Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 30, 2015

1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ.102/2015 ಕಲಂ.87 Karnataka Police Act.
ಶ್ರೀ ಶಂಕರಗೌಡ ಎ.ಎಸ್.ಐ. ಅಳವಂಡಿ ರವರು, ಸಿಬ್ಬಂದಿಯವರು ಮತ್ತು ಪಂಚರು ಕೂಡಿಕೊಂಡು ಇಂದು ದಿನಾಂಕ: 29-10-2015 ರಂದು ಸಾಯಂಕಾಲ 5-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಅಳವಂಡಿ ಗ್ರಾಮದ ಹೂರವಲಯದಲ್ಲಿರುವ ಶ್ರೀ. ಮಳಿಮಲ್ಲಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 7 ಜನ ಆರೋಪಿತರು ಸಿಕ್ಕಿದ್ದು, ಆರೋಪಿತರಿಂದ ನಗದು ಹಣ ರೂ. 1,250=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ ಒಂದು ಗೋಣಿ ಚೀಲವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಸಂಜೆ 6-30 ಗಂಟೆಗೆ ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 222/2015 ಕಲಂ.279, 304(ಎ) ಐ.ಪಿ.ಸಿ:
ದಿನಾಂಕ 29-10-2015 ರಂದು ಪಿರ್ಯಾದುದಾರರು ಹಿಟ್ನಾಳ ಟೋಲ್ ಗೇಟ ದಾಟಿ ಹೋಗುತ್ತಿರುವಾಗ 04-00 ಪಿ.ಎಂ.ಸುಮಾರಿಗೆ ಆರೋಪಿತನು ತನ್ನ ಮೋ.ಸೈನ್ನು ಎನ್.ಹೆಚ್.13 ಕುಷ್ಟಗಿ-ಹೊಸಪೇಟೆ ಒನ್ ವೇ ರಸ್ತೆಯ ಮೇಲೆ ಅತೀ ವೇಗ ಅಲಕ್ಷತನದಿಂದ ತನ್ನ ಮೋ.ಸೈ,ನಂ.ಕೆ.ಎ29/ಇ.ಎ.2764 ನೇದ್ದನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಪಟ್ಟಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ.ಸಮೇತ ಕೆಳಗೆ ಬಿದ್ದಿದ್ದರಿಂದ ತಲೆಗೆ ರಕ್ತಗಾಯ,ಕೈಮತ್ತು ಕಾಲುಗಳಿಗೆ ಗಾಯ ಒಳಪೆಟ್ಟಾಗಿದ್ದು ನಂತರ ಜಿ.ಎಂ.ಆರ್.ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 259/2015 ಕಲಂ. 379 ಐ.ಪಿ.ಸಿ:

ದಿ-29.10.2015 ರಂದು ರಾತ್ರಿ 08.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಂಪತ್ ತಂದೆ ಚೂರಿ ಮಲ್ಲಪ್ಪ ವಯಸ್ಸು : 46, ಜಾತಿ: ಲಿಂಗಾಯತ, ಉದ್ಯೋಗ: ಮ್ಯಾನೇಜರ್, ಸಾ: ಕಂದಗಲ್ಲ ಗ್ರಾಮ ತಾ:ಜಿ; ದಾವಣಗೇರಿ, ಹಾ.ವ; ವಿಧ್ಯಾನಗರ, ವೈಭವ ಹೊಟೇಲ್ ಹಿಂಬಾಗ, ಚಿತ್ರದುರ್ಗ, ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನಂದರೆ, ದಿ-29.10.2015 ರಂದು ಬೆಳಗಿನ ಜಾವ 0230 ಗಂಟೆ ಯಿಂದ ಬೆಳೆಗ್ಗೆ 06.00 ಗಂಟೆಯ ಅವದಿಯಲ್ಲಿ ನಮ್ಮ ಕಂಪನಿಯ ಲಾರಿ ನಂ-ಕೆಎ-25/ಬಿ8332 ನೇದ್ದರ ಚಾಲಕನು ಲಾರಿಯಲ್ಲಿ ಪಾರ್ಸಲ್ ಲೋಡ್ ಮಾಡಿಕೊಂಡು ಕುಷ್ಟಗಿ ಹೊಸಪೇಟಿ ಮಧ್ಯ ಎನ್.ಹೆಚ್-50 ರಸ್ತೆಯ ಮೆತಗಲ್ಲ ಗ್ರಾಮದ ಸಮೀಪ ನ್ಯೂ ಆಯಿ ಮಾತಾ ಹೈ ವೇ ಹೊಟೆಲ್ ಹತ್ತಿರ ಪಾರ್ಕಿಂಗ್ ಮಾಡಿದ ವೇಳೆಯಲ್ಲಿ ಲಾರಿಯಲ್ಲಿದ್ದ ಒಟ್ಟು ಅಂ.ಕಿ 19,000-00 ರೂ ಬೆಲೆ ಬಾಳುವ 04 ಮೆಡಿಸಿನ್ ಬಾಕ್ಸ್ಗಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನ ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008