1) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 365/2015 ಕಲಂ. 143, 147, 341, 323,
354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 28-12-2015 ರಂದು ರಾತ್ರಿ 9:30 ಗಂಟೆಗೆ
ಫಿರ್ಯಾದಿದಾರರಾದ ಶ್ರೀ ಶರಣಪ್ಪ ತಂದೆ ಶೇಖರಪ್ಪ ಜೇಕಿನ, ವಯಸ್ಸು 36 ವರ್ಷ, ಲಿಂಗಾಯತ ರೆಡ್ಡಿ ಉ:
ಒಕ್ಕಲುತನ ಸಾ: ಕೇಸರಹಟ್ಟಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ
ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ: 28-12-2015 ರಂದು ಸಂಜೆ 6:00 ಗಂಟೆಯ ಸುಮಾರಿಗೆ ನಾನು,
ನನ್ನ ತಮ್ಮನಾದ ಮಹೇಶ ತಂದೆ ಶೇಖರಪ್ಪ ಮತ್ತು ನನ್ನ ಕಕ್ಕನ ಮಗನಾದ ಬಸವರಾಜ ತಂದೆ ಕರಿಬಸಪ್ಪ ನಮ್ಮ
ಮನೆಯ ಎದುರಿಗೆ ಹನುಮಂತಪ್ಪ ಮತ್ತು ಆತನ ಸಹೋದರರಾದ ವೆಂಕಟೇಶ ತಂದೆ ರಾಮಣ್ಣ, ಶರಣಪ್ಪ ತಂದೆ ಈರಪ್ಪ,
ದುರಗಪ್ಪ ತಂದೆ ಯಂಕಪ್ಪ, ಮಾರ್ಕಂಡೆ ತಂದೆ ಹನುಮಂತಪ್ಪ, ಮುದಿಯಪ್ಪ @ ಬಾಗಪ್ಪ ತಂದೆ ಹನುಮಂತಪ್ಪ,
ಹನುಮಂತ ತಂದೆ ಬಾಗಪ್ಪ ಎಲ್ಲರೂ ಜಾತಿ: ಉಪ್ಪಾರ ಸಾ: ಕೇಸರಹಟ್ಟಿ ಇವರು ನಾವು ಅಡ್ಡಾಡುವ ದಾರಿಗೆ ಹೊಂದಿಕೊಂಡಿರುವ
ಕಂಪೌಂಡ್ ಗೋಡೆಗೆ ದಕ್ಷಿಣ ಮುಖವಾಗಿ ಗೇಟ್ ಇಡುವಾಗ ನಮಗೆ ಅಡ್ಡಾಡಲು ತೊಂದರೆ ಆಗುತ್ತದೆ ಇಲ್ಲಿ ಗೇಟ್
ಇಡಬೇಡಿ ಮತ್ತು ಪೂರ್ವಕಾಲದಿಂದಲೂ ಇಲ್ಲಿ ಯಾವುದೇ ಗೇಟ್ ಇರುವುದಿಲ್ಲಾ ಎಂದಾಗ ನಮ್ಮನ್ನು ತಡೆದು ನಿಲ್ಲಿಸಿ
ನಾನು ಇಲ್ಲಿ ಗೇಟ್ ಇಡುತ್ತೇವೆ ಅದೇನು ಶಂಠಾ ಹರುಕೋತಿರಿ ಹರ್ಕೋರಿ ಹಾಗೂ ನಿಮ್ಮ ಕಡೆ ಎಷ್ಟು ಜನ ಗಂಡಸರು
ಇದ್ದಿರಿ ಬರ್ರೀಲೇ ಎಂದು ಅವಾಜ್ ಹಾಕಿದರು. ಹೀಗೆಲ್ಲಾ ಮಾತನಾಡಬೇಡಿರಿ ಊರ ಹಿರಿಯರನ್ನು ಕೂಡಿಸಿ ಮಾತಾಡೋಣಾ
ಅಂದಾಗ ಹನುಮಂತಪ್ಪ ತಂದೆ ಈರಪ್ಪ ಉಪ್ಪಾರ 41 ವರ್ಷ ಇತನು ನನ್ನ ತಲೆ ಕೂದಲು ಹಿಡಿದು ಬಗ್ಗಿಸಿ ಗುದ್ದಿದನು.
ನನ್ನ ಚಿಕ್ಕಪ್ಪನ ಮಗನಾದ ಬಸವರಾಜ ತಂದೆ ಕರಿಬಸಪ್ಪ ಜೇಕಿನ ಈತನು ಬಿಡಿಸಲು ಬಂದಾಗ ವೆಂಕಟೇಶ ತಂದೆ
ರಾಮಣ್ಣ ಈತನು ಸಹ ಬಂದು ನನ್ನ ಸಹೋದರನಾದ ಮಹೇಶ ತಂದೆ ಶೇಖರಪ್ಪನಿಗೆ ಕೆಳಗೆ ಬೀಳಿಸಿ ಬಲಗಾಲಿನಿಂದ
ಒದ್ದನು. ದುರಗಪ್ಪನು ಬಸವರಾಜನಿಗೆ ಬಲಗಾಲಿನಿಂದ ಒದ್ದು ಮುಷ್ಠಿಯಿಂದ ಗುದ್ದಿದನು. ಬಿಡಿಸಲು ಬಂದ
ನನ್ನ ಹೆಂಡತಿ ಲಲಿತಾಳಿಗೆ ಮೈ ಕೈ ಮುಟ್ಟಿ ಎಳೆದಾಡಿ ಕೈಗಳಿಂದ ಬಡಿದರು. ನಂತರ ಈ ದಿನ ಉಳಿದುಕೊಂಡ್ರಿ
ಮುಂದೊಂದು ದಿನ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎನ್ನುತ್ತಾ ಜೀವದ ಬೆದರಿಕೆಯನ್ನು ಹಾಕಿದರು.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 366/2015
ಕಲಂ. 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 28-12-2015 ರಂದು ರಾತ್ರಿ 11:00 ಗಂಟೆಗೆ
ಫಿರ್ಯಾದಿದಾರರಾದ ಶ್ರೀ ಹನುಮಂತಪ್ಪ ತಂದೆ ಈರಪ್ಪ ವಯಸ್ಸು: 38 ವರ್ಷ ಜಾತಿ: ಉಪ್ಪಾರ, ಉ: ಒಕ್ಕಲುತನ
ಸಾ: ಕೇಸರಹಟ್ಟಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು,
ಅದರ ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ:- 28-12-2015 ರಂದು ಸಂಜೆ 5:30 ಗಂಟೆಯ ಸುಮಾರಿಗೆ
ನಾನು, ನಮ್ಮ ಮನೆಯ ಪಕ್ಕದಲ್ಲಿ ಕಂಪೌಂಡ ಕಟ್ಟಿಸುತ್ತಿರುವಾಗ ನಮ್ಮ ಗ್ರಾಮದ (1) ಶರಣಪ್ಪ ತಂದೆ ಶೇಖರಪ್ಪ
ಜೇಕಿನ 36 ವರ್ಷ ಈತನು ಏಕಾಏಕಿಯಾಗಿ ಬಂದು ಯಾಕಲೇ ಉಪ್ಪಾರ ಸೂಳೆ ಮಗನೇ ಈ ಜಾಗೆಯಲ್ಲಿ ಕಂಪೌಂಡ
ಕಟ್ಟಲು ನಿನ್ನನ್ನು ಬಿಡುವದಿಲ್ಲಾವೆಂದು ಜೀವ ಬೆದರಿಕೆ ಹಾಕಿದ್ದು ಆಗ ನಾನು ಮತ್ತು ನನ್ನ ನನ್ನ ಹೆಂಡತಿಯಾದ
ಶ್ರೀಮತಿ ಕಾವೇರಿ ಇಬ್ಬರೂ ಕೂಡಿ ಆತನಿಗೆ ಯಾಕೇ ಸುಮ್ಮನೇ ಜಗಳ ಮಾಡುತ್ತೀಯಾ ಎಂದು ಕೇಳಿದಾಗ ತನ ಸಂಗಡ
2] ಶೇಖರಪ್ಪ ತಂದೆ ವೆಂಕಟರಡ್ಡಿ ಜೇಕಿನ 3] ಕರಿಬಸಪ್ಪ ತಂದೆ ವೆಂಕಟರಡ್ಡೆಪ್ಪ ಜೇಕಿನ 4] ಹನುಮಂತಪ್ಪ
ತಂದೆ ವೆಂಕಟರಡ್ಡೆಪ್ಪ ಜೇಕಿನ 5] ಅಮರೇಶಪ್ಪ ತಂದೆ ದೊಡ್ಡಬಸಪ್ಪ ಜೇಕಿನ 6] ರುದ್ರಪ್ಪ ತಂದೆ ವಿರುಪಾಕ್ಷಪ್ಪ
ಜೇಕಿನ 7] ವಿಜಯಕುಮಾರ ತಂದೆ ವಿರುಪಾಕ್ಷಪ್ಪ ಜೇಕಿನ 8] ಮಹೇಶ ತಂದೆ ಶೇಖರಪ್ಪ ಜೇಕಿನ 9] ಬಸವರಾಜ
ತಂದೆ ಶೇಖರಪ್ಪ ಜೇಕಿನ 10] ಪ್ರಭು ತಂದೆ ಶೇಖರಪ್ಪ ಜೇಕಿನ 11] ಶರಣಪ್ಪ ತಂದೆ ಕರಿಬಸಪ್ಪ ಜೇಕಿನ
12] ಬಸವರಾಜ ತಂದೆ ಕರಿಬಸಪ್ಪ ಜೇಕಿನ 13] ಶರಣಪ್ಪ ತಂದೆ ಅಮರೇಶಪ್ಪ ಜೇಕಿನ 14] ನೀಲಮ್ಮ ಗಂಡ ಶೇಖರಪ್ಪ
ಜೇಕಿನ 15] ಯಂಕಮ್ಮ ಗಂಡ ಕರಿಬಸಪ್ಪ ಜೇಕಿನ 16] ಲಲಿತಮ್ಮ ಗಂಡ ಶರಣಪ್ಪ ಜೇಕಿನ 17] ಲಕ್ಷ್ಮಿ ಗಂಡ
ಮಹೇಶ ಜೇಕಿನ 18] ಹಂಪಮ್ಮ ಗಂಡ ಪ್ರಭು ಜೇಕಿನ 19] ಲಕ್ಷ್ಮಿ ಗಂಡ ಶರಣಪ್ಪ ಜೇಕಿನ ಸಾ: ಎಲ್ಲರೂ ಕೇಸರಹಟ್ಟಿ
ಇವರೆಲ್ಲರೂ ಕೂಡಿ ಆಕ್ರಮ ಕೂಟ ರಚಿಸಿಕೊಂಡು ಬಂದು ನನಗೂ ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ
ಬೈಯ್ದಾಡಿ ಕೈಗಳಿಂದ ಎಳೆದಾಡಿ ಒದ್ದರು. ಮತ್ತು ಕಟ್ಟಿಗೆಯಿಂದ ಹೊಡೆದು ನನ್ನ ಹೆಂಡತಿಗೆ ಕಾಲಿನಿಂದ
ಒದ್ದರು. ನಂತರ ನನಗೆ ಉಪ್ಪಾರ ಸೂಳೆ ಮಗನೇ ನೀನು ಇದ್ದು ಇಲ್ಲಿ ಅದೇ ಹೇಗೆ ಜೀವನ ಮಾಡುತ್ತೀಯಾ ಅಂತಾ
ಬಯ್ದು ನನಗೆ ಜೀವ ಬೆದರಿಕೆ ಹಾಕಿದರು. ನಂತರ ಅಲ್ಲಿಯೇ ಇದ್ದ ನಮ್ಮ ಗ್ರಾಮದ ನಿವಾಸಿಗಳಾದ ವಿಶ್ವನಾಥ
ಮಾಲಿಪಾಟೀಲ್, ಶರಣಪ್ಪ ಸಂಗಣ್ಣನವರ, ರಮೇಶ ಮಾಲಿಪಾಟೀಲ್ , ಹನುಮೇಶ ನಾಯಕ, ಇವರೆಲ್ಲರೂ ಕೂಡಿ ಜಗಳ
ಬಿಡಿಸಿದರು. ನಂತರ ನಾನು ನನ್ನ ಹೆಂಡತಿ ಇಬ್ಬರೂ ಕೂಡಿ ಠಾಣೆಗೆ ಬಂದು ಚಿಕಿತ್ಸೆ ಕುರಿತು ಆಸ್ಪತ್ರೆಗೆ
ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಈಗ ತಡವಾಗಿ ಠಾಣೆಗೆ ಹಾಜರಾಗಿ ಈ ನನ್ನ ದೂರನ್ನು ಕೊಟ್ಟಿರುತ್ತೇನೆ.
ಕಾರಣ ಮಾನ್ಯರು ಈ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ
ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ
ಗುನ್ನೆ ನಂ. 177/2015 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:-28/12/2015 ರಂದು 8-40 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಎಂ.ಎಲ್.ಸಿ.
ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಹೇಳಿಕೆ ಪಿರ್ಯಾದಿಯನ್ನು 8-50 ಪಿಎಂದಿಂದ
9-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಆರೋಪಿತ ಹನುಮಂತಪ್ಪನು ಊಟ ಮಾಡಿದ
ಬಿಲ್ ಕೊಡದೇ ಹೋಟಲ್ ಮಾಲೀಕನೊಂದಿಗೆ ವಾದ ಮಾಡುತ್ತಿದ್ದಾಗ ಪಿರ್ಯಾದಿದಾರನು ದುಡ್ಡು ಕೊಡಲು ತಿಳಿಸಿದ್ದಕ್ಕೆ
ಆರೋಪಿತ ಹನುಮಂತಪ್ಪನು ತನ್ನ ಮಗ ಆನಂದ ಮತ್ತು ರವಿ ಎನ್ನುವವನಿಗೆ ಹಾಗೂ ಇನ್ನೊಬ್ಬನಿಗೆ ಕರೆದುಕೊಂಡು
ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು, ಕಲ್ಲಿನಿಂದ ಕೈಯಿಂದ ಬಡಿದು ರಕ್ತಗಾಯಗೊಳಿಸಿದ್ದು, ಅಲ್ಲದೇ,
ಆವಾಚ್ಯವಾಗಿ ಬೈಯ್ದಾಡಿ, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು
ವಾಪಸ್ ಠಾಣೆಗೆ 9-40 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
0 comments:
Post a Comment