Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 21, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 178/2015  ಕಲಂ 87 Karnataka Police Act.
ದಿ:20-09-2015 ರಂದು 22-15 ಪಿ.ಎಮ್. ಕ್ಕೆ ಶ್ರೀ ಸತೀಶ್ ಪಾಟೀಲ ಪಿ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ: 20-09-2015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೊಪ್ಪಳ ನಗರದ ಅಸ್ರಾ ಪೆಟ್ರೊಲ್ ಬಂಕ್ ಹಿಂಭಾಗ ಮಳಿಮಲ್ಲೇಶ್ವರ ರಸ್ತೆಯ ಬಾಜೂ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ 2150=00 ರೂ ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾಧಿಯನ್ನು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 66/2015  ಕಲಂ 87 Karnataka Police Act.
ದಿನಾಂಕ-20-09-2015 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಹುಣಸಿಹಾಳ ಸೀಮಾದಲ್ಲಿ ನೀಲಪ್ಪ ಗದಿಗೇರಿ ಹೊಲದ ಬದುವಿನ ಹತ್ತಿರ 12 ಆರೋಪಿತರು ಸೇರಿ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಪಿ.ಎಸ್ . ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 08 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಇರುತ್ತದೆ. ದಾಳಿ ಕಾಲಕ್ಕೆ ಇನ್ನುಳಿದ ಜನ ಓಡಿಹೋಗಿದ್ದು ಇರುತ್ತದೆ ಸಿಕ್ಕಿಬಿದ್ದ ಆರೋಪಿತರಿಂದ ಇಸ್ಪಟ್ ಜೂಜಾಟದ ನಗದು ಹಣ 5900/-ರೂ ಹಾಗೂ 52 ಇಸ್ಪಟ್ ಎಲೆಗಳನ್ನು ಹಾಗೂ ಒಂದು ಗೋಣಿ ಚೀಲ್ವನ್ನು ಜಪ್ತ ಮಾಡಿಕೊಂಡಿದ್ದು ಪಿಎಸೈ ರವರು ಠಾಣೆಗೆ ಬಂದು ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 293/2015  ಕಲಂ 87 Karnataka Police Act.
ದಿನಾಂಕ:- 20-09-2015 ರಂದು ರಾತ್ರಿ 11:45 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ:- 20-09-2015 ರಂದು ರಾತ್ರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಚಂದ್ರಪ್ಪ ತಂದೆ ಹನುಮಂತಪ್ಪ ಕಬ್ಬೇರ ಎಂಬುವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಬೀದಿ ಲೈಟಿನ ಕೆಳಗೆ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 110, 160, 180, 358, 323, ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ರಾತ್ರಿ 10:00 ಗಂಟೆಗೆ ಹೊರಟು ಹೊಸಳ್ಳಿ ಊರ ಹೊರಗೆ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಚಂದ್ರಪ್ಪ ಎಂಬುವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಒಂದು ಬೀದಿ ಲೈಟಿನ ಕೆಳಗೆ ಸುಮಾರು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ರಾತ್ರಿ 10:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 7 ಜನರು ಸಿಕ್ಕಿಬಿದ್ದಿದ್ದು ಒಬ್ಬ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಗಂಗಪ್ಪ ತಂದೆ ಅಮಾಜೆಪ್ಪ ಕಬ್ಬೇರ, ವಯಸ್ಸು: 65 ವರ್ಷ ಜಾತಿ: ಕಬ್ಬೇರ, ಉ: ಕೂಲಿಕೆಲಸ ಸಾ: ಹೊಸಳ್ಳಿ ತಾ: ಗಂಗಾವತಿ (2) ರಾಘವೇಂದ್ರ ತಂದೆ ಸಿದ್ದಣ್ಣ ವಯಸ್ಸು: 36 ವರ್ಷ ಜಾತಿ: ನೇಕಾರ, ಉ: ಗುಮಾಸ್ತ ಸಾ: ನೀಲಕಂಠೇಶ್ವರ ಕ್ಯಾಂಪ್ ಗಂಗಾವತಿ (3) ಖಾಜಾ ಮೊಹಿದ್ದೀನ್ ತಂದೆ ಅಬ್ದುಲ್ ಮಜಿದಸಾಬ ವಯಸ್ಸು: 47 ವರ್ಷ ಜಾತಿ: ಮುಸ್ಲಿಂ, ಉ: ಕಾಯಿಪಲ್ಲೆ ವ್ಯಾಪಾರ, ಸಾ: ಕಟಗರ ಓಣಿ ಗಾಂಧಿ ಸರ್ಕಲ್ ಹತ್ತಿರ ಗಂಗಾವತಿ (4) ಮಾಬುಸಾಬ ತಂದೆ ದಾವಲಸಾಬ ತಾಳಿಕೋಟಿ, ವಯಸ್ಸು: 47 ವರ್ಷ ಜಾತಿ: ಮುಸ್ಲಿಂ, ಉ: ಬಾಂಡೆ ವ್ಯಾಪಾರ, ಸಾ: ಗುಂಡಮ್ಮ ಕ್ಯಾಂಪ್ ಗಂಗಾವತಿ (5) ಬಸವರಾಜ ತಂದೆ ಸಣ್ಣ ಸೋಮಪ್ಪ ವಯಸ್ಸು: 35 ವರ್ಷ ಜಾತಿ: ಹರಿಜನ ಉ: ವ್ಯವಸಾಯ ಸಾ: ಹೊಸಳ್ಳಿ (6) ಕರಿಯಪ್ಪ ತಾಯಿ ಸೋಮವ್ವ ಜಿಂಕೆ ವಯಸ್ಸು: 30 ವರ್ಷ ಜಾತಿ: ಮಾದಿಗ, ಉ: ಕಬ್ಬಿನ ಹಾಲಿನ ವ್ಯಾಪಾರ ಸಾ: ಹೊಸಳ್ಳಿ (7) ಚಾಂದ ತಂದೆ ಖಾದರಸಾಬ ವಯಸ್ಸು: 20 ವರ್ಷ ಜಾತಿ: ಮುಸ್ಲಿಂ, ಉ: ಕೂಲಿಕೆಲಸ ಸಾ: ಹೊಸಳ್ಳಿ ಅಂತಾ ತಿಳಿಸಿದರು. ನಂತರ ಓಡಿ ಹೋದವನ ಹೆಸರನ್ನು ವಿಚಾರಿಸಲು (8) ಚಂದ್ರಪ್ಪ ತಂದೆ ಹನುಮಂತ ಕಬ್ಬೇರ, ವಯಸ್ಸು: 35 ವರ್ಷ ಜಾತಿ: ಕಬ್ಬೇರ, ಸಾ: ಹೊಸಳ್ಳಿ ಅಂತಾ ತಿಳಿದು ಬಂದಿದ್ದು ಇದೆ. ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2900-00 ಗಳ52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ರಾತ್ರಿ 10:30 ರಿಂದ 11:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ರಾತ್ರಿ 11:45 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಸಾರಾಂಶ ಇರುತ್ತದೆ." ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಇಂದು ದಿನಾಂಕ: 21-09-2015 ರಂದು ಬೆಳಗಿನ ಜಾವ 00:15 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 293/2015 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 294/2015  ಕಲಂ 87 Karnataka Police Act.
ದಿನಾಂಕ:- 21-09-2015 ರಂದು ಬೆಳಗಿನ ಜಾವ 2:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ:- 21-09-2015 ರಂದು ಬೆಳಗಿನ ಜಾವ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರ ಗ್ರಾಮದ ಆಂಜನೇಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನದ ಲೈಟಿನ ಕೆಳಗೆ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 110, 129, 160, 180, 358, 323, ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಗಳಲ್ಲಿ ಠಾಣೆಯಿಂದ ಬೆಳಗಿನ ಜಾವ 00:30 ಗಂಟೆಗೆ ಹೊರಟು ಮುಷ್ಟೂರ ಊರ ಹೊರಗೆ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಆಂಜನೇಯ ಗುಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನದ ಬೀದಿ ಲೈಟಿನ ಕೆಳಗೆ ಸುಮಾರು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಬೆಳಗಿನ ಜಾವ 1:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 4 ಜನರು ಸಿಕ್ಕಿಬಿದ್ದಿದ್ದು ವಿಚಾರಿಸಲು ಅವರು ತಮ್ಮ ಹೆಸರುಗಳು (1) ನರೇಂದ್ರಬಾಬು ತಂದೆ ರಾಮಮೋಹನ ದೊನೆಪುಡಿ, ವಯಸ್ಸು: 42 ವರ್ಷ ಜಾತಿ: ಕಮ್ಮಾ, ಉ: ವ್ಯವಸಾಯ, ಸಾ: ಶ್ರೀರಾಮನಗರ ತಾ: ಗಂಗಾವತಿ (2) ವಿರುಪಯ್ಯಸ್ವಾಮಿ ತಂದೆ ಶಂಕ್ರಯ್ಯಸ್ವಾಮಿ ಹಿರೇಮಠ, ವಯಸ್ಸು: 46 ವರ್ಷ ಜಾತಿ: ಜಂಗಮ, ಉ: ವ್ಯವಸಾಯ, ಸಾ: ಮುಷ್ಟೂರ, ತಾ: ಗಂಗಾವತಿ (3) ರಾಚಪ್ಪ ತಂದೆ ಪಂಪಾಪತಿ ಅಂಗಡಿ, ವಯಸ್ಸು: 47 ವರ್ಷ ಜಾತಿ: ಲಿಂಗಾಯತ, ಉ: ವ್ಯವಸಾಯ, ಸಾ: ಮುಷ್ಟೂರ, ತಾ:ಗಂಗಾವತಿ (4) ರಾಮರಡ್ಡಿ ತಂದೆ ಹನುಮರಡ್ಡಿ ಕುರವತ್ತಿ ವಯಸ್ಸು: 20 ವರ್ಷ ಜಾತಿ: ಲಿಂಗಾಯತ, ಉ: ಕೂಲಿಕೆಲಸ ಸಾ: 10 ನಂಬರ್ ಕಾಲುವೆ ಅಂಜೂರಿಕ್ಯಾಂಪ್ ತಾ:ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6120-00 ಗಳ, 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಬೆಳಗಿನ ಜಾವ 1:00 ರಿಂದ 1:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಬೆಳಗಿನ ಜಾವ 2:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಸಾರಾಂಶ ಇರುತ್ತದೆ." ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಬೆಳಗಿನ ಜಾವ 2:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 294/2015 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 163/2015  ಕಲಂ 279, 304(ಎ) ಐ.ಪಿ.ಸಿ:.
ದಿನಾಂಕ 20-09-2015 ರಂದು ರಾತ್ರಿ 8-20 ಗಂಟಗೆ ಕುಷ್ಟಗಿ ಸರ್ಕರಿ ಆಸ್ಪತ್ರೆಯಿಂದ ಎಂ ಎಲ್ ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಫಿರ್ಯಾದಿದಾರಾದ ಹನುಮಂತ ತಂದೆ ಸಣ್ಣ ತಿರುಕಪ್ಪ ತಳವಾರ ವಯಾ: 25 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಕ್ಯಾದಿಗುಪ್ಪ ತಾ: ಕುಷ್ಟಗಿ ರವರ ನೀಡಿದ ಲಿಖಿತ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ನಮ್ಮ ಹೊಲ ರಾಷ್ಟ್ರೀಯ ಹೆದ್ದಾರಿ 50 ರ ಹತ್ತಿರ ಮಾಹಾರಾಣಿ ಡಾಬಾದ ಹಿಂದುಗಡೆ ಇದ್ದು ಪ್ರತಿ ದಿವಸದಂತೆ ಈ ದಿವಸ ಸಹ ನಾನು ಮತ್ತು ನನ್ನ ತಾಯಿಯಾದ ಹುಲಿಗೆಮ್ಮ ವಯ: 59 ಕೂಡಿಕೊಂಡು ಕುರಿಕಾಯಲು ಹೋಗಿದ್ದು ನಂತರ ಸಂಜೆ 06-15 ಗಂಟೆ ಸುಮಾರಿಗೆ ನಾವು ಕುರಿಗಳನ್ನು ವಾಪಸ್ ಹಟ್ಟಿಗೆ ಹೊಡೆದುಕೊಂಡು ಬರುತ್ತಿರುವಾಗ ಕುಷ್ಟಗಿ ಇಲಕಲ್ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಮ್ಮ ತಾಯಿ  ಕುರಿಗಳು ರಸ್ತೆ ಮೇಲೆ ಬರೆದಂತೆ ನೋಡಿಕೊಳ್ಳುತ್ತಿರುವಾಗ ಇಲಕಲ್ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ತಾಯಿಗೆ ಟಕ್ಕರ ಮಾಡಿ ಕೆಡವಿದನು ಇದರಿಂದ ಆಕೆಗೆ ಬಲಗಾಲ ಪಾದ, ಬಲಗಾಲ ಹಿಂಬಡ , ಎಡಗಾಲಿಗೆ ಹಾಗೂ ತೆಲೆ ಹಿಂದೆ ಗಾಯ ಪೆಟ್ಟುಗಳಾಗಿದ್ದು ಲಾರಿ ನೊಡಲಾಗಿ ಅದು ಟಿ ಎನ್ 52-ಎಫ್ -9799 ಇದ್ದು ಚಾಲಕನ ಹೆಸರು ಸುಬ್ರಮಣಿ ತಂದೆ ಪೂಮಲೈ ಸಾ: ಸಂಕಗಿರಿ ರಾಜ್ಯ: ತಮಿಳನಾಡು ಅಂತಾ ಗೊತ್ತಾಯಿತು ನಂತರ ನಮ್ಮ ತಾಯಿಯನ್ನು ಚಿಕಿತ್ಸೆ ಕುರಿತು ಕುಷ್ಟಗಿ ಸರ್ಕಾರಿ ಆಸ್ಪತ್ರೆ ಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದಾಗ ಆಕೆಯು ರಾತ್ರಿ 08-15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಇರುತ್ತದೆ ಕಾರಣ ಮುಂದಿನ ಸೂಕ್ತ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 238/2015  ಕಲಂ 498(ಎ), 324, 323, 504, 506, ಸಹಿತ 34 ಐ.ಪಿ.ಸಿ ಹಾಗೂ 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.

ದಿ :21-09-2015 ರಂದು 00-30 ಎ.ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಕರ್ತವ್ಯದ ಸಿಪಿಸಿ-232 ರವರು ನಿಸ್ತಂತು ಮೂಲಕ ಸುಧಾ ಪೂಜಾರಿ ಸಾ : ಚಿಕ್ಕಬೊಮ್ಮನಾಳ ಇವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆಯಾಗಿರುತ್ತಾರೆಂದು ತಿಳಿಸಿದ್ದರಿಂದ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ ಸುಧಾ ಪೂಜಾರಿ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ಈಗ್ಗೆ 04 ವರ್ಷಗಳ ಹಿಂದೆ ನಮ್ಮ ತಂದೆ-ತಾಯಿ ಯವರು ನನ್ನನ್ನು ಚಿಕ್ಕಬೊಮ್ಮನಾಳ ಗ್ರಾಮದ ರಮೇಶ ಪೂಜಾರಿ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 02 ವರ್ಷಗಳ ನಂತರ ನನ್ನ ಗಂಡನು ನನಗೆ ಕೂಲಿಕೆಲಸಕ್ಕೆ ಹೋಗಬೇಡ ಬೇರೆ ಗಂಡಸರ ಜೊತೆ ಯಾಕೆ ಮಾತನಾಡುತ್ತಿಯಾ ಅಂತಾ ಸಂಶಯ ಮಾಡುವದು ಮತ್ತು ಪಾನಶಾಪ ವ್ಯಾಪಾರ ಜೋರ ನಡೆಸಲು ನಿನ್ನ ತವರುಮನೆಯಿಂದ 25,000=00 ತೆಗೆದುಕೊಂಡು ಬಾ ಮತ್ತು ವರದಕ್ಷಿಣೆ ಹಣ ಪೂರ್ಣ ಕೊಟ್ಟಿಲ್ಲ ಅಂತಾ ಮನೆಯಲ್ಲಿ ಕುಡಿದು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುವದು ಮತ್ತು ಕೈಗಳಿಂದ ಹೊಡೆಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುತ್ತಾನೆ. ನಂತರ ನಿನ್ನೆ ದಿ :20-09-2015 ರಂದು ರಾತ್ರಿ 8-00 ಗಂಟೆಗೆ ನನ್ನ ಗಂಡ ಮದ್ಯಸೇವನೆ ಮಾಡಿಕೊಂಡು ಬಂದು ಲೇ ಭೋಸೂಡಿ ನೀ ತವರುಮನೆಗೆ ಹೋಗಿ ರೊಕ್ಕ ತೆಗೆದುಕೊಂಡು ಬಾ ಅಂತಾ ಮರ್ಯಾದೆಯಿಂದ ಹೇಳಿದರೇ ಕೇಳಲಿಲ್ಲ. ಬಹಳ ಎದುರು ಸೂಳೆ ಅದೀ ನೀನು ಅಂದವನೇ ಮನೆಯಲ್ಲಿದ್ದ ಕೊಡ್ಲಿ ತೆಗೆದುಕೊಂಡು ಕೊಡ್ಲಿ ಕಾವಿನಿಂದ ನನ್ನ ಬಲಗೈ ಮೊಣಕೈಗೆ ಮತ್ತು ಬಲಕಾಲ ಪಾದಕ್ಕೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಅಲ್ಲದೇ ಚಪ್ಪೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದೆ. ನಂತರ ನಾನು ನಮ್ಮ ತವರುಮನೆಗೆ ಹೇಳುತ್ತೇನೆ. ಅಂದಿದ್ದಕ್ಕೆ ಆತನೇ ನಮ್ಮ ತಂದೆಗೆ ಪೋನ ಮಾಡಿ ಅರ್ಜಂಟ್ ಊರಿಗೆ ಬರಬೇಕು ಬರದಿದ್ದರೆ ಬೆಳಿಗ್ಗೆ ನಿನ್ನ ಮಗಳ ಹೆಣ ನೋಡಬೇಕಾಗುತ್ತದೆ. ಅಂತಾ ಹೇಳಿದ್ದರಿಂದ ಅವರು ನಿನ್ನೆ ರಾತ್ರಿ ನಮ್ಮ ಮನೆಗೆ ಬಂದಾಗ ಅವರೊಂದಿಗೆ ನನ್ನ ಗಂಡ ಮತ್ತು ಮೈದುನ ಬಸವರಾಜ ಇಬ್ಬರೂ ತೆಕ್ಕೆಮುಕ್ಕಿ ಬಿದ್ದು ಲೇ ಸೂಳೇಮಗನೇ ನಮಗೇನು ಬುದ್ದಿ ಹೇಳಲಿಕ್ಕೆ ಬಂದಿಯಲೇ ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಅವರ ಮೈಕೈ ಗೆ ಹೊಡೆದಿರುತ್ತಾರೆ. ಕಾರಣ ವರದಕ್ಷಿಣೆಗಾಗಿ ನನ್ನ ಗಂಡ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದು ಅಲ್ಲದೇ ನನ್ನ ಗಂಡ ಮತ್ತು ನನ್ನ ಮೈದುನ ಬುದ್ದಿ ಹೇಳಲು ಬಂದ ನಮ್ಮ ತಂದೆಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡಿಬಡಿ ಮಾಡಿದ್ದು ಇರುತ್ತದೆ. ನಂತರ ನಮ್ಮ ತಂದೆ ಗಾಯಗೊಂಡಿದ್ದ ನನಗೆ ಟಾಟಾ ಎಸಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ದಾಗ ನನ್ನ ಗಂಡನು ನಮ್ಮ ತಂದೆಗೆ ಲೇ ಸೂಳೆ ಮಗನೇ ನೀನು ಸಂಗಡ ಜನರನ್ನು ಕರೆದುಕೊಂಡು ಬಂದಿದ್ದಕ್ಕೆ ಉಳಿದುಕೊಂಡಿ ಇಲ್ಲದಿದ್ದಲ್ಲಿ ನಿನಗೆ ಮತ್ತು ನಿನ್ನ ಮಗಳಿಗೆ ಹೊಡೆದು ಸಾಯಿಸುತ್ತಿದ್ದೆನು. ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯನ್ನು ಪಡೆದುಕೊಂಡು   ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008