ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 104/2015 ಕಲಂ. 447, 341,
323, 324, 504, 506 ಸಹಿತ 34 ಐ.ಪಿ.ಸಿ:.
ಮುದೋಳ ಸೀಮಾದಲ್ಲಿ ಪಿರ್ಯಾದಿದಾರನ ತಂದೆ ಹೆಸರಿನಲ್ಲಿ ಹೊಲ 1) ಸರ್ವೆ ನಂ 578/614 ಕ್ಷೇತ್ರ 11 ಎಕರೆ 24 ಗುಂಟೆ 2) ಸರ್ವೆ ನಂ 613 ಕ್ಷೇತ್ರ
15 ಕರೆ 20 ಗುಂಟೆ 3) ಸರ್ವೆ ನಂ 663/810 ಕ್ಷೇತ್ರೆ 04 ಎಕರೆ 29 ಗುಂಟೆ ಇದ್ದು ಇವುಗಳನ್ನು
ಕೋರು ಮಾಡಲಿಕ್ಕೆ ತಮ್ಮ ಗ್ರಾಮದ ಸಿದ್ದಪ್ಪನಿಗೆ ಕೊಟ್ಟಿದ್ದು ಇರುತ್ತದೆ. ಸುಮಾರು 03 ವರ್ಷಗಳ
ಹಿಂದೆ ಪಿರ್ಯಾದಿದಾರನ
ದೊಡ್ಡಪ್ಪನಾದ ಗುರುಶಾಂತಪ್ಪ ಇವರು ಮರಣಕಿಂತ ಪೂರ್ವದಲ್ಲಿ ಮೇಲ್ಕಾಣಿಸಿದ ಜಮೀನುಗಳಲ್ಲಿ ಬಾಗ
ಮಾಡಿದ್ದು ಇದಕ್ಕೆ ಪಿರ್ಯಾದಿದಾರರ ತಂದೆ ಶಂಕ್ರಪ್ಪ ಇವರು ಸಮಂಜಸ ಅನಿಸದೇ ಇದ್ದುದ್ದರಿಂದ
ಯಲಬುರ್ಗಾ ಸಿವಿಲ್ ನ್ಯಾಯಾಲಯದಲ್ಲಿ ದಾವೇ ಹುಡಿದ್ದು ಸದ್ಯ ವಾಜ್ಯ ವಿಚಾರಣೆಯಲ್ಲಿರುತ್ತದೆ. ಪಿರ್ಯಾದಿದಾರನು ಎರಡು ಸರ್ವೆನಂಬರ ಒಂದೆ ಹತ್ತಿರ ಇರುವ ಹೊಲಕ್ಕೆ
ಇಂದು ದಿನಾಂಕ- 18-10-2015 ರಂದು ಮುಂಜಾನೆ 10-30 ಗಂಟೆಗೆ ಬಿತ್ತನೆ ಮಾಡಲು ಹೊಲನೋಡಿಕೊಂಡು
ಬರಲು ಹೋಗಿದ್ದು ನಂತರ ಅಲ್ಲಿಗೆ ಪಿರ್ಯಾದಿದಾರನ ತಂದೆ ಶಂಕ್ರಪ್ಪ ಇವರ ಹೊಲ ಕೋರು ಮಾಡುವ
ಸಿದ್ದಪ್ಪ ಇತನು ಸಹ ಅಲ್ಲಿಗೆ ಬಂದಿದ್ದು ನಂತರ ಮಧ್ಯಾನ್ಹ 12-30 ಗಂಟೆಗೆ ಪಿರ್ಯಾದಿದಾರನ ತಂದೆ
ಶಂಕ್ರಪ್ಪ ಇವರು ಸಹ ಅಲ್ಲಿಗೆ ಬಂದಿದ್ದು ನಂತರ ಮಧ್ಯಾನ್ಹ 1-30 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅಣ್ಣ ಆರೋಪಿ ನಂ 01 ತೋಟಪ್ಪ ಮತ್ತು ಆತನ ಇಬ್ಬರೂ ಮಕ್ಕಳಾದ ಆರೋಪಿ
ನಂ 02 ಮತ್ತು 03 ನೇದ್ದವರು ಪಿರ್ಯಾದಿದಾರನ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಏನಲೇ ಬೋಸುಡಿ
ಸೋಳೆ ಮಕ್ಕಳ ಈ ಜಮೀನುಗಳು ನಮಗೆ ಸಂಭಂದಿಸಿದ್ದು ನಿನ್ಯಾಕ ಬಿತ್ತಲ ಬಂದಿ ಅಂತಾ ಅವಾಚ್ಯ
ಶಬ್ಧಗಳಿಂದ ಬೈದು ಆರೋಪಿ ನಂ 01 ಇತನು ಏಕಾಏಕಿ ಪಿರ್ಯಾದಿಯನ್ನು ಮುಂದೆ ಹೋಗದಂತೆ ಹಿಡಿದು ನಿಲ್ಲಿಸಿದ್ದು
ಆಗ ಆರೋಪಿ ನಂ 02 ಮತ್ತು 03 ನೇದ್ದವರು ಕೈಮುಷ್ಟಿ ಮಾಡಿ ಪಿರ್ಯಾದಿಯ ಮುಖಕ್ಕೆ, ಪಕ್ಕಡಿಗೆ, ಎದೆ ಬಾಗಕ್ಕೆ ಬೆನ್ನಿಗೆ ಗುದಿದ್ದು ನಂತರ ನೆಲಕ್ಕೆ ಕೆಡವಿ ಮೂರು ಜನರು ಕಾಲಿನಿಂದ
ಒದೆಯಲಿಕ್ಕೆ ಹತ್ತಿದ್ದು ಇದರಿಂದ ಪಿರ್ಯಾದಿದಾರನ ಕುತ್ತಿಗೆ ಹತ್ತಿರ ತೆರಚಿದ ಗಾಯವಾಗಿದ್ದು ಆಗ
ಪಿರ್ಯಾದಿದಾರನ ತಂದೆ ಶಂಕ್ರಪ್ಪ ಇವರು ಜಗಳ ಬಿಡಿಸಲು ಬಂದಾಗ ಪಿರ್ಯಾದಿಯ ತಂದೆಗೆ ಆರೋಪಿ ನಂ 01
ಇತನು ಅವಾಚ್ಯ ಶಬ್ದಗಳಿಂದ ಬೈದು ಹಿಡಿದುಕೊಂಡಿದ್ದು ಆಗ ಆರೋಪಿ ನಂ 02 ಮತ್ತು 03 ನೇದ್ದವರು
ಕೈಯಿಂದ ಪಿರ್ಯಾದಿಯ ತಂದೆಗೆ ಬಾಯಿಯ ಹತ್ತಿರ ಮತ್ತು ಬೆನ್ನಿಗೆ ತಲೆಗೆ ಹೊಡಿದಿದ್ದು ಇದ್ದರಿಂದ
ಪಿರ್ಯಾದಿದಾರನ ತಂದೆಗೆ ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಆರೋಪಿತರೆಲ್ಲೂರು
ಹೋಗುವಾಗ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 232/2015 ಕಲಂ. 143, 147, 341, 323, 324,
504, 506 ಸಹಿತ 149 ಐ.ಪಿ.ಸಿ:.
ದಿನಾಂಕ 18-10-2015 ರಂದು ರಾತ್ರಿ
11-30 ಗಂಟೆಗೆ ಶ್ರೀ ವಿನಯ ತಂದೆ ವಿಜಯಕುಮಾರ
ಹಿರೇಮಠ, ವಯಸ್ಸು 24 ವರ್ಷ ಜಾ: ಜಂಗಮ, ಉ: ಖಾಸಗಿ ವೃತ್ತಿ ಸಾ: ವಿರುಪಾಪುರ ನಗರ ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾಧಿದಾರರ ತಂದೆ ವಿಜಯ ಕುಮಾರ ಇವರಿಗೆ ಆರೋಪಿತನಾದ
ಬಿ.ಎಂ ವಿರುಪಾಕ್ಷಯ್ಯ ಇವರು ದಿನಾಂಕ: 16-10-2015 ರಂದು ಎಲ್.ಐ.ಸಿ ಆಫೀಸ್ ನಲ್ಲಿ ಹೊಡೆದಿದ್ದರಿಂದ
ಈ ವಿಷಯವನ್ನು ಕೇಳಲು ಫಿರ್ಯಾದಿಯು ನಿನ್ನೆ ಹೋಗಿದ್ದು ಆಗ ಇಬ್ಬರಿಗೂ ಜಗಳವಾಗಿದ್ದು ಇರುತ್ತದೆ. ಸದರಿ
ಈ ಜಗಳವನ್ನು ನಾವು ನಮ್ಮ ಹಿರಿಯರ ಸಮಕ್ಷಮ ಬಗೆ ಹರಿಸಿಕೊಂಡಿದ್ದು ಆದರೂ ಆರೋಪಿ ವಿರುಪಾಕ್ಷಯ್ಯ ಇವರಿಗೆ
ಸಿಟ್ಟು ಹೋಗಿರಲ್ಲಿಲ್ಲ. ಇಂದು ದಿನಾಂಕ: 18-10-2015 ರಂದು ಫಿರ್ಯಾದಿ ಹಾಗೂ ಅವರ ಸ್ನೇಹಿತ ಸಮೀರ
ಇಬ್ಬರು ಊಟವನ್ನು ತರಲು ಹೋಟೆಲ್ ಗೆ ಹೋಗಿ ಊಟವನ್ನು ತೆಗೆದುಕೊಂಡು ವಾಪಸ್ ರಾತ್ರಿ 10-30 ಗಂಟೆಗೆ
ಜಯನಗರದ ಶಬರಿ ಹೋಟೆಲ್ ಹತ್ತಿರ ಬರುತ್ತಿದ್ದಾಗ ಆರೋಪಿ ಬಿ.ಎಂ ವಿರುಪಾಕ್ಷಯ್ಯ ಮತ್ತು ಇತರೆ 5-6 ಜನರು
ತಮ್ಮ ಮೋ.ಸೈಕಲ್ ಮತ್ತು ಕಾರಿನಲ್ಲಿ ಬಂದು ಫಿರ್ಯಾದಿಗೆ ತಡೆದು ನಿಲ್ಲಿಸಿ ಲೇ ಸೂಳೇ ಮಗನೆ ನಮ್ಮ ವಿರುಪಾಕ್ಷಯ್ಯ
ಸರ್ ಗೆ ಹೊಡೆಯುತ್ತಿಯೇನಲೆ ಸೂಳೇ ಮಗನೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ವಿರುಪಾಕ್ಷಯ್ಯ
ಇವರು ನನಗೆ ಕಲ್ಲಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಅವನ ಹಿಂದೆ ಬಂದವರು ಸಹ ನನಗೆ ಮತ್ತು ಜಗಳ
ಬಿಡಿಸಲು ಬಂದ ನನ್ನ ಸ್ನೇಹಿತ ಸಮೀರ್ ಇವನಿಗೂ ಸಹ ಹೊಡೆ ಬಡೆ ಮಾಡಿದವರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
3) ಕಾರಟಗಿ
ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/2015
ಕಲಂ. 174 ಸಿ.ಆರ್.ಪಿ.ಸಿ:.
ದಿನಾಂಕ ಛ 18-10-2015 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ರತ್ನಮ್ಮ ಗಂಡ ಮಾರ್ಕಂಡಯ್ಯ ಅಲಿಯಾಸ್ ಮಾರ್ಕಂಡಪ್ಪ ಕುರಿ ವಯಾ- 25
ವರ್ಷ ಜಾ- ನಾಯಕ ಉ-ಮನೆಗೆಲಸ ಸಾ- ಹುಳ್ಕಿಹಾಳ ತಾ- ಗಂಗಾವತಿ ಜಿ- ಕೊಪ್ಪಳ ಇವರು ಠಾಣೆಗೆ ಹಾಜರಾಗಿ
ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನನ್ನ ತವರು ಮನೆ ಮರಲಾನಹಳ್ಳಿ ಇದ್ದು ಈಗ್ಗೆ 8 ವಷಗಳ ಹಿಂದೆ
ಹುಳ್ಕಿಹಾಳ ಗ್ರಾಮದ ಮಾರ್ಕಂಡಯ್ಯ ಅಲಿಯಾಸ್ ಮಾರ್ಕಂಡಪ್ಪ ತಂದಿ ಗಿರಿಯಪ್ಪ ಕುರಿ ವಯಆ- 29 ವರ್ಷ
ಇತನೊಂದಿಗೆ ಜೂರಟಗಿ ಗ್ರಾಮದ ಈಶ್ವರ ದೇವಸ್ಥಾನದ ಮುಂದೆ ಸಾಮೂಹಿಕ ಮದುವೆಯಲ್ಲಿ ಮದುವೆಯಾಗಿರುತ್ತೇವೆ. ನಮಗೆ
1)ಈಶ್ವರಿ 2) ಪಲ್ಲವಿ
ಅಂತಾ ಮಕ್ಕಳು ಇರುತ್ತಾರೆ ನನ್ನ ಗಂಡ ಮಾರ್ಕಂಡಪ್ಪ ಹಾಗೂ ನನ್ನ ಅಕ್ಕ ಯಮನಮ್ಮ ಗಂಡ ಗೋವಿಮದಪ್ಪ ಕುರಿ ಇವರ
ಹೆಸರಿನಲ್ಲಿ ಹುಳ್ಕಿಹಾಳ ಸೀಮಾದಲ್ಲಿ ಜಮೀನು ಸರ್ವೆ ನಂ-97 ಕ್ಷೇತ್ರ 4 ಎಕರೆ 7 ಗುಂಟೆ ಜಮೀನು ಇದ್ದು
ನನ್ನ ಗಂಡ ಸಾಗುವಳಿ ಮಾಡಿಕೊಂಡಿದ್ದನು. ನನ್ನ ಗಂಡ ಹಾಗೂ ಅಕ್ಕ ಯಮನಮ್ಮ ಕೂಡಿ ಕಾರಟಗಿಯ ಎಸ್.ಬಿ.
ಹೆಚ್. ಬ್ಯಾಂಕಿನಲ್ಲಿ ಸದರಿ ಜಮೀನಿನ ಸಲುವಾಗಿ ಕೃಷಿ ಸಾಲವಾಗಿ ಸುಮಾರು 1 ಲಕ್ಷ ಸಾಲ ಮಾಡಿದ್ದು
ಹಾಗೂ ಕೈಗಡ ರೀತಿಯಲ್ಲಿ ಅಲ್ಲಿ ಇಲ್ಲಿ ಸುಮಾರು 2 ಲಕ್ಷದಷ್ಟು ನನ್ನ ಗಂಡ ಈ ಸಾಲದ ಬಗ್ಗೆ ಅಳುತ್ತಾ ನೊಂದುಕೊಂಡು ಒಂದು ರೀತಿ ಪೇಚಾಡುತ್ತಾ ತಾನು ಮಾಡಿದ ಸಾಲ ತೀರಿಸಲು
ಆಗುತ್ತಿಲ್ಲ ಅಂತಾ ಹೇಳುತ್ತಿದ್ದನು. ನಾನು ಆತನಿಗೆ ಇಂದಿಲ್ಲಾ ನಾಳೆ ತೀರಿಸೋಣ ಅಂತಾ ಸಮಾಧಾನ
ಮಾಡುತ್ತಿದ್ದೇನು. ನಂತರ ನನ್ನ ಗಂಡ ಅದೇ ಸಾಲಭಾದೆಯಿಂದ ನೊಂದುಕೊಂಡಿದ್ದನು. ನನ್ನ ಗಂಡ
ನನಗೆ ಈಗ್ಗೆ ಒಂದು ವಾರದ ಹಿಂದೆ ತವರು ಮನೆಗೆ ಕಳುಹಿಸಿದ್ದನು. ದಿನಾಂಕ -18-10-2015 ರಂದು ಮದ್ಯಾಹ್ನ 1-00 ಗಂಟೆಯಿಂದ ಸಾಯಂಕಾಲ
7-00 ಗಂಟೆಯ ಅವದಿಯಲ್ಲಿ ಹುಳ್ಕಿಹಾಳ ಗ್ರಾಮದ ನಮ್ಮ ವಾಸದ ಮನೆಯಲ್ಲಿ ನನ್ನ ಗಂಡನು ಬಲಿಸಿಗೆ
ಹಗ್ಗ ಕಟ್ಟಿ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ನಮ್ಮ ಮಾವ ಟಾಕಪ್ಪ ಕುರಿ
ಇವರುಪೋನ್ ಮಾಡಿ ತಿಳಿಸಿದ್ದರಿಂದ ನಾನು ಗಾಭರಿಯಾಗಿ ಬಂದು ನೋಡಲು ವಿಷಯ ನಿಜವಿತ್ತು. ನನ್ನ ಗಂಡ ತಾನು
ಮಾಡಿದ ಸಾಲವನ್ನು ತೀರಿಸಲಾಗದೆ ಮನನೊಂದು ಅದೆ ಚಿಂತೆಯಲ್ಲಿ ಚಿಂತೆ ಮಾಡಿ ನೇಣಿ
ಹಾಕಿಕೊಂಡು ಮೃತಪಟ್ಟಿದ್ದು ಯಾರ ಮೇಲೂ ಸಂಶಯವಿರುವುದಿಲ್ಲಾ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು
ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯಲ್ಲಿ ಯು.ಡಿ.ಆರ್ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment