Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, August 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 241/2015  ಕಲಂ 78(3) Karnataka Police Act.
ದಿನಾಂಕ: 06-08-2015 ರಂದು ರಾತ್ರಿ 9:30 ಗಂಟೆಗೆ ಶ್ರೀ ಆಂಜನೇಯ ಡಿ.ಎಸ್. ಪಿ.ಎಸ್.ಐ. ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 06-08-2015 ರಂದು ಸಂಜೆ 7 ಗಂಟೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಇವರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ದಾಸನಾಳ ಗ್ರಾಮದಲ್ಲಿ ಸೈಯದ್ ಜಿಲಾನಸಾಬ ಎಂಬುವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಟಾಟ ನೆಡೆಯುತ್ತಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ.ಸಾಹೇಬರು ಮಾರ್ಗದರ್ಶನದಂತೆ ನಾನು ಮತ್ತು ಸಂಚಾರಿ ಪೊಲೀಸ್ ಠಾಣೆಯ ಪಿಸಿ 100, 23 ಹಾಗೂ ಜೀಪ್ ಚಾಲಕ ಬಾಸ್ಕರ ಎ.ಪಿ.ಸಿ. ಇವರೊಂದಿಗೆ ಸರಕಾರಿ ಜೀಪ್ ನಂ: ಕೆ.ಎ-37/ಎಫ್-262 ನೇದ್ದರಲ್ಲಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಗಂಗಾವತಿಯಿಂದ ಹೊರಟು ದಾಸನಾಳ ಗ್ರಾಮ ಸಮೀಪ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿ ನಡೆದುಕೊಂಡು ರಾತ್ರಿ 7:45 ಗಂಟೆಗೆ ಹೋಗಿ ಸೈಯದ ಜೀಲಾನಸಾಬ ಈತನ ಮನೆಯ ಹತ್ತಿರ ನೋಡಲಾಗಿ ಇಬ್ಬರು ವ್ಯಕ್ತಿಗಳು ನಿಂತಿದ್ದು ಅದರಲ್ಲಿ ಒಬ್ಬನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ನಸಿಬದ ಮಟಕಾ ಜೂಜಾಟ ಅಂತಾ ಕೂಗುತ್ತಾ ಮತ್ತೊಬ್ಬನು ಸಾರ್ವಜನಿಕರ ಹಣ ಪಡೆದುಕೊಳ್ಳುತ್ತಿರುವಾಗ ದಾಳಿ ಮಾಡಲು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದವನು ಮಟಕಾದ ಚೀಟಿ ಮತ್ತು ಪೆನ್ನನ್ನು ಬಿಟ್ಟು ಹೋಗಿದ್ದು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದವನನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ರಾಜೇಶ ತಂದೆ ಹುಸೇನಪ್ಪ 23 ವರ್ಷ ಜಾತಿ: ಈಡಿಗ, ಉ: ಅಟೋ ಚಾಲಕ ಸಾ: ದಾಸನಾಳ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 7825-00 ರೂ, 06 ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ನಂತರ ಓಡಿ ಹೋದವನು ಹೆಸರು ಸೈಯದ ಜಿಲಾನಸಾಬ ಸಾ: ದಾಸನಾಳ ಅಂತಾ ತಿಳಿಸಿದ್ದು ಸ್ಥಳದಲ್ಲಿದ್ದ ಸಾಕ್ಷಿ ಜನರಾದ 1] ರಾಮಣ್ಣ ತಂದೆ ಲಿಂಗಪ್ಪ ಊರಮುಂದಿನವರು. 32 ವರ್ಷ ಸಾ: ದಾಸನಾಳ 2] ರುದ್ರಗೌಡ ತಂದೆ ಸಣ್ಣರುದ್ರಗೌಡ ಸಾ: ಮ್ಯಾದರಾಳ ತಾ: ಲಿಂಗಸೂರ, 3] ನಾಗರಾಜ ತಂದೆ ಯಮನಪ್ಪ ಕಾಮನೂರ ಸಾ: ಜಬ್ಬಲಗುಡ್ಡ, ಇವರನ್ನು ವಿಚಾರಿಸಲು ಸದರಿ ವ್ಯಕ್ತಿಗಳು ಪ್ರತಿನಿತ್ಯ ಬರೆದುಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದು ನಂತರ ದಾಳಿಯಲ್ಲಿ ಸಿಕ್ಕ ವ್ಯಕ್ತಿ ಹಾಗೂ ಮುದ್ದೆಮಾಲನ್ನು ವಶಕ್ಕೆ ತಗೆದುಕೊಂಡು ಈ ಬಗ್ಗೆ ರಾತ್ರಿ 7:50 ಗಂಟೆಯಿಂದ 8:45 ಗಂಟೆಯವರಗೆ ಸ್ಥಳದಲ್ಲಿಯೇ ನಿರ್ವಹಿಸಿ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು ಸಲ್ಲಿಸಿದ್ದು ಇರುತ್ತದೆಅಂತಾ ಸಾರಾಂಶ ಇದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ರಾತ್ರಿ 10:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 241/2015 ಕಲಂ 78(iii) ಕೆ.ಪಿ. ಕಾಯ್ದೆ ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 279, 338, 304(ಎ)  ಐ.ಪಿ.ಸಿ :.
ದಿನಾಂಕ: 07-08-2015 ರಂದು 01-00 ಎಎಂ.ಕ್ಕೆ ಸರಕಾರಿ ಆಸ್ಪತ್ರೆ ಕುಕನೂರದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ನಾನು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಕಳಕಪ್ಪ ತಂ. ಹಾಲಪ್ಪ ರಿತ್ತಿ, ವಯಾ 34 ವರ್ಷ, ಜಾ: ಕುರುಬರ, ಉ: ಅಡುಗೆ ಮಾಡುವದು, ಸಾ: ಲಕ್ಕುಂಡಿ ತಾ/ಜಿ: ಗದಗರವರ ಹೇಳಿಕೆ ಪಡೆದು ಕೊಂಡಿದ್ದು, ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:-06-08-2015 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಲಕ್ಕುಂಡಿಯಿಂದ ಚೆಂಡೂರಿಗೆ ಬೀಗತನದ ನಿಮಿತ್ಯ ಹೋಳಿಗೆ ಊಟಕ್ಕೆ ಗೋಣೆಪ್ಪ ಅಬ್ಬಿಗೇರಿ ಈತನ ಬೈಕ್ ನಂ, ಕೆ.ಎ.22 ಎಸ್.7063 ನೇದ್ದರ ಮೇಲೆ ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸು ಸಾಯಂಕಾಲ 6-30 ಗಂಟೆಗೆ ಪಿರ್ಯಾದಿ ಮತ್ತು ಗೋಣೆಪ್ಪ ಅಬ್ಬಿಗೇರಿ ಇಬ್ಬರೂ ಕೂಡಿಕೊಂಡು ಮೋಟಾರ್ ಸೈಕಲ್ ನಂ.ಕೆ.ಎ.22 ಎಸ್.7063 ನೇದ್ದರ ಮೇಲೆ ಹೊರಟಾಗ ಗೋಣೆಪ್ಪನ ಮಾವ ಹನುಮಂತಪ್ಪ ಉಮುಚಗಿ ಸಾ: ಹರ್ಲಾಪೂರ ಈತನು ಸಹ ನಮ್ಮ ಬೈಕ್ ನಲ್ಲಿ ಹತ್ತಿದನು. ಚೆಂಡೂರದಿಂದ ಕುಕನೂರಗೆ ಬಂದು ಕುಕನೂರದಿಂದ ಚಿಕೇನಕೊಪ್ಪ ಯರೇಹಂಚಿನಾಳ ಮೂಲಕ ಲಕ್ಕುಂಡಿಗೆ ಹೋಗುವಾಗ ಯರೇಹಂಚಿನಾಳ ಸಮೀಪ ತೊಂಡಿಹಾಳ ಕ್ರಾಸ್ ಹತ್ತಿರ ರಾತ್ರಿ 7-15 ಗಂಟೆಯ ಸುಮಾರಿಗೆ ಬೈಕಿನ ಹೆಡ್ ಲೈಟ್ ಒಮ್ಮಲೇ ಆಫ್ ಆಗಿದ್ದು ಆಗ ರಸ್ತೆ ಕಾಣದೇ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಬೈಕ್ ನಡೆಸಿದ್ದಕ್ಕೆ ಬೈಕ್ ನಿಯಂತ್ರಣಕ್ಕೆ ಬಾರದೇ ರಸ್ತೆಯ ಬಲಗಡೆ ಬ್ರಿಡ್ಜ್ ನ ಕೆಳಗೆ ಮೂರು ಜನ ಬಿದ್ದಿದ್ದು ಇರುತ್ತದೆ. ಬೈಕ್ ಸವಾರ ಗೋಣೆಪ್ಪನು ಭಾರೀ ಗಾಯಗೊಂಡಿದ್ದು, ಬೈಕ್ ನ ಮದ್ಯದಲ್ಲಿ ಕುಳಿತ ಹನುಮಂತಪ್ಪ ಉಮುಚಗಿ ಈತನ ತಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂದೆ ಕುಳಿತ ನನಗೆ ಸಾದಾ ಮತ್ತು ಭಾರೀ ಸ್ವರೂಪದ ಒಳಪೆಟ್ಟುಗಳಾಗಿ ಮೂರ್ಛೆ ಹೋಗಿದ್ದು ಇರುತ್ತದೆ. ನಂತರ ನನಗೆ ಎಚ್ಚರವಾದಾಗ ನಾನು 108 ವಾಹನಕ್ಕೆ ಫೋನ್ ಮಾಡಿ, ಕರೆಯಿಸಿಕೊಂಡು ಅದರಲ್ಲಿ ನನ್ನನ್ನು ಮತ್ತು ಗಾಯಗೊಂಡ ಗೋಣೆಪ್ಪನನ್ನು ಕುಕನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಇಲಾಜು ಕುರಿತು ಸೇರಿಕೆಮಾಡಿದ್ದು ಇರುತ್ತದೆ. ನಂತರ ಪರಿಚಯಸ್ಥರಿಗೆ ಪೋನ್ ಮಾಡಿ ಮೃತನ ಶವವನ್ನು ಕುಕನೂರ ಸರ್ಕಾರೀ ಆಸ್ಪತ್ರೆಗೆ ತರಿಸಿ ಹಾಕಿದ್ದು ಇರುತ್ತದೆ, ಸದರ ಘಟನೆಯನ್ನು ಬೈಕಿನ ಹೆಡ್.ಲೈಟ್ ಆಫ್ ಆಗಿದ್ದಾಗ ಬೈಕ್ ನ್ನು ನಿಯಂತ್ರಣ ಮಾಡದೇ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ನೀಡಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ವಾಪಾಸ್ಸು 02.00 ಎ.ಎಂ.ಕ್ಕೆ ಠಾಣೆಗೆ ಬಂದು ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:99./15 ಕಲಂ;279,338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ. ಇದರೊಂದಿಗೆ ಪ್ರ.ವ.ವರದಿ ಪ್ರತಿಯನ್ನು ಲಗತ್ತಿಸಿ, ಮಾನ್ಯರವರಲ್ಲಿ ಮುಂದಿನ ಕ್ರಮಕ್ಕಾಗಿ ನಿವೇದಿಸಿಕೊಂಡಿದೆ.
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 179/2015  ಕಲಂ 143, 147, 148, 323, 324, 504, 506 ಸಹಿತ 149 ಐ.ಪಿ.ಸಿ :.

ದಿನಾಂಕ 06-08-2015 ರಂದು 14-00 ಗಂಟೆಗೆ ಶ್ರೀ ಶೇಖ್ ರಿಯಾಜ್ ತಂದೆ ಪೀರಾಸಾಬ ಮಂಡಾಳಬಟ್ಟಿ ವಯಸ್ಸು 38  ಜಾ: ಮುಸ್ಲಿಂ ಉ: ವೆಲ್ಡಿಂಗ್ ಕೆಲಸ ಸಾ: ವಾರ್ಡ ನಂ. 16 ದೊಡ್ಡಿ ಲೇಔಟ್, ಗುಂಡಮ್ಮ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು  ಅದರ ಸಾರಂಶವೇನೆಂದರೆ, ದಿನಾಂಕ 06-08-2015 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ಆರೋಪಿ ನಂ. 01 ರಾಜಾಸಾಬ ಇತನು ಕರ್ನೂಲ್ ಬಾಬಾ ದರ್ಗಾ ಹತ್ತಿರ ಶಾಮೀದ ಮನಿಯಾರ ಎಂಬುವವರಿಗೆ ಬೈದಾಡುತ್ತಿರುವಾಗ ಫಿರ್ಯಾದಿಯು ಆರೋಪಿತನಿಗೆ ಯಾಕೆ ಬೈದಾಡುತ್ತೀಯಾ ಅವರೊಂದಿಗೆ ಕುಂತು ಮಾತನಾಡು ಅಂತಾ ಹೇಳಿದಾಗ ಇನ್ನುಳಿದ ಆರೋಪಿತರೆಲ್ಲರೂ ಕೂಡಿಕೊಂಡು ಗುಂಪು ಕಟ್ಟಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಇವರಲ್ಲಿ ಆರೋಪಿ ನಂ. 02 ಮಾಬುಸಾಬ ಇತನು ಬಂದು ಫಿರ್ಯಾದಿಗೆ ನಿಮ್ಮವ್ವನ ನಿಂದೇನಲೆ ತಿಂಡಿ ಇದರಲ್ಲಿ ನೀನು ಏನು ಹೇಳುತ್ತಿಯಲೇ ಅಂತಾ ಕೈಯಿಂದ ತಲೆಗೆ ಜೋರಾಗಿ ಬಡಿದಿದ್ದು ಫಿರ್ಯಾದಿಯು ಕೆಳಗೆ ಬಿದ್ದಿದ್ದು ಆರೋಪಿ ನಂ.03 ಗೌಸ ಇತನು ಕಬ್ಬಿಣದ ರಾಡಿನಿಂದ ಫಿರ್ಯಾದಿಗೆ ಹೊಡೆಯಲು ಬಂದಿದ್ದರಿಂದ ಫಿರ್ಯಾದಿಯು ಎಡಗೈ ಮುಂದೆ ಮಾಡಿದ್ದರಿಂದ ಎಡಗೈ ಬೆರಳುಗಳಿಗೆ ಪೆಟ್ಟು ಬಿದ್ದಿರುತ್ತದೆ ಆರೋಪಿ ನಂ.04 ಜೀಲಾನ, ಆರೋಪಿ ನಂ. 05 ಶಾರು ಮತ್ತು ಆರೋಪಿ ನಂ. 06 ಹುಸೇನ ಇವರೆಲ್ಲರೂ ಹಾಗೂ ಆರೋಪಿ ನಂ. 01, 02 & 03 ನೇದ್ದವರು ಕೂಡಿಕೊಂಡು ಕೆಳಗೆ ಬಿದ್ದಿದ್ದ ಫಿರ್ಯಾದಿಗೆ ಕಾಲಿನಿಂದ ಒದ್ದಿದ್ದು ಅಲ್ಲದೇ ಎದ್ದು ನಿಲ್ಲಿಸಿ ಲೇ ಸೂಳೇಮಗನೆ ಕರಿಯಲೇ ನಿಮ್ಮ ಮಂದಿ ಎಷ್ಟು ಜನ ಇದ್ದಾರೆ ಅವರನ್ನೆಲ್ಲಾ ನೋಡುತ್ತೇವೆ ನಿಮಗೆಲ್ಲಾ ಇವತ್ತು ಜೀವ ಸಹಿತ ಉಳಿಸುವುದಿಲ್ಲಾ ಎಲ್ಲರನ್ನು ಮುಚ್ಚಿ ಹಾಕಿ ಬಿಡುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕುತ್ತಾ  ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಗೆ, ಪಕ್ಕಡಿಗೆ, ಬೆನ್ನಿಗೆ ಗುದ್ದಿ, ಫಿರ್ಯಾದಿಯು ತೊಟ್ಟುಕೊಂಡಿರುವ ಅಂಗಿ ಮತ್ತು ಬನಿಯನ್ ಹರಿದು ಹಾಕಿರುತ್ತಾರೆ ಎಂದು ನೀಡಿದ ಫಿರ್ಯಾದಿಯ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಠಾಣಾ ಗುನ್ನೆ ನಂ. 179/2015 ಕಲಂ 143, 147, 148, 323, 324, 504, 506 ಸಹಿತ 149 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008