Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, December 18, 2015

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 195/2015  ಕಲಂ 302 ಸಹಿತ 34  ಐ.ಪಿ.ಸಿ:.
ದಿನಾಂಕ 17-12-2015 ರಂದು ಮುಂಜಾನೆ 9-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕೊಪ್ಪಳದಿಂದ ದುರಗೇಶ ಈತನು ಸುಟ್ಟಕೊಂಡ ಮೃತಪಟ್ಟ ಬಗ್ಗೆ ಎಂ.ಎಲ್.ಸಿ. ಬಂದ ಮೇರೆಗೆ ನಾನು ಕೊಪ್ಪಳ ಸರಕಾರಿ ಆಸ್ಪತ್ರೆಗೆ  11-00 ಗಂಟೆಯ ಸುಮಾರಿಗೆ ನೀಡಿ ಫೀರ್ಯಾದಿದಾರ ಮೃತನ ಅಣ್ಣ ಸಿರಸಪ್ಪ ತಂದೆ ಯಂಕಪ್ಪ ವಡ್ಡರ್ ಈತನು ಬರೆದುಕೊಂಡ ಬಂದ ಲಿಖಿತ ಫೀರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಮ್ಮ ದುರಗೇಶ ಇತನು ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಮದುವೆಯಾಗಿದ್ದು, ನನ್ನ ತಮ್ಮ ದುರಗೇಶನು ಇಂಗಳದಾಳ ಗ್ರಾಮದ ಲಿಂಗಪ್ಪ ಮತ್ತು ಯಮನವ್ವ ಇವರ ಮಗಳಾದ ದುರಗಮ್ಮಳೊಂದಿಗೆ ಗುಡದಳ್ಳಿ ಕ್ಯಾಂಪ ಕರಿಯಪ್ಪ ತಾತನ ದೇವಸ್ಥಾನದಲ್ಲಿ ಮದುವೆ ಯಾಗಿತ್ತು. ನನ್ನ ತಮ್ಮನ ಜೊತೆ ದುರಗಮ್ಮಳು 1 ವರೆಗೆ ವರ್ಷ ಬಾಳ್ವೆ ಮಾಡಿದ್ದಳು. ನಂತರ ಈಗ್ಗೆ ಸುಮಾರು 3-4 ತಿಂಗಳದ ಹಿಂದೆ ದುರಗಮ್ಮಳು ನನ್ನ ತಮ್ಮನ ಜೊತೆ ಜಗಳವಾಡಿ ತನ್ನ ತವರು ಮನೆ ಇಂಗಳದಾಳ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದಳು.ಈಗ್ಗೆ ಸುಮಾರು 10 ದಿವಸಗಳ ಹಿಂದೆ ನನ್ನ ತಮ್ಮ ದುರಗೇಶನು ಇಂಗಳದಾಳ ಗ್ರಾಮಕ್ಕೆ ಅಲ್ಲಿಯೇ ಕೆಲಸ ಮಾಡುತ್ತಾ ಇದ್ದನು. ನಿನ್ನೆ ದಿನಾಂಕ 16-12-2015 ರಂದು ರಾತ್ರಿ 11-30 ಗಂಟೆಗೆ ನನ್ನ ತಮ್ಮನ ಹೆಂಡತಿ ದುರಗಮ್ಮಳು ನಿಮ್ಮ ತಮ್ಮ ಸೀಮೆ ಎಣ್ಣೆ ಹಾಕಿಕೊಂಡು ಸುಟ್ಟುಕೊಂಡಿದ್ದಾಣೆ ಅಂತಾ ನನ್ನ ನಂಬರಿಗೆ ಫೋನ್ ಮಾಡಿದಳು. ಎಲ್ಲಿಗೆ ಕರೆದುಕೊಂಡು ಹೊಗಿದ್ದೀರಿ ಅಂತಾ ಕೇಳಿದೆ ಅಂಬುಲೆನ್ಸ್ನಲ್ಲಿ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು ಅಂತಾ ದುರಗಮ್ಮಳಿಗೆ ಹೇಳಿದಾಗ ನಾವು ಸೈಕಲ್ ಮೋಟಾರ ತೆಗೆದುಕೊಂಡು ಹೊಸಕೇರಿ ಡಗ್ಗಿಯಿಂದ ಕೊಪ್ಪಳಕ್ಕೆ 12-30 ಗಂಟೆಗೆ ನನ್ನ ಅಳಿಯ ಯಮನೂರಪ್ಪ ಆಗೋಲಿರವರೊಂದಿಗೆ ಹೋದೆವು. ಕೊಪ್ಪಳದ ಸರಕರಿ ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗಿದ ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ನೀರು ನೀರು ಎಂದು ಚೀರಾಡುತ್ತಿದ್ದಾಗ ನನ್ನ ತಮ್ಮನನ್ನನು ನೋಡಿ ನೀರು ಕುಡಿಸಿ ವಿಚಾರಿಸಲಗಿ, ನನಗೆ ಮೋಸ ಆಗಿದೆ ಅಣ್ಣ ನನ್ನ ಹೆಂಡತಿ ದುರಗಮ್ಮ, ಅತ್ತೆ ಯಮನವ್ವ, ಮಾವ ಲಿಂಗಪ್ಪ ಇವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಅಣ್ಣ ನನಗೆ ಮೋಸವಾಯಿತು ಎಂದು ನನ್ನ ತಮ್ಮ ದುರಗೇಶ ನನಗೆ ಹೇಳಿದ ಹಾಗೂ ನನ್ನ ತಮ್ಮನ ಹಿಂದೆ ಹೆಂಡತಿ ದುರಗಮ್ಮ, ಅತ್ತೆ ಯಮನವ್ವ ಮಾವ ಲಿಂಗಪ್ಪ ಇವರು ಬಂದಿಲ್ಲ ನನ್ನ ತಮ್ಮ ದುರಗೇಶ ಇತನು ಚೀರಾಡಿ ಚೀರಾಡಿ ಇಂದು ದಿನಾಂಖ 17-12-2015 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ತೀರಿಕೊಂಡನು ನಂತರ  ದುರಗಮ್ಮನಿಗೆ ಪೋನ್ ಮಾಡಿ ದುರಗೇಶ ತೀರಿಕೊಂಡ ಎಂದು ವಿಷಯ ತಿಳಿಸಿದೆ. ಕಾರಣ ನನ್ನ ತಮ್ಮ ದುರಗೇಶ ಈತನ ಸಾವಿಗೆ ದುರಗಮ್ಮ ಹಾಗೂ ಆಕೆಯ ತಂದೆ ಲಿಂಗಪ್ಪ ತಂದೆ ಈರಪ್ಪ ನವಲಿ, ತಾಯಿ ಯಮನವ್ವ ಗಂಡ ಲಿಂಗಪ್ಪ ನವಲಿ ಇವರು ನನ್ನ ತಮ್ಮನನ್ನು ಸೀಮೆಎಣ್ಣೆ ಹಾಕಿ ಕೊಲೆ ಮಾಡಿದ್ದಾರೆ ಈ ಕೊಲೆ ಮಾಡಿದ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಅಂತ ಲಿಖಿತ ಫೀರ್ಯಾಧಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 101/2015  ಕಲಂ 78(3) Karnataka Police Act.
ದಿನಾಂಕ :17.12.2015 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಮುರುಡಿ ಗ್ರಾಮದ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನು ಸಾರ್ವಜನಿಕರಿಗೆ ಕೂಗಿ ಕರೆಯುತ್ತಾ ಓ/ಸಿ ಹಚ್ಚಿರಿ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಸಿಬದ ಜೂಜಾಟ ಅಂತಾ ಜನರನ್ನು ಕೂಗಿ ಕರೆಯುತ್ತಾ ಸಾರ್ವಜನಿಕರಿಗೆ ಓ/ಸಿ ನಂಬರಿನ ಚೀಟಿಗಳನ್ನು ಬರೆದುಕೊಡುತ್ತಿರುವ ಕಾಲಕ್ಕೆ ಪಿಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಆರೋಪಿತನು ಸಿಕ್ಕಿ ಬಿದ್ದಿದ್ದು  ಆರೋಪಿತನಿಂದ ಓ/ಸಿ ಜೂಜಾಟದ ನಗದು ಹಣ 2000/-ರೂ ಒಂದು ಬಾಲ ಪೆನ್ನ ಒಂದು ಓಸಿ ಪಟ್ಟಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದರಿ ಓ,ಸಿ ಜೂಜಾಟದ ಸಾಮಗ್ರಿಗಳನ್ನು ಮತ್ತು ಸಿಕ್ಕಿ ಬಿದ್ದ ಆರೋಫಿತನೊಂದಿಗೆ ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ ನೀಡಿದ್ದರ ಮೇಲಿಂದ ಕ್ರಮ ಜರುಗಿಸಿದ್ದು ಅದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 295/2015  ಕಲಂ 279, 338 ಐ.ಪಿ.ಸಿ:.
ದಿನಾಂಕ:17-12-2015 ರಂದು ರಾತ್ರಿ 9-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸೀನಪ್ಪ @ ಶ್ರೀನಿವಾಸ ಹಡಪದ ಸಾ: ಗಣೇಶನಗರ ಕೊಪ್ಪಳ ಇವರು ನೀಡಿದ ಲಿಖಿತ ಫಿಯರ್ಾದಿಯ ಸಾರಾಂಶವೇನೆಂದರೆ, ಇಂದು ದಿ:17-12-2015 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಕೊಪ್ಪಳದಿಂದಾ ಇಂದರಗಿಗೆ ಸಂಬಂಧಿಕರನ್ನು ಮಾತನಾಡಿಸಿಕೊಂಡು ಬರಲು ಅಂತಾ ನನ್ನ ಮೋಟಾರ ಸೈಕಲ್ ನಂ: ಕೆಎ37/ಎಸ್-4483 ನೇದ್ದನ್ನು ಓಡಿಸಿಕೊಂಡು ಕೊಪ್ಪಳ-ಕುಷ್ಟಗಿ ರಸ್ತೆಯ ಮುಖಾಂತರ ಹೋಗುವಾಗ ಕಾಮನೂರ ಕ್ರಾಸ್ ಹತ್ತಿರ ರಾಮಣ್ಣ ಐರಾಣಿ ಸಾ: ಕಾಮನೂರ ಎಂಬುವವರು ನನ್ನ ಮೋಟಾರ ಸೈಕಲ್ ಗೆ ಕೈ ಮಾಡಿ ಕಾಮನೂರಿಗೆ ಹೋಗುವುದಾಗಿ ಹೇಳಿ ಡ್ರಾಪ್ ಕೇಳಿದ್ದರಿಂದ ಅವರಿಗೆ ನನ್ನ ಮೋಟಾರ ಸೈಕಲ್ ಹಿಂದೆ ಕೂಡ್ರಿಸಿಕೊಂಡು ಹೊರಟೆನು. ನಂತರ ಕಾಮನೂರ ಸಮೀಪ ಶಿಬಿರಕಟ್ಟೆ ಕ್ರಾಸ್ ಹತ್ತಿರ ಇರಕಲ್ ಗಡಾ ಕಡೆಯಿಂದ ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ: ಕೆಎ-37/ವೈ-6167 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೇ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಸ್ಥಳದಲ್ಲಿಯೇ ತನ್ನ ಗಾಡಿ ಬಿಟ್ಟು ಓಡಿ ಹೋಗಿರುತ್ತಾನೆ. ಈ ಅಪಘಾತದಲ್ಲಿ ನನಗೆ ಭಾರಿಗಾಯಗಳಾಗಿದ್ದು ಅಲ್ಲದೇ ನನ್ನ ಗಾಡಿಯ ಹಿಂದೆ ಕುಳಿತಿದ್ದ ರಾಮಣ್ಣನಿಗೆ ಸಾದಾ ಸ್ವರೂಪದ ರಕ್ತಗಾಯಗಳಾಗಿರುತ್ತವೆ. ನಮಗೆ ಅಪಘಾತ ಮಾಡಿ ಹೋದ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಕಾರಣ ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋಗಿರುವ ಚಾಲಕನಿಗೆ ಪತ್ತೆ ಮಾಡಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 135/2015  ಕಲಂ. 279, 337, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ: 11-12-2015 ರಂದು ಸಾಯಾಂಕಾಲ 6-45 ಗಂಟೆಯ ಸುಮಾರಿಗೆ ಗಾಯಾಳು ಬಸವರಾಜ ಇತನು ತಮ್ಮ ತೋಟದ ಹೊಲದಲ್ಲಿ ಬೋರವೆಲಗೆ ಪೂಜೆ ಮಾಡಿಕೊಂಡು ವಾಪಸ್ ಮನೆಗೆ ಬೈಸಿಕಲ್ ಮೇಲೆ ಚಿಕ್ಕೊಪ್ಪ- ಯಲಬುರ್ಗಾ ರಸ್ತೆ ಮೇಲೆ ರಸ್ತೆಯ ಎಡಬದಿಯಲ್ಲಿ ಹೊಸಳ್ಳಿ ಸೀಮಾದಲ್ಲಿ ಬರುವ ಪರ್ವತಗೌಡ ತಂದೆ ಬಸನಗೌಡ ಮಾಲಿಪಾಟೀಲ ಇವರ ತೋಟದ ಹೊಲದ ಹತ್ತಿರ ಬೈಸಿಕಲ್ ನಡೆಯಿಸಿಕೊಂಡು ತಿರುವಿನಲ್ಲಿ ಬರುತ್ತಿರುವಾಗ ಯಲಬುರ್ಗಾ ಕಡೆಯಿಂದ ಕ್ರಷರ ನಂ ಕೆಎ-19/ಪಿ-0553 ನೇದ್ದರ ಚಾಲಕನು ತಾನು ನಡೆಯಿಸುತ್ತಿದ್ದ  ಕ್ರಷರ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬೈಸಿಕಲ್ ನಡೆಯಿಸಿಕೊಂಡು ಹೋಗುತ್ತಿದ್ದ ಗಾಯಾಳು ಬಸವರಾಜನಿಗೆ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಗಾಯಾಳುವಿಗೆ ಬಲಗಾಲ ತೊಡೆಗೆ ಒಳಪೆಟ್ಟಾಗಿದ್ದು, ಬಲಗೈ ಮುಂಗೈ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಕ್ರಷರ ವಾಹನ ಚಾಲಕ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ ಸದರಿಯವನ್ನು ನೋಡಿದರೆ ಗುರುತ್ತಿಸುತ್ತೇನೆ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008