1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 10/2016
ಕಲಂ.143, 147, 447, 504, 506, ಸಹಿತ 149 ಐ.ಪಿ.ಸಿ:.
ದಿನಾಂಕ:- 14-01-2016 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗೌರಮ್ಮ ಗಂಡ ದಿ: ಮಹೇಶ 45 ವರ್ಷ ಜಾತಿ: ಭೋವಿ, ಉ: ಕೂಲಿಕೆಲಸ
ಸಾ: ಹೇಮಗುಡ್ಡ, ತಾ: ಗಂಗಾವತಿ ಇವರು ಠಾಣೆಗ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ಹೇಮಗುಡ್ಡ ಗ್ರಾಮ ಸರ್ವೆ ನಂ:
3/1 ವಿಸ್ತ್ರೀರ್ಣ 3 ಎಕರೆ 34 ಗುಂಟೆ ಜಮೀನು ಇದ್ದು ಸದರಿ ಜಮೀನಿನನ್ನು ನನ್ನ ಗಂಡನ ಮರಣದ ನಂತರ
ನನ್ನ ಹೆಸರಿಗೆ ಖಾತಾ ವರ್ಗಾವಣೆ ಮಾಡಿಸಿಕೊಂಡಿರುತ್ತೇನೆ. ಅಂದಿನಿಂದ ಇಂದಿನವರಗೆ ನಾನೇ ಸಾಗುವಳಿ
ಮಾಡುತ್ತಾ ಬಂದಿರುತ್ತೇನೆ. ಸದರಿ ನನ್ನ ಜಮೀನು ಅಕ್ಕಪಕ್ಕದಲ್ಲಿರುವ ನನ್ನ ಗಂಡನ ತಂದೆಯ ಎರಡನೆಯ ಅಣ್ಣಂದಿರ
ಮಕ್ಕಳು ಮತ್ತು ಮಕ್ಕಳ ಹೆಂಡಂದಿರು, ಅವರ ಮಕ್ಕಳಾದ 1] ಇಂದ್ರೆಪ್ಪ ತಂದೆ ಹನುಮಪ್ಪ 50 ವರ್ಷ 2] ಹುಲಿಗೆಮ್ಮ
ಗಂಡ ಪರಸಪ್ಪ 45 ವರ್ಷ, 3] ಹನುಮೇಶ ತಂದೆ ದಿ: ಪರಸಪ್ಪ 20 ವರ್ಷ 4] ಯಮನೂರ ತಂದೆ ಈರಪ್ಪ 35 ವರ್ಷ
5] ಫಕೀರಪ್ಪ ತಂದೆ ದಿ: ಸಣ್ಣೆಪ್ಪ 55 ವರ್ಷ 6] ದುರುಗಮ್ಮ ಗಂಡ ಫಕೀರಪ್ಪ 50 ವರ್ಷ 7] ಹನುಮೇಶ ತಂದೆ
ಇಂದ್ರೆಪ್ಪ 25 ವರ್ಷ ಇವರೆಲ್ಲರೂ ಸೇರಿ ನನ್ನ ಪಾಲಿನ ಜಮೀನನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು
ಆಕ್ರಮವಾಗಿ ಹೊತ್ತುವರಿ ಮಾಡಿಕೊಂಡಿದ್ದರಿಂದ ನಾನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಲಯದಲ್ಲಿ ದಾವೆ
ನಂ: 276/2014 ರಲ್ಲಿ ದೂರು ಸಲ್ಲಿಸಿದ್ದೆನು. ಮಾನ್ಯ ನ್ಯಾಯಲಯವು ನನ್ನ ಪರವಾಗಿ ಮಾಲಿಕಳು ಎಂದು
ಮತ್ತು ಪ್ರತಿಬಂದಕಾಜ್ಞೆ ಆಗಿ ಡಿಕ್ರಿ ಆಗಿರುತ್ತದೆ. ಆದರೂ ಸಹ ಸದರಿಯವರು ದಿನಾಂಕ: 12-01-2016
ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಸದರಿ ನನ್ನ 1 ಎಕರೆ 20 ಗುಂಟೆ ಜಮೀನಿನನಲ್ಲಿ ಅತೀಕ್ರಮ
ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿದ್ದನ್ನು ಕಂಡ ಪಕ್ಕದ ಜಮೀನಿನವರಾದ ಫಕೀರಪ್ಪ ತಂದೆ ಬೇನಾಳಪ್ಪ
75 ವರ್ಷ ಸಾ: ಮುಕ್ಕುಂಪಿ ಎಂಬುವರು ತಿಳಿಸಿದ್ದರಿಂದ ನಾನು ಮುಕ್ಕುಂಪಿ ಗ್ರಾಮದ ಹಿರಿಯರಾದ 1] ಯಮನಪ್ಪ
ತಂದೆ ಫಕೀರಪ್ಪ 80 ವರ್ಷ, 2] ಸಣ್ಣ ಹನುಮಂತ 75 ವರ್ಷ ಇವರುಗಳನ್ನು ಕರೆದುಕೊಂಡು ಸಾಯಂಕಾಲ 5:00
ಗಂಟೆಯ ಸುಮಾರಿಗೆ ಜಮೀನಿನ ಹತ್ತಿರ ಹೋಗಿ ಅವರಿಗೆ ಕಾನೂನು ಬಾಹಿರ ಕೆಲಸ ಮಾಡಬೇಡಿರೆಂದು ವಿನಂತಿಸಿಕೊಂಡರೂ
ಅವರು ಹಿರಿಯವರ ಮಾತಿಗೆ ಬೆಲೆ ಕೊಡದೇ ನನಗೆ “ ಅದನ್ನೇನು ಕೇಳಲು ಬಂದಿಯಾ ಬೊಸುಡಿ ಸೂಳೆ ಈ ಜಮೀನು
ನಮ್ಮ ಹೆಸರಿನಲ್ಲಿದೆ ” ಅಂತಾ ಅವಾಚ್ಯವಾಗಿ ಬೈದರು. ಆಗ ಅಲ್ಲಿದ್ದ ಹಿರಿಯವರು ಅವರಿಗೆ ಬುದ್ದಿವಾದ
ಹೇಳಿದಾಗ ಅವರಿಗೂ ನಿವೇನು ಹೇಳಲು ಬರುತ್ತೀರಿ ಅಂತಾ ಮಾತನಾಡಿ “ ನಾವು ಯಾವುದೇ ಕಾನೂನನ್ನು ನಂಬುವದಿಲ್ಲಾ
ನಿವೇನಾದರೂ ಅಡ್ಡ ಬಂದರೆ ಜೀವ ಸಹಿತ ಬಿಡುವದಿಲ್ಲಾ ” ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ
ಈ ಬಗ್ಗೆ ಹಿರಿಯರು ದೂರು ಕೊಡಲು ತಿಳಿಸಿ ಅಲ್ಲಿಂದ ಹೊರಟು ಹೋದರು. ಸದರಿ ವಿಷಯವನ್ನು ಮಲಕನಮರಡಿಯಲ್ಲಿರುವ
ನನ್ನ ಅಕ್ಕಳ ಗಂಡನಾದ ತಿಮ್ಮಣ್ಣ ತಂದೆ ಹನುಮಂತಪ್ಪ 65 ವರ್ಷ ಇವರಿಗೆ ತಿಳಿಸಿ ಅವರೊಂದಿಗೆ ಚೆರ್ಚಿಸಿ
ಈ ದಿವಸ ತಡವಾಗಿ ಈ ದೂರನ್ನು ಸಲ್ಲಿಸಿರುತ್ತೇನೆ. ಆದ್ದರಿಂದ ಸದರಿ ನನ್ನ ಜಮೀನಿನಲ್ಲಿ ( ಮಾನ್ಯ ನ್ಯಾಯಲಯದಿಂದ
ಡಿಕ್ರಿ ಆದೇಶವಾದ ಜಮೀನ ) ಅತೀಕ್ರಮ ಪ್ರವೇಶ ಮಾಡಿ ದೌರ್ಜನ್ಯದಿಂದ ಸಾಗುವಳಿ ಮಾಡಿದ್ದನ್ನು ಕೇಳಿದ್ದಕ್ಕೆ
ನನಗೆ ಅವಾಚ್ಯವಾಗಿ ಬೈದು ನಂತರ ನನಗೆ ಮತ್ತು ಹಿರಿಯವರಿಗೆ ಜೀವದ ಬೆದರಿಕೆ ಹಾಕಿದ 7 ಜನರ ವಿರುದ್ದ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment