1) ಕುಷ್ಟಗಿ
ಪೊಲೀಸ್ ಠಾಣೆ ಗುನ್ನೆ ನಂ. 231/2015 ಕಲಂ 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:18-12-2015 ರಂದು ರಾತ್ರಿ 08-30 ಗಂಟೆಗೆ ಪಿರ್ಯಾದಿದಾರನಾದ ಹನುಮಂತಪ್ಪ ಬಜೇಂತ್ರಿ ಸಾ: ಸಂದೀಪನಗರ
ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದರ ಸಾರಾಂಶವೆನೆಂದರೆ ದಿನಾಂಕ:18-12-2015 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಈರಪ್ಪ ಕಂದಗಲ್ ಸಾ: ನಾಯಕವಾಡಿ ಓಣಿ ಕುಷ್ಟಗಿ ರವರು
ನನಗೆ ತಿಳಿಸಿದ್ದೇನೆಂದರೆ. ಎ.ಪಿ.ಎಂ.ಸಿ ಕುಷ್ಟಗಿಯಲ್ಲಿ ಬಳ್ಳೋಳ್ಳಿ ಚೀಲಗಳು ಇವೆ ಅವುಗಳನ್ನು
ಲೋಡ ಮಾಡಿಕೊಂಡು ತಾವರಗೇರಾ ಮತ್ತು ಸಿಂದನೂರಿಗೆ ತೆಗದುಕೊಂಡು ಹೋಗಬೇಕು ನಿನ್ನ ಟಂ.ಟಂ.
ತೆಗೆದುಕೊಂಡು ಬಾ ಅಂತಾ ತಿಳಿಸಿದ್ದು ಆಗ ನಾನು ಒಪ್ಪಿಕೊಂಡು ಈರಪ್ಪ ಕಂದಗಲ್ ಈತನನ್ನ
ಕರೆದುಕೊಂಡು ಎನ್.ಹೆಚ್.50 ದಾಟಿ ಕೆ. ಶರಣಪ್ಪರವರ ಪೆಟ್ರೋಲ್ ಬಂಕದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಎ.ಪಿ.ಎಂ.ಸಿ. ಹೋಗೋಣ
ಅಂತಾ ಹೊರಟೇನು. ಇಂದು ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ಎನ್.ಹೆಚ್-50 ಹೊಸಪೇಟೆ-ಇಲಕಲ ರಸ್ತೆಯ ದೋಟಿಹಾಳ ಕ್ರಾಸದಲ್ಲಿ ರಸ್ತೆಯನ್ನು
ದಾಟುತ್ತಿದ್ದಾಗ ಕುಷ್ಟಗಿ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು
ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ಟಂ.ಟಂ. ವಾಹನಕ್ಕೆ
ಟಕ್ಕರಕೊಟ್ಟು ಅಪಘಾತಪಡಿಸಿದ್ದು ಇರುತ್ತದೆ. ಅಪಘಾತಪಡಿಸಿದ ವಾಹನದ ನಂಬರ ನೋಡಲು ಲಾರಿ
ನಂ:ಎಂ.ಹೆಚ್-09-ಸಿ.ವಿ-2979 ಅಂತಾ ಇದ್ದು ಸದರ ಚಾಲಕನು ವಾಹನವನ್ನು ನಿಲ್ಲಿಸದೇ ಹಾಗೇ
ಚಾಲಾಯಿಸಿಕೊಂಡು ಹೋಗಿರುತ್ತಾನೆ. ನನಗೆ ಅಪಘಾತದಿಂದ ಬಲಕುಂಡಿಯ ಹತ್ತಿರ ಒಳಪೆಟ್ಟಾಗಿದ್ದು
ಇರುತ್ತದೆ. ನಮ್ಮ ಟಂ.ಟಂ.ವಾಹನದಲ್ಲಿ ಇದ್ದ ಈರಪ್ಪ ಕಂದಗಲ್ ಸಾ: ನಾಯಕವಾಡಿ ಓಣಿ ಕುಷ್ಟಗಿ
ಇವರಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನಾನು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ
ಕುಷ್ಟಗಿಗೆ ಚಿಕಿತ್ಸೆ ಕುರಿತು ಬಂದು ಸೇರಿಕೆಯಾಗಿದ್ದು ಇರುತ್ತದೆ. ನಂತರ ವಿಚಾರಮಾಡಿ ತಡವಾಗಿ
ಪಿರ್ಯಾದಿ ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:231/2015 ಕಲಂ 279,337 ಐ.ಪಿ.ಸಿ &
187 ಐ.ಎಂ.ವ್ಹಿ. ಕಾಯ್ದೆ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment