Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 25, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 25/2016 ಕಲಂ: 87 Karnataka Police Act.
ದಿನಾಂಕ:-24-01-2016 ರಂದು ಸಂಜೆ 6:30 ಗಂಟೆಗೆ ಶ್ರೀ ಪ್ರಭಾಕರ. ಎಸ್. ಧರ್ಮಟ್ಟಿ ಸಿ.ಪಿ.ಐ. ಗಂಗಾವತಿ ಗ್ರಾಮೀಣ ವೃತ್ತ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ನಾಲ್ಕು ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 24-01-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಹಾಳ ಸೀಮಾದ ಗುಡ್ಡದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ ನಾನು ಸಿಬ್ಬಂದಿಯವರಾದ ಹೆಚ್.ಸಿ. 29, ಪಿ.ಸಿ. 93, 358, 323, 100, 65, 287 ಹಾಗೂ ಸರಕಾರಿ ಜೀಪ ನಂ ಕೆ.ಎ-37/ ಜಿ-336 ನೇದ್ದರ ಜೀಪ ಚಾಲಕ ಎ.ಪಿ.ಸಿ. ಬಸವರಾಜರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ ಗಂಗಾವತಿಯಿಂದ ಸಂಜೆ 4:00 ಗಂಟೆಗೆ ಹೊರಟೆವು. ಆರ್ಹಾಳ ಗ್ರಾಮದ ಗುಡ್ಡದ ಹತ್ತಿರ ತಲುಪಿ ಜೀಪ ಹಾಗೂ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಗುಡ್ಡದ ಮೇಲೆ ಹೋಗಿ ನೋಡಲಾಗಿ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:45 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 4 ಜನರು ಸಿಕ್ಕಿ ಬಿದ್ದಿದ್ದು, ಉಳಿದವರು ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರನ್ನು ವಿಚಾರಿಸಲು (1) ಅಯ್ಯನಗೌಡ ತಂದೆ ಮಲ್ಲಪ್ಪ ಯತ್ನಟ್ಟಿ, ವಯಸ್ಸು 31 ವರ್ಷ, ಜಾತಿ: ಲಿಂಗಾಯತ ಉ: ಎಲೆಕ್ಟ್ರಿಷಿಯನ್ ಸಾ: ಆರ್ಹಾಳ (2) ವೀರೇಶ ತಂದೆ ಅಂಬ್ರೇಶಪ್ಪ ಕೋರಿ, ವಯಸ್ಸು 40 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಆರ್ಹಾಳ (3) ಇಸ್ಮಾಯಿಲ್ ತಂದೆ ಮುತರ್ುಜಾಸಾಬ, ವಯಸ್ಸು 45 ವರ್ಷ, ಮುಸ್ಲೀಂ ಉ: ಕುರಿ ವ್ಯಾಪಾರ ಸಾ: ಗುಡ್ಡದ ಕ್ಯಾಂಪ್ ತಾ: ಗಂಗಾವತಿ (4) ಶರಣಪ್ಪ ತಂದೆ ವೀರಭದ್ರಪ್ಪ ಹಂಪನಗೌಡ, ವಯಸ್ಸು 45 ವರ್ಷ, ಲಿಂಗಾಯತ ಉ: ವ್ಯವಸಾಯ ಸಾ: ಜಯನಗರ-ಗಂಗಾವತಿ ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 1,750/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಸಿಕ್ಕವರ ಮತ್ತು ಓಡಿ ಹೋದವರಿಗೆ ಸಂಬಂಧಿಸಿದ ಸ್ಥಳದಲ್ಲಿ 8 ಮೋಟಾರ ಸೈಕಲ್ಗಳು ಮತ್ತು ಒಂದು ಕಾರ್ ಸಿಕ್ಕಿದ್ದು ಅವುಗಳನ್ನು ಹಾಜರಿದ್ದ ಪಂಚರ ಸಮಕ್ಷಮ ವಶಕ್ಕೆ ಪಡೆಯಲಾಯಿತು. ಈ ಬಗ್ಗೆ ಸಂಜೆ 4:45 ರಿಂದ 6:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಹಾಗೂ ವಾಹನಗಳೊಂದಿಗೆ ಸಂಜೆ 6:30 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.  
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 22/2016 ಕಲಂ: 448, 354, 323, 504 ಸಹಿತ 34 ಐ.ಪಿ.ಸಿ:.  
ದಿನಾಂಕ 24-01-2016 ರಂದು ಸಂಜೆ 7-30 ಗಂಟೆಗೆ ಫಿರ್ಯಾಧಿದಾರ ಶ್ರೀಮತಿ ಗಂಗಮ್ಮ ನಾರಾಯಣಪುರ ಇವರು ತನ್ನ ಗಂಡ ಹನುಮಂತರಾಯ ಇವರೊಂದಿಗೆ ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 25-11-2015 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ನಾನು ಒಬ್ಬಳೆ ಮನೆಯಲ್ಲಿ ಇರುವುದನ್ನು ನೋಡಿ ನಮ್ಮ ಗ್ರಾಮದ 1] ಗಂಗಾಧರ ತಂದೆ ಅಮರಪ್ಪ ಗೋಡಿ 2] ಮಹೇಶ ತಂದೆ ರಾಮಲಿಂಗಪ್ಪ ಗದ್ದಿ ಇವರು ನಮ್ಮ ಮನಗೆ ಏಕಾ ಏಕಿ ನುಗ್ಗಿ ನನ್ನ ಗಂಡನನ್ನು ಹುಡುಕಾಡಿದರೂ ನನ್ನ ಗಂಡ ಮನೆಯಲ್ಲಿ ಇಲ್ಲ ಅಂತಾ ಅಂದರು ಗಂಗಾಧರ ಇವರು ನನ್ನ ತಲೆಯ ಕೂದಲು ಹಿಡಿದು ನನ್ನನ್ನು ಕೆನ್ನೆಗೆ ಹೊಡೆದನು ಮಹೇಶನು ಕೂಡ ಎಲ್ಲಿ ಬಚ್ಚಿಟ್ಟಿದೀಯಾ ನಿನ್ನ ಗಂಡನನ್ನು ಹೇಳು ಇಲ್ಲದಿದರೇ ನನ್ನನ್ನು ಅಸಹ್ಯವಾಗಿ ಬೈದು ಒಚಿಟಿ ಮಹಿಳೆಯಾದ ನನ್ನನ್ನು ಒಬ್ಬರೂ ಬಡೆದರು. ಕೆಟ್ಟ ಸೂಳೇ ಲಂಗ ಸೂಳೇ ಎಂದು ನನ್ನ ಮಾನ ಮಯರ್ಾದೆಗೆ ಧಕ್ಕೆ ಬರುವ ಹಾಗೆ ನಡೆದುಕೊಂಡರು. ನಾನು ಚೀರಿದರೂ ಕೆಳಿಸಿಕೊಂಡು ಪಕ್ಕದಲ್ಲಿ ಮರೆಗೆ ನಿಂತಂತಹ ಪಾವರ್ೆತೆಮ್ಮ ಗಂಡ ಬೆಟ್ಟಪ್ಪ ನಾರಾಯಣಪುರ, ಪಾವರ್ೆತೆಮ್ಮ ಗಂಡ ಗಂಗಾಧರ ಇವರು ಮನೆ ಒಳಗೆ ಬಂದು ಮಹೇಶ, ಗಂಗಾಧರನ ಪರವಾಗಿ ನನ್ನನ್ನು ಬೈದರು. ಮತ್ತು ಕೂದಲು ಹಿಡಿದು ಎಳೆದಾಡಿದರು. ಕಾರಣ 1] ಗಂಗಾಧರ ತಂದೆ ಅಮರಪ್ಪ ಗೋಡಿ 2] ಮಹೇಶ ತಂದೆ ರಾಮಲಿಂಗಪ್ಪ ಗದ್ದಿ 3] ಪಾವರ್ೆತೆಮ್ಮ ಗಂಡ ಬೆಟ್ಟಪ್ಪ ನಾರಾಯಣಪುರ, ಪಾವರ್ೆತೆಮ್ಮ ಗಂಡ ಗಂಗಾಧರ ಎಲ್ಲರೂ ಸಾ : ಹುಲಿಹೈದರ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಈ ಬಗ್ಗೆ ನಮ್ಮ ಮನೆಯವರಹೊಂದಿಗೆ ಚಚರ್ಿಸಿಕೊಂಡು ಈ ದಿವಸ ತಡವಾಗಿ ಠಾಣೆಗೆ ಖುದ್ದಾಗಿ ಬಂದು  ದೂರ ಕೊಟ್ಟಿರುತ್ತೇನೆ ಅಂತಾ ಕೊಟ್ಟ ಗಣಕಿಕೃತ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.22/2015 ಕಲಂ 448 354 323 504 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 14/2016 ಕಲಂ. 279, 337, 338 ಐ.ಪಿ.ಸಿ:.  
ದಿನಾಂಕ 24-01-2016 ರಂದು ಬನದಹುಣ್ಣುಮೆ ಇರುವದರಿಂದ ಪಿರ್ಯಾದುದಾರರು ಮತ್ತು ದೇವಪ್ಪ ಇಬ್ಬರು ನಡೆದುಕೊಂಡು ಹುಲಗಿಗೆ ನಡೆದುಕೊಂಡು ಹೋಗುತ್ತಿರುವಾಗ ಬೆಳಗಿನ ಜಾವ 05-30 ಸುಮಾರಿಗೆ ಗಂಗಾವತಿ ಹುಲಗಿ ರಸ್ತೆಯ ಮೇಲೆ ಶಿವಪೂರ ಕ್ರಾಸ ಹತ್ತಿರ ನಮ್ಮ ಹಿಂದಿನಿಂದ ಮಹೇಶ ಇವರು ತಮ್ಮ ಮೋ,ಸೈ,ನಂ ಕೆ,ಎ.37/ವಿ.3062 ನೇದ್ದರಲ್ಲಿ ತಮ್ಮ ದೊಡ್ಡಮ್ಮಳಿಗೆ ಮೋ.ಸೈ.ನಲ್ಲಿ ಹಿಂದೆ ಕುಡಿಸಿಕೊಂಡು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ದೇವಪ್ಪ ಇತನಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ದೇವಪ್ಪನಿಗೆ ಮತ್ತು ಮಹೇಶ ಹಾಗೂ ಮೋಸೈ ನಲ್ಲಿ ಹಿಂದೆ ಕುಳಿತಿ್ದ್ದ ಅವರ ದೊಡ್ಡಮ್ಮಳಿಗೆ ತಿವ್ರ ಹಾಗೂ ಸಾದಾ ಸ್ವರೂಪ್ದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4) ನಗರ ಪೊಲೀಸ್ ಠಾಣೆ ಗುನ್ನೆ ನಂ. 09/2016 ಕಲಂ. 153(ಎ), 295(ಎ) ಐ.ಪಿ.ಸಿ:.  

ದಿನಾಂಕ 25-01-2016 ರಂದು ಮಧ್ಯರಾತ್ರಿ 00-30 ಗಂಟೆಗೆ ದೇವೆಂದ್ರಪ್ಪ.ಸಿ.ಪಿ.ಸಿ-120 ಕೊಪ್ಪಳ ನಗರ ಪೊಲೀಸ್ ಠಾಣೆ ಕರ್ನಾಟಕ ರಾಜ್ಯ ಪೊಲೀಸ್ ತರ್ಪೆ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ 24-01-2016 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕೊಪ್ಪಳ ನಗರದ ಮಂಜುನಾಥ ಮುದಗಲ್ ಎಂಬ ವ್ಯಕ್ತಿಯು ತನ್ನ ಫೇಸಬುಕ್ ಅಕೌಂಟ್ ನಲ್ಲಿ ಕೋಮು ಭಾವನೆಗೆ ಧಕ್ಕೆ ಉಂಟಾಗುವಂತಹ ಟಿಪ್ಪು ಸುಲ್ತಾನ್ ಮುಖದ ಭಾವ ಚಿತ್ರವನ್ನು ನಾಯಿಯ ದೇಹದ ತಲೆ ಭಾಗಕ್ಕೆ ಅಂಟಿಸಿ ತನ್ನ ಫೇಸ್ ಬುಕ್ ಪ್ರೊಪೈಲಗೆ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ನಾನು ಹಾಗೂ ಸಿಬ್ಬಂದಿಯವರಾದ ಪಿ.ಸಿ-332, 98, 172 ಇವರೊಂದಿಗೆ ರಾತ್ರಿ 11-00 ಗಂಟೆ ಸುಮಾರಿಗೆ ಮಂಜುನಾಥ ಮುದಗಲ್ ಇವರ ಮನೆಗೆ ಹೋಗಿ ಆತನನ್ನು ಸಂಪರ್ಕಿಸಿ ಆತನ ಶ್ಯಾಮಸಂಗ್ ಮೊಬೈಲ್  ಪೊನಂ ನಂ 7411100134 ನಂ ನೇದ್ದನ್ನು ವಶಕ್ಕೆ ಪಡೆದುಕೊಂಡು ಆತನ ಫೇಸ್ ಬುಕ್ ಮತ್ತು ಪ್ರೊಫೈಲ್ ಚೆಕ್ ಮಾಡಲಾಗಿ ಅದರಲ್ಲಿ ಅನ್ಯ ಭಾಷೆಯಲ್ಲಿ ಬರೆದ ಪ್ರೊಪೈಲ್ ಫೊಟೊ ನೋಡಲಾಗಿ ಅದರಲ್ಲಿ ಟಿಪ್ಪುಸುಲ್ತಾನ್ ಭಾವ ಚಿತ್ರದ ಮುಖದ ಕುತ್ತಿಗೆ ಭಾಗವನ್ನು ಕಟ್ ಮಾಡಿ ನಾಯಿಯ ದೇಹದ ಕುತ್ತಿಗೆ ಭಾಗಕ್ಕೆ ಅಂಟಿಸಿದ್ದು ಮತ್ತು ಮುಸ್ಲೀಂ ಜನಾಂಗದ ಧಾರ್ಮಿಕ ದ್ವಜವನ್ನು ಏಣಿಯಂತೆ ಮಾಡಿ ಮೇಲ್ಭಾಗದಲ್ಲಿ ಛತ್ರಪತಿ ಶಿವಾಜಿಯ ಭಾವ ಚಿತ್ರ ಇರುವ ದ್ವಜವನ್ನು ಅಂಟಿಸಿದ್ದು ಮತ್ತು ಮುಸ್ಲೀಂ ಧರ್ಮದ ದ್ವಜವನ್ನು ಸುಡುವಂತಹ ಭಾವ ಚಿತ್ರವನನ್ನು ಆತನು ತನ್ನ ಫೇಸ್ ಬುಕ್ ಅಕೌಂಟ್ ನೇಮ್ Manju Mudagl  ಗೆ ಅಪಲೋಡ್ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ. ಸದರಿ ಆರೋಪಿತನು ಹಿಂದೂ ಮತ್ತು ಮುಸ್ಲೀಂ ಧರ್ಮದ ಭಾವನೆಗಳಿಗೆ ಧಕ್ಕೆ ತಂದು ನಗರದಲ್ಲಿ ಹಿಂದೂ ಮುಸ್ಲೀಂ ಜನಾಂಗದ ಮಧ್ಯ ಕೋಮು ಗಲಭೆ ಉಂಟಾಗುವಂತೆ ಮಾಡಿ ನಗರದಲ್ಲಿ ಜನರ ಶಾಂತತೆಗೆ ಭಂಗ ಉಂಟಾಗುವಂತೆ ಮಾಡಿದ ಮಂಜುನಾಥ ತಂದೆ ಭರಮಪ್ಪ ಮುದಗಲ್ , ವಯಸ್ಸು: 21 ವರ್ಷ ಜಾ: ಲಿಂಗಾಯತ  ಉ: ಐಟಿ.ಐ ವಿಧ್ಯಾರ್ಥಿ ಸಾ: ಶಾರದಾ ಟಾಕೀಸ್ ಹಿಂದೆ ಕೊಪ್ಪಳ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ಆರೋಪಿತನೊಂದಿಗೆ ಠಾಣೆಗೆ ಬಂದು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾಧಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.ಇರುತ್ತದೆ.

0 comments:

 
Will Smith Visitors
Since 01/02/2008