ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 222/2015 ಕಲಂ. 78(3) Karnataka Police Act.
ದಿನಾಂಕ:27-08-2015
ರಂದು ಸಾಯಂಕಾಲ 6-10 ಗಂಟೆಗೆ ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಗ್ರಾಮ
ಪಂಚಾಯತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00
ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಹಣ ಪಡೆದು ನಂಬರ ಬರೆದು ಕೊಡುವ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಿತ್ತರಂಜನ್.ಡಿ. ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 675=00 ರೂ,
ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್
ಪೆನ್ನು ಹಾಗೂ ಒಂದು ಜೆನ್ ಕಂಪನಿಯ ಮೊಬೈಲ್ ಅಂಕಿ 300=00 ರೂ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದ ಮಟಕಾ
ಚೀಟಯನ್ನು ಮುತ್ತಾಳ ಗ್ರಾಮದ ಚನ್ನಪ್ಪ ತೋಟದ ಎಂಬುವವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ.
ಅಂತಾ ಮುಂತಾಗಿ ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈ ಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ. 275/2015 ಕಲಂ. 341, 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 27-08-2015 ರಂದು
ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗರಾಜ ತಂದೆ ನಿಂಗಪ್ಪ ಅಗಸರ, ವಯಸ್ಸು 32 ವರ್ಷ, ಉ: ಒಕ್ಕಲುತನ ಸಾ: ದಾಸನಾಳ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ರೈತರ ಅನುಕೂಲಕ್ಕಾಗಿ ಉದ್ಯೋಗ ಖಾತ್ರಿ
ಯೋಜನೆಯಲ್ಲಿ ಬ್ಯಾಂಕ್ ಪಾಸ್ ಬುಕ್ ನ್ನು ಮಾಡಿಸಿಕೊಡುತ್ತೇನೆ. ನನ್ನ ಹತ್ತಿರ ನಮ್ಮ
ಗ್ರಾಮದ ಅಮರೇಶಪ್ಪ ಈತನ ಮಗನಾದ ಬಸವರಾಜನ ಪಾಸ್ ಬುಕ್ ಇದ್ದು, ಅದನ್ನು ವಾಪಸ್ ಕೊಟ್ಟಿದ್ದೆನು. ಇಂದು ದಿನಾಂಕ:-27-08-2015 ರಂದು ಬೆಳಿಗ್ಗೆ
08:30 ಗಂಟೆಯ ಸುಮಾರಿಗೆ ನಾನು ರೋಡಿನಲ್ಲಿ ಮದ್ದಾನಪ್ಪನ ಹೋಟಲ್ ಹತ್ತಿರ ಹೋಗುವಾಗ ನಮ್ಮ ಗ್ರಾಮದ
(1) ಅಮರೇಶಪ್ಪ ತಂದೆ ಸಿದ್ದಪ್ಪ ರಾಮದುರ್ಗ 66 ವರ್ಷ (2) ಈಶಪ್ಪ ತಂದೆ ಸಿದ್ದಪ್ಪ ರಾಮದುರ್ಗ, 60 ವರ್ಷ, (3) ಸಿದ್ದಪ್ಪ ತಂದೆ ಅಮರೇಶಪ್ಪ ರಾಮದುರ್ಗ (4) ಶ್ರೀಕಾಂತ ತಂದೆ ಈಶಪ್ಪ, ವಯಸ್ಸು 27 ವರ್ಷ, ಲಿಂಗಾಯತ ಇವರುಗಳು ಕೂಡಿಕೊಂಡು ಬಂದು ನನ್ನನ್ನು ಅಕ್ರಮವಾಗಿ ತಡೆದು ಲೇ ಸೂಳೇ ಮಗನೇ
ನಿನ್ನದು ಬಹಳಾ ಆಗಿದೆ ಅಂತಾ ಬೈದು ಕೈಗಳಿಂದ ಹೊಡಿ-ಬಡಿ ಮಾಡಿದ್ದು, ನನಗೆ " ಇನ್ನೊಮ್ಮೆ ನೀನು ನಮ್ಮ ಹುಡುಗನ ಪಾಸ್ ಬುಕ್ ಏನಾದರೂ ಕೇಳಿದರೆ ನಿನ್ನನ್ನು
ಜೀವ ಸಹಿತ ಮುಗಿಸಿಬಿಡುತ್ತೇವೆ: ಅಂತಾ ಜೀವದ ಬೆದರಿಕೆ ಹಾಕಿದರು. ಈ ವಿಷಯವನ್ನು ನನ್ನ ಅಣ್ಣನಿಗೆ
ತಿಳಿಸಿ ತಡವಾಗಿ ದೂರು ನೀಡಿರುತ್ತೇನೆ. ಕಾರಣ 4 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು
ವಿನಂತಿ" ಅಂತಾ ಮುಂತಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಳ್ಳಲಾಯಿತು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 151/2015 ಕಲಂ. 379 ಐ.ಪಿ.ಸಿ:
ದಿನಾಂಕ:27-08-2015
ರಂದು ರಾತ್ರಿ 8-30 ಗಂಟೆಗೆ ಪಿರ್ಯಾಧಿದಾರರಾದ ಗುರುಪಾದಪ್ಪ ತಂದೆ
ಪರಪ್ಪ ಜಾಡರ ವಯಾ: 56 ವರ್ಷ ಜಾತಿ: ಜಾಡರ ಉ: ಕೆ.ಎಸ್.ಆರ್.ಟಿ.ಸಿ ಡ್ರೈವರ್ ಸಾ: ಇಂದಿರಾ
ಕಾಲೋನಿ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಪಿರ್ಯಾಧಿಯ
ಸಾರಾಂಶವೆನೆಂದರೆ ಪಿರ್ಯಾದಿಯು ತನ್ನ ಉಪಯೋಗಕ್ಕಾಗಿ ಒಂದು ಬಜಾಜ್ ಪ್ಲಾಟಿನಾ 125 ಸಿ.ಸಿ ಮೋಟಾರ ಸೈಕಲ್ ನಂ:ಕೆ.ಎ-37/ ಆರ್-6573, ಇದರ ಇಂಜಿನ ನಂ JKMBSM61229, ಚೆಸ್ಸಿ ನಂ-MD2DDJKZZSWM15472 ನೇದ್ದನ್ನು ಇಟ್ಟುಕೊಂಡಿದ್ದು. ಸದರಿ ಮೋಟಾರ ಸೈಕಲ್ ಅಂ.ಕಿ.48,000-00 ರೂ:ಗಳಷ್ಟು
ಆಗಬಹುದು. ಸದರಿ ಮೋ.ಸೈ.ನ್ನು ದಿನಾಂಕ:07-08-2015 ರಂದು ಮದ್ಯಾಹ್ನ
3-00 ಗಂಟೆ ಸುಮಾರಿಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಟ್ಟಿದ್ದನ್ನು ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ
ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:151/2015 ಕಲಂ: 379 ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 137/2015 ಕಲಂ. 143, 353, 323, 504,
506 ಸಹಿತ 149 ಐ.ಪಿ.ಸಿ:
ದಿನಾಂಕ 27-08-2015 ರಂದು ಸಂಜೆ 7-30 ಗಂಟೆಗೆ ಮೇಲ್ಕಂಡ ಫೀರ್ಯಾಧಿದಾರನು
ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ 26-08-2015 ರಂದು ನನ್ನನ್ನು ಕನಕಗಿರಿ
ಗ್ರಾಮದ ಶ್ರೀ ಶಿವಯೋಗಿ ಚನ್ನಮಲ್ಲ ಹಿ.ಪ್ರಾ.ಶಾಲೆ ಯಲ್ಲಿ ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ
ಆಟಗಳ ನೀಣರ್ಾಯಕರಾಗಿ ನೇಮಕ ಮಾಡಿದ್ದ ಪ್ರಕಾರ ಬಂಕಾಪೂರ ಗ್ರಾಮದ ಸ.ಹಿ. ಪ್ರಾ. ಶಾಲೆಯ ಬಾಲಕಿಯರು
ಹಾಗೂ ಕನಕಗಿರಿ ಗ್ರಾಮದ ಶ್ರೀ ಶಿವಯೋಗಿ ಚನ್ನಮಲ್ಲ ಹಿ.ಪ್ರಾ.ಶಾಲೆಯ ಬಾಲಕಿಯರ ನಡುವೆ ಖೋ.ಖೋ. ಪಂದ್ಯಾವಳಿಯನ್ನು
ಚನ್ನ ಮಲ್ಲ ಹಿ.ಪ್ರಾ.ಶಾಲೆ ಅಂಗಳದಲ್ಲಿ ಆಟ ಆಡುಸುತ್ತಿದ್ದಾಗ ಕನಕಗಿರಿಯ ಶ್ರೀ ಶಿವಯೋಗಿ ಚನ್ನಮಲ್ಲ
ಹಿ. ಪ್ರಾ. ಶಾಲೆಯ ಬಾಲಕಿಯರು ವಿಜೇತರಾಗಿದ್ದು, ಬಂಕಾಪೂರ ಶಾಲೆಯ ಬಾಲಕಿಯರು ಸೋತ್ತಿದ್ದರಿಂದ ಅಲ್ಲಿಯೇ
ನಿಂತಿದ್ದ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾಧಿದಾರನಿಗೆ ಏನಲೇ ಮಾಸ್ತರ್ ಸರಿಯಾಗಿ ತೀಪರ್ು
ಕೊಡುವದಕ್ಕೆ ಬರುತ್ತೇನೇಲೆ ಈ ಖೋ.ಖೋ. ಪಂದ್ಯಾವಳಿಯಲ್ಲಿ ಬಂಕಾಪೂರ ಹುಡುಗಿಯರು ಗೆಲ್ಲುತ್ತಾರೆ, ಅವರ
ಕಡೆ ತೀಪರ್ು ಕೊಡಲೇ ಸೂಳೇ ಮಗನೇ, ನಿನಗೆ ಸರಿಯಾಗಿ ತೀಪರ್ು ಕೊಡುವುದಕ್ಕೆ ಬರುವದಿಲ್ಲಲೇ ಸೂಳೇ ಮಗನೇ
ಅಂತಾ ಬೈಯುತ್ತಾ ಆರೋಪಿತರು ಫೀರ್ಯಾಧಿದಾರನ ಅಂಗಿಯ ಕೊಳ ಪಟ್ಟಿಯನ್ನು ಗಟ್ಟಿಯಾಗಿ ಹಿಡಿದು ಕೈಯಿಂದ
ಕಪಾಳಕ್ಕೆ, ಹೊಟ್ಟೆಗೆ, ಎದೆಗೆ ಜೋರಾಗಿ ಗುದ್ದಿದನು. ಮತ್ತು ನೆಲಕ್ಕೆ ಕೆಡವಿ ಕಾಲಿಗೆ ಹೊಟ್ಟೆಗೆ,
ತೊಡೆಗೆ, ತಲೆಗೆ ಜೋರಾಗಿ ಕಾಲಿನಿಂದ ಒದ್ದು ಈ ಸಲಾ ಉಳಿದಿಯೇಲೇ ಮಾಸ್ತರ ಇನ್ನೋಮ್ಮೇ ನಮ್ಮ ಊರವರ ಕಡೆ
ತೀಪು ಕೊಡದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಓಡಿ ಹೋದರು.
ಈ ಜಗಳದಲ್ಲಿ ಫಿರ್ಯಾಧಿಯ ಕೊರಳಲ್ಲಿದ್ದ 2 ತೊಲೆ ಬಂಗಾರ ಮತ್ತು 1 ತೊಲೆ ಬಂಗಾರ ಎಲ್ಲಿಯೋ ಬಿದ್ದು
ಹೋಗಿರುತ್ತದೆ. ಈ ಘಟನೆಯನ್ನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಅನುಮತಿ ಪಡೆದು ಈ ದಿವಸ
ಠಾಣೆಗೆ ಬಂದಿರುತ್ತೇನೆ ಕಾರಣ ತನಗೆ ಕರ್ತವ್ಯಕ್ಕೆ ಅಡೆ-ತಡೆ ಮಾಡಿ ಕೈಯಿಂದ ಹಲ್ಲೆ ಮಾಡಿ ಜೀವದ ಬೆದರಿಕೆ
ಹಾಕಿದವನ ಮೇಲೆ ಕೇಸ್ ಮಾಡಬೇಕೆಂದು ಕೊಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment