Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 24, 2015

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.297/2015 ಕಲಂ. 78(3) ಕೆ.ಪಿ. ಕಾಯ್ದೆ:
ದಿ:23-12-2015 ರಂದು ಸಂಜೆ 6-00 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕುಣಿಕೇರಿ ತಾಂಡಾದ ಹನಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಹಣ ಪಡೆದು ನಂಬರ ಬರೆದು ಕೊಡುವ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಿತ್ತರಂಜನ್.ಡಿ. ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತರಿಂದ ನಗದು ಹಣ ರೂ 269000 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು, 1 ಇನಟೆಕ್ಸ್ ಮೊಬೈಲ್ ಅಂ.ಕಿ-300-00 ರೂ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತನು ತಾನು ಬರೆದ ಮಟಕಾ ಚೀಟಿಯನ್ನು ಮೊಹ್ಮದ್ ಸಾದೀಕ್ ತಂದೆ ಮೊಹ್ಮದ್ ಜಾಫರ್ ಆದೋನಿ ಸಾ: ಅತ್ತಾರಗಲ್ಲಿ, ಕೊಪ್ಪಳ ಇವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.364/2015 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ: 23-12-2015 ರಂದು ಬೆಳಿಗ್ಗೆ 11:15  ಗಂಟೆಗೆ ಫಿರ್ಯಾದಿದಾರರಾದ  ಶ್ರೀ ಎಸ್. ರಹೀಮ್ ತಂದೆ ಅಬ್ದುಲ್ ರಹೆಮಾನ್, ವಯಸ್ಸು 28 ವರ್ಷ, ಜಾತಿ: ಮುಸ್ಲೀಂ ಉ: ಡ್ರೈವರ್ ಸಾ: ಚಿಕ್ಕಜಂತಕಲ್,   ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ  ನುಡಿ ಹೇಳಿಕೆ ದೂರು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.” ಚಿಕ್ಕಜಂತಕಲ್ ನ ಹಜರತ್ ಸೈಯ್ಯದ ಷಾಹ ಕರೀಮುಲ್ಲಾ ಖಾದ್ರಿ (ಮುಸ್ತಫಾ ಖಾದ್ರಿ) ದರ್ಗಾದಲ್ಲಿ ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಮಹ್ಮದ್ ಅಲಿ, ವಯಸ್ಸು 48 ವರ್ಷ, ಎಂಬುವವರು ಎಲ್ಲಿಂದಲೋ ಚಿಕ್ಕಜಂತಕಲ್ ಗ್ರಾಮಕ್ಕೆ ಬಂದು ದರ್ಗಾದಲ್ಲಿ ಸೇವೆಯನ್ನು ಮಾಡಿಕೊಂಡಿದ್ದರು. ಅಲ್ಲದೇ ಅವರು ಹಮಾಲಿ ಕೆಲಸ ಮಾಡಿಕೊಂಡು ಬಂದು ದರ್ಗಾದಲ್ಲಿಯೇ ಇರುತ್ತಿದ್ದರು.   ನಿನ್ನೆ ದಿನಾಂಕ:- 22-12-2015 ರಂದು ರಾತ್ರಿ 7:45 ರಿಂದ 8:00 ಗಂಟೆಯ ಸುಮಾರಿಗೆ ನಾನು ದರ್ಗಾ ಹತ್ತಿರ ಇರುವ ಚೆಕ್ ಪೋಸ್ಟ್ ಹತ್ತಿರ ನಿಂತುಕೊಂಡಿದ್ದೆನು.  ಆಗ ಮಹ್ಮದ್ ಅಲಿ ಇವರು ಗಂಗಾವತಿ-ಕಂಪ್ಲಿ ಮುಖ್ಯ ರಸ್ತೆಯಲ್ಲಿ ಚಿಕ್ಕಜಂತಕಲ್ ಬ್ರಿಡ್ಜ್ ಮೇಲೆ ರಸ್ತೆಯ ಎಡಗಡೆ ನಡೆದುಕೊಂಡು ಬರುತ್ತಿದ್ದರು.  ಆಗ ಅವರ ಹಿಂಭಾಗದಿಂದ ಅಂದರೆ ಕಂಪ್ಲಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನ ಚಾಲಕ ಬಸ್ ನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ಮಹ್ಮದ್ ಅಲಿ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದನ್ನು ನೋಡಿ ನಾನು ಹತ್ತಿರ ಓಡಿ ಹೋಗಿ ನೋಡಲಾಗಿ  ಮಹ್ಮದ್ಅಲಿ ಇವರ ಎಡಗಾಲಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಹಾಗೂ ತಲೆಗೆ ಪೆಟ್ಟಾಗಿ ರಕ್ತಗಾಯವಾಗಿತ್ತು, ಅಲ್ಲಲ್ಲಿ ತೆರೆಚಿದ ಗಾಯಗಳಾಗಿದ್ದವು. ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.  ಅಪಘಾತ ಮಾಡಿದ ಬಸ್ ನ್ನು ನೋಡಲಾಗಿ ಅದರ ನಂಬರ್: ಕೆ.ಎ-37/ ಎಫ್-271  ಅಂತಾ ಇದ್ದು, ಅದರ ಚಾಲಕನ ಹೆಸರು ಬಸವರಾಜ ತಂದೆ ವಿರುಪಾಕ್ಷಪ್ಪ ತಳಕಲ್, ಗಂಗಾವತಿ ಡಿಪೋ ಸಾ: ಅರಕೇರಿ ತಾ: ಯಲಬುರ್ಗಾ ಅಂತಾ ತಿಳಿಸಿದನು.  ನಂತರ 108 ಗೆ ಫೋನ್ ಮಾಡಲಾಗಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ಮಹ್ಮದ್ ಅಲಿಯವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಸಹ ಪರೀಕ್ಷಿಸಿ ಮಹ್ಮದ್ ಅಲಿಯವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು.  ಕಾರಣ  ಈ ಅಪಘಾತ ಮಾಡಿದ ಬಸ್ ಚಾಲಕ ಬಸವರಾಜನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.”  ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 140/2015 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.
ಮಾರ್ತಂಡಪ್ಪ ಎ,ಎಸ್.ಐ ಯಲಬುರ್ಗಾ ಪೊಲೀಸ್ ಠಾಣೆ ದಿನಾಂಕ: 23-12-2015 ರಂದು ನಾನು ಯಲಬುರ್ಗಾ ಪಟ್ಟಣದಲ್ಲಿ ಮುಂಬರುವ ವಿಧಾನ ಪರಿಷತ್ ಮತ್ತು ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಿಮಿತ್ಯ ಮಾಹಿತಿ ಸಂಗ್ರಹಿಸುತ್ತಿರುವಾಗ ಸ್ಥಾನಿಕವಾಗಿ ವಿಚಾರ ಮಾಡಲಾಗಿ ಯಲಬುರ್ಗಾ ಠಾಣೆಯ ಎಂ.ಓ.ಬಿ ಆಸಾಮಿಗಳಾದ 1]ಬಸವಲಿಂಗಪ್ಪ ತಂದೆ ಶಿವಪ್ಪ ಪಟ್ಟೇದ ವಯ: 62 ವರ್ಷ ಜಾತಿ : ಲಿಂಗಾಯತ  ಉ; ಒಕ್ಕಲುತನ. ಈತನು ಗುನ್ನೆ ನಂ 46/06 ಕಲಂ 398, 399 ಐ.ಪಿ.ಸಿ 2] ಶಂಕರಪ್ಪ ತಂದೆ ಹನುಮಪ್ಪ ಹೊಂಬಳ ವಯ : 45 ವರ್ಷ ಜಾತಿ : ವಾಲ್ಮೀಕಿ ಉ; ರಿಕ್ಷಾ ಚಾಲಕ. ಇವನು ಗುನ್ನೆ ನಂ 15/96 ಕಲಂ 380 ಐ.ಪಿ.ಸಿ 3]ಮಲ್ಲಪ್ಪ ತಂದೆ ಮಹಾನಂದಪ್ಪ ಕುಂಬಾರ ವಯ : 31 ವರ್ಷ ಜಾತಿ : ಕುಂಬಾರ ಉ; ಒಕ್ಕಲುತನ & 4]  ಛತ್ರಪ್ಪ ತಂದೆ ಹನುಮಂತಪ್ಪ ಗೊಂದಳೆ  @ ಕಂಚಗಾರ ವಯ : 38 ವರ್ಷ ಜಾತಿ : ಗೊಂದಳೆ ಉ: ಬಾಂಡೆ ಸಾಮಾನು ವ್ಯಾಪಾರ.  ಇವರು ಇವನು ಗುನ್ನೆ ನಂ : 42/05 ಕಲಂ 379 ಐ.ಪಿ.ಸಿ ಪ್ರಕರಣ ದಲ್ಲಿ ಬಾಗಿಯಾಗಿದ್ದು  ಇರುತ್ತದೆ. ಮುಂಬರುವ ವಿಧಾನ ಪರಿಷತ್, ಜಿಲ್ಲಾ ಹಾಗೂ ಗ್ರಾಮ ಪಂಚಾಯತ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತಯಾಚನೆಯ ನಿಮಿತ್ಯ ಯಲಬುರ್ಗಾ ಠಾಣಾ ಸರಹದ್ದಿನಲ್ಲಿ ಸಭೆ, ಸಮಾರಂಭ & ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಜಕೀಯ ಮುಖ್ಯ ಗಣ್ಯರು, ಮುಖಂಡರು ಸದರ ಸಭೆ ಸಮಾರಂಭಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಯಲಬುರ್ಗಾ ಪೊಲೀಸ್ ಠಾಣಾ ಹದ್ದಿಯ ಮೇಲ್ಕಂಡ ಎಂ.ಓ.ಬಿ ಆಸಾಮಿಗಳು ತಮ್ಮ ಸಹಚರರೊಂದಿಗೆ ತಮ್ಮ ರೂಡಿಗತವಾದ ತಮ್ಮ ಚಟುವಟಿಕೆಯನ್ನು ಮುಂದುವರೆಸಿ ಸಭೆ ಸಮಾರಂಭದಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಯಾವುದೇ ರೂಪದಲ್ಲಿ ಸ್ವತ್ತಿನ ಪ್ರಕರಣಗಳನ್ನು ಎಸಗುವ ಸಾದ್ಯತೆ ಇರುವದರಿಂದ ಇದರಿಂದ ಸಾರ್ವಜನಿಕ ಶಾಂತಿ ಭಂಗ ಆಗುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 196/2015 ಕಲಂ.326, 323, 504, 506, ಸಹಿತ 34 ಐ.ಪಿ.ಸಿ.
ದಿನಾಂಕ 23-12-2015 ರಂದು ರಾತ್ರಿ 10-30 ಗಂಟೆಗೆ ಫಿರ್ಯಾಧಿದಾರ ಶ್ರೀ ಹನುಮಣ್ಣ ತಂದೆ ಸಣ್ಣ ಹನುಮಂತ ಕುಷ್ಟಿಗಿ ಸಾ.ಕೆ.ಮಲ್ಲಾಪೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ತಾನು ಸನ್-2010 ನೇ ಸಾಲಿನ ಆಕಳಕುಂಪಿ ಗ್ರಾಮದ ಯಂಕಪ್ಪ ತಂದೆ ತಿರುಕಪ್ಪ ಮೇಣಸಗೇರಿ ಇವರ 4 ನೇ ಮಗಳಾದ ಈರಮ್ಮಳನ್ನು ಮದುವೆ ಆಗಿದ್ದು, ನಮಗೆ 4 ಜನ ಹೆಣ್ಣು ಮಕ್ಕಳಿರುತ್ತವೆ. ಈಗ್ಗೆ ಸುಮಾರು 2 ತಿಂಗಳದ ಹಿಂದೆ 4 ನೇ ಹೆರಿಗೆಯ ಸಲುವಾಗಿ ನನ್ನ ಹೆಂಡತಿ ಈರಮ್ಮಳನ್ನು ತನ್ನ ತವರು ಮನೆಗೆ ಕಳುಹಿಸಿದ್ದು, ಈಗ್ಗೆ ಸುಮಾರು 1 ತಿಂಗಳದ ಹಿಂದೆ ಹೆರಿಗೆಯಾಗಿದ್ದು, ಅವಳನ್ನು ಕರೆಯಲು ಹೋದಾಗ ನಮ್ಮ ಬೀಗರ  ನಿನ್ನ ಜೊತೆ ಕಳುಹಿಸುವದಿಲ್ಲ. 3-4 ತಿಂಗಳ ಬಿಟ್ಟು ಬನ್ನಿ ಅಂತಾ ಅನ್ನುತ್ತಾ ನನ್ನ ಮೇಲೆ ಸಿಟ್ಟಾಗಿ ದ್ವೇಶ ಇಟ್ಟುಕೊಂಡಿದ್ದರು. ದಿನಾಂಕ 23-12-2015 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಪ್ಪನ ಮಗನಾದ ಬಸವರಾಜ ಕುಷ್ಟಗಿನೊಂದಿಗೆ ನನ್ನ ಹೆಂಡತಿ ಈರಮ್ಮಳ ಕರೆಯಲು ಅಕಳಕುಂಪಿ ಸೀಮಾದಲ್ಲಿರುವ ಅವರ ಹೊಲಕ್ಕೆ ಹೋಗಿ ನಮ್ಮ ಮಾವ ಯಂಕಪ್ಪನನ್ನು ಕೇಳಿದಾಗ ನಮ್ಮ ಮಾವನ ನನ್ನ ಮಗಳನ್ನು ನಿನ್ನ ಜೊತೆ ಕಳುಹಿಸಿ ಕೊಡುವದಿಲ್ಲ ನಿನ್ನೆನಾ ಹೇಳಿದ್ದಿಲ್ಲಾ ಇವತ್ತು ಯಾಕೇ ಬಂದಿಲೇ ಸೂಳೇ ಮಗನೇ ಅಂತಾ ಬೈಯುತ್ತಾ ನಮ್ಮ ಮಾವ ಯಂಕಪ್ಪನು ನನಗೆ ಕೈಯಿಂದ ಹೊಟ್ಟೆಗೆ, ಕಪಾಳಕ್ಕೆ ಬಡೆದನು. ಬಿಡಿಸಲು ಬಂದ ಬಸವರಾಜನಿಗೆ ಅಲ್ಲಿಯೇ ಇದ್ದ ಆತನ ಮಕ್ಕಳಾದ ದೇವಣ್ಣ ಯಂಕೋಬ ಇವರು ಬಂದು ದೇವಣ್ಣನು ಗಟ್ಟಿಯಾಗಿ ಹಿಡಿದು ಕೊಂಡನು. ಯಂಕೋಬ ಮೆಣಸಗೇರಿ ಈತನು ಅಲ್ಲಿಯೇ ಇದ್ದ ಕೊಡಲಿಯಿಂದ ಜೋರಾಗಿ ಬಸವರಾಜನ ತಲೆಯ ಹಿಂದೆ ಹೊಡೆದು ಭಾರಿ ರಕ್ತ ಗಾಯ ಮಾಡಿದನು. ಮತ್ತು ಬಲಗೈ ಮುಂಗೈ ಹತ್ತಿರ ಅದೇ ಕೊಡಲಿ ಕಾವಿನಿಂದ ಬಡೆದನು. ಈ ಜಗಳವನ್ನು ನೋಡಿ ಅಲ್ಲಿಯೇ ಹೋಗುತ್ತಿದ್ದ ಭೋಜರಾಜ ತಂದೆ ಹನುಮಪ್ಪ ಕಟಿಗಿಹಳ್ಳಿ, ಶರಣಗೌಡ ತಂದೆ ನಾಗನಗೌಡ ಗೌಡ್ರ ಇವರು ಓಡಿ ಬಂದು ಜಗಳ ಬಿಡಿಸಿ ಕಳುಹಿಸುವಾಗ ಅವರೆಲ್ಲರೂ ಓಡಿ ಹೋಗುತ್ತಾ ಈ ಸಲಾ ಉಳಿದಿಯರೇಲೇ ಸೂಳೇ ಮಕ್ಕಳಾ ಇನ್ನೊಮ್ಮೆ ನಮ್ಮ ಮಗಳನ್ನು ಕರೆಯಕಾ ಬನ್ನಿ ನಿಮ್ಮನ್ನು ಹುಟ್ಟಿಲ್ಲಾ ಅನ್ನಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಕೂಡಲೇ ನಾವು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕನಕಗಿರಿ ಸರಕಾರಿ ಆಸ್ಪತ್ರೆ ಸೇರಿಸಿ ಅಲ್ಲಿಂದ ಗಂಗಾವತಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಇದರಿಂದ ತಡವಾಗಿ ಠಾಣೆಗೆ ಬಂದಿರುತ್ತೇವೆ. ಈ ಜಗಳದಲ್ಲಿ ನನಗೆ ಯಾವುದೇ ಗಾಯ ಆಗದ್ದರಿಂದ ನಾನು ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008