Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 18, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 237/2015  ಕಲಂ 78(3) Karnataka Police Act.
ದಿನಾಂಕ: 17-09-2015 ರಂದು ರಾತ್ರಿ 9-45 ಗಂಟೆಗೆ ಶ್ರೀ ಚಿತ್ತರಂಜನ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:17-09-2015 ರಂದು ರಾತ್ರಿ 7-45 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಯಲಮಗೇರಿ ತಾಂಡಾದ ಅಬ್ಬಿಗೇರಿ ರೋಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00  ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ಪಂಚರ ಸಮಕ್ಷಮದ ದಾಳಿ ಮಾಡಿ ಆರೋಪಿ ಬಸವರಾಜ ಸಾ: ಯಲಮಗೇರಿ ತಾಂಡಾ ಇತನಿಂದ ಮಟಕಾ ಜೂಜಾಟದ ನಗದು ಹಣ ರೂ 370=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ಬರೆದ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ರಾತ್ರಿ 10-15 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 96/2015  ಕಲಂ 87 Karnataka Police Act.
¢£ÁAPÀ: 17-09-2015 gÀAzÀÄ ¸ÁAiÀÄAPÁ® 6-45 UÀAmÉAiÀÄ ¸ÀĪÀiÁjUÉ ªÀÄÄzsÉÆüÀ UÁæªÀÄzÀ°ègÀĪÀ ²æà ªÀiÁgÀÄvÉñÀégÀ zÉêÀ¸ÁÜ£ÀzÀ ªÀÄÄAzÀÄUÀqÉ ¹ªÉÄÃAl gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ° DgÉÆævÀgÉ®ègÀÆ PÀÆrPÉÆAqÀÄ zÀÄAqÁV PÀĽvÀÄPÉÆAqÀÄ E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgÀ JA§ £À¹Ã§ dÆeÁlzÀ°è vÉÆqÀVzÁÝUÀ zÁ½ ªÀiÁr »r¢zÀÄÝ 5 d£ÀgÀÄ ¹QÌ ©¢ÝzÀÄÝ 10 d£À DgÉÆævÀgÀÄ Nr ºÉÆÃVzÀÄÝ EgÀÄvÀÛzÉ. ¹QÌ ©zÀÝ DgÉÆævÀgÀ ºÀwÛgÀ ªÀÄvÀÄÛ PÀtzÀ°èzÀÝ MlÄÖ 3,470=00 gÀÆ¥Á¬Ä £ÀUÀzÀÄ ºÀt, 52 E¹àÃl J¯ÉUÀ¼ÀÄ, MAzÀÄ ºÀ¼É ¥Áè¹ÖÃPï §gÀPÀ CA.Q. E®è. EªÀÅUÀ¼ÀÄ ¹QÌzÀÄÝ EgÀÄvÀÛzÉ. ¥ÀæPÀgÀt zÁR°¹ vÀ¤SÉ PÉÊUÉÆArzÀÄÝ CzÉ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ.ನಂ. 215/2015  ಕಲಂ 498(ಎ), 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 17-09-2015 ರಂದು 17-00 ಗಂಟೆಗೆ ಶ್ರೀಮತಿ ಸರೀತಾ ಗಂಡ ವೆಂಕಟೇಶ್ವರಾವ್ @.ನಾನಿ ವಯಸ್ಸು 37 ವರ್ಷ ಜಾ: ಕಮ್ಮಾ ಉ: ಮನೆಗೆಲಸ ಸಾ: ಹಿರೇಜಂತಕಲ್, ಪೋಸ್ಟ್ ಆಫೀಸ್ ಹತ್ತಿರ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ಫಿರ್ಯಾದಿದಾರರ ವಿವಾಹವು ಆರೋಪಿ ನಂ. 01 ನೇದ್ದವರೊಂದಿಗೆ ಆಗಿದ್ದು, ಆರೋಪಿ ನಂ. 01 ನೇದ್ದವನು ಈಗ್ಗೆ ಸುಮಾರು 04 ತಿಂಗಳಿನಿಂದ ಫಿರ್ಯಾದಿದಾರಳಿಗೆ ತಾನು ಬ್ಯಾಂಕಿನಲ್ಲಿ ಸಾಲ ಮಾಡಿರುವುದಾಗಿ ಸಾಲ ತೀರಿಸುವ ಸಲುವಾಗಿ ತವರು ಮನೆಗೆ ಹೋಗಿ ಹಣ ತರುವಂತೆ ಹೊಡಿ-ಬಡಿ ಮಾಡುತ್ತಿದ್ದು ಅಲ್ಲದೇ ಆರೋಪಿ ನಂ. 02 ಫಿರ್ಯಾದಿದಾರಳ ಅತ್ತೆಯು ತನ್ನ ಮಗನ ಪರವಾಗಿ ಮಾತನಾಡುತ್ತಾ ಫಿರ್ಯಾದಿದಾರಳಿಗೆ ನಿನ್ನನ್ನು ಮದುವೆ ಮಾಡಿಕೊಂಡು ಬಂದಾಗಿನಿಂದ ನನ್ನ ಮಗನಿಗೆ ದರಿದ್ರ ಬಡಿದಿರುತ್ತದೆ, ನೀನು ಸರಿಯಾಗಿಲ್ಲಾ, ನನ್ನ ಮಗನಿಗೆ 02 ನೇ ಮದುವೆ ಮಾಡುತ್ತೇನೆಂದು ಲೇ ಸೂಳೇ ನಿನಗೆ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದು ಅಲ್ಲದೇ ಆರೋಪಿ ನಂ. 01 ನೇದ್ದನು ಮನೆಯ ಬಾಡಿಗೆಯ ಹಣ, ಮಕ್ಕಳ ಕಾಲೇಜ್ ಫೀ ಮತ್ತು ಮನೆಯ ಸಂಸಾರಕ್ಕಾಗಿ ಹಣ ಕೊಡದೆ ಜಗಳ ಮಾಡುತ್ತಿದ್ದು ಅಲ್ಲದೇ ಸುಮಾರು 03 ತಿಂಗಳಿಂದೆ ಹೆಂಡತಿ ಮಕ್ಕಳೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಹೋಗಿ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಹೋಟಲ್ ದಲ್ಲಿ ವಾಸವಾಗಿದ್ದು ಅಲ್ಲದೇ ದಿನಾಂಕ 12-09-2015 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಆರೋಪಿ ನಂ. 01 ನೇದ್ದವನು ಏಕಾಏಕಿಯಾಗಿ ಹಿರೇಜಂತಕಲ್ ದಲ್ಲಿರುವ ಮನೆಗೆ ಹೋಗಿ ಫಿರ್ಯಾದಿದಾರಳಿಗೆ ನಿನಗೆ ಸಾಯಿಸುತ್ತೇನೆಂದು ಜಗಳ ಮಾಡಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ.ನಂ. 207/2015  ಕಲಂ 279, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕಃ-17-09-2015 ರಂದು ಸಾಯಾಂಕಾಲ 7-45 ಗಂಟೆಗೆ ಪಿರ್ಯಾದಿದಾರರಾದ ಶ್ರೀದೇವಪ್ಪ ಊರ್ಪ ದೇವರಾಜ ತಂದಿ ಈರಪ್ಪ ಭಾವಿಕಟ್ಟಿ ಸಾ. ಬರಗೂರು ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ದಿನಾಂಕ-16-09-2015 ರಂದು ಸಾಯಂಕಾಲ 4-00 ಗಂಟೆಯಿಂದ 4-30 ಗಂಟೆಯ ಅವಧಿಯಲ್ಲಿ ಬರಗೂರಿನ ಹೊಸೂರು ಗೌರಮ್ಮನ ಮನೆಯ ಹತ್ತಿರ ಪಿರ್ಯಾದಿದಾರರು ಮತ್ತು ಗುರುರಾಜ ಶೆಟ್ಟಿ ಇವರು ಮಾತನಾಡಿಕೊಂಡು ನಿಂತಿದ್ದಾಗ್ಗೆ ಅದೇ ರೀತಿ ಬರಗೂರಿನ ಮುದಕಮ್ಮ ಗಂಡ ಲಿಂಗಪ್ಪ ಗಿಂಚಿ ಇವರು ಕರಿಯಮ್ಮ ಇವರೊಂದಿಗೆ ಹೊಲಮನಿ ವಿಷಯವಾಗಿ ಮಾತನಾಡುತ್ತಾ ಬರಗೂರಿನ ಶ್ರೀರಾಮ ನಗರ- ಕುಂಟೋಜಿ ರಸ್ತೆಯ ಎಡಭಾಗದಲ್ಲಿ ನಿಂತುಕೊಂಡಿದ್ದಾಗ್ಗೆ ಆರೋಪಿ ಚಾಲಕನು ತನ್ನ ಮೋಟಾರ್ ಸೈಕಲ ನಂ ಕೆ.ಎ-37 ವೈ-0587 ನೆದ್ದನ್ನು ಅತೀವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುದಕಮ್ಮ ಇವರಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿ ಮೋಟಾರ್ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇದರಿಂದ ಮುದಕಮ್ಮ ಇವರಿಗೆ ಕಾಲಿಗೆ ಕೈಗೆ ಮತ್ತು ಸೊಂಟಕ್ಕೆ ಗಂಬೀರ ಗಾಯ ಮತ್ತು ಒಳ ಪೆಟ್ಟುಗಳಾಗಿದ್ದರಿಂದ ಆಕೆಯನ್ನು ಗಂಗಾವತಿ ಓಂಸಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ದಾಖಲು ಮಾಡಿ ಮೊದಲು ಚಿಕಿತ್ಸೆಗೆ ವ್ಯವಸ್ಥೆ ಮಾಡಿ ತಡವಾಗಿ ಬಂದು ನೀಡಿರುತ್ತೇವೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008