1) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 06/2016 ಕಲಂ: 4(1), 4(1A) 21 ಕರ್ನಾಟಕ
ಮೈನರ ಮಿನರಲ್ ಕನ್ಸಿಸ್ಟೆಂಟ ರೂಲ್ 1994 ಮತ್ತು [ಮೈನ್ಸ್
ಮತ್ತು ಮಿನೆರಲ್ಸ ರೆಗ್ಯೂಲೆಶನ ಆಪ್ ಡೆವಲಪ್ ಮೆಂಟ್ ] ಕಾಯ್ದೆ 1957 ಹಾಗೂ
379, 420 ಐ.ಪಿ.ಸಿ ಹಾಗೂ 15 ಪರಿಸರ ಸಂರಕ್ಷಣ ಕಾಯ್ದೆ ಮತ್ತು 43, 44 ಕೆ.ಎಂ.ಎಂ. ರೂಲ್ಸ
ದಿನಾಂಕ: 22-01-2016 ರಂದು ಬೆಳಗಿನ ಜಾವ
2-30 ಗಂಟೆಯ ಸುಮಾರಿಗೆ ಸಿ.ಪಿ.ಐ ಕುಷ್ಟಗಿ ವೃತ್ತರವರು ಹನಮಸಾಗರ ಠಾಣಾ ವ್ಯಾಪ್ತಿಯ ಮಿಯ್ಯಾಪುರ ರಸ್ತೆಯ
ಹತ್ತಿರ ಅನಧೀಕೃತವಾಗಿ ಕಲ್ಲನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಡಿದು ವಿಚಾರಿಸಲು ಸದರಿಯವನು ಬಿಸನಾಳ
ಗ್ರಾಮದ ಮುತ್ತಪ್ಪ ಗೌಂಡಿ ರವರ ಹೊಲದಲ್ಲಿ ಇರುವ ಕಲ್ಲನ್ನು ಕ್ರೇನ್ ಸಹಾಯದಿಂದ ಲೋಡ್ ಮಾಡಿ ಮಾರಾಟ
ಮಾಡಲು ತೆಗೆದುಕೊಂಡು ಬಂದಿದ್ದು, ಹಾಗೂ ಅಲ್ಲಿ ಇನ್ನೂ ಒಂದು ಲಾರಿ ಕಲ್ಲು ಲೋಡ್ ಮಾಡುತ್ತಿದ್ದು,
ಹಾಗೂ ಒಂದು ಕಾರು, ಒಂದು ಮೋಟಾರ್ ಸೈಕಲ್ ಇರುತ್ತವೆ, ಅಂತಾ ಹೇಳಿದ್ದರಿಂದ ಪಂಚರ ಸಮೇತ ಸ್ಥಳಕ್ಕೆ
ಹೋಗಿ ದಾಳಿ ಮಾಡಿ ಎರಡು ಲಾರಿ ನಂ: ಕೆ.ಎ-28/ಎ-4367 ಮತ್ತು ಕೆ.ಎ-25 ಬಿ-2382 ಮತ್ತು ಒಂದು ಕಾರು ನಂ: ಕೆ.ಎ-28/ಝಡ್:
2255 ಒಂದು ಮೋಟಾರ್
ಸೈಕಲ ನಂ: ಕೆ.ಎ-29-ಇ.ಎ-7921 ನೇದ್ದವುಗಳನ್ನು ಹಾಗೂ ಆರೋಪಿಗಳ ಹತ್ತಿರ ಇರುವ 5 ಮೋಬೈಲ್ ಹಾಗೂ ನಗದು
ಹಣ 15000/- ರೂಪಾಯಿಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿ ದಾಳಿ ಪಂಚನಾಮೆ ಹಾಗೂ 5 ಜನ ಆರೋಪಿತರನ್ನು
ಹಾಗೂ ಮುದ್ದೆಮಾಲನ್ನು ತಂದು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣೆ
ಗುನ್ನೆ ನಂ. 08/2016 ಕಲಂ. 420 ಐ.ಪಿ.ಸಿ.
ದಿನಾಂಕ
01-10-2015 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಯಾರೋ ಅಪರಿಚಿತ ವ್ಯಕ್ತಿ ತಾನು ಎಸ್.ಬಿ.ಹೆಚ್. ವ್ಯವಸ್ಥಾಪಕನೆಂದು ಪಿರ್ಯಾದಿದಾರರ ಮೊಬೈಲ
ನಂ 9916285249 ನೇದ್ದಕ್ಕೆ ಪೋನ ಮೂಲಕ ಕರೆ ಮಾಡಿ ನಿಮ್ಮ ಎ.ಟಿ.ಎಂ ಕೋಡ್ ಪರಿಶೀಲಿಸಬೇಕು ಆದ್ದರಿಂದ ನಿಮ್ಮ ಎ.ಟಿ.ಎಂ ಕಾರ್ಡ ನಂಬರ್ ಮತ್ತು ನಿಮ್ಮ ಪಿನ ನಂಬರ್ ತಿಳಿಸಿ ಅಂತಾ ಕೇಳಿದ್ದರಿಂದ ಪಿರ್ಯಾದಿದಾರರು ಆ ವ್ಯಕ್ತಿ ಬ್ಯಾಂಕ
ವ್ಯವಸ್ಥಾಪಕರು ಇರಬಹುದು ಅಂತಾ ತಿಳಿದು ತಮ್ಮ ಎ.ಟಿ.ಎಂ ಕಾರ್ಡ ನಂಬರ್ ಮತ್ತು ನನ್ನ ಪಿನ್ ನಂಬರನ್ನು ತಿಳಿಸಿದ್ದು ಇರುತ್ತದೆ. ಇದಾದ
ಕೆಲವೇ ಕ್ಷಣದಲ್ಲಿ ಪಿರ್ಯಾದಿದಾರರ ಉಳಿತಾಯ ಖಾತೆ ಸಂಖ್ಯೆ 62283460166 ನೇದ್ದರಿಂದ 10000/- ರೂಪಾಯಿಗಳು ಡ್ರಾ ಆಗಿರುತ್ತದೆ. ಯಾರೋ ಅಪರಿಚಿತ ವ್ಯಕ್ತಿಯು ಎಸ್.ಬಿ.ಹೆಚ್. ಬ್ಯಾಂಕಿನ ವ್ಯವಸ್ಥಾಪಕನೆಂದು ಪಿರ್ಯಾದಿದಾರರಿಗೆ ಕರೆ ಮಾಡಿ ಅವರ ಉಳಿತಾಯ ಖಾತೆಯಿಂದ
10,000/- ರೂ.ಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾನೆ ಅಂತಾ ಇದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
0 comments:
Post a Comment