1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 294/2015
ಕಲಂ 279, 338 ಐ.ಪಿ.ಸಿ:.
ದಿನಾಂಕ:16-12-2015
ರಂದು ರಾತ್ರಿ 8-00 ಗಂಟೆ ಪಿರ್ಯಾದಿದಾರರಾದ ನಿಂಗನಗೌಡ ತಂದೆ ಬಸನಗೌಡ ಗುಡದನಗೌಡ್ರ ಸಾ: ವದಗನಹಾಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿಯರ್ಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ, ಇಂದು ದಿ:16-12-2015
ರಂದು ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ತಮ್ಮನ ಮಗ ಮಲ್ಲನಗೌಡ ಮಾಲಿಪಾಟೀಲ. ವಯ: 30 ವರ್ಷ, ಉ: ಒಕ್ಕಲುತನ, ಸಾ: ವದಗನಹಾಳ ಇತನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಅಂತಾ ಹೊಲದ ಬಾಜು ಇರುವ ಹಲಿಗೇರಿ-ಸಿಂದೋಗಿ ರಸ್ತೆಯ ಬಾಜು ಹೊರಡಲು ಅದೇವೇಳೆಗೆ ವದಗನಹಾಳ ಕಡೆಯಿಂದ ಕಬ್ಬಿನ ಲೋಡ ಇರುವ ಟ್ರ್ಯಾಕ್ಟರ್ ಇಂಜನ್ ಸಿರಿಯಲ್ ನಂ: PY3029H015807 ಹಾಗೂ ಟ್ರೇಲರ್ ನಂಬರಗಳಾದ, 1] 1] KA-49/T-5899 & 2]
KA-29/T-8773 ನೇದ್ದರ ಚಾಲಕ ಗದಿಗೆಪ್ಪ ತೋಳಮಂಡಿ ಸಾ: ಒಡೆಯರ ಹಟ್ಟಿ ತಾ: ಗೋಕಾಕ್ ಇತನು ತನ್ನ ಟ್ರ್ಯಾಕ್ಟರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಮಲ್ಲನಗೌಡ ಇತನಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಆತನ ಎಡಕಾಲ ಪಾದದ ಮೇಲೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಿರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಪಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 359/2015
ಕಲಂ 287, 338 ಐ.ಪಿ.ಸಿ:.
ದಿನಾಂಕ:- 16-12-2015 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಜೆ. ಈರಣ್ಣ ತಂದೆ ಈರಣ್ಣ
ವಯಸ್ಸು 50 ವರ್ಷ, ಜಾತಿ: ಮರಾಠ, ಉ: ಶ್ರೀ ವೆಂಕಟೇಶ್ವರ ಇಂಡಸ್ಟ್ರೀಜ್ ರೈಸ್ ಮಿಲ್ಲಿನಲ್ಲಿ ಗುಮಾಸ್ತ ಕೆಲಸ ಸಾ: ಇಸ್ಲಾಂಪೂರ, ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ದಾಸನಾಳ ಬ್ರಿಡ್ಜ್ ಹತ್ತಿರ ಇರುವ ಶ್ರೀ
ವೆಂಕಟೇಶ್ವರ ಇಂಡಸ್ಟ್ರೀಜ್ ರೈಸ್ಮಿಲ್ನಲ್ಲಿ ಗುಮಾಸ್ತ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ರೈಸ್
ಮಿಲ್ಲಿನ ಮಾಲೀಕರು ಶ್ರೀ ಕೆ. ಶ್ರೀನಿವಾಸ ತಂದೆ ಕೆ. ರಾಮಲಿಂಗಪ್ಪ, 35 ವರ್ಷ ಸಾ: ಬನ್ನಿಗಿಡದ ಕ್ಯಾಂಪ್-ಗಂಗಾವತಿ ಇವರು ಇರುತ್ತಾರೆ. ಸದರಿ
ರೈಸ್ ಮಿಲ್ ನಲ್ಲಿ ವಿರೇಶ ತಂದೆ ಶರಣಪ್ಪ ವಯಸ್ಸು: 24 ವರ್ಷ, ಜಾತಿ: ಲಿಂಗಾಯತ, ಉ: ಹೆಲ್ಪರ್ ಕೆಲಸ ಸಾ: ಉಡುಮಕಲ್ ತಾ: ಗಂಗಾವತಿ ಎಂಬಾತನು ಸುಮಾರು ಒಂದು ವರ್ಷದಿಂದ
ಹೆಲ್ಪರ್ ಕೆಲಸ ಮಾಡಿಕೊಂಡಿರುತ್ತಾನೆ. ಇಂದು ದಿನಾಂಕ:- 16-12-2015 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ವಿರೇಶ ಈತನು ರೈಸ್ ಮಿಲ್ಲಿನಲ್ಲಿ ಪೈಪ್ ಮೂಲಕ ಅಕ್ಕಿ ಬಿದ್ದು ಬೇರೆ
ಮಾರ್ಗದಲ್ಲಿ ಸಾಗುವಂತಹ ಎಲವೇಟರ್ ಆಫರ್ ಬದಲಾವಣೆ ಮಾಡುತ್ತಿರುವ ಸಮಯದಲ್ಲಿ ಅಕ್ಕಿ ಬೀಳುವಂತಹ
ತಗಡಿನ ಪೈಪ್ ಕತ್ತರಿಸಿ ವಿರೇಶನ ಬಲಗೈ ಹೆಬ್ಬರಳಿಗೆ ಬಡಿದು ಅರ್ಧ ಹೆಬ್ಬರೆಳು ಕತ್ತರಿಸಿದ್ದು, ಆತನು ಜೋರಾಗಿ ಕೂಗಾಡಿದ್ದರಿಂದ ಅಲ್ಲಿಯೇ ಹತ್ತಿರದಲ್ಲಿ ಇದ್ದ ನಾನು
ಮತ್ತು ಲೇಬರ್ ಕೆಲಸ ಮಾಡುವ ಆಗೋಲಿ ಗ್ರಾಮದ ಸಂಗಪ್ಪ ಇಬ್ಬರೂ ಕೂಡಿ ನೋಡಿ ಆತನನ್ನು ಯಾವುದೋ ಒಂದು
ಆಟೋರಿಕ್ಷಾದಲ್ಲಿ ಕರೆದುಕೊಂಡು ಬಂದು ಗಂಗಾವತಿ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮನಲ್ಲಿ
ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಶ್ರೀ ವೆಂಕಟೇಶ್ವರ ಇಂಡಸ್ಟ್ರೀಜ್ ರೈಸ್ ಮಿಲ್
ಮಾಲೀಕರಾದ ಶ್ರೀ ಕೆ. ಶ್ರೀನಿವಾಸ ಇವರು ರೈಸ್ ಮಿಲ್ ನ ಎಲವೇಟರ್ ಆಫರ್ ಹತ್ತಿರ ಕೆಲಸಗಾರರ
ಸುರಕ್ಷತೆಗಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ತೀವ್ರ ನಿರ್ಲಕ್ಷ್ಯತನ ವಹಿಸಿದ್ದರಿಂದ ಅಕ್ಕಿ
ಬೀಳುವಂತಹ ತಗಡಿನ ಪೈಪ್ ಕತ್ತರಿಸಿ ಎಲವೇಟರ್ ಆಫರ್ ಹತ್ತಿರ ಕೆಲಸ ಮಾಡುತ್ತಿದ್ದ ವಿರೇಶನ ಬಲಗೈ
ಹೆಬ್ಬೆರಳಿನ ಅರ್ಧ ಭಾಗ ಕತ್ತರಿಸಿ ತೀವ್ರ ಸ್ವರೂಪದ ಗಾಯವಾಗಿದ್ದು, ಈ ಘಟನೆಗೆ ರೈಸ್ ಮಿಲ್ ಮಾಲಿಕ ಕೆ. ಶ್ರೀನಿವಾಸ ಇವರ ಕಾರಣರಾಗಿದ್ದು, ಕಾರಣ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಇರುತ್ತದೆ. ಗಾಯಗೊಂಡ ವಿರೇಶನಿಗೆ ಚಿಕಿತ್ಸೆ ಕೊಡಿಸಿ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು
ನೀಡಿರುತ್ತೇನೆ" ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 273/2015
ಕಲಂ 279, 337 ಐ.ಪಿ.ಸಿ:.
ದಿನಾಂಕ 15-12-2015 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಪಿರ್ಯಾದಿಯು ತನ್ನ ಮೋ,ಸೈ,ನಂ,ಕೆ.ಎ.29/ಹೆಚ್.390
ನೇದ್ದರಲ್ಲಿ ಹೊಸಪೇಟೆ - ಕುಷ್ಟಗಿ ಎನ್.ಹೆಚ್.13 ರಸ್ತೆಯ ಮೇಲೆ ಹೋಗುತ್ತಿರುವಾಗ ಆರೊಪಿತನು ತನ್ನ ಕಾರ ನಂ ಕೆ,ಎ,56/ಎಂ,5544 ನೇದ್ದನ್ನು
ಅೀವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಕೊಟ್ಟು ಅಪಘಾತಮಾಡಿದ್ದರಿಂದ ಪಿರ್ಯಾದಿಗೆ
ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
0 comments:
Post a Comment