1) ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 299/2015 ಕಲಂ. 302, 201 ಐ.ಪಿ.ಸಿ:.
ದಿ:27-12-15 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪ್ರಭುಗೌಡ ಮಾಲಿಪಾಟೀಲ. ಸಾ:
ಚುಕ್ಕನಕಲ್ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿ:27.12.15 ರಂದು
ಮಧ್ಯಾನ್ನ 3.45 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ದೇವಪ್ಪ ವಾಲೀಕಾರ, ಚಿನ್ನಪ್ಪ
ಹ್ಯಾಟಿ ಮತ್ತು ನಾಗಪ್ಪ ಚನ್ನದಾಸರ ಹೀಗೆ ಎಲ್ಲರೂ ನಮ್ಮೂರಿನ ಶ್ರೀಮತಿ ಭೀಮವ್ವ ಇವರ
ಹೊಟೇಲ್ಲಿನಲ್ಲಿ ಇದ್ದಾಗ, ನಮಗೆ ಪರಿಚಯದ ಹೊಸಳ್ಳಿ ಗ್ರ್ರಾಮದ ಯಮನೂರಪ್ಪ ವಾಲ್ಮೀಕಿ ಈತನು ಬಂದು
ಇಂದು ಮಧ್ಯಾನ್ನ 2.00 ಗಂಟೆ ಸುಮಾರಿಗೆ ನನ್ನ ಹೆಂಡತಿ ನಿಮ್ಮೂರಿನ ಕೆರೆಂದಹಳ್ಳದಲ್ಲಿ ಒಬ್ಬ
ಗಂಡಸಿನ ಮೃತ ಶವವನ್ನು ನೋಡಿರುತ್ತಾಳೆ ಅಂತಾ ಹೇಳಿದನು. ಆಗ ನಾವೆಲ್ಲರೂ ಗಾಭರಿಯಾಗಿ ನಮ್ಮೂರ
ಸೀಮಾದ ಕೆರೆಂದಹಳ್ಳದಲ್ಲಿ ಹೋಗಿ ನೋಡಲು ಶಾಂತಿಲಾಲ ಸೇಟ್ ಇವರ ಸುಬಾಬಲಿ ಗಿಡಗಳ ಹೊಲದ ಬಾಜು
ಹಳ್ಳದಲ್ಲಿ ಒಂದು ಮೃತ ಶವ ಬಿದ್ದಿದ್ದು, ಸ್ವಲ್ಪ ಹತ್ತಿರ ಹೋಗಿ ನೋಡಲು ಸುಮಾರು 30-35 ವರ್ಷದ
ಗಂಡಸಿನ ಶವವಿದ್ದು, ಶವ ಅಂಗಾತವಾಗಿ ಬಿದ್ದಿದ್ದು ಮುಖ ಸಂಪೂರ್ಣ ಸುಟ್ಟು ಗುರುತು ಸಿಗದಂತೆ
ಆಗಿದ್ದು, ಬಲಗೈ ಸಂಪೂರ್ಣವಾಗಿ ಪ್ರಾಣಿಗಳು ತಿಂದಂತೆ ಮಾಂಸಖಂಡ ಹೊರಬಂದು ಎಲುಬು
ಕಾಣುತ್ತಿದ್ದವು, ಮತ್ತು ಎದೆಯ ಬಲ ಭಾಗ ಹಾಗೂ ಮೈತುಂಬ ನೀರಿನ ಗೊಬ್ಬೆ ಆಗಿದ್ದವು.
ಸ್ಥಳದಲ್ಲಿ ಸುಟ್ಟ ಅರೆಬರೆಯ ಹಸಿರು ಬಣ್ಣದ ಬನಿಯನ್, ಬಿಳಿಯ ಶಟರ್ಿನ ತೋಳು ಮತ್ತು ಕರಿಯ ಬಣ್ಣದ ಪ್ಯಾಂಟ್ ತುಣುಕುಗಳು
ಬಿದ್ದಿದ್ದವು. ಯಾರೋ ದುಷ್ಕರ್ಮಿಗಳು ಸುಮಾರು 2 ದಿನಗಳಿಂದ ಇಂದು ಮಧ್ಯಾನ್ನ 2.00 ಗಂಟೆಯ
ಅವಧಿಯೊಳಗೆ ಈ ಅಪರಿಚಿತ ಗಂಡಸು ವ್ಯಕ್ತಿಯನ್ನು ಯಾವುದೋ ಉದ್ದೇಶಕ್ಕಾಗಿ ಕೊಲೆ ಮಾಡಿ ಸಾಕ್ಷಿ
ಪುರಾವೆ ಸಿಗದಂತೆ ಶವವನ್ನು ಸುಟ್ಟು ಹೋದಂತೆ ಕಾಣುತ್ತಿದ್ದು, ಕಾರಣ
ಅಪರಿಚಿತ ಗಂಡಸು ವ್ಯಕ್ತಿಯನ್ನು ಕೊಲೆ ಮಾಡಿ ಹೋಗಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ
ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ
ಗ್ರಾಮೀಣ ಠಾಣೆ ಗುನ್ನೆ ನಂ: 299/2015. ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 258/2015
ಕಲಂ. 128 ಜನತಾ ಪ್ರಾತಿನಿಧ್ಯ ಅಧಿನಿಯಮ 1951.
ದಿನಾಂಕ:
27-12-2015 ರಂದು ರಾತ್ರಿ 09-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪಿ.ನಾಗೇಶ ಜಂಟಿ ನಿರ್ದೇಶಕರು
ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ,
ಇಂದು ದಿನಾಂಕ: 27.12.2015 ರಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಶ್ರೀ ಚನ್ನಬಸಪ್ಪ ಕೊಟ್ಯಾಳ ನಗರ
ಸಭೆ ಸದಸ್ಯರು ಕೊಪ್ಪಳ ಇವರು ಮತ ಹಾಕುವಾಗ ತಾವೇ ಫೇಸ್ ಬುಕ್ ನಲ್ಲಿ ತೋರಿಸಿದಂತೆ ತಾವು ಬಿಜೆಪಿಗೆ
ಓಟು ಹಾಕಿರುವುದಾಗಿ ಅಪಲೋಡ್ ಮಾಡಿರುತ್ತಾರೆ ಇದನ್ನು ಅವರು 11 ಜನ ಬಿ.ಜೆ.ಪಿ ಸದಸ್ಯರು ತಮ್ಮ ಉಪಾಧ್ಯಕ್ಷರು
ಅಗುವಾಗ ಓಟು ಹಾಕಿದ್ದಕ್ಕಾಗಿ ತಾವು ಓಟು ಮಾಡಿರುವುದಾಗಿ ತಿಳಿಸಿರುತ್ತಾರೆ. ಇದು ಚುನಾವಣಾ
ನೀತಿ ಸಂಹಿತೆ ಸ್ವಷ್ಟ ಉಲ್ಲಂಘನೆಯಾಗಿರುತ್ತದೆ ಕಾರಣ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ
ಮುಂತಾಗಿದ್ದ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ.ಸದರ ಪ್ರಕರಣವು ಅಸಂಜ್ಞೆ ಅಪರಾಧವಾಗುತ್ತಿದ್ದರಿಂದ
ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯ ಗುನ್ನೆ ನಂ
258/2015 ಕಲಂ: 128 ಜನತಾ ಪ್ರಾತಿನಿದ್ಯ ಅಧಿನಿಯಮ 1951 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 176/2015 ಕಲಂ.
279, 337, 338 ಐ.ಪಿ.ಸಿ:.
ದಿನಾಂಕ:27-12-2015 ರಂದು 7-30 ಪಿಎಂಕ್ಕೆ ಕುಕನೂರ ಸರ್ಕಾರಿ ಆಸ್ಪತ್ರೆಯಿಂದ ಅಪಘಾತದ ಬಗ್ಗೆ
ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, 7-45 ಪಿಎಂದಿಂದ 8-30 ಪಿಎಂದವರೆಗೆ
ಪ್ರತ್ಯಕ್ಷ ಸಾಕ್ಷಿದಾರರಾದ ರುದ್ರೇಶರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ,
ಫಿರ್ಯಾದಿದಾರನು ಕುಕನೂರಿನಿಂದ ಗುದ್ನೆಪ್ಪನ ಮಠದ ಜಾತ್ರೆಗೆ ತನ್ನ ಸಂಬಂದಿಕರನ್ನು ಅಟೋದಲ್ಲಿ ಕರೆದುಕೊಂಡು
ಹೋಗಿದ್ದು, ನಂತರ ವಾಪಾಸ್ಸು ಕುಕನೂರ ಕಡೆಗೆ ಬರಲು ದ್ಯಾಂಪೂರದ ಅಟೋ ನಂ.ಕೆ.ಎ.29 ಎ.3981 ನೇದ್ದರಲ್ಲಿ
ತನ್ನ ಸಂಬಂದಿಕರನ್ನು ಕೂಡಿಸಿ ತಾನು ಅಟೋದ ಹಿಂದೆ ಮೋಟಾರ್ ಸೈಕಲ್ ಮೇಲೆ ಬರುತ್ತಿರುವಾಗ ಕುಕನೂರ ಕಡೆಯಿಂದ
ಟ್ರ್ಯಾಕ್ಟರ್ ನಂ.ಕೆ.ಎ.37 ಟಿ. 8155 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ
ನಡೆಯಿಸಿಕೊಂಡು ಬಂದು ಫಿರ್ಯಾದಿಯ ಸಂಬಂದಿಕರು ಮತ್ತು ಇನ್ನೊಬ್ಬರು ಕುಳಿತು ಹೊರಟ ಅಟೋಕ್ಕೆ ಟಕ್ಕರು
ಕೊಟ್ಟು ಅಪಘಾತ ಮಾಡಿದ್ದು, ಈ ಅಪಘಾತದಿಂದ ತನ್ನ ಸಂಬಂದಿಕರಿಗೆ ಹಾಗೂ ಶರಣಯ್ಯನಿಗೆ ಸಾದಾ ಹಾಗೂ ತೀವ್ರ
ಸ್ವರೂಪದ ಗಾಯಗಳಾಗಿದ್ದು ಅದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment