Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, January 24, 2016

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 21/2016 ಕಲಂ: 323, 504 ಐ.ಪಿ.ಸಿ. ಮತ್ತು  3(1)(10) ಎಸ್.ಸಿ./ಎಸ್.ಟಿ. ಕಾಯ್ದೆ 1989:.
ದಿನಾಂಕ 22-01-2016 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರು ಬೆಂಡರವಾಡಿ ಮುಖಾಂತರ ಹೋಗುತ್ತಿರುವಾಗ ಆರೋಪಿ ಅಬ್ಬಾಸ ಅಲಿ ಇವರ ಮನೆಯ ಹತ್ತಿರ ಕಾರ ಚಾಲಕನು ಕಾರನ್ನು ಏಕಾಏಕಿಯಾಗಿ ಹಿಂದಕ್ಕೆ ತೆಗೆದುಕೊಂಡಿದ್ದರಿಂದ ಹಿಂದುಗಡೆಗೆ ಇದ್ದ ರಮೇಶ @ ರಾಮ ಇತನ  ಮೋಟಾರ ಸೈಕಲ್ ಗೆ ಕಾರ ಟಚ್ ಆಗಿದ್ದು, ಆಗ ಕಾರ ಚಾಲಕ ಮತ್ತು ರಮೇಶ ಇವರು ಬಾಯಿ ಮಾಡುತ್ತಿರುವಾಗ ಅಲ್ಲಿಗೆ ಅಬ್ಬಾಸ ಅಲಿ ಇತನು ಬಂದವನೆ ರಮೇಶನ ಕಪಾಳಕ್ಕೆ ಕೈಯಿಂದ ಬಡಿದಿದ್ದರಿಂದ ರಮೇಶನು ಕೆಳಗೆ ಬಿದ್ದಿದ್ದು, ಆಗ ಫಿರ್ಯಾದಿಯು ರಮೇಶನಿಗೆ ಎಬ್ಬಿಸಿ ರಮೇಶ ಮತ್ತು ಅಬ್ಬಾಸ ಅಲಿಗೆ  ಜಗಳ ಆಡಬೇಡಿರೆಂದು ಹೇಳಿದ್ದಕ್ಕೆ ಅಬ್ಬಾಸ ಅಲಿಯು ಫಿರ್ಯಾದಿಯು ನಾಯಕ ಜನಾಂಗದವನು ಅಂತಾ ಗೊತ್ತಿದ್ದರು ಸಹ ಸದರಿಯವರಿಗೆ ಲೇ ನಾಯಕ ಸೂಳೇಮಗನೆ ನಿಮ್ಮದು ಬಹಳ ಆಗಿದೆ ಅಂತಾ ಜಾತಿ ನಿಂದನೆ ಮಾಡಿ ಕೈಯಿಂದ ಬೆನ್ನಿಗೆ ಗುದ್ದಿ ಹೊಡಿ-ಬಡಿ ಮಾಡಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 24/2016 ಕಲಂ: 143, 147, 148, 324, 504, 506 ಸಹಿತ 149 ಐ.ಪಿ.ಸಿ. ಮತ್ತು  3(1)(10) ಎಸ್.ಸಿ./ಎಸ್.ಟಿ. ಕಾಯ್ದೆ 1989:.
ನಾನು ಶರಣಬಸವೇಶ್ವರ ಕ್ಯಾಂಪಿನ ನಿವಾಸಿ ಇದ್ದು, ಆಟೋ ನಡೆಯಿಸಿಕೊಂಡು ಉಪಜೀವನ ಮಾಡುತ್ತೇನೆ. ಕಳೆದ ಟಿಪ್ಪು ಸುಲ್ತಾನ್ ಜಯಂತಿ ಮತ್ತು ಈದ್ ಮಿಲಾದ ಹಬ್ಬದ ಸಮಯದಲ್ಲಿ ನಮ್ಮ ಕ್ಯಾಂಪಿನ ಮುಸ್ಲೀಂ ಲತೀಫ್ ಹಾಗೂ ಆತನ ಸಂಗಡಿಗರು ನಮ್ಮ ಕ್ಯಾಂಪ್ ನಲ್ಲಿ ಝಂಡಾಗಳನ್ನು ಕಟ್ಟುವ ವಿಚಾರದಲ್ಲಿ ನನ್ನೊಂದಿಗೆ ಜಗಳ ಮಾಡಿಕೊಂಡು ದ್ವೇಷ ಸಾಧಿಸುತ್ತಿದ್ದರು. ನಿನ್ನೆ ದಿನಾಂಕ:-22-01-2016 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನಾನು ನನ್ನ ಮನೆಯ ಹತ್ತಿರ ಇದ್ದಾಗ (1) ಲತೀಫ್ (2) ಕರೀಂಸಾಬ ತಂದೆ ಸಿದ್ದಾಂ (3) ಹುಸೇನ್ ಪೀರ್ ತಂದೆ ಸದ್ದಾಂ (4) ಮುಕ್ತಾ (5) ರಾಜಾ ಇವರುಗಳು ಕೂಡಿಕೊಂಡು ಮನೆಯ ಹತ್ತಿರ ಬಂದಿದ್ದು, ಅವರಲ್ಲಿ ಕರೀಂ ಸಾಬನು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಬಂದಿದ್ದು, ನನಗೆ “ ಲೇ ನಾಯಕ ಸೂಳೇ ಮಗನೇ ಊರಲ್ಲಿ ನಿನ್ನ ತಿಂಡಿ ಜಾಸ್ತಿಯಾಗಿದೆ ಮಗನೇ, ನಾವು ಬ್ಯಾನರಗಳನ್ನು ಕಟ್ಟಿದಾಗ ನೀನು ಅಡ್ಡಿ ಮಾಡುತ್ತೀಯೇನಲೇ ಇವತ್ತು ನಿನ್ನನ್ನು ಉಳಿಸುವುದಿಲ್ಲಾ ” ಅಂತಾ ಜಾತಿ ಎತ್ತಿ ಬೈದು ಕರೀಂ ಸಾಬನು ರಾಡನಿಂದ ನನ್ನ ಎಡ ಗಣ್ಣಿನ ಮೇಲೆ ಹುಬ್ಬಿಗೆ ಹೊಡದು ರಕ್ತಗಾಯಗೊಳಿಸಿದನು.  ಹಾಗೂ ಉಳಿದವರೆಲ್ಲರೂ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿ ನೆಲಕ್ಕೆ ಹಾಕಿ ಎಳೆದಾಡಿ ಕಾಲಿನಿಂದ ಒದ್ದರು.  ಕೈಗಳಿಂದ ಹೊಟ್ಟೆಗೆ ಚೂರಿದರು.  ಆಗ ದುರುಗೇಶ ತಂದೆ ತಿಪ್ಪಣ್ಣ  ವಯಸ್ಸು 23 ವರ್ಷ, ಜಾತಿ: ಮಾದಿಗ ಉ: ಆಟೋ ಚಾಲಕ ಸಾ: ಶರಣಬಸವೇಶ್ವರ ಕ್ಯಾಂಪ್ ಹಾಗೂ ಶಿವು ತಂದೆ ಹನುಮಂತಪ್ಪ, 25 ವರ್ಷ, ಕನಕಪ್ಪ ತಂದೆ ಮಲ್ಲಪ್ಪ 27 ವರ್ಷ ಇವರುಗಳು  ಬಿಡಿಸಲು ಬಂದರು.  ನಂತರ ನಾನು ಅಲ್ಲಿಂದ ಕೂಡಲೇ ಅಲ್ಲಿಂದ ಪೊಲೀಸ್ ಠಾಣೆಗೆ ಬಂದೆನು.  ನನಗೆ ಠಾಣೆಯಿಂದ ಗಂಗಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದರು.  ನಾನು ಚಿಕಿತ್ಸೆ ಪಡೆದೆನು.  ಆದರೆ ಜಗಳ ಬಿಡಿಸಿದವರೊಂದಿಗೆ ಕ್ಯಾಂಪನಲ್ಲಿ ಜಗಳ ಮುಂದುವರೆದಿದೆ ಅಂತಾ ವಿಷಯ ತಿಳಿದು ವಾಪಸ್ ನಾನು ಕ್ಯಾಂಪಗೆ ಹೋದಾಗ ನಮ್ಮ ಮನೆಯ ಹತ್ತಿರ ಇರುವ ಮಾರುತೆಪ್ಪನ ಹೋಟಲ್ ಹತ್ತಿರ ರಾತ್ರಿ 9:30 ಗಂಟೆಯ ಸುಮಾರಿಗೆ  ಮೇಲ್ಕಂಡ ಲತೀಫ್ ಹಾಗೂ 4 ಜನರು ಮತ್ತು ಅವರೊಂದಿಗೆ ಮಹಿಬೂಬ ತಂದೆ ಕುರುಗೋಡು ಖಾಜಾಸಾಬ ಇವನೂ ಸಹ ಕೂಡಿಕೊಂಡು ಎಲ್ಲರೂ ಸೇರಿ ನನ್ನ ಜಗಳ ಬಿಡಿಸಿದ್ದ ದುರುಗೇಶನೊಂದಿಗೆ ಜಗಳ ಮಾಡುತ್ತಾ ಅವನಿಗೆ ಕೈಗಳಿಂದ ಹೊಡಿ-ಬಡಿ ಮಾಡುತ್ತಾ ಕಾಲಿನಿಂದ ಒದೆಯುತ್ತಿದ್ದರು. ಲತೀಫನು ಕಟ್ಟಿಗೆಯಿಂದ ದುರುಗೇಶನ ತಲೆಗೆ ಮತ್ತು ಎಡಗಾಲ ತೊಡೆಗೆ ಹೊಡೆದನು.  ಇದರಿಂದ ತಲೆಗೆ ರಕ್ತಗಾಯವಾಗಿ ತೊಡಗೆ ಒಳಪೆಟ್ಟಾಯಿತು.  ಆಗ ನಾನು, ಶಿವು, ಕನಕಪ್ಪ ಮತ್ತು ಅಂಬಮ್ಮ ತಂದೆ ನೀಲಪ್ಪ  ಇವರುಗಳು ಕೂಡಿ ಬಿಡಿಸಿಕೊಂಡೆವು.  ನಂತರ ಅವರು ನಮ್ಮೆಲ್ಲರಿಗೆ “ ಲೇ ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲಾ, ಮುಗಿಸಿಬಿಡುತ್ತೇವೆ ” ಅಂತಾ ಬೈದು ಬೆದರಿಕೆ ಹಾಕಿದರು. ನಂತರ ದುರುಗೇಶನನ್ನು ಶಿವು ಈತನ ಆಟೋದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಲಾಯಿತು. ನಂತರ ನಾವುಗಳು ಈ ಬಗ್ಗೆ ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 11/2016 ಕಲಂ. 448, 354, 354(ಬಿ), 504, 341, 323, 506 ಸಹಿತ 149 ಐ.ಪಿ.ಸಿ:.  

ದಿ:23-01-2016 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿ ದಾರಳು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:22.01.2016 ರಂದು ರಾತ್ರಿ ಡೇವಿಡ್ ಈತನು ನಮ್ಮ ಮನೆಗೆ ಊಟಕ್ಕೆ ಬರುತ್ತೇನೆಂದು ಹೇಳಿದ್ದರಿಂದ ಮನೆಯಲ್ಲಿ ನಾನು ಮತ್ತು ನನ್ನ ತಂದೆ ತಾಯಿ ಕಾಯುತ್ತಿದ್ದಾಗ, ಡೇವಿಡ್ ಸ್ವಲ್ಪ ತಡವಾಗಿ ಬಂದು ನಮ್ಮ ಮನೆಯಲ್ಲಿ ರಾತ್ರಿ 10.30 ಗಂಟೆಯ ಸುಮಾರಿಗೆ ರೊಟ್ಟಿ ಊಟ ಮಾಡುತ್ತಿರುವಾಗ ಏಕಾಏಕಿ ನಮ್ಮ ಮನೆಯಲ್ಲಿ ನಮ್ಮೂರಿನ ಪೀರೂ ಹ್ಯಾಟಿ, ಕುಮಾರ ಹಾಗೂ ಕೃಷ್ಣನಾಯ್ಕ ಬಂದು ನನಗೆ ಲೇ ಸೂಳೇಮನೆಯಲ್ಲಿ ಯಾವ ಮಿಂಡನ ಇಟ್ಟಕೊಂಡಿಲೇ ಬೋಸುಡಿ ಎಂದು ಬೈದು ಆತನಿಗೆ ಮತ್ತು ನನಗೆ ಒಮ್ಮೇಲೆ ಮನೆಯಿಂದ ಹೊರಗಡೆ ದರದರನೇ ಎಳೆದುಕೊಂಡು ಬಂದು ನಮ್ಮೂರಿನ ಶ್ರೀ ದುರುಗಮ್ಮ ಗುಡಿ ಹತ್ತಿರ ಕರೆದುಕೊಂಡು ಬಂದು ಎಳೆದಾಡಿ ನಮಗೆ ಅವಮಾನ ಮಾಡಿ ಗುಡಿಯ ಕಂಬಕ್ಕೆ ಹಗ್ಗದಿಂದ ಕಟ್ಟುವಾಗ ನಾವು ಅವರಿಗೆ ಏನು ಕೆಟ್ಟ ಕೆಲಸ ಮಾಡಿವಿ ಎಂದು ನಮ್ಮ ಮೇಲೆ ಈ ರೀತಿ ಯಾಕೇ ದೌರ್ಜನ್ಯ ಮಾಡುತ್ತೀರಿ ಎಂದು ಕೇಳಿದಕ್ಕೆ ಅವರು ತಮ್ಮ ಕೈಗಳಿಂದ ಹಲ್ಲೆ ಮಾಡಿ, ನನ್ನ ಮೈಮೇಲಿನ ನೈಟಿ ಹಿಡಿದು ಎಳೆದಾಡಿ ಒಳಗಡೆ ಏನು ಹಾಕಿಕೊಂಡಿಯಾ ತೆಗೆ ಅಂತಾ ಒತ್ತಾಯಿಸಿ ಅವಮಾನ ಮಾಡುವಾಗ ನಾವು ಕಾಪಾಡಿರಿ ಎಂದು ಚೀರಾಡುವುದನ್ನು ಕೇಳಿ ಓಣಿಯ ರತ್ನಾನಾಯ್ಕ, ಪೀರೂ ಪೂಜಾರಿ, ರೂಪಚಂದ, ಮಂಜುನಾಥ ರಾಠೋಡ, ಕುಬೇರ, ಪುತ್ರ, ಶಂಕರನಾಯ್ಕ ಗೌಡ್ರ, ಟಿಕ್ಯಾನಾಯ್ಕ, ಹಾಗೂ ಇತರೆ ಗಂಡಸರು ಬಂದು ಅವರು ನನಗೆ ಕಾಪಾಡದೇ ಈ ಸೂಳೇಯದು ತಾಂಡಾದಲ್ಲಿ ಜಾಸ್ತಿ ಆಗಿದೇ ಎಂದು ಬೈದು ಅವರು ಕೂಡ ತಮ್ಮ ಕೈಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದು ಅಲ್ಲದೇ ಮೈಮೇಲೆ ನೀರು ಹಾಕಿ ನೀವಿಬ್ಬರೂ ಇಂತಾ ನೀಚ ಕೆಲಸ ಮಾಡಬೇಡಿರಿ ಎಂದು ಬಾಯಿಗೆ ಬಂದಂತೆ ಹೊಲಸು ಮಾತುಗಳಿಂದ ಬೈಯ್ಯುವಾಗ ನಮ್ಮೂರಿನ ಗೋಪಿನಾಯ್ಕ, ಮಂಜುನಾಥ ಮೆಕಾನಿಕ್, ನಮ್ಮ ತಾಯಿ ರಮಣಾಬಾಯಿ ಮತ್ತು ಇತರರು ಬಂದು ನೋಡಿ ನಮಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ನಮ್ಮನ್ನು ರಕ್ಷಿಸಿರುತ್ತಾರೆ. ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ದೌರ್ಜನ್ಯ ಮಾಡಿದವರೆಲ್ಲರೂ ನಡೆದ ವಿಷಯ ಪೊಲೀಸರ ಮುಂದೆ ಹೇಳಿದರೆ ನಿಮ್ಮಿಬ್ಬರನ್ನು ಹೊಡೆದು ಸಾಯಿಸುತ್ತೇವೆ ಎಂದು ಪ್ರಾಣದ ಬೆದರಿಕೆ ಹಾಕಿ ಹೋದರು. ಗುಡಿಯ ಹತ್ತಿರ ರತ್ನಾನಾಯ್ಕ ಇತನ ಸಂಗಡ ಬಂದಿದ್ದ ಉಳಿದ ಇತರರನ್ನು ನೋಡಿದಲ್ಲಿ ನಾನು ಗುರುತಿಸುತ್ತೇನೆ. ಕಾರಣ ಕುಣಿಕೇರಿ ತಾಂಡಾದ ಪೀರೂ ಹ್ಯಾಟಿ, ಕುಮಾರ, ಕೃಷ್ಣನಾಯ್ಕ, ರತ್ನಾನಾಯ್ಕ, ಪೀರೂ ಪೂಜಾರಿ, ರೂಪಚಂದ, ಮಂಜುನಾಥ ರಾಠೋಡ, ಕುಬೇರ, ಪುತ್ರ, ಶಂಕರನಾಯ್ಕ ಗೌಡ್ರ, ಟಿಕ್ಯಾನಾಯ್ಕ, ಹಾಗೂ ಇತರೆ ಗಂಡಸರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008