1) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 367/2015 ಕಲಂ. 279, 304(ಎ)
ಐ.ಪಿ.ಸಿ:.
ದಿನಾಂಕ: 29-12-2015 ರಂದು ಸಂಜೆ 4:00 ಗಂಟೆಗೆ
ಫಿರ್ಯಾದಿದಾರರಾದ ಶ್ರೀ
ಬಾಷಾ ತಂದೆ ಶಬ್ಬೀರಸಾಬ ವಯಸ್ಸು: 35 ವರ್ಷ ಜಾತಿ: ಮುಸ್ಲಿಂ ಉ: ಕಾರಪೇಂಟರ್ ಸಾ: ಮೈದಿನಗರ, 17 ನೇ
ವಾರ್ಡ ಮಾನ್ವಿ ಜಿ: ರಾಯಚೂರ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ದೂರು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. “ ನನ್ನ ತಂಗಿಯಾದ ಶ್ರೀಮತಿ ಪೈಮುದಾಬೇಗಂ
28 ವರ್ಷ ಇವಳನ್ನು ಗಂಗಾವತಿಯ ಮಹಿಬೂಬನಗರದ ನಿವಾಸಿಯಾದ ಮಹಿಬೂಬ ಪಾಷಾ ತಂದೆ ಅಲ್ಲಾಬಂದಿ ವಯಸ್ಸು:
32 ವರ್ಷ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಅವರು ಪೆಂಟರ್ ಕೆಲಸ ಮಾಡಿಕೊಂಡಿದ್ದರು. ನಿನ್ನೆ ದಿನಾಂಕ:
28-12-2015 ರಂದು ರಾತ್ರಿ 10:00 ಗಂಟೆಗೆ ನಾನು ಮನೆಯಲ್ಲಿರುವಾಗ ಗಂಗಾವತಿಯಿಂದ ರಫೀಕ್ ಅನ್ನುವವರು
ಪೋನ್ ಮಾಡಿ “ ನಿಮ್ಮ ಅಳಿಯನಾದ ಮಹಿಬೂಬ ಪಾಷಾ ತಂದೆ ಅಲ್ಲಾಬಂದಿ ಇತನಿಗೆ ಸಂಜೆ 7-00 ಗಂಟೆ ಸುಮಾರಿಗೆ
ಶ್ರೀರಾಮನಗರದ ಹೊರಗಡೆ ಸ್ಮಶಾನದ ಹತ್ತಿರ ಗಂಗಾವತಿ-ಕಾರಟಗಿ ರಸ್ತೆಯ ಮೇಲೆ TVS ಅಪ್ಪಾಚಿ ಮೋಟಾರು
ಸೈಕಲ್ ನಂ.KA-37/L-4377 ನೇದ್ದನ್ನು ಕಾರಟಗಿ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿದ್ದಾಗ ರಸ್ತೆ
ತಿರುವಿನಲ್ಲಿ ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ವೇಗ ನಿಯಂತ್ರಿಸಲಾಗದೇ
ಆಕಸ್ಮಾತಾಗಿ ತನ್ನ ಮೋಟಾರು ಸೈಕಲ್ ಸಮೇತ ಸ್ಕಿಡ್ ಆಗಿ ಬಿದ್ದು ತಲೆಗೆ ತೀವ್ರವಾಗಿ ಒಳಪೆಟ್ಟು ಹಾಗೂ
ರಕ್ತಗಾಯಗಳಾಗಿದ್ದು, ಆತನನ್ನು 108 ಅಂಬುಲೆನ್ಸ್ ನಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು
ಬಂದಿದ್ದು ಕೂಡಲೇ ವೈದ್ಯರು ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಕರೆದುಕೊಂಡು
ಹೋಗಲು ತಿಳಿಸಿದ್ದರಿಂದ ನಿಮ್ಮ ತಂಗಿ ಬಳ್ಳಾರಿಗೆ ಕರೆದುಕೊಂಡು ಹೋಗುತ್ತಿರವುದಾಗಿ ” ತಿಳಿಸಿದರು.
ರಾತ್ರಿಯಾಗಿದ್ದರಿಂದ ನಾನು ಈ ದಿವಸ ಬಳ್ಳಾರಿಗೆ ಹೋಗಬೇಕೆನ್ನುವಷ್ಟರಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ
ನನ್ನ ತನ್ನ ತಂಗಿ ಪೈಮುದಾಬೇಗಂ ಇವಳು ಫೋನ್ ಮಾಡಿ “ ಇಂದು ದಿನಾಂಕ : 29/12/2015 ರಂದು ಮುಂಜಾನೆ
9-30 ಗಂಟೆಗೆ ಮಹಿಬೂಬ ಪಾಷಾ ಈತನು ಚಿಕಿತ್ಸೆ ಫಲಿಸಲಾರದೇ ಮೃತಪಟ್ಟಿರುತ್ತಾನೆ ” ಅಂತಾ ತಿಳಿಸಿದಳು.
ನಂತರ ಈ ಬಗ್ಗೆ ದೂರು ಕೊಡಲು ಯಾರೂ ಇರದ ಕಾರಣ ನಾನು ಮಾನ್ವಿಯಿಂದ ಈಗ ತಡವಾಗಿ ಠಾಣೆಗೆ ಬಂದು ಈ ನನ್ನ
ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಮೃತ ನನ್ನ ಅಳಿಯ ಮಹಿಬೂಬ
ಪಾಷಾ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.” ಅಂತಾ
ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 278/2015
ಕಲಂ. 279, 337, 338 ಐ.ಪಿ.ಸಿ:.
ದಿನಾಂಕ. 28-12-2015 ರಂದು 12-30 ಪಿ.ಎಂ.ಕ್ಕೆ ಫಿರ್ಯಾದಿದಾರರು
ಹಾಗೂ ಅವರ ಅಣ್ಣ ಮಣಿಕುಮಾರ ಮತ್ತು ಅವರ ಗೆಳೆಯರು ಮಹೇಶಕುಮಾರ, ಪವನ ಕೂಡಿಕೊಂಡು ಎರಡು ಮೋಟಾರ ಸೈಕಲ್‌ದಲ್ಲಿ
ಶ್ರೀರಾಮನಗರದಿಂದ ಕುಷ್ಟಗಿಗೆ ಹೋಗುತ್ತಿರುವಾಗ ಹೊಸಪೇಟೆ ಕುಷ್ಟಗಿ ಒನ್ ವೇ ಎನ್.ಹೆಚ್. 13
ರಸ್ತೆಯ ಮೇಲೆ ಎಂ. ಪಿ. ಡಾಬಾದ ಹತ್ತಿರ ಎದುರಿಗೆ ರಾಂಗ ಸೈಡಿನ ರಸ್ತೆಯಲ್ಲಿ ಮೋ.ಸೈ. ನಂ.
ಕೆ.ಎ.37/ಎಸ್.4663 ನೇದ್ದರ ಚಾಲಕನು ಮೋ.ಸೈ.ನ್ನು ಅತಿವೇಗವಾಗಿ ನಿರ್ಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಅಣ್ಣ ಮಣಿಕುಮಾರ ಈತನು ಚಲಾಯಿಸುತ್ತಿದ್ದ ಮೋ.ಸೈ. ನಂ.
ಕೆ.ಎ.05/ಹೆಚ್.ಝಡ್.9080 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ. ಸಮೇತ
ಬಿದ್ದು ಫಿರ್ಯಾದಿ ಅಣ್ಣ ಮಣಿಕುಮಾರ ಮತ್ತು ಹಿಂದೆ ಕುಳಿತ ಮಹೇಶಕುಮಾರ ಇವರಿಗೆ ಮತ್ತು ಡಿಕ್ಕಿ
ಕೊಟ್ಟ ಮೋ.ಸೈ. ಚಾಲಕ ಹನಮಪ್ಪ ಇವರಿಗೆ ಸಾದಾ ಮತ್ತು ಬಾರಿ ಸ್ವೂರಪದ ಗಾಯ ಪೆಟ್ಟಿಗಳಾಗಿರುತ್ತವೆ
ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ
ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 303/2015 ಕಲಂ. 04 ವರದಿಕ್ಷಿಣೆ ನಿಷೇಧ ಕಾಯ್ದೆ 1961 ಮತ್ತು 420 ಐ.ಪಿ.ಸಿ:
ದಿನಾಂಕ 29-12-2015 ರಂದು 20-30 ಗಂಟೆಗೆ ಪಿ.ಸಾಯಿಬಾಬು ತಂದೆ ಪಿ.ಸತ್ಯನಾರಾಯಣ ಪುಲಿಮೆ ವಯಸ್ಸು 48 ಜಾ: ಕಾಪು ಉ: ಟ್ರಾವೆಲ್ಸ್ ಸಾ: ಅಣ್ಣೂರು ಗೌರಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗಳಾದ ಶ್ರೀಹಾರಿಕ ಇಕೆಯ ಮದುವೆಯನ್ನು ಆರೋಪಿ ನಂ. 01 ಸುನೀಲ್ ಇತನೊಂದಿಗೆ ನಿಶ್ಚಯಿಸಿ ಸದರಿಯವರ ನಿಶ್ಚಿತಾರ್ಥವು ಗಂಗಾವತಿ ನಗರದ ಲಲೀತಮಹಲ್ ಹೋಟಲ್ ದಲ್ಲಿ ಜರುಗಿದ್ದು ಇರುತ್ತದೆ. ಫಿರ್ಯಾದಿದಾರರು ತನ್ನ ಹೆಸರಿನಲ್ಲಿರುವ ಒಂದು ಪ್ಲಾಟನ್ನು ಮದುವೆ ನಂತರ ತಮ್ಮ ಮಗಳಿಗೆ ಕೊಡುವುದಾಗಿ ಅದರಂತೆ 10 ತೊಲೆಯ ಬಂಗಾರವನ್ನು ಸಹ ಕೊಡುವುದಾಗಿ ಹೇಳಿದ್ದು ದಿನಾಂಕ 29-10-2015 ರಂದು ಸದರಿಯವರ ಮದುವೆ ನಿಶ್ಚಯಿಸಿದ್ದು ಇರುತ್ತದೆ. ಮದುವೆ ಒಂದು ತಿಂಗಳು ಇರುವ ಸಮಯದಲ್ಲಿ ಆರೋಪಿತರಾದ ಸುನೀಲ್ ಮತ್ತು ಇತನ ತಂದೆ ಆನಂದರಾವ್ ಹಾಗೂ ತಾಯಿ ಶ್ರೀಮತಿ ಸುಜಾತ ಇವರು ಫಿರ್ಯಾದಿದಾರರಿಗೆ ಮದುವೆ ನಂತರ ಮಗಳಿಗೆ ಕೊಡುವ ಪ್ಲಾಟ್ ನ್ನು ಈಗಲೇ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮತ್ತು 10 ತೊಲೆಯ ಬಂಗಾರವನ್ನು ಈಗಲೇ ತಮಗೆ ಕೊಡಬೇಕೆಂದು ಒತ್ತಾಯಿಸುತ್ತಾ, ಪ್ಲಾಟ್ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಕೊಡುವವರೆಗೆ ಮತ್ತು 10 ತೊಲೆಯ ಬಂಗಾರವನ್ನು ಕೊಡುವವರೆಗೂ ಫಿರ್ಯಾದಿದಾರರ ಮಗಳನ್ನು ಮದುವೆ ಆಗುವುದಿಲ್ಲವೆಂದು ವರದಕ್ಷೀಣೆಯ ಸಲುವಾಗಿ ಒತ್ತಾಯ ಮಾಡಿ ಮದುವೆ ಆಗಲು ನಿರಾಕರಿಸಿ ಮೋಸ ಮಾಡಿರುತ್ತಾರೆಂದು ನೀಡಿದ ಫಿರ್ಯಾದಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ ನಂ. 259/2015 ಕಲಂ. 457, 380 ಐ.ಪಿ.ಸಿ:
ದಿನಾಂಕ 29-12-2015 ರಂದು ಮದ್ಯಾಹ್ನ 4-30 ಗಂಟಗೆ ಫಿರ್ಯಾದಿದಾರರರಾದ ಎ.ಕೆ ತುಪ್ಪದ ಉಪ-ಪ್ರಾಂಶುಪಾಲರು ಸಾ-
ಬಾಲಕರ ಸ.ಪ.ಪೂ ಕಾಲೇಜ್ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ
ಸಾರಾಂಶವೇನೆಂದರೆ, ದಿನಾಂಕ 27-12-2015 ರಂದು ರಾತ್ರಿ 10-30 ಗಂಟೆಗೆ ಕಾಲೇಜನ ರಾತ್ರಿ
ಕಾವಲುಗಾರ ರಮೇಶ ಇತನು ಕಾಲೇಜನ ಎಲ್ಲಾ ಕೊಠಡಿಗಳನ್ನ ಪರಿಶಿಲಿಸಿ ಕಾಲೇಜನಲ್ಲಿ ಮಲಗಿದ್ದು ನಂತರ
ಮುಂಜಾನೆ 6-00 ಗಂಟೆಗೆ ಎದ್ದು ಕಾಲೆಜನ್ನು ಸ್ವಚ್ಛಮಾಡಲು ಎದ್ದು ಬಂದಾಗ ಕಾಲೇಜನ ಗುಮಾಸ್ತರ
ಕೊಠಡಿಯ ಬಾಗಿಲಿನ ಬೀಗ ಒಡೆದಿದ್ದು ಮತ್ತು ಪ್ರಾಚಾರ್ಯಾರರ ಕೊಠಡಿಯ ಬಾಗಿಲು ತೆರೆಯಲು
ಪ್ರಯತ್ನಿಸಿದ್ದು ಮತ್ತು ಬಿಸಿ ಊಟದ ಕೊಠಡಿಗಳು ತೆರೆದಿರುವುದನ್ನು ಕಂಡು ರಮೇಶ ಇತನು ನನಗೆ
ಕರೆ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಮ್ಮ ಕಾಲೇಜ್ ನಲ್ಲಿ ಕೊಠಡಿಗಳ ಬಾಗಿಲು ಬೀಗಗಳು
ಮುರಿದಿರುತ್ತವೆ ಬೇಗ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ಪ್ರಾಂಶುಪಾಲರಾದ ನಾಗರಾಜರಾವ್
ಕೂಡಲೇ ಬಂದು ನೋಡಿದಾಗ ವಿಷಯ ನಿಜ ಇದ್ದು, ಗುಮಾಸ್ತರ ಕೊಠಡಿಯಲ್ಲಿ ಯಾವುದೇ ರೀತಿಯ
ಕಳ್ಳತನವಾಗಿರುವುದಿಲ್ಲಾ ಮತ್ತು ಬಿಸಿ ಊಟದ ಕೊಠಡಿಗೆ ಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಎರಡು
ಹಂಡೆ ಮತ್ತು ಒಂದು ಕೋಳಗ ಮತ್ತು ಡೆಡ್ ಸ್ಟಾಕ್ ಕೊಠಡಿಯಲ್ಲಿದ್ದ ಗ್ಯಾಸ್ ವೆಲ್ಡಿಂಗ್ ಕಡ್ಡಿಗಳು
ಮತ್ತು ಇನ್ನೊಂದು ಡೆಡ್ ಸ್ಟಾಕ್ ಕೊಠಡಿಯಲ್ಲಿದ್ದ ಮರಗೆಲಸದ ಸಾಮಗ್ರಿಗಳು ಎಲ್ಲಾ ಸೇರಿ ಅಂ.ಕಿ.ರೂ
10,000 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು ಕಳ್ಳತನ ಮಾಡಿದ
ಕಳ್ಳರನ್ನ ಪತ್ತೇ ಮಾಢಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿರುವ ಫಿರ್ಯಾದಿ
ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆಕೈಗೊಂಡೇನು.
0 comments:
Post a Comment