1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 290/2015
ಕಲಂ 279, 304(ಎ) ಐ.ಪಿ.ಸಿ:.
ದಿ:15-12-2015 ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಫಕೀರಪ್ಪ ತಂದೆ ಬಂಗಾರಪ್ಪ ರೊಡ್ಡರ.
ಸಾ: ಚಿಕ್ಕಮ್ಯಾಗೇರಿ ಇವರು ಠಾಣೆಗ ಹಾಜರಾಗಿ ನೀಡಿದ ಲಿಖಿಯ ದೂರಿನ ಸಾರಾಂಶವೇನೆಂದರೇ, ಇಂದು ದಿ: 15-12-15 ರಂದು
ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ಕಿನ್ನಾಳ-ಕೊಪ್ಪಳ ರಸ್ತೆಯ ದೇವಲಾಪೂರ ಕ್ರಾಸ್
ಹತ್ತಿರ ಕೊಪ್ಪಳ ಕಡೆಗೆ ಟ್ರ್ಯಾಕ್ಟರ್ ಇಂಜಿನ್ ನಂ: SJ32766091 ನೇದ್ದರ ಚಾಲಕ
ಕಲ್ಲಪ್ಪ ಇತನು ತನ್ನ ಟ್ರ್ಯಾಕ್ಟರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಹೊರಟವನೇ ತನ್ನ ವಾಹನದ ಮೇಲೆ ನಿಯಂತ್ರಣ ಸಾಧೀಸದೇ ಪಲ್ಟಿ
ಮಾಡಿದ್ದರಿಂದ ಚಾಲಕನಿಗ ಭಾರಿ ಪೆಟ್ಟುಗಳಾಗಿದ್ದು, ನಂತರ ಆತನಿಗೆ
ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿದಾಗ ಇಂದು ಮಧ್ಯಾಹ್ನ 2-30 ಗಂಟೆಯ
ಸುಮಾರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ್ ಚಾಲಕ ಮೃತ
ಕಲ್ಲಪ್ಪ ಬೆಣಕಲ್. ಸಾ: ಮಲಕಸಮುದ್ರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ
ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 290/2015. ಕಲಂ: 279, 304 [ಎ] ಐಪಿಸಿ
ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 222/2015
ಕಲಂ 279, 337, 338 ಐ.ಪಿ.ಸಿ:.
ದಿನಾಂಕ :15-12-2015 ರಂದು ಸಂಜೆ 05-00 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ
ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಅಂಬ್ರೇಶ ತಂದೆ ನಾಗಪ್ಪ ನಾಯಕವಾಡಿ ವಯಾ 37 ವರ್ಷ ಜಾ:ಲಿಂಗಾಯತ ಉ:ಪೆಟಿಂಗ್ ಕೆಲಸ ಸಾ:ನಾಯಕವಾಡಿ ಕುಷ್ಟಗಿ ರವರ ಹೇಳಿಕೆ
ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ 06-15 ಗಂಟೆಗೆ ಬಂದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ ಪಿರ್ಯಾದಿಯು ಮನೆಯಲ್ಲಿದ್ದಾಗ
ನಮ್ಮ ಗೆಳೆಯನಾದ ಈರಣ್ಣ ತಂದೆ ಅಮರಪ್ಪ ಬಾವಿಕಟ್ಟಿ ಇತನು ನಮ್ಮ ಹೊಲವನ್ನು ನೋಡಿ ಬರೋಣ ಬಾ ಅಂತಾ
ನನ್ನನ್ನು ಕರೆದುಕೊಂಡು ತನ್ನ ಬಜಾಜ ಪಲ್ಸರ್ ಮೋಟಾರ ಸೈಕಲ್ ನಂ : ಕೆ.ಎ-37/ಎಲ್-9937 ನೇದ್ದನ್ನು ತೆಗೆದುಕೊಂಡು ತಾನು ನಡೆಸುತ್ತಿದ್ದು ನಾನು ಹಿಂದುಗಡೆ
ಕುಳಿತುಕೊಂಡು ಇಂದು ದಿನಾಂಕ :15-12-2015 ರಂದು ಸಂಜೆ 04-15 ಗಂಟೆಯ ಸುಮಾರಿಗೆ ಕುಷ್ಟಗಿ
ಸೀಮಾದಲ್ಲಿರುವ ಟೆಂಗುಂಟಿ ರೋಡಗೆ ಹೋರಟೇವು. ಕುಷ್ಟಗಿ-ಟೆಂಗುಂಟಿ ರಸ್ತೆಯ ಮೇಲೆ ಶ್ರೀ
ಚೆನ್ನಬಸವಸ್ವಾಮಿ ನಿಡಶೇಸಿ ಅಜ್ಜರವರ ಹೊಲದ ಹತ್ತಿರ ಸಂಜೆ 04-30 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ಸವಾರನಾದ ಈರಣ್ಣ ಬಾವಿಕಟ್ಟಿ ಈತನು
ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬ್ರೀಜ್ ಗೆ
ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ನಾವಿಬ್ಬರೂ ಕೆಳಗೆ ಬಿದ್ದೇವು. ಅಪಘಾತದಿಂದ ನನಗೆ ಬಲಕಣ್ಣಿನ ಕೆಳಗೆ, ಎಡಗಡೆ ಹಣೆಗೆ, ಮೂಗಿಗೆ, ಬಲಬುಜಕ್ಕೆ .ಬಲ ಮುಂಗೈಗೆ ತೆರೆಚಿದ ಗಾಯವಾಗಿರುತ್ತದೆ. ನಂತರ ಮೋಟಾರ ಸೈಕಲ್ ಸವಾರನಾದ ಈರಣ್ಣ ಈತನನ್ನು ನೋಡಲು ಈತನಿಗೆ
ಬಲಕಣ್ಣಿಗೆ ಮತ್ತು ಬಲ ತಲೆಯ ಹಣೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲಿಯೇ ಪಕ್ಕದ ಹೊಲದಲ್ಲಿ
ಮಹಾಂತೇಶ ತಂದೆ ದೊಡ್ಡಪ್ಪ ಖೌದಿ ಸಾ : ಹಳೇ ಬಜಾರ ಕುಷ್ಟಗಿ ಈತನು ಬಂದು 108 ಅಂಬುಲೆನ್ಸ್ ಗೆ ಪೋನ್ ಮಾಡಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು
ಸೇರಿಕೆಯಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ :222/2015 ಕಲಂ 279,337,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
0 comments:
Post a Comment