಾಕ ಬಾಯಿ ಮಾಡುತ್ತೀರಿ ಅಂದಾಗ ಅವರೆಲ್ಲ ನಮಗೆ ಮೊದಲು ಕೆಲಸ ಮುಗಿಸಿ ಊರಾಗ ಬರ್ಲೇ ಮಾತನಾಡುತ್ತೇವೆೆ ಅಂತ ಹೇಳಿ ಹೋದರು. ನಂತರ ನಾವು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಎಲ್ಲರೂ ಊಟಕ್ಕೆ ಊರಿಗೆ ಬಂದೇವು. ನಂತರ ಸಾಯಂಕಾಲ 4.30 ಗಂಟೆಯ ಸುಮಾರಿಗೆ ನಾನು ಮತ್ತು ನಾಗರಾಜ, ರುದ್ರೇಶ ಕೋಳೂರು, ಆಂಜನೇಯ ಸಣ್ಣಗೌಡರ, ಕೃಷ್ಣ, ಬಸವರಾಜ ಭೋವಿ, ಮಾರುತಿ ಭೋವಿ, ದುರುಗಪ್ಪ ಭೋವಿ, ವೆಂಕಟೇಶ ಭೋವಿ, ಕಲ್ಲಪ್ಪ ಭೋವಿ, ಹನುಮಪ್ಪ ಭೋವಿ, ಮಾರುತೆಪ್ಪ ಭೋವಿ, ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ, ಈರಪ್ಪ ಭೋವಿ, ಭೀಮಪ್ಪ ಭೋವಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಯಮನೂರಪ್ಪ ನಾಯಕ ಹೀಗೆ ಎಲ್ಲರೂ ನಮ್ಮೂರಿನ ಶಂಕ್ರಪ್ಪ ಬೊಮ್ಮನಾಳ ಇವರ ಹೋಟೆಲ್ ಮುಂದೆ ಮಾತನಾಡುತ್ತಾ ನಿಂತಿರುವಾಗ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ, ಬಸವರಾಜ ಬಿಸನಳ್ಳಿ ಸಂಗಪ್ಪ ಬಿಸನಳ್ಳಿ, ಭೀಮಪ್ಪ ಬಿಸನಳ್ಳಿ, ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ, ದೇವಪ್ಪ ಪೊಲೀಸ್ ಪಾಟೀಲ್, ಪಕ್ಕೆಪ್ಪ ಬಿಸನಳ್ಳಿ ಹಾಗೂ ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಹೀಗೆ ಎಲ್ಲರೂ ಗುಂಪು ಕೂಡಿಕೊಂಡು ಬಂದವರೇ ಈ ವಡ್ಡ ಸೂಳೇ ಮಕ್ಕಳದು ನಮ್ಮೂರಾಗ ತಿಂಡಿ ಜಾಸ್ತಿಯಾಗಿದೆ ಅಂತ ಜಾತಿ ಎತ್ತಿ ಬೈಯುತ್ತಾ ಒಮ್ಮೆಲೇ ನನಗೆ ಮತ್ತು ನಮ್ಮ ಹನುಮಂತ, ವೆಂಕಟೇಶ ಹೀಗೆ ಮೂವರಿಗೆ ಎಲ್ಲರೂ ತೆಕ್ಕೆ ಬಡಿದು ಅಂಗಿ ಹಿಡಿದು ಜಗ್ಗಾಡಿ ಕೈಗಳಿಂದ ಮೈ ಕೈಗೆ ಬಡಿದರು. ಆಗ ಯಮನೂರಪ್ಪ ನಾಯಕ ಹಾಗೂ ಇತರ ಹಿರಿಯರು ಜಗಳ ಬಿಡಿಸುವಾಗ ಅವರೆಲ್ಲ ನಮಗೆ ಈ ದಿನ ಉಳಿದುಕೊಂಡಿರ್ಲೇ ವಡ್ಡ ಸೂಳೇ ಮಕ್ಕಳೇ ಇಲ್ಲದಿದ್ದರೆ ಹೊಡೆದುಸಾಯಿಸುತ್ತಿದ್ದೇವು ಅಂತ ಜೀವದ ಬೆದರಿಕೆ ಹಾಕಿ ಹೋದರು. ಕಾರಣ 1] ಗವಿಸಿದ್ದಪ್ಪ ತಂದೆ ಸಂಗಪ್ಪ ಬಿಸನಳ್ಳಿ 2] ಮಂಜಪ್ಪ @ ಮಂಜುನಾಥ ತಂದೆ ವೀರೇಶಪ್ಪ ಮೆಳ್ಳಕೇರಿ 3] ಹನುಮಂತಪ್ಪ ಕಟ್ಟಿ, 4] ರುದ್ರಗೌಡ ಪೊಲೀಸ್ ಪಾಟೀಲ್ 5] ಬಸವರಾಜ ಬಿಸನಳ್ಳಿ 6] ಸಂಗಪ್ಪ ಬಿಸನಳ್ಳಿ 7] ಭೀಮಪ್ಪ ಬಿಸನಳ್ಳಿ 8] ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ 9] ದೇವಪ್ಪ ಪೊಲೀಸ್ ಪಾಟೀಲ್ 10] ಪಕ್ಕೆಪ್ಪ ಬಿಸನಳ್ಳಿ ಹಾಗೂ 11] ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಎಲ್ಲರೂ ಜಾತಿ ಗಾಣಿಗೇರ ಲಿಂಗಾಯತ ಎಲ್ಲರೂ ಸಾ: ಟಣಕನಕಲ್ ಗ್ರಾಮ ಇವರುಗಳು ನಮಗೆ ಮಲ್ಲಣ್ಣ ಇವರ ಹೊಲದಲ್ಲಿ ಕಲ್ಲಬಂಡೆಗಳಿಗೆ ತೂತು ಹಾಕುವ ವಿಷಯವಾಗಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 219/2015 ಕಲಂ. 143, 147, 323, 324, 504, 506 ಸಹಿತ 149 ಐ.ಪಿ.ಸಿ:
ದಿ:23-08-2015 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ಗವಿಸಿದ್ದಪ್ಪ ತಂದೆ ಸಂಗಪ್ಪ ಬಿಸನಳ್ಳಿ. ಸಾ: ಟಣಕನಕಲ್. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿನಾಂಕ: 23.08.2015 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಹೀಗೆ ಎಲ್ಲರೂ ನಮ್ಮ ಮೋಟಾರ ಸೈಕಲ್ಗಳಲ್ಲಿ ಆಜು ಬಾಜು ಇರುವ ನಮ್ಮೂರ ಸೀಮಾದ ದನಕಾಯರ ಮಲ್ಲಣ್ಣ ಇವರ ಹೊಲದಲ್ಲಿರುವ ಕಲ್ಲು ಬಂಡೆಗಳಿಗೆ ತೂತು ಹಾಕುತ್ತಿರುವ ಸುದ್ದಿ ಕೇಳಿ ಹೋದೆವು. ಮಲ್ಲಣ್ಣ ಇವರ ಹೊಲದಲ್ಲಿ ನಮ್ಮೂರ ವಡ್ಡರ ಉಡಚಪ್ಪ ಮೇಸ್ತ್ರಿ ಇವರ  ಕೆಲಸಗಾರರಾದ ನಾಗರಾಜ ಹಾಗೂ ಇನ್ನೊಬ್ಬ ರುದ್ರೇಶ ಕೋಳೂರು ಇದ್ದರು. ಆಗ ನಾವು ಅವರಿಗೆ ಇಲ್ಲಿ ಕಲ್ಲುಬಂಡೆಗಳಿಗೆ ತೂತು ಹಾಕ ಬೇಡರಿ ಆಮೇಲೆ ಬ್ಲಾಸ್ಟ ಮಾಡಿದರೆ ನಮ್ಮ ಬೆಳೆಗಳಿಗೆ ಲುಕ್ಸಾನ ಆಗುತ್ತದೆ ಅಂತ ಹೇಳಿ ಅವರಿಗೆ ಕೆಲಸ ಮಾಡದಂತೆ ಬಿಡಿಸಿದೆವು. ನಂತರ ಅಲ್ಲಿಂದ ನಾವು ವಾಪಸ್ ಗಾಡಿಗಳ ಮೇಲೆ ಬರುವಾಗ ದಾರಿಯ ಮಧ್ಯದಲ್ಲಿ ಉಡಚಪ್ಪ ಮೇಸ್ತ್ರಿ ಬಂದು ನಮಗೆ ನಿಲ್ಲಿಸಿ ಕೆಲಸ ಯಾಕೆ ಬಂದ ಮಾಡಿಸಿರಿ ಅಂತ ಕೇಳಿದನು ಆಗ ನಾವು ಏನು ಮಾತನಾಡದೇ ಊರಿಗೆ ಬಂದೆವು. ನಂತರ ಸಾಯಂಕಾಲ 4.30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಉಡಚಪ್ಪ ಬಿಸನಳ್ಳಿ ಇಬ್ಬರೂ ನಮ್ಮ ಮನೆಯ ಹತ್ತಿರದ ಶಂಕ್ರಪ್ಪ ಬೊಮ್ಮನಾಳ ಇವರ ಹೋಟೆಲ್ ಹತ್ತಿರ ಮಾತನಾಡುತ್ತಾ ಇರುವಾಗ ನಮ್ಮೂರಿನ ಉಡಚಪ್ಪ ಭೋವಿ, ದುರುಗಪ್ಪ ಭೋವಿ, ಬಸವರಾಜ ಭೋವಿ, ವೆಂಕಟೇಶ ಭೋವಿ, ಕಲ್ಲಪ್ಪ ಭೋವಿ, ಹನುಮಪ್ಪ ಭೋವಿ, ಮಾರುತೆಪ್ಪ ಭೋವಿ, ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ, ಈರಪ್ಪ ಭೋವಿ, ಭೀಮಪ್ಪ ಭೋವಿ ಹಾಗೂ ಯಮನೂರಪ್ಪ ನಾಯಕ ಹೀಗೆ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ಲೇ ಗವ್ಯಾ ಸೂಳೇ ಮಗನೇ ಇವತ್ತು ನಮ್ಮ ಕೆಲಸ ಬಂದ ಮಾಡಿ ನಮಗೆ ತೊಂದರೆ ಕೊಟ್ಟಿಯಲ್ಲಲೇ ಮಗನೇ ಊರಾಗಿದ್ದು ಯ್ಯಾಂಗ ಬಾಳೇವು ಮಾಡುತ್ತಿ ನೋಡುತ್ತಿವಲೇ ಅಂತ ಜಗಳ ತೆಗೆದು ದಬ್ಬಾಡಿದರು. ಆಗ ನೀವೇಲ್ಲ ಬಂದು ದೌರ್ಜನ್ಯ ಮಾಡುತ್ತಿರೇನು ಅಂದಾಗ ಅವರುಗಳು ಏಕಾ ಏಕೀ ನನಗೆ ಮತ್ತು ಉಡಚಪ್ಪ ಬಿಸನಳ್ಳಿ ಈತನಿಗೆ ತಮ್ಮ ಕೈಯಿಂದ ಎಲ್ಲರೂ ನಮ್ಮ ಮೈ ಕೈಗೆ ಬಡಿದರು. ಅಲ್ಲದೇ ನನ್ನ ಎದೆ ಮೇಲಿನ ಅಂಗಿಯನ್ನು ಹಿಡಿದು ಉಡಚಪ್ಪ ಭೋವಿ ಇತನು ತನ್ನ ಕೈ ಮುಷ್ಠಿ ಮಾಡಿ ಗುದ್ದಿದನು. ಆಗ ನಾನು ಸತ್ತೇನೆಪ್ಪೋ ಕಾಪಾಡಿರಿ ಅಂತ ಕೂಗಾಡಿದಾಗ ನಮ್ಮ ತಂದೆ ಸಂಗಪ್ಪ ಬಿಸನಳ್ಳಿ ಮತ್ತು ಮೇನ್ ರೋಡಿನಲ್ಲಿದ್ದ ನಮ್ಮೂರಿನ ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ, ಬಸವರಾಜ ಬಿಸನಳ್ಳಿ, ಭೀಮಪ್ಪ ಬಿಸನಳ್ಳಿ, ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ, ದೇವಪ್ಪ ಪೊಲೀಸ್ ಪಾಟೀಲ್, ಪಕ್ಕೆಪ್ಪ ಬಿಸನಳ್ಳಿ ಹಾಗೂ ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಇವರೆಲ್ಲರೂ ಬಂದು ಜಗಳ ಬಿಡಿಸಿದರು. ಆಗ ಅವರು ನಮಗೆ ನಿಮ್ಮನೆಲ್ಲ ಹೊಡೆದು ಇದೇ ರೋಡಿನ ಮೇಲೆ ಸಾಯಿಸಿ ಬಿಡುತ್ತೇವೆಲೇ ಸೂಳೇ ಮಕ್ಕಳೇ ಅಂತ ಜೀವ ಬೆದರಿಕೆ ಹಾಕಿದರು. ಸದರಿ 1] ಉಡಚಪ್ಪ ಭೋವಿ 2] ದುರುಗಪ್ಪ ಭೋವಿ 3] ಬಸವರಾಜ ಭೋವಿ 4] ವೆಂಕಟೇಶ ಭೋವಿ 5] ಕಲ್ಲಪ್ಪ ಭೋವಿ 6] ಹನುಮಪ್ಪ ಭೋವಿ 7] ಮಾರುತೆಪ್ಪ ಭೋವಿ 8] ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ 9] ಈರಪ್ಪ ಭೋವಿ 10] ಭೀಮಪ್ಪ ಭೋವಿ ಹಾಗೂ 11] ಯಮನೂರಪ್ಪ ನಾಯಕ ಎಲ್ಲರೂ ಸಾ: ಟಣಕನಕಲ್ ಗ್ರಾಮ ಇವರುಗಳು ನಮಗೆ ಕಲ್ಲಬಂಡೆಗಳಿಗೆ ತೂತು ಹಾಕುವ ವಿಷಯವಾಗಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ, ಹೊಡಿಬಡಿ ಮಾಡಿದ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 190/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕಃ-23-08-2015 ರಂದು ಮದ್ಯಾಹ್ನ 2-00 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತವಾದ ಬಗ್ಗೆ ಎಮ್.ಎಸ್.ಸಿ ಮಾಹಿತಿ ಬಂದ ಕೂಡಲೇ ಗಂಗಾವತಿ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಜೈಕಿಸಾನ ಈತನಿಗೆ ವಿಚಾರಿಸಿದ್ದು ನಂತರ ಸದರಿ ಜೈಕಿಸಾನ ಈತನ ಜೊತೆಯಲ್ಲಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಮಂಜುನಾಥ ತಂದಿ ಮಲ್ಲಿಕಾರ್ಜನ ಮಸ್ಕಿ ಸಾ. ಇಸ್ಲಾಂಪೂರ ಗಂಗಾವತಿ ರವರು ಒಂದು ಲಿಖಿತ ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಗಂಗಾವತಿಯ ಮಂಜುನಾಥ ರೈಸ್ ಮಿಲ್ ದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ಸದರಿ ರೈಸ್ ಮೀಲ್ ದಲ್ಲಿ ಬಿಹಾರ ರಾಜ್ಯದ ಲೇಬರಗಳು ಕೆಲಸ ಮಾಡಿಕೊಂಡಿರುತ್ತಾರೆ ಅದರಂತೆ ಜೈಕಿಸಾನ ಈತನು ಸದರಿ ರೈಸ್ ಮೀಲ್ ದಲ್ಲಿ ಹಮಾಲಿ ಕೆಲಸಕ್ಕೆ ಬಂದಿರುತ್ತಾನೆ ಇಂದು ದಿನಾಂಕಃ 23-08-2015 ರಂದು ಬೆಳಿಗ್ಗೆ ಸದರಿ ಜೈಕಿಸಾನ್ ಈತನು ರೈಸ್ ಮೀಲ್ ದಲ್ಲಿ ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ತನ್ನ ಕೆಲಸದ ಸಲುವಾಗಿ ರಾಯಚೂರುಗೆ ಹೋಗಲೆಂದು ಬಸ್ ನಿಲ್ದಾಣಕ್ಕೆ ಹೋದನು ಪಿರ್ಯಾದಿ ಮಂಜುನಾಥನದು ಕಾರಟಗಿಯಲ್ಲಿ ಕೆಲಸ ವಿದ್ದುದರಿಂದ ಆತನ ಜೊತೆಯಲ್ಲಿ ಹೋಗಿ ಇಬ್ಬರು ಕೂಡಿ KSRTC Bus no KA42F1025 ನೆದ್ದರಲ್ಲಿ ಕುಳಿತುಕೊಂಡು ಹೋರಟಾಗ ಮದ್ಯಾಹ್ನ 12-00 ಗಂಟಯ ಸುಮಾರಿಗೆ ಗಂಗಾವತಿ ರಾಯಚೂರು ರಸ್ತೆ ಗುಂಡೂರು ಕ್ರಾಸ್ ದಲ್ಲಿ ಸದರಿ ಬಸ್ ಚಾಲಕ ತನ್ನ ಬಸನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು  ಅದೇ ರೀತಿಯಾಗಿ ಕಾರಟಗಿ ಕಡೆಯಿಂದ KSRTC Bus no KA36F1340 ಬಸ್ ಚಾಲಕ ತನ್ನ ಬಸನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ನಿಯಂತ್ರಣ ಕಾಯ್ದುಕೊಳ್ಳದೇ ಪರಸ್ಪರ ಟಕ್ಕರ ಕೊಟ್ಟುಕೊಂಡು ಅಪಘಾತವಾಗಿದ್ದರಿಂದ ಬಸ್ ನಲ್ಲಿ ಕುಳಿತಿದ್ದ ಜೈಕಿಸಾನ ಈತನಿಗೆ ಬಲಗೈಗೆ ಮೂಳೆ ಮುರಿತವಾದ ಗಂಭೀರ ಸ್ವರೂಪದ ಗಾಯವಾಗಿದ್ದು ಮತ್ತು ಬಸ್ಸಿನಲ್ಲಿ ಕುಳಿತಿದ್ದ ಈತರೆ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಪಘಾತವಾದ ನಂತರ ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಿರುತ್ತೇನೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 7-55 ಗಂಟೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008