1) ಕೊಪ್ಪಳ ನಗರ
ಪೊಲೀಸ್ ಠಾಣೆ ಗುನ್ನೆ ನಂ.254/2015 ಕಲಂ. 78(3) ಕೆ.ಪಿ. ಕಾಯ್ದೆ:
ದಿ: 24-12-2015 ರಂದು ಸಾಯಂಕಾಲ-6-15 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 24-12-2015 ರಂದು ಸಾಯಂಕಾಲ
4-45 ಗಂಟೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಬಾಗ್ಯನಗರದ ಪಾನಘಂಟಿ ಕಲ್ಯಾಣ
ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ
ಕೊಡುತ್ತೇನೆ ಅಂತಾ ಕೂಗುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಓ.ಸಿ. ಮಟಕಾ ನಂಬರ್ ಬರೆದುಕೊಟ್ಟು
ಜನರಿಗೆ ಮೋಸ ಮಾಡುತ್ತಿದ್ದ ಶಂಕ್ರಪ್ಪ ತಂದೆ ದಾನಪ್ಪ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ
ಆರೋಪಿತನಿಂದ 720=00 ರೂಪಾಯಿ, ಒಂದು ಮಟಕಾ ನಂಬರ ಬರೇದ ಪಟ್ಟಿ, ಒಂದು ಬಾಲ್ ಪೆನ್ನು ಇವುಗಳನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಶಿವರೆಡ್ಡಿ ಸಾ: ಬೆಂಕಿನಗರ ನೇದ್ದವರು ಮಟಕಾ ನಂಬರ
ಬರೇದ ಚೀಟಿಯನ್ನು ತೆಗೆದುಕೊಳ್ಳುವ ಬುಕ್ಕಿ ಇರುತ್ತಾರೆ. ಆದ್ದರಿಂದ ಸದರಿ ಆರೋಪಿತರ ಮೇಲೆ ಸೂಕ್ತ
ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಅದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.255/2015 ಕಲಂ. 78(3) ಕೆ.ಪಿ.
ಕಾಯ್ದೆ:
ದಿ: 24-12-2015 ರಂದು ರಾತ್ರಿ-9-15
ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ:
24-12-2015 ರಂದು ರಾತ್ರಿ 7-45 ಗಂಟೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ
ಬಸ್ ನಿಲ್ದಾಣದ ಹತ್ತಿರ ಲೇಬರ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ
1=00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಓ.ಸಿ.
ಮಟಕಾ ನಂಬರ್ ಬರೆದುಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ ಗಿರೀಶ ತಂದೆ ಶೇಖರಗೌಡ ಮೇಲೆ ದಾಳಿ ಮಾಡಿ
ಹಿಡಿದುಕೊಂಡಿದ್ದು, ಸದರಿ ಆರೋಪಿತನಿಂದ 420=00 ರೂಪಾಯಿ, ಒಂದು ಮಟಕಾ ನಂಬರ ಬರೇದ ಪಟ್ಟಿ , ಒಂದು
ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಶಿವರೆಡ್ಡಿ
ಸಾ: ಬೆಂಕಿನಗರ ನೇದ್ದವರು
ಮಟಕಾ ನಂಬರ ಬರೇದ ಪಟ್ಟಿಯನ್ನು ತೆಗೆದುಕೊಳ್ಳುತ್ತಿದ್ದು ಇರುತ್ತದೆ. ಆದ್ದರಿಂದ ಸದರಿ ಆರೋಪಿತನ ಮೇಲೆ
ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಅದೆ.
0 comments:
Post a Comment