Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 107/2015  ಕಲಂ. 78(3) Karnataka Police Act.
ದಿನಾಂಕ: 19-10-2015 ರಂದು ರಾತ್ರಿ 09-30 ಗಂಟೆಗೆ ಪಿ.ಎಸ್.ಐ ರವರು ಹಾಜರಾಗಿ ಫಿರ್ಯಾದಿ ನೀಡಿದ್ದರ ಸಾರಾಂಶ ಏನೆಂದರೆ, ದಿನಾಂಕ 19-10-2015 ರಂದು ರಾತ್ರಿ 20-15 ಗಂಟೆಗೆ ಪೆಟ್ರೋಲಿಂಗನಲ್ಲಿದ್ದಾಗ ಗೊರೆಬಿಹಾಳ ಕ್ರಾಸದಲ್ಲಿ ಚಹದ ಅಂಗಡಿ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಹೆಚ್.ಸಿ-83 ಮಲ್ಲಪ್ಪ ರವರಿಂದ ಪಂಚರಾದ 1] ಪಾರಪ್ಪ ತಂದೆ ಬಸಪ್ಪ ಮುಡಿಯಪ್ಪನವರ ವಯ: 26, ಜಾತಿ: ವಾಲ್ಮೀಕಿ, ಉ: ಒಕ್ಕಲುತನ ಸಾ: ಗೊರೆಬಿಹಾಳ 2] ರಜಾಕ್ ತಂದೆ ಮಾಬುಸಾಬ ಜಾಲಿಹಾಳ ವಯಾ: 30, ಜಾತಿ: ಮುಸ್ಲಿಂ, ಉ: ಟೇಲರ್, ಸಾ: ಗೊರೆಬಿಹಾಳ  ರವರನ್ನು ಹಾಗೂ ಸಿಬ್ಬಂದಿಯವರಾದ ಹೆಚ್,ಸಿ.-11, ಪಿ.ಸಿ.-162, 208 ರವರನ್ನು ಬರಮಾಡಿಕೊಂಡು ಎಲ್ಲರಿಗೂ ವಿಷಯ ತಿಳಿಸಿ ಎಲ್ಲರೂ ಕೂಡಿ ಸರಕಾರಿ ಜೀಪ ನಂ. ಕೆ.ಎ.37/ಜಿ-186 ನೇದ್ದರಲ್ಲಿ ಹೊರಟು ಗೊರೆಬಿಹಾಳ ಕ್ರಾಸ್ ಹತ್ತಿರ ಬಸ್ ನಿಲ್ದಾಣದ ಈಚೆ ಜೀಪ್ ನಿಲ್ಲಿಸಿ ಬಸ್ ನಿಲ್ದಾಣದ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲು ಚಹದ ಅಂಗಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಪಣವಾಗಿ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಎಲ್ಲರೂ ಒಮ್ಮಲೇ ಹೋಗಿ ರೇಡ ಮಾಡಲು ಮಟಕಾ ಚೀಟಿ ಬರೆದುಕೊಡುತ್ತಿದ್ದವನು ಸಿಕ್ಕಿ ಬಿದ್ದಿದ್ದು ಮತ್ತು ಬರೆಸುತ್ತಿದ್ದವರಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಚೀಟಿ ಬರೆದುಕೊಡುವವನನ್ನು ವಿಚಾರಿಸಿದಾಗ ತನ್ನ ಹೆಸರು ಮಲ್ಲಪ್ಪ ತಂದೆ ನಿಂಗಪ್ಪ ಮುಶಿಗೇರಿ, ವಯಾ: 47 ವರ್ಷ ಜಾ:ಕುರುಬರ, ಉ:ಚಹದ ಅಂಗಡಿ ವ್ಯಾಪಾರ ಸಾ.ಗೊರೆಬಿಹಾಳ ಅಂತಾ ಹೇಳಿದ್ದು, ಮತ್ತು ಬರೆಸುತ್ತಿದ್ದವರನ್ನು ವಿಚಾರಿಸಿದಾಗ 1] ನಿಂಗಪ್ಪ ಮಾಗಿ, 2] ನಿರಂಜನ ಗೌಡ್ರ ಇಬ್ಬರೂ ಸಾ : ಗೊರೆಬಿಹಾಳ ಅಂತಾ ಹೇಳಿದ್ದು ಇವರಿಗೆ ಈಹಿಂದೆ ಮಲ್ಲಪ್ಪ ಈತನು ಚೀಟಿ ಬರೆದುಕೊಟ್ಟು ನಮಗೆ ಬರುವ ನಾಲ್ಕು ನೂರು ರೂಪಾಯಿ ಕೊಡದೇ ಮೋಡ ಮಾಡಿ ಈಗ ಪುನಃ ನಸೀಬದ  ಆಟ ಅಂತಾ ಹೇಳಿದ್ದು ನಂತರ ಪಿ.ಎಸ್.ಐ ರವರು ಮಟಕಾ ಬರೆದುಕೊಡುವ ಮಲ್ಲಪ್ಪನ ಅಂಗ ಜಪ್ತಿ ಮಾಡದಾಗಿ ಇವರ ಮಟಕಾ ಜೂಜಾಟ 4080-00 ನಗದು ಹಣ, ಒಂದು ಮಟಕಾ ಬರೆದ ನೋಟ ಪುಸ್ತಕ, ಹಾಗೂ ಒಂದು ಬಾಲ್ ಪೆನ್ ಸಿಕ್ಕಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ತಾನು ಬರೆದ ಮಟಕಾ ಪಟ್ಟಿಗಳನ್ನು ಬುಕ್ಕಿಯಾದ ರಾಜು ಸಾವಜಿ ಸಾ.ಹನಮಸಾಗರ ಈತನಿಗೆ ಕೊಡುವುದಾಗಿ ತಿಳಿಸಿದನು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 221/2015  ಕಲಂ. 87 Karnataka Police Act.
ದಿನಾಂಕಃ- 19-10-2015 ರಂದು ರಾತ್ರಿ 21-35 ಗಂಟೆಗೆ ಠಾಣಾ ವ್ಯಾಪತಿಯ ಮಾರಿಕ್ಯಾಂಪ್ ಗ್ರಾಮದಲ್ಲಿ ದುರ್ಗಮ್ಮ ಕಟ್ಟೆಯ ಹತ್ತಿರ  ಸಾರ್ಜಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ವೆಂಕಟೇಶ ಎ.ಎಸ್.ಐ. ಹಾಗೂ ಸಿಬ್ಬಂದಿಗಳು ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಲು 4 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ ಒಟ್ಟು ನಗದು ಹಣ ರೂ.470/- ಮತ್ತು 52 ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ. 182/2015  ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ 19-10-2015 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾಧಿದಾರರಾದ ದೇವೆಂದ್ರಪ್ಪ ತಂದೆ ಶಂಕ್ರಪ್ಪ ಮಣ್ಣೇರಿ ವಯ: 29, ಜಾ: ಲಿಂಗಾಯತ, ಉ: ಗ್ರಾನೈಟ ಪ್ಯಾಕ್ಟರಿಯಲ್ಲಿ ಕೆಲಸ, ಸಾ: ಕುರುಬನಾಳ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತಿ ಫಿರ್ಯಾದಿ ಸಾರಾಂಶವೇನೆಂದರೆ,ನನ್ನ ದೊಡ್ಡಪ್ಪನ ಮಗನಾದ ವಿರುಪಣ್ಣ ಇತನು ಇಂದು ಬೆಳಿಗ್ಗೆ ತಮ್ಮ ಹೊಲದಿಂದ ಹೂವುಗಳನ್ನು ತೆಗೆದುಕೊಂಡು ತನ್ನ ಮೋ/ಸೈ ನಂ ಕೆಎ-36-ಆರ್-8937 ನೇದ್ದರಲ್ಲಿ ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಹೂವುಗಳನ್ನು ಕೊಟ್ಟು ವಾಪಸ್ ಕೂರುಬನಾಳ ಗ್ರಾಮಕ್ಕೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಕಾರ್ಗಿಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನಂತರ ಸದರಿ ಮೋ/ಸೈ ನ್ನು ನಡೆಸಿಕೊಂಡು ರೋಡ ಡೀವೈಡರ್ ಮುಖಾಂತರ ಹೋಸಪೇಟೆ ಕೆಡೆಗೆ ಹೋಗುವ ರಸ್ತೆಯಲ್ಲಿ ಬಂದು ರಾಮದೇವ್ ಡಾಬಾ ಹತ್ತಿರ ಕುರುಬನಾಳ ಕಡೆಗೆ ರಸ್ತೆಯ ಎಡಗಡೆ ಬಾಜು ಹೋಗುತ್ತಿದ್ದಾಗ ಇಂದು ದಿನಾಂಕ: 19-10-2015 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕುಷ್ಟಗಿ ಕಡೆಯಿಂದ ಲಾರಿ ನಂ ಟಿಎನ್-30-ಯು-9379 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸದರಿ ವಿರುಪಣ್ಣನಿಗೆ ಹಿಂದಿನಿಂದ ಟಕ್ಕರ ಮಾಡಿ ಕೇಡವಿ ಅಪಘಾತ ಪಡಿಸಿದ್ದು ಇದರಿಂದ ಸದರಿ ಲಾರಿಯ ಗಾಲಿಯು ವಿರುಪಣ್ಣನ ಮೇಲೆ ಹಾಯ್ದು ಹೋಗಿದ್ದರಿಂದ ವಿರುಪಣ್ಣನಿಗೆ ತಲೆ ಒಡೆದು ಸಂರ್ಪೂಣ ನಜ್ಜು ಗುಜ್ಜಾಗಿದ್ದು ಹೊಟ್ಟೆಯ ಬಾಗದ ಮಾಂಸ ಹೊರಬಂದಿದ್ದು ಹಾಗೂ ಮರ್ಮಾಂಗ ಬಾಗದ ಮಾಂಸ ಹೊರಬಂದಿದ್ದು ಇದರಿಂದ ವಿರುಪಣ್ಣನ್ನು ಸ್ಥಳದಲ್ಲಿಯೇ ಮೃತ ಪಟ್ಟಿರುವ ಬಗ್ಗೆ ಗೊತ್ತಾಯಿತು. ಸದರಿ ಅಪಘಾತ ಪಡಿಸಿದ ಲಾರಿಯು ಅಪಘಾತ ಪಡಿಸಿದ ಸ್ಥಳದಿಂದ ಸ್ವಲ್ಪ ದೂರ ಮುಂದೆ ಹೋಗಿ ನಿಂತಿದ್ದು ಅದರ ಚಾಲಕ ಹೆಸರು ವಿಚಾರಿಸಲಾಗಿ ಕೆ ಕರುಪಯ್ಯನ್ ತಂದೆ ಆರ್ ಕಾಲಿಮುತ್ತು ಸಾ: ತಮೀಳನಾಡು ಅಂತಾ ಗೊತ್ತಾಯಿತು ನಂತರ ಮೃತ ವಿರುಪಣ್ಣ ಇತನ ಶವವನ್ನು ಎನ್ ಹೆಚ್ ಎ ಐ ವಾಹನದಲ್ಲಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಕಾರಣ ಸದರಿ ಲಾರಿ ಚಾಲಕನ ವಿರುದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ. 316/2015  ಕಲಂ. 279, 337 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿನಾಂಕ: 19-10-2015 ರಂದು ಮಧ್ಯಾಹ್ನ 1:35 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಘವೇಂದ್ರ ತಂದೆ ಹುಲಗಪ್ಪ ಪುಜಾರ, ವಯಸ್ಸು: 27 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: ಹೊಸ ಹಿರೇಬೆಣಕಲ್ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 19-10-2015 ರಂದು ಮುಂಜಾನೆ 7:30 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಮಗಳಾದ ಕುಮಾರಿ ಕಾವೇರಿ ಇವಳನ್ನು ಕರೆದುಕೊಂಡು ದಾಸನಾಳ ಬ್ರಿಡ್ಜ ಕಾಲುವೆಯಲ್ಲಿ ಬಟ್ಟೆಗಳನ್ನು ತೊಳೆದುಕೊಂಡು ಬರು ಕುರಿತು ಒತ್ತುವ ಬಂಡಿಯಲ್ಲಿ ಬಟ್ಟೆಗಳನ್ನು ತಗೆದುಕೊಂಡು ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ದಾಸನಾಳ ಬ್ರಿಡ್ಜನಲ್ಲಿ ನಮ್ಮ ಎದರುಗಡೆಯಿಂದ ಅಂದರೆ ಗಂಗಾವತಿ ಕಡೆಯಿಂದ ಒಂದು ಇಂಡಿಕಾ ಕಾರ್ ಚಾಲಕನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗ ನಿಯಂತ್ರಿಸಲಾಗದೇ ನನ್ನ ಸಂಗಡ ರಸ್ತೆಯ ಎಡಪಕ್ಕಕ್ಕೆ ನಡೆದುಕೊಂಡು ಬರುತ್ತಿದ್ದ ನನ್ನ ಮಗಳು ಕಾವೇರಿಗೆ ಟಕ್ಕರು ಕೊಟ್ಟು ಅಪಘಾತ ಮಾಡಿದನು. ಇದರಿಂದ ನನ್ನ ಮಗಳು ರಸ್ತೆಯಲ್ಲಿ ಬಿದ್ದು ಅವಳ ತಲೆಯ ಬಲಗಡೆಗೆ ಒಳಪೆಟ್ಟಾಗಿದ್ದು ಮತ್ತು ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಪಘಾತವಾದ ಕೂಡಲೇ ಕಾರ್ ಚಾಲಕನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಹಾಗೇಯೇ ಕೊಪ್ಪಳ ಕಡೆಗೆ ಹೊರಟು ಹೋದನು. ಆ ಸಮಯದಲ್ಲಿ ಅಲ್ಲಿದ್ದ ನಮ್ಮೂರ ಯಮನಖಾನ್ ತಂದೆ ಬಾಬುಸಾಬ ಪಠಾಣ ವಯಸ್ಸು: 25 ವರ್ಷ ಈತನು ಕಾರಿನ ನಂಬರ್ ನ್ನು ಬರೆದುಕೊಂಡಿದ್ದು ಅದರ ನಂಬರ್ ಕೆ.ಎ-51/ಎಂ-1220 ಅಂತಾ ಇರುತ್ತದೆ. ನಂತರ ನನ್ನ ಮಗಳನ್ನು ಚಿಕಿತ್ಸೆ ಕುರಿತು ಗಂಗಾವತಿಯ ಅನ್ನಪೂರ್ಣ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯರು ಅಪಘಾತ ಪ್ರಕರಣವಾಗಿದ್ದರಿಂದ ನೀವು ಸ್ಕ್ಯಾನ್ ಮಾಡಿಸಿಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರಿಂದ ನನ್ನ ಮಗಳಿಗೆ ಸಿಟಿ.ಸ್ಕ್ಯಾನ್ ಮಾಡಿಸಿಕೊಂಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಇರುತ್ತದೆ. ಕಾರಣ ಈ ಅಪಘಾತ ಮಾಡಿ ಪರಾರಿಯಾದ ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ನುಡಿ ಹೇಳಿಕೆ ದೂರಿನ ಸಾರಾಂಶದ  ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008