Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, January 16, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.  12/2016 ಕಲಂ. 279, 337, 338 ಐ.ಪಿ.ಸಿ:.
 ದಿನಾಂಕ: 15-01-2016 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗವಿಸಿದ್ದಯ್ಯ ತಂದೆ ಕೊಟ್ರಯ್ಯ ಹಿರೇಮಠ, 35 ವರ್ಷ ಜಾತಿ: ಜಂಗಮ, ಉ: ಪಾನ್ ಶಾಫ್ ಸಾ: ಹಂದ್ರಾಳ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 15-01-2016 ರಂದು ಬೆಳಿಗ್ಗೆ ಸಂಕ್ರಾಂತಿ ಹಬ್ಬದ ನಿಮಿತ್ಯವಾಗಿ ನದಿ ಸ್ನಾನಕ್ಕೆಂದು ನಾನು ಮತ್ತು ನಮ್ಮ ಗ್ರಾಮದ ಶಂಕ್ರಪ್ಪ ಇಬ್ಬರೂ ಕೂಡಿ ಅವರ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-37/ವಿ-3652 ನೇದ್ದರಲ್ಲಿ ಗಡ್ಡಿಮಠಕ್ಕೆ ಬಂದು ಅಲ್ಲಿ ದೇವರ ದರ್ಶನ ಮಾಡಿಕೊಂಡು ಆಂಜನೇಯ ಬೆಟ್ಟಕ್ಕೆ ಬಂದಿದ್ದೆವು. ನಮ್ಮಂತೆ ನಮ್ಮ ಗ್ರಾಮದ ಮಹಾಂತೇಶ ಹಾಗೂ ಮಹಾಂತೇಶ ಲಕ್ಕುಂಡಿ 35 ವರ್ಷ ಇವರು ಸಹ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ ನಂ: ಕೆಎ-16/ಇ.ಬಿ-7830 ನೇದ್ದರಲ್ಲಿ ನಮ್ಮೊಂದಿಗೆ ಬಂದಿದ್ದು ಎಲ್ಲರೂ ಸೇರಿ ನದಿ ಸ್ನಾನ ಮಾಡಿ ದೇವರ ದರ್ಶನ ಮಾಡಿಕೊಂಡು ಮಧ್ಯಾಹ್ನ ಆಂಜನೇಯ ಬೆಟ್ಟವನ್ನು ಹತ್ತಿ ಇಳಿದು ಎಲ್ಲರೂ ಸೇರಿ ವಾಪಸ್ಸು ಸಣಾಪೂರ ಮುಖಾಂತರ ನಮ್ಮ ಗ್ರಾಮಕ್ಕೆ ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಹಿಂದೆ ಮುಂದೆ ಹೋಗುತ್ತಿರುವಾಗ ಸಂಜೆ 6:45 ಗಂಟೆಯ ಸುಮಾರಿಗೆ ಸಣಾಪೂರ ಸೀಮಾ ಗಂಗಾವತಿ-ಸಣಾಪೂರ ಮುಖ್ಯ ರಸ್ತೆಯಲ್ಲಿ ಕಲ್ಲಿನ ಸೇತುವೆ ದಾಟಿದ ನಂತರ ರಸ್ತೆಯ ತಿರುವಿನಲ್ಲಿ ಸಣಾಪೂರ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂಭಾಗದಲ್ಲಿ ನಾನು ನಡೆಯಿಸಿಕೊಂಡು ಹೊರಟಿದ್ದ ಮೋಟಾರ ಸೈಕಲಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ ನಂತರ ನನ್ನ ಹಿಂಭಾಗದಲ್ಲಿ ಬರುತ್ತಿದ್ದ ಮಹಾಂತೇಶ ಹೂಗಾರ ಈತನ ಮೋಟಾರ ಸೈಕಲಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದರಿಂದ ನಾವು ನಾಲ್ಕು ಜನರು ಪುಟಿದು ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದಾಗಿ ನನಗೆ ಬಲಗೈ ಮುಂಗೈ ಹತ್ತಿರ, ಬೆರಳಿಗೆ ಗಾಯವಾಗಿದ್ದು ನನ್ನ ಹಿಂಬಾಗ ಕುಳಿತುಕೊಂಡಿದ್ದ ಶಂಕ್ರಪ್ಪ ಈತನಿಗೆ ಎಡಗಾಲು ಹಿಂಬಡದ ಮೇಲೆ ಎಲಬು ಮುರಿದು ತೀವ್ರ ಒಳಪೆಟ್ಟಾಗಿ ಬಲಗೈ ಅಂಗೈಗೆ ಗಾಯವಾಗಿದ್ದು, ಹಿಂಭಾಗದಲ್ಲಿ ಬರುತ್ತಿದ್ದ ಮಹಾಂತೇಶ ಈತನಿಗೆ ಎಡಗಾಲು ತೊಡೆಯ ಹತ್ತಿರ ತೀವ್ರ ಒಳಪೆಟ್ಟಾಗಿ ಹಣೆಯ ಹತ್ತಿರ ಎಡಕಪಾಳಕ್ಕೆ ರಕ್ತ ಗಾಯವಾಗಿದ್ದು ಆತನ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಮಹಾಂತೇಶ ಲಕ್ಕುಂಡಿ ಈತನಿಗೆ ಎಡಗಾಲು ಮೊಣಕಾಲಿಗೆ, ಬಲಗಡೆ ಸೊಂಟಕ್ಕೆ, ಒಳಪೆಟ್ಟಾಗಿ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇದೆ. ನಂತರ ನಮಗೆ ಅಪಘಾತ ಮಾಡಿ ಕಾರ ನಂ: ನೋಡಲು ಕೆ.ಎ-36/ಎನ್-4427 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲು ರಾಚಪ್ಪ ತಂದೆ ಸಿದ್ರಾಮಪ್ಪ ಮಸ್ಕಿ 41 ವರ್ಷ ಸಾ: ಸಿಂಧನೂರ ಅಂತಾ ತಿಳಿಸಿದನು. ನಂತರ ಗಾಯಗೊಂಡ ಎಲ್ಲರೂ ಅಲ್ಲಿಂದ ಯಾವುದೋ ಜೀಪನಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಂತರ ತೀವ್ರವಾಗಿ ಗಾಯಗೊಂಡ ಶಂಕ್ರಪ್ಪ ಮತ್ತು ಮಹಾಂತೇಶ ಹೂಗಾರ ಇವರನ್ನು ಹೆಚ್ಚಿನ ಚಿಕಿತ್ಸೆ ಕುರಿತು ಇಲಕಲಗೆ ಕಳುಹಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿ ನೀಡಿರುತ್ತೇನೆ. ಅಂತಾ ಮುಂತಾಗಿ ಇದ್ದ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ.  07/2016 ಕಲಂ. 353, 323, 504  ಐ.ಪಿ.ಸಿ:
ದಿನಾಂಕ 15-01-2016 ರಂದು ಮಕರ ಸಂಕ್ರಾಂತಿ ಇದ್ದುದರಿಂದ ನಗರ ಗಡ್ಡಿಮಠದ ಹತ್ತಿರ ತುಂಗಭದ್ರ ನದಿಗೆ ಸ್ನಾನಕ್ಕೆಂದು ಸಾವಿರಾರು ಜನರ ಬರುವದರಿಂದ ಅಲ್ಲಿ ಫಿರ್ಯಾದಿಗೆ ಮತ್ತು ಮಹ್ಮದ ರಫೀ ಸಿ.ಪಿಸಿ.96 ಮತ್ತು ಪರುಶುರಾಮ ಸಿ.ಪಿ.ಸಿ.388 ರವರಿಗೆ ಬಂದೊಬಸ್ತ ಕರ್ತವ್ಯಕ್ಕೆ ನೇಮಕ ಮಾಡಿದ್ದು ಫಿರ್ಯಾದಿ ಮತ್ತು ಮಹ್ಮದರಫೀ ಪಿ.ಸಿ. 96 ಹಾಗೂ ಪರುಶುರಾಮ ಸಿ.ಪಿ.ಸಿ.388 ರವರು ನಗರಗಡ್ಡಿ ಮಠದ ಹತ್ತಿರ ವಾಹನ ಪಾಕರ್ಿಂಗ ಮಾಡಲು ಕಮಾನಿನ ಹತ್ತಿರ  ಮೂರುಜನರಿಗೆ ನೇಮಕ ಮಾಡಿದಂತೆ ಮೂರುಜನರು ಅಲ್ಲಿ ಎಲ್ಲಾ ವಾಹನಗಳನ್ನು ಅಲ್ಲಿಯೇ ಪಾಕರ್ಿಂಗ ಮಾಡಿಸುತ್ತಾ ಸರಕಾರಿ ಕರ್ತವ್ಯದಲ್ಲಿ ಇರುವಾಗ ಮದ್ಯಾನ 01-00 ಗಂಟೆ ಸುಮಾರಿಗೆ ಬಸವರಾಜ ತಂ/ ಬಸಪ್ಪ ಅಂಗಡಿ 42 ವರ್ಷ ಸಾ ಅಗಳಿಕೇರಾ ಇತನು ಎಲ್ಲರಂತೆ ಅಲ್ಲಿಗೆ ತನ್ನ ಮೋ.ಸೈ.ನ್ನು ತಂದಿದ್ದು ಅದನ್ನು ಒಳಗೆ ತೆಗೆದುಕೊಂಡು ಹೋಗುತ್ತೇನೆ ಅಂತಾ ಹೇಳಿದಾಗ ಒಳಗೆ ಯಾವುದೇ ವಾಹನಗಳನ್ನು ಬಿಡುವದಿಲ್ಲಾ ಅಲ್ಲಿ ವಾಹನ ನಿಲ್ಲಿಸಲು ಸ್ಥಳ ಇರುವದಿಲ್ಲಾ ಅಂತಾ ಹೇಳಿ ಇಲ್ಲೇ ವಾಹನ ಪಾಕರ್ಿಂಗ್ ಮಾಡು ಅಂತಾ ಹೇಳಿದ್ದಕ್ಕೆ ನೀವು ಯಾರು ನನ್ನನ್ನು ತಡೆಯುವದಕ್ಕೆ ನಾನು ಲೋಕಲ್ ಇದ್ದೇನೆ ನೀನು ನನಗೆ ಬಿಡುವದಿಲ್ಲಾ ಬೋಳಿ ಮಗನೆ ನೀನು ಅಗಳಿಕೇರಾಗೆ ಬಾ ನೋಡಿಕೊಳ್ಳುತ್ತೇನೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಎಳೆದಾಡಿ ಹೊಡಿಬಡಿ ಮಾಡುತ್ತಿರುವಾಗ ಅಲ್ಲೆ ಇದ್ದ ಪಿಸಿ.96 ಮತ್ತು ಪಿ.ಸಿ.388 ರವರು ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಸಹ ಅವಾಚ್ಯವಾಗಿ ಬೈದಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008