1) ಗಂಗಾವತಿ ನಗರ
ಪೊಲೀಸ್ ಠಾಣೆ ಗುನ್ನೆ ನಂ.240/2015 ಕಲಂ.87 Karnataka Police Act.
ದಿನಾಂಕ 28-10-2015 ರಂದು 1830 ಗಂಟೆಗೆ ಶ್ರೀಇ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರಪೊಲೀಸ್ಠಾಣೆರವರುಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05
ಜನರ ಮೇಲೆ ಕ್ರಮ ಜರುಗಿಸಲು
ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ
28-10-2015 ರಂದು ಸಂಜೆ 5-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ.
ಯಲ್ಲಿನಗಂಗಾಧರಕಾಂಪ್ಲೆಕ್ಸ್ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ
ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 9,470-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ ಸಂಜೆ
5-00 ರಿಂದ 6-00 ಗಂಟೆವರೆಗೆ ಪಂಚನಾಮೆ ಬರೆದುಕೊಂಡಿದ್ದು
ಇರುತ್ತದೆ. ಆರೋಪಿತರ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2) ಕೊಪ್ಪಳ ನಗರ
ಪೊಲೀಸ್ ಠಾಣೆ ಗುನ್ನೆ ನಂ.210/2015 ಕಲಂ.78(3) Karnataka Police Act.
ದಿನಾಂಕ 28.10.2015 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಆರೋಪಿತನಾದ
ಸಾಧೀಕ ಕೊಪ್ಪಳ ನಗರದ ದೇವರಾಜ ಅರಸು ಕಾಲೋನಿಯ ಆಯಿಲ್ ಮಿಲ್ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು
1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಇದು ನಶೀಬದ ಆಟ ಅಂತಾ ಕೂಗಿ ಕರೆಯುತ್ತಾ ಮಟಕಾ ಜೂಜಾಟದ
ನಂಬರ ಬರೇದುಕೊಡುತ್ತಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ
ಮಟಕಾ ಜೂಜಾಟದ ನಗದು ಹಣ 520 ರೂ ಹಾಗೂ ಮಟಕಾ ನಂಬರ ಬರೇದ ಪಟ್ಟಿ, ಬಾಲ್ ಪೆನ್ನ್ ವಶಪಡಿಸಿಕೊಂಡಿದ್ದು
ಇರುತ್ತದೆ.
3) ಕೊಪ್ಪಳ ನಗರ
ಪೊಲೀಸ್ ಠಾಣೆ ಗುನ್ನೆ ನಂ.209/2015 ಕಲಂ.379 ಐ.ಪಿ.ಸಿ:
ದಿನಾಂಕ 26-10-2015 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾಧಿದಾರರಾದ ರಾಜಾಹುಸೇನ
ತಂದೆ ಶೈಲನ್ ಸಾಬ ಗಡ್ಡದ ವಯಾ 32 ವರ್ಷ ಜಾ ಮುಸ್ಲಿಂ ಉ ಮಂಡಾಳ ಭಟ್ಟಿ ಕೆಲಸ ಸಾ ಹಟಗಾರ ಪೇಟೆ
ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 06-10-2015 ರಂಧು ಸಂಜೆ 6-30 ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ
ಟಿ.ವಿ.ಎಸ್.ಎಕ್ಸ್.ಎಲ್ ಮೋಟಾರ ಸೈಕಲ್ ನಂ KA 37/Y 2370 ಅಂ.ಕಿ.ರೂ 25,000 ನೇದ್ದನ್ನು ನಗರದ ಜವಾಹರ ರಸ್ತೆಯ ದಿವಟರ ಸರ್ಕಲ್ ಹತ್ತಿರದ
ಪ್ಯಾನ್ ರಿಪೇರಿ ಅಂಗಡಿಗೆ ತನ್ನ ಪ್ಯಾನ್ ರಿಪೇರಿ ಮಾಡಿಸಲು ಹೋಗಿದ್ದು, ಹೋಗುವಾಗ ತನ್ನ ಮೋಟಾರ
ಸೈಕಲ್ ನ್ನು ಅಂಗಡಿಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಅಂಗಡಿಗೆ ಹೋಗಿ ತನ್ನ ಪ್ಯಾನ್
ನ್ನು ರಿಪೇರಿ ಮಾಡಲು ಕೋಟ್ಟು ವಾಪಸ ಸಂಜೆ 6-45 ಗಂಟೆಗೆ ಬಂದು ನೋಡಿದಾಗ ತನ್ನ ಮೋಟಾರ
ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ಜವಾಹರ ರೋಡ್ ನಲ್ಲಿ , ಬಸ್ ನಿಲ್ದಾಣದಲ್ಲಿ, ರೈಲ್ವೆ
ನಿಲ್ದಾಣಗಳಲ್ಲಿ ಹಾಗೂ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ಕಾರಣ ಮಾನ್ಯರವರು
ದಿನಾಂಕ 06-10-2015 ರಂಧು ಸಂಜೆ 6-30 ಗಂಟೆಯಿಂದ ದಿನಾಂಕ 06-10-2015 gÀAzÀÄ ಸಂಜೆ 6-45 ಗಂಟೆಯ ಅವಧಿಯಲ್ಲಿ ತನ್ನ ಮೋಟಾರ ಸೈಕಲನ್ನು
ಕಳ್ಳತನ ಮಾಡಿದ ಯಾರೋ ಕಳ್ಳರನ್ನ ಪತ್ತೇ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ. ಹಾಗೂ ತಾನು ಅಂದಿನಿಂದ Eಲ್ಲಿಯವರೆಗೆ ತನ್ನ ಮೋಟಾರ
ಸೈಕಲನ್ನು ಹುಡುಕಾಡಿ ಸಿಗದೇ ಇದ್ದುದ್ದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು
ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment