Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 23, 2015

1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 36/2015 ಕಲಂ. 279, 337, 338 ಐ.ಪಿ.ಸಿ. ಮತ್ತು 185 ಐ.ಎಂ.ವಿ. ಕಾಯ್ದೆ:.
ದಿನಾಂಕ 22-10-2015 ರಂದು ಕಾರಟಗಿಯಿಂದ ಸುಮಾರು ಬೆಳಗ್ಗೆ 11-30 ಗಂಟೆಗೆ ಶ್ರೀ ಶಿವರಾಜ ತಂಗಡಗಿ ರವರ ಎಸ್ಕಾರ್ಟನ್ನು ಆರ್.ಎಸ್. ಶ್ರೀ ಈರಪ್ಪ ,ಮತ್ತು ಯಮನೂರಪ್ಪ .ಪಿ.ಸಿ 210 , ಯೋಗಾನಂದ ಎಪಿಸಿ 83 ರವರೊಂದಿಗೆ ಮಾಡುತ್ತಾ  ಶ್ರೀರಾಮನಗರದಲ್ಲಿ ಶ್ರೀ ಶಿವರಾಜ ತಂಗಡಗಿ ರವರು ದೇವಿಗುಡಿಯ ಕಾರ್ಯಕ್ರಮ ಮುಗಿದ ನಂತರ ಗಂಗಾವತಿಗೆ ಸುಮಾರು ಮದ್ಯಾನ್ನ 1-30 ಗಂಟೆಗೆ ಬಂದೆವು ಗಂಗಾವತಿಯ ಮೈಸೂರು ಬ್ಯಾಂಕ್ ಹಿಂದೆ ಇರುವ ಮಲ್ಲಿಕಾಜರ್ುನ ನಾಗಪ್ಪ ರವರ ಮಿಲ್ಲನಲ್ಲಿ ಆಯುಧ ಪೂಜೆ  ಕಾರ್ಯಕ್ರಮ ಮುಗಿಸಿಕೊಂಡು ನಂತರ ನಾನು ಜೀಪ್ ಚಾಲನೆ ಮಾಡಿಕೊಂಡು ಎಸ್ಕಾರ್ಟ ಮಾಡುತ್ತಾ ಮುಂದೆ ಮುಂದೆಯಾಗಿ ಸೈರಾನ್ ಹಾಕುತ್ತಾ ಕೊಪ್ಪಳ ಕಡೆಗೆ ಹೋಗುವ ಕುರಿತು  ಮದ್ಯಾನ್ನ ಸುಮಾರು 1-45 ಗಂಟೆಗೆ ಕೊಪ್ಪಳ ರಸ್ತೆಯಲ್ಲಿ ಹೋಗುತ್ತಿರುವಾಗ ಪ್ರಶಾಂತನಗರ ಕಮಾನಿನ ಒಳಗಿನಿಂದ ಒಂದು ಸೈಕಲ್ಲ ಮೋಟಾರು ಸವಾರನು ತನ್ನ ಸೈಕಲ್ಲ ಮೋಟಾರನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಅಡ್ಡವಾಗಿ ನನ್ನ ಎಸ್ಕಾರ್ಟ ಜೀಪಗೆ ಬಂದು ಮುಂಭಾಗದ ಬಲಭಾಗದಲ್ಲಿ ಟೈರ್ ಹತ್ತಿರ ಬಂಪರಗೆ ಟಕ್ಕರ ಮಾಡಿ ಮೋಟಾರು ಸೈಕಲ್ಲ ಹಾಕಿಕೊಂಡು ರಸ್ತೆ ಮೇಲೆ ಬಿದ್ದನು ಆಗ ನಾನು ಕೂಡಲೇ ನನ್ನ ಜೀಪನ್ನು ಸೈಡ್ ತಗೆದುಕೊಂಡೆನು ಎಲ್ಲರು ಇಳಿದು ನೋಡಲಾಗಿ ಮತ್ತು ಅವರಿಗೆ ಎಬ್ಬಿಸಲಾಗಿ ನಮ್ಮ ಜೀಪಗೆ ಅಪಘಾತ ಮಾಡಿದ ಮೋಟಾರು ಸೈಕಲ್ಲ ಹಿರೋ ಸ್ಪಂಡರ ಪ್ರೋ ನಂ ಕೆ.. 34-ಇಇ 4495 ಅಂತಾ ಇದ್ದಿತು ಅದರ ಸವಾರನ ಹಸರನ್ನು ಕೇಳಲಾಗಿ ರಾಮು ಅಲಿಯಾಸ ರಾಮಣ್ಣ ತಂದೆ ದೊಡ್ಡ ಮಲ್ಲಪ್ಪ ಬಾವಿಕಟ್ಟಿ ವಯಸ್ಸು  28 ಜಾ: ನಾಯಕ : ಒಕ್ಕಲುತನ ಸಾ: ಸೋಮಲಾಪೂರು ಕಂಪ್ಲಿ ಹತ್ತಿರ ತಾ:ಜಿ: ಬಳ್ಳಾರಿ ಅಂತಾ ಹೇಳಿದನು ಸದರಿ ಮೋಟಾರು ಸೈಕಲ್ಲ ಹಿಂದೆ ಕುಳಿತವನ ಹೆಸರನ್ನು ಕೇಳಲಾಗಿ ವಿರೇಶ ತಂದೆ ದೊಡ್ಡಪ್ಪ ಬಾವಿಕ್ಪಟ್ಟಿ ವಯಸ್ಸು 35 ಜಾ: ನಾಯಕ ಸಾ: ಸೋಮಲಾಪೂರು ಅಂತಾ ಹೇಳಿದರು . ಸದರಿ ಇಬ್ಬರು ಮದ್ಯಪಾನ ಮಾಡಿದ ಬಗ್ಗೆ ವಾಸನೆ ಬರುತ್ತಿತ್ತು ಕೂಡಲೇ ಅಪಘಾತವಾದಾಗ ಪ್ರತ್ಯಕ್ಷವಾಗಿ ಎಂ.ಡಿ ಆಶೀಪ್ ಹುಸೇನ ತಂದೆ ಎಂ ಡಿ ಇಬ್ರಾಹಿಂ ಸಾ: ಸಿದ್ದಾಪೂರು ಬಡಾವಣೆ ಗಂಗಾವತಿ ಈತನು ನೋಡಿದ್ದು ಇತನು ಸಹಾ ಗಾಯಾಳುವಿಗೆ  ಎಬ್ಬಿಸಿದನು ನೋಡಲಾಗಿ ರಾಮು ಅಲಿಯಾಸ ರಾಮಣ್ಣ ಇತನಿಗೆ ಬಲಮೋಣಕೈ ಹತ್ತಿರ , ಬಲಮೋಣಕಾಲಿಗೆ ತರೆಚಿದಗಾಯಗಳಾಗಿದ್ದು, ವಿರೇಶ ಇತನಿಗೆ ತಲೆಯ ಹಿಂದೆ ರಕ್ತಗಾಯ, ಎಡಕಾಲ ಗಿರಕಿ ಹತ್ತಿರ ತರೆಚಿದಗಾಯವಾಗಿದೆ. ಕೂಡಲೇ ಗಾಯಾಳು ವಿರೇಶ  ಮತ್ತು ರಾಮು ಅಲಿಯಾಸ ರಾಮಣ್ಣ ಇವರಿಗೆ ಯಾವುದೋ ಒಂದು ಆಟೋದಲ್ಲಿ ಹತ್ತಿಸಿ ಗಂಗಾವತಿ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿದೆವು ನಂತರ ನಾನು ಮತ್ತೇ ಎಸ್ಕಾರ್ಟ ಕುರಿತು ಹೊರಟು ಕುಷ್ಟಗಿ ತಾಲೂಕಿನ ಕ್ಯಾದಗುಂಪಾ ಬಾರ್ಡರ್ ವರೆಗೆ ಹೋಗಿ ಅಲ್ಲಿ ಶ್ರೀ ಶಿವರಾಜ ತಂಗಡಗಿ ರವರನ್ನು ಬಿಟ್ಟು ನನ್ನ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ನಂತರ ತಡವಾಗಿ ಬಂದು ಈಗ ಸಂಜೆ  6-15 ಠಾಣೆಗೆ ಬಂದು ನನ್ನ ಪಿರ್ಯಾದಿಯನ್ನು ನೀಡಿರುತ್ತೇನೆ.     ಮೋಟಾರು ಸೈಕಲ್ಲ ನಂ ಕೆ.. 34-ಇಇ 4495 ನೇದ್ದರ ಸವಾರನಾದ ರಾಮು ಅಲಿಯಾಸ ರಾಮಣ್ಣ ತಂದೆ ಮಲ್ಲಪ್ಪ ಬಾವಿಕಟ್ಟಿ ಸಾ: ಸೋಮಲಾಪೂರು ಇತನು ಮದ್ಯಪಾನ ಮಾಡಿ ನನ್ನ ಎಸ್ಕಾರ್ಟ ಜೀಪಿನ ಬಲಭಾಗದಲ್ಲಿ ಟಕ್ಕರ ಮಾಡಿದ್ದರಿಂದ ಮುಂದಿನ ಬಲಭಾಗದ ಬಂಪರ್, ಹೆಡಲ್ಶೆಟ್ ಇಂಡಿಕೇಟರ್ ಡ್ಯಾಮೇಜ್ ಆಗಿರುತ್ತದೆ. ಮೋಟಾರು ಸೈಕಲ್ಲನ ಮುಂದಿನ ಬಲಭಾಗದ ಇಂಡಿಕೇಟರ್ ಒಡೆದಿದೆ , ಬಲಭಾಗದಲ್ಲಿ ಡ್ಯೂಮಗೆ , ಬಲಭಾಗದ ಬಂಪರಗೆ ಸ್ಕಾರ್ಚ ಆಗಿದೆ , ಹಿಂದಿನ ಎಡಬಾಗದ ಇಂಡಿಕೇಟರ್ ಒಡೆದಿದೆ ಕಾರಣ ಸದರಿ ರಾಮು ಅಲಿಯಾಸ ರಾಮಣ್ಣ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ  ಕೊಟ್ಟ ಪಿರ್ಯಾದಿ ಮೇಲಿಂದ ಪ್ರಕರಣದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 279, 338 ಐ.ಪಿ.ಸಿ:.

ದಿನಾಂಕಃ-22-10-2015 ರಂದು ಸಾಯಂಕಾಲ 5-45 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್. ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರಿಗೆ ವಿಚಾರ ಮಾಡಿ ಜೊತೆಯಲ್ಲಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಶ್ರೀ ಮಹೇಶ ತಂದಿ ಮಲಕಾಜಪ್ಪ ಸಜ್ಜನ್ ಸಾ. ಕಾರಟಗಿ ಇವರು ಹೇಳಿಕೆ ದೂರು ನೀಡಿದ್ದು ಸದರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರು ನವಲಿ ರೋಡಿನ ಪಕ್ಕದಲ್ಲಿ ಎಮ್.ಕೆ ರೈಸ್ ಮೀಲ್ ಹತ್ತಿರ ಗೊಬ್ಬರ ಮತ್ತು ಕ್ರಿಮೀನಾಶಕ ಅಂಗಡಿ ಮಾಡಿಕೊಂಡಿದ್ದು ಇಂದು ದಿನಾಂಕಃ-22-10-2015 ರಂದು ಸಾಯಂಕಾಲ 5-00 ಗಂಟೆಯಿಂದ 5-15 ಗಂಟೆಯ ಅವಧಿಯಲ್ಲಿ ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ್ಗೆ ಎಮ್.ಕೆ.ರೈಸ್ ಮೀಲ್ ದಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿರುವ ಪರಪ್ಪ ತಂದಿ ಶಿವಪ್ಪ ರಾಜೂರ ಇವರು ಮಿಲ್ ಹೊರಗಡೆ ಬಂದು ತಮ್ಮ ಅಳಿಯನಾದ ರಾಮನಗೌಡ ಇತನೊಂದಿಗೆ ನವಲಿ ರಸ್ತೆಯ ಎಡಬಾಗದಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದಾಗ್ಗೆ ಕಾರಟಗಿ ನವಲಿ ಕ್ರಾಸ್ ಕಡೆಯಿಂದ ಮೋಟಾರ್ ಸೈಕಲ್  ನಂ ಕೆ.ಎ-34ಜೆ-9335 ನೆದ್ದ ಚಾಲಕ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ಮಾರೆಪ್ಪ ಈತನಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಪರಪ್ಪ ಇವರು ಕೆಳಗೆ ಬಿದ್ದು ಅವರಿಗೆ ಬೆನ್ನಿಗೆ ತಲೆಯ ಹಿಂಭಾಗದಲ್ಲಿ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಆದ್ದರಿಂದ ಈತನಿಗೆ ಕಾರಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತೇವೆ. ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 7-05 ಗಂಟೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008