ದಿ:27-01-16 ರಂದು ರಾತ್ರಿ 10-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ
ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗಾಗಿ ಸೇರಿಕೆಯಾದ ಬಗ್ಗೆ ಎಮ್.ಎಲ್.ಸಿ ಯಾದಿ ಬಂದಿದ್ದು
ಇರುತ್ತದೆ. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನುಮಪ್ಪ ಗುರಿಕಾರ ಸಾ: ಹಿರೇಮನ್ನಾಪೂರ
ಇವರನ್ನು ವಿಚಾರಣೆ ಮಾಡಿ ಅವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ದೂರಿನ
ಸಾರಾಂಶವೇನೆಂದರೇ, ದಿ:27-01-16 ರಂದು ರಾತ್ರಿ ಕಂದಕೂರ ಗ್ರಾಮದಿಂದಾ ನಾನು ಮತ್ತು ನಮ್ಮೂರಿನ ಶರಣಪ್ಪ ಅರ್ಜಿ, ವಿರೇಶ ಟೆಂಗುಂಟಿ, ಹುಸೇನಬಾಷಾ ಹಾಗೂ
ಶರಣಪ್ಪ ಸೂಡಿ ಹೀಗೆ ಎಲ್ಲರು ಕೂಡಿ ನಮ್ಮೂರಿನ ಹನುಮಂತಪ್ಪ ಗಡ್ಡಿ ಇವರ ಆಟೋ ನಂ:ಕೆಎ-37/ಎ-2209
ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಲ್ಲಿ ಶ್ರೀ ಗವಿಮಠ ಜಾತ್ರೆ ಗೆ ಹೋಗಲು ಅಂತಾ ಬರುತ್ತಿದ್ದು, ಸದರಿ ನಮ್ಮ ಆಟೋ
ಚಾಲಕನು ತನ್ನ ಆಟೋವನ್ನು ಕುಷ್ಟಗಿ-ಕೊಪ್ಪಳ ರಸ್ತೆಯ ಇರಕಲ್ ಗಡಾ ದಾಟಿ 01 ಕಿಮೀ ಕೊಪ್ಪಳ ಕಡೆಗೆ
ದೂರದಲ್ಲಿ ಬರುತ್ತಿದ್ದಾಗ, ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಕಾರ್ ನಂ: ಕೆಎ-04/ಎಮ್.ಕ್ಯೂ-5766 ನೇದ್ದರ
ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೇ ನಮ್ಮ
ಆಟೋಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನನಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದು, ಮತ್ತು ನಮ್ಮ
ಆಟೋದಲ್ಲಿದ್ದ ಚಾಲಕ ಹನುಮಂತಪ್ಪ ಅರ್ಜಿ, ಮತ್ತು ಹುಸೇನಬಾಷಾ ಇವರಿಗೆ ಭಾರಿ ಸ್ವರೂಪದ ರಕ್ತಗಾಯ ಹಾಗೂ ಮೂಕ
ಪೆಟ್ಟಾಗಿರುತ್ತವೆ. ಕಾರಣ ಅಪಘಾತ ಮಾಡಿದ ಚಾಲಕ ದಾವಲಸಾಬ ಸಾ: ಕಂದಕೂರ. ಅಂತಾ ಗೊತ್ತಾಗಿದ್ದು, ಸದರಿಯವನ ಮೇಲೆ
ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
2) ತಾವರಗೇರಾ ಪೊಲೀಸ್
ಠಾಣೆ ಗುನ್ನೆ ನಂ. 03/2016
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:
27-01-2016 ರಂದು ಫಿಯರ್ಾದಿದಾರರಾದ ಬುಡನಸಾಬ ತಂದೆ ಶ್ಯಾಮೀದಸಾಬ ಹಣಗಿ. ವಯ: 55 ವರ್ಷ. ಜಾತಿ:
ಮುಸ್ಲಿಂ. ಉ: ಬಸ್ ನಂ: ಕೆ.ಎ-35/ಎಫ್.106 ನೇದ್ದರ ಚಾಲಕ ಸಾ: ಮೇಣಧಾಳ ಹಾ.ವಸ್ತಿ: ಬಸ್ ನಿಲ್ದಾಣದ
ಹತ್ತಿರ ಗಂಗಾವತಿ. ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಈ ದಿವಸ
ಬೆಳಿಗ್ಗೆ ತಾವು ಮತ್ತು ಕಂಡಕ್ಟರ್ ಮಮತಾ ಇಬ್ಬರು ಕೂಡಿ ಬಸ್ ನಂ: ಕೆ.ಎ-35/ಎಫ್-106 ನೇದ್ದನ್ನು
ತೆಗೆದುಕೊಂಡು ಗಂಗಾವತಿಯಿಂದ ಬಿಜಾಪುರಕ್ಕೆ ಹೋಗಿ ವಾಪಾಸು ಗಂಗಾವತಿಗೆ ಕುಷ್ಟಗಿಯಿಂದ ತಾವರಗೇರಾಕ್ಕೆ
ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ನವಲಹಳ್ಳಿ ಸಂಜೆ 03-50 ಗಂಟೆಗೆ ಎದುರುಗಡೆಯಿಂದ ಒಂದು ಮೋಟಾರು
ಸೈಕಲ್ ಹಿರೋ ಸಿಡಿ ಡಿಲಕ್ಸ್ ನಂ: ಕೆ.ಎ-26/ಯು-1795 ನೇದ್ದರ ಮೇಲೆ ಇಬ್ಬರು ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ
ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎಡರಸ್ತೆಯಲ್ಲಿ ಹೊರಟ ಬಸ್ನ ಬಲಗಡೆ
ಬಾಡಿಗೆ ಟಕ್ಕರು ಮಾಡಿ ಅಪಘಾತಪಡಿಸಿದ್ದರಿಂದ ಸದರಿ ಇಬ್ಬರು ಬಿದ್ದು ಮೋಟಾರು ಸೈಕಲ್ ನಡೆಸುತ್ತಿದ್ದ
ಸುರೇಶ ಹಾಳಕೇರಿ ಇವರಿಗೆ ಮೂಗಿಗೆ, ಬಾಯಿಗೆ ಮತ್ತು ಬಲಗಾಲ ಪಾದದ ಹತ್ತಿರ ಸಾದಾ ಮತ್ತು ತೀವ್ರ ರಕ್ತಗಾಯಗಳಾಗಿದ್ದು
ಮತ್ತು ಹಿಂದೆ ಕುಳಿತ ನಾಗರಾಜ ಹಾಳಕೇರಿ ಈತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಅಂತಾ ವಗೈರೆ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 498(ಎ), 324, 504, 506 ಐ.ಪಿ.ಸಿ:.
ಫಿರ್ಯಾದಿದಾರಳು ದಿನಾಂಕ. 30-07-2015 ರಂದು ಹಳೆ ಶಿವಪುರ ಗ್ರಾಮದ ಮಂಜುನಾಥ ತಂ/
ಹನುಮಂತಪ್ಪ ಇವನಿಗೆ ಮದುವೆಯಾಗಿದ್ದು ಮಂಜುನಾಥನು ಸುಮಾರು 5-6 ವರ್ಷದಿಂದ ಫಿರ್ಯಾದಿ ಮೇಲೆ
ಅನುಮಾನ ಪಡೆದು ಹೊಡೆಯುವದು ಬಡೆಯುವದು ಮಾಡಿ ಕಿರುಕುಳ ನೀಡುತ್ತಿದ್ದನು. ದಿನಾಂಕ. 26-01-2016
ರಂದು ಮದ್ಯಾನ್ಹ 12-30 ಗಂಟೆ ಸುಮಾರಿಗೆ ಫಿರ್ಯಾದಿಗೆ ಮಂಜುನಾಥನು ಮನೆಯಲ್ಲಿ ಬಾಗಿಲು ಮುಚ್ಚಿ
ಕುಕ್ಕರಿನಿಂದ ಹೊಡೆದು ಕುಕ್ಕರನ ವಾಚರತೆಗೆದು ಕುತ್ತಿಗೆಗೆ ತಿರುಗಿಸಿ ನೆಲಕ್ಕೆ ಹೊಡೆದು ಎದೆ
ಮೇಲೆ ಕುಳಿತು ಹೊಡೆದು ನಂತರ ಸೀಮೆ ಎಣ್ಣೆ ಮೈಮೇಲೆ ಹಾಕಿ ಕಡ್ಡಿ ಕೊರೆದಿದ್ದು ಫಿರ್ಯಾದಿದಾರಳು
ಕೊರೆದ ಕಡ್ಡಿಯನ್ನು ಬಾಯಿಂದ ಊರಿ ಆರಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment