ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 220/2015 ಕಲಂ. 78(3) Karnataka Police Act.
ದಿನಾಂಕ:26-08-2015 ರಂದು ಸಾಯಂಕಾಲ 6-30 ಗಂಟೆಗೆ
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಚಿಕ್ಕಬೊಮ್ಮನಾಳ ಗ್ರಾಮದ ಬಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಮೇಶ ಪೂಜಾರಿ ಇತನು ಬರ
ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು
ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶೀಬದ
ಜೂಜಾಟದಲ್ಲಿ ತೊಡಗಿದ್ದಾಗ ಹೆಚ್.ಸಿ-90 ರಾಜಾಸಾಬ ಹಾಗೂ
ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 740=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಪೆನ್ನು ಅವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 221/2015 ಕಲಂ. 87 Karnataka Police Act.
ದಿ: 26.08-15 ರಂದು ಸಾಯಂಕಾಲ
6-45 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ
ಠಾಣಾ ವ್ಯಾಪ್ತಿಯ ಉಪಲಾಪೂರ ಗ್ರಾಮದ ಮಸೀದಿ
ಹತ್ತಿರದ ಅಗಸಿ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 6 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ
ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ
ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 1550=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು
ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 94/2015 ಕಲಂ. 279, 337 ಐ.ಪಿ.ಸಿ:
ದಿನಾಂಕ: 26-08-2015 ರಂದು
ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಪ್ಯಾಸೇಂಜರ್ ಆಟೋ ನಂ. ಕೆಎ-26/ಎ-1513
ನೇದ್ದರಲ್ಲಿ ಪಿರ್ಯಾದಿದಾರನನ್ನು ಕರೆದುಕೊಂಡು ಯಲಬುರ್ಗಾ-ಮುಧೋಳ ರಸ್ತೆಯ ಮೇಲೆ ಅತೀವೇಗ ಹಾಗೂ
ಅಲಕ್ಷತನದಿಂದ ಚಲಾಯಿಸಿಕೊಂಡು ಹಳ್ಳದ ಬ್ರಿಡ್ಜ ದಾಟಿ ಸ್ವಲ್ಪ ಮುಂದುಗಡೆ ತಿರುವಿನಲ್ಲಿ
ಹೋಗುತ್ತಿರುವಾಗ ಪ್ಯಾಸೇಂಜರ್ ಆಟೋ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ
ಆರೋಪಿತನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment