Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 6, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 195/2015  ಕಲಂ 279, 338, 304(ಎ) ಐ.ಪಿ.ಸಿ :.
ದಿ: 05-08-15 ರಂದು ಸಾಯಂಕಾಲ 6-45 ಗಂಟೆಗೆ ಫಿರ್ಯಾದಿದಾರರಾದ ನಜೀರ ಅಹ್ಮದ್ ತಂಧೆ ಫಕ್ರುದ್ದೀನಸಾಬ ಸಾ: ಹುಲಿಗಿ ಆರ್.ಸಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇ, ಇಂದು ದಿ:05-08-15 ರಂದು ಮಧ್ಯಾಹ್ನ 2-50 ಗಂಟೆಯ ಸುಮಾರಿಗೆ ನಾನು ನಮ್ಮ ವಾಟರ ಟ್ಯಾಂಕರ ಲಾರಿ ನಂ: ಕೆಎ-36/ಎ-7777 ನೇದ್ದರಲ್ಲಿ ಹಿರೇಸೂಳಿಕೇರಿ ತಾಂಡಾದ ಹತ್ತಿರ ಎನ್.ಹೆಚ್-50 ರಸ್ತೆಯ ಮದ್ಯದ ಗಿಡಗಳಿಗೆ ನೀರು ಹಾಯಿಸುತ್ತಿದ್ದಾಗ, ಅದೇವೇಳೆಗೆ ಕುಷ್ಟಗಿ ಕಡೆಯಿಂದ ಲಾರಿ ನಂ:ಹೆಚ್.ಆರ್-37/ಡಿ-6007 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಲಗಡೆ ಬಂದವನೇ ನಮ್ಮ ಲಾರಿಯ ಸಿಗ್ನಲ್ ಗಳನ್ನು ಗಮನಿಸದೇ ಬಂದು ನಮ್ಮ ಲಾರಿಯ ಹಿಂಬದಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದನು. ಸದರಿ ಟಕ್ಕರ ಕೊಟ್ಟ ಲಾರಿಯ ಚಾಲಕ ರಣಧೀರಕುಮಾರ ಇತನಿಗೆ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿದ್ದು, ಅಲ್ಲದೇ ಒಳಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಸದರಿ ಅಪಘಾತ ಮಾಡಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ತಾವರಗೇರಾ ಪೊಲೀಸ್ ಠಾಣಾ ಗುನ್ನೆ ನಂ. 79/2015  ಕಲಂ 498(ಎ), 323, 306 ಸಹಿತ 34 ಐ.ಪಿ.ಸಿ :.
ದಿನಾಂಕ : 06-08-2015 ರಂದು ಬೆಳಗಿನ ಜಾವ 01-00 ಗಂಟೆಗೆ ಫಿರ್ಯಾದಿ ಶ್ರೀಮತಿ ಬಸಮ್ಮ ಗಂಡ ಸಿದ್ದಪ್ಪ ಹುಡೇದರ್ ವಯ :55, ಜಾ : ಕುರುಬರ್. ಉ : ಹೊಲಮನೆಗೆಲಸ  ಸಾ : ಕಳಮಳ್ಳಿ ತಾ : ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದು ಅದರಲ್ಲಿ ತನ್ನ ಮಗಳಾದ ಅಯ್ಯಮ್ಮ @ಹನುಮಮ್ಮ ಇಕೆಗೆ ಹಿಗ್ಗೆ ಸುಮಾರು 12 ವರ್ಷದ ಹಿಂದೆ ಕಳಮಳ್ಳಿ ಗ್ರಾಮದಲ್ಲಿರುವ ರಾಮಣ್ಣ  ತಂದೆ ಹನುಮಪ್ಪ ಇತನೊಂದಿಗೆ ಮದುವೆಯಾಗಿದ್ದು ಆಕೆಗೆ 3 ಜನ ಗಂಡು ಮಕ್ಕಳಿರುವರು ಈಗ್ಗೆ ಸುಮಾರು 1 ವರ್ಷದ ಹಿಂದೆ ತನ್ನ ಮಗಳ ಗಂಡನ  ಅಣ್ಣನಾದ ಪಂಪಣ್ಣ ಮತ್ತು ಮೈದುನ ಇವರು ಬೇರೆಯಾಗಿದ್ದು ಇದರಿಂದ ತನ್ನ ಮಗಳು ಸಹ ತನ್ನ ಗಂಡನಿಗೆ ನಾವೂ ಸಹ ಬೇರೆಯಾಗೊಣಾ ಅಂತಾ ಹೇಳಿದ್ದರಿಂದ ಆಕೆಗೆ ಗಂಡ ಮತ್ತು ಅತ್ತೆ ಹುಲಿಗೆಮ್ಮ, ಮಾವ ಹನುಮಪ್ಪ ಮೈದುನ ಯಮನೂರ ಮತ್ತು ಗಂಡನ  ಅಣ್ಣ ಪಂಪಣ್ಣ ಇವರೆಲ್ಲರೂ ಕೂಡಿ ತಮ್ಮ ಮಗಳಿಗೆ ಬೇರೆಯಾಗುವ ವಿಷಯದಲ್ಲಿ ಜಗಳ ತೆಗೆದು ಹೊಡೆ ಬಡಿ ಮಾಡುತ್ತಿದ್ದು ಅದರಂತೆ ದಿನಾಂಕ : 05-08-15 ರಂದು ಮದ್ಯಾಹ್ನ  12-00 ಗಂಟೆ ಸುಮಾರಿಗೆ ತನ್ನ ಮಗಳಿಗೆ ಆರೋಪಿತರು ಜಗಳ ತೆಗೆದು ಕೈಯಿಂದ ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆಯನ್ನು ಕೊಟ್ಟಿದ್ದು ಅಲ್ಲದೇ ಆಕೆಗೆ ನೀನು ಸಾಯಿ ಅಂತಾ ಹೇಳಿದ್ದರಿಂದ ನನ್ನ ಮಗಳು ಆರೋಪಿತರು ಕೊಡುವ ಕಿರುಕುಳವನ್ನು ತಾಳಲಾರದೆ ಮನನೊಂದು ನಿನ್ನ ಸಂಜೆ 05-00 ಗಂಟೆಗೆ ಸುಮಾರಿ ತಮ್ಮೂರ ಸಿಮಾದಲ್ಲಿರುವ  ಅಮರಾಪೂರ ರಸ್ತೆಯ ಪಕ್ಕದಲ್ಲಿದ್ದ ಹಾಳು ಬಿದ್ದ ಕ್ವಾರಿಯ ದೊಡ್ಡ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಪಿರ್ಯಾಧಿ ಸಾರಾಂಶದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 83/2015  ಕಲಂ 32, 34 Karnataka Excise Act.
ದಿನಾಂಕ : 05-08-2015 ರಂದು ಬೆಳಿಗ್ಗೆ 10.00 ಗಂಟೆಗೆ ಪಿ.ಎಸ್.ಐ. ಸಾಹೇಬರು ವಾಪಾಸ್ ಠಾಣೆಗೆ ಬಂದು  ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಸವೆನಂದರೆ, ದಿನಾಂಕ 05-08-2015 ರಂದು ನಾನು ಠಾಣೆಯಲ್ಲಿದ್ದಾಗ ಬೇಟಗೆರಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ  ಪಂಚರಾದ 1] ಸುರೇಶ ತಂದೆ ಶೇಖರಪ್ಪ ನಾಯ್ಕ 2) ಚಂದ್ರಪ್ಪ ತಂದೆ ತುಕ್ಕಪ್ಪ ನಾಯ್ಕ ಇಬ್ಬರೂ ಸಾ: ಹೈದರನಗರ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಬಸಪ್ಪ, ಹೆಚ್.ಸಿ-116, ಪಿಸಿ-384,05, ಹಾಗೂ ಜೀಪ್ ಚಾಲಕ ಎ.ಪಿ.ಸಿ-91 ಸರಕಾರಿ ಜೀಪ್ ನಂ :ಕೆ.ಎ. -37 ಜಿ. 346 ನೇದ್ದರಲ್ಲಿ ಬೇಳಿಗ್ಗೆ 09.30 ಗಂಟೆಗೆ ಠಾಣೆಯನ್ನು ಬಿಟ್ಟು ಬೇಟಗೆರಿ ಗ್ರಾಮಕ್ಕೆ ಹೋಗಿ ಊರ ಹೋರಗೆ  ಜೀಪ್ ನಿಲ್ಲಿಸಿ ನೋಡಲಾಗಿ ವೆಂಕಟೇಶ ತಂದೆ ದೇವಪ್ಪ ವಾಲಿಕಾರ ವಯಾ: 39 ವರ್ಷ ಜಾ: ವಾಲ್ಮಿಕಿ ಸಾ: ಬೇಟಗೆರಿ  ಇವನು ಯಾವುದೇ ಪರವಾನಿಗೆ ಪತ್ರ ಹೊಂದದೇ ಅಕ್ರಮವಾಗಿ 1] ಒಲ್ಡ ಟೆವೆರನ ವ್ಹಿಸ್ಕಿ  180 ಎಂ.ಎಲ್. 21 ಬಾಟಲಿಗಳು 2] ನಾಕೌಟ್ 330 ಎಂ.ಎಲ್. ವುಳ್ಳ 24 ಬಾಟಲಿಗಳು. 3] ಒರಿಜಿನಲ್ ಚ್ವೈಸ್ 90 ಎಂ.ಎಲ್ 65 ಬಾಟಲಿಗಳು ಒಟ್ಟು 4326=00 ರೂ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದು ಹಾಗೂ ಅಕ್ರಮ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ್ದ ರೂ, 870=00 ಗಳನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಅಲ್ಲಿಯೇ 10.30 ಗಂಟೆಯಿಂದ 11-00 ಗಂಟೆಯ ವರೆಗೆ ಸ್ಥಳದಲ್ಲಿಯೇ ಬರೆದು ಆರೋಪಿ ಹಾಗೂ ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಈ ವರದಿಯನ್ನು ಮುಂದಿನ ಕ್ರಮ ಜರುಗಿಸಲು ಅಂತಾ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 83/2015  ಕಲಂ 32, 34 Karnataka Excise Act.

ದಿನಾಂಕ : 05-08-2015 ರಂದು ಬೆಳಿಗ್ಗೆ 11.30 ಗಂಟೆಗೆ ಪಿ.ಎಸ್.ಐ. ಸಾಹೇಬರು ವಾಪಾಸ್ ಠಾಣೆಗೆ ಬಂದು  ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಸವೆನಂದರೆ, ದಿನಾಂಕ 05-08-2015 ರಂದು ನಾನು ಠಾಣೆಯಲ್ಲಿದ್ದಾಗ ಬೇಟಗೆರಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ  ಪಂಚರಾದ 1] ಸುರೇಶ ತಂದೆ ಶೇಖರಪ್ಪ ನಾಯ್ಕ 2) ಚಂದ್ರಪ್ಪ ತಂದೆ ತುಕ್ಕಪ್ಪ ನಾಯ್ಕ ಇಬ್ಬರೂ ಸಾ: ಹೈದರನಗರ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಬಸಪ್ಪ, ಹೆಚ್.ಸಿ-116, ಪಿಸಿ-384,05, ಹಾಗೂ ಜೀಪ್ ಚಾಲಕ ಎ.ಪಿ.ಸಿ-91 ಸರಕಾರಿ ಜೀಪ್ ನಂ :ಕೆ.ಎ. -37 ಜಿ. 346 ನೇದ್ದರಲ್ಲಿ ಬೇಳಿಗ್ಗೆ 09.30 ಗಂಟೆಗೆ ಠಾಣೆಯನ್ನು ಬಿಟ್ಟು ಬೇಟಗೆರಿ ಗ್ರಾಮಕ್ಕೆ ಹೋಗಿ ಊರ ಹೋರಗೆ  ಜೀಪ್ ನಿಲ್ಲಿಸಿ ನೋಡಲಾಗಿ ರಾಮಣ್ಣ ತಂದೆ ಹೋಳೆಯಪ್ಪ ಈಳಗೇರ ವಯಾ: 45 ವರ್ಷ ಜಾ: ಈಳಗೇರ ಸಾ: ಬೇಟಗೆರಿ  ಇವನು ಯಾವುದೇ ಪರವಾನಿಗೆ ಪತ್ರ ಹೊಂದದೇ ಅಕ್ರಮವಾಗಿ 1] ಖೋಡೆಸ್ ರಮ್  180 ಎಂ.ಎಲ್. 17 ಬಾಟಲಿಗಳು 2] ಟೆವೆರನ್ ವ್ಹಿಸ್ಕಿ 180  ಎಂ.ಎಲ್. ವುಳ್ಳ 31 ಬಾಟಲಿಗಳು ಒಟ್ಟು 2823=00 ರೂ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದು ಹಾಗೂ ಅಕ್ರಮ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ್ದ ರೂ, 1660=00 ಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಅಲ್ಲಿಯೇ 11.30 ಗಂಟೆಯಿಂದ 12-30 ಗಂಟೆಯ ವರೆಗೆ ಸ್ಥಳದಲ್ಲಿಯೇ ಬರೆದು ಆರೋಪಿ ಹಾಗೂ ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಈ ವರದಿಯನ್ನು ಮುಂದಿನ ಕ್ರಮ ಜರುಗಿಸಲು ಅಂತಾ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008