1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2016
ಕಲಂ: 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿ:26-01-16 ರಂದು ಬೆಳಗಿನಜಾವ 05-00
ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ದ್ಯಾಮವ್ವ ಕಟ್ಟೀಮನಿ ಸಾ:
ಗಿಣಿಗೇರಿ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-01-16 ರಂದು ರಾತ್ರಿ 10-30
ಗಂಟೆಯ ಸುಮಾರಿಗೆ ಗ್ರಾಮದ ಶ್ರೀ ಸೇವಾಲಾಲ್ ಗುಡಿಯ ಹತ್ತಿರ ರಮೇಶ
ಬಸಾಪೂರ ಹಾಗೂ ಇತರೆ 16 ಜನರು ಗುಂಪು ಕಟ್ಟಿಕೊಂಡು
ಬಂದು ದಿ:26-01-2016 ರಂದು ಝೇಂಡಾ ಹಾರಿಸುವ ಸಂಬಂಧ
ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ನಮಗೆ ಮೈ ಕೈ ಮುಟ್ಟಿ ಅವಮಾನ ಮಾಡಿ ಕೈಯಿಂದ ಹೊಡಿಬಡಿ ಮಾಡಿದ್ದು ಅಲ್ಲದೇ ಕಟ್ಟಿಗೆಯಿಂದ
ನಮ್ಮ ತಂದೆಗೆ ಹೊಡೆದಿದ್ದು ಹೀಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ
ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ: 143, 147, 148, 323, 324,
354, 504, 506 ಸಹಿತ 149 ಐ.ಪಿ.ಸಿ:.
ದಿ:26-01-16 ರಂದು ಬೆಳಗಿನಜಾವ 05-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಲಕ್ಷ್ಮಣ ತಂದೆ ಲೋಕಪ್ಪ ಬಸಾಪೂರ. ಸಾ: ಗಿಣಿಗೇರಿ ಇವರು
ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-01-16 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತಾಂಡಾದ ಶ್ರೀ ಸೇವಾಲಾಲ್
ಗುಡಿಯ ಹತ್ತಿರ ಪೀರಾನಾಯ್ಕ ಹಾಗೂ ಇತರೆ 19 ಜನರು ಗುಂಪು ಕಟ್ಟಿಕೊಂಡು ಬಂದು ದಿ:26-01-2016 ರಂದು ಝೇಂಡಾ ಹಾರಿಸುವ ಸಂಬಂಧ
ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಹೆಣ್ಣುಮಕ್ಕಳಿಗೆ ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಡಿಬಡಿ
ಮಾಡಿದ್ದು, ಮತ್ತು ಕಟ್ಟಿಗೆಯಿಂದ ನಮ್ಮ ದೊಡ್ಡಮ್ಮಳಾದ ಲಕ್ಷ್ಮವ್ವ ಳಿಗೆ ಹೊಡೆದಿದ್ದು
ಹೀಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 26/2016 ಕಲಂ: 143, 147, 323, 354, 504,
506 ಸಹಿತ 149 ಐ.ಪಿ.ಸಿ:.
ದಿನಾಂಕ 26-01-2016 ರಂದು 11-30 ಎ.ಎಂ.ಕ್ಕೆ ತೌಫಿಕ್ ತಂದೆ ಖಾಜಾಹುಸೇನ ಶೇಖ್
ವಯಸ್ಸು 26 ವರ್ಷ ಜಾ:ಮುಸ್ಲಿಂ ಉ: ಟಾಟಾ ಎಸಿಇ ವಾಹನದ ಚಾಲಕ ಸಾ: ಜಯನಗರ 01 ನೇ ಕ್ರಾಸ್ ಗಂಗಾವತಿ ರವರು
ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 25-01-2016 ರಂದು ಫಿರ್ಯಾದಿದಾರರ ಅತ್ತೆ ಶ್ರೀಮತಿ ಮಂಜಲಿ ಬೇಗಂ ಇವರು ಫಿರ್ಯಾದಿದಾರನಿಗೆ ಮನೆಯಲ್ಲಿ ತೊಟ್ಟಿಲ ಕಾರ್ಯಕ್ರಮ ಇದೆ ಬರಬೇಕೆಂದು ಹೇಳಿದ್ದು ಅದರಂತೆ ಆರೋಪಿ ನಂ. 01 ಬಾಬಾ ಇತನು ಸಹ ಬರುವಂತೆ ಹೇಳಿದ್ದು ಫಿರ್ಯಾದಿದಾರನು ಹಾಗೂ ಅವರ ತಾಯಿ ಮತ್ತು ಸೋದರ ಅತ್ತೆ, ಸೋದರ ಅತ್ತೆಯ ಮಗಳು ಲಕ್ಷ್ಮೀಕ್ಯಾಂಪಿನಲ್ಲಿರುವ ಮನೆಯಲ್ಲಿ ತೊಟ್ಟಿಲ ಕಾರ್ಯಕ್ರಮಕ್ಕೆ ಹೋಗಿದ್ದು ರಾತ್ರಿ 11-30 ಗಂಟೆಯ ಸುಮಾರಿಗೆ ತೊಟ್ಟಿಲ ಕಾರ್ಯಕ್ರಮ ನಡೆಯುತ್ತಿರುವಾಗ ಆರೋಪಿತರಾದ ಬಾಬಾ, ಜಾಫರ, ಅಹ್ಮದ, ಮೋಹಿನ್ ಇವರು ಬಂದು ಫಿರ್ಯಾದಿಗೆ ಲೇ ಸೂಳೇಮಗನೆ ಹೆಂಗ ಬರ್ತಿಯಾ ನೀನು ಮನೆಗೆ, ನಿನ್ನ ಹೆಂಡತಿಯನ್ನು ಹೆಂಗೆ ಮನೆಗೆ ಕರೆದುಕೊಂಡು ಹೋಗುತ್ತೀಯಾ ನಿನಗೆ
ಒಂದು ಗತಿ ಕಾಣಿಸಿ ಬಿಡುತ್ತೇವೆ ಅಂತಾ ಈ ಸೂಳೇಮಗನಿಗೆ ಜೀವಂತ ಉಳಿಸಬಾರದು ಅಂತಾ ಜೀವದ ಬೆದರಿಕೆ
ಹಾಕುತ್ತಾ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ತೊಟ್ಟಿಲ ಕಾರ್ಯಕ್ರಮಕ್ಕೆ ಹೋಗಿದ್ದ ಫಿರ್ಯಾದಿಯ ತಾಯಿ ಹಾಗೂ ಸೋದರ
ಅತ್ತೆ ಮತ್ತು ಅವರ ಮಗಳಿಗೆ ಆರೋಪಿತರಾದ ಮಂಜಲಿ ಬೇಗಂ ಹಾಗೂ ಆಸ್ಮಾ ಬೇಗಂ ಇವರು ಸೂಳೇ, ಬೋಸುಡಿ, ತುಡುಗಿ ಅಂತಾ ಬೈದಾಡಿ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಆರೋಪಿ ಬಾಬಾ ಇತನು ಸಹ
ಅವಾಚ್ಯ ಶಬ್ದಗಳಿಂದ ಬೈದಾಡಿ ಫಿರ್ಯಾದಿದಾರರ ತಾಯಿಗೆ ಎದೆಗೆ ಕೈಯಿಂದ ಬಡಿದಿದ್ದು ಅಲ್ಲದೇ
ಅಲ್ಲಿಗೆ ಬಂದ ಫಿರ್ಯಾದಿಯ ಅತ್ತೆಯ ಮಗನಿಗೂ ಸಹ ಹೊಡಿ-ಬಡಿ ಮಾಡಿದ್ದು ಅಲ್ಲದೇ ಇವರಲ್ಲಿ ಜಾಫರ್
ಇತನು ಬಲಗಡೆಯ ಕಣ್ಣಿಗೆ ಕೈ ಮುಷ್ಠಿ ಮಾಡಿ ಹೊಡೆದಿರುತ್ತಾನೆ. ಕಾರಣ ಸದರಿಯವರ ವಿರುದ್ದ ಕಾನೂನು
ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಸಂಚಾರಿ ಪೊಲೀಸ್ ಗಂಗಾವತಿ ಠಾಣೆ ಗುನ್ನೆ ನಂ. 4/2016 ಕಲಂ: 279,
304(ಎ) ಐ.ಪಿ.ಸಿ:.
ದಿನಾಂಕ 26-01-2016
ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರನ
ತಂದೆಯಾದ ನಾಗೇಶಪ್ಪ ತಂದೆ ಪಂಪಣ್ಣ ಗಣಪ ವ:55 ಸಾ: ಹೀರೆಜಂತಕಲ್ ಗಂಗಾವತಿ ಇತನು
ತನ್ನ ಮೋ/ಸೈ ನಂ ಕೆಎ37ಎಲ್ 7322 ನೇದ್ದನ್ನು ಚಾಲನೆ ಮಾಡಿಕೊಂಡು ಸಾಯಿಬಾಬ ಗುಡಿಕಡೆಯಿಂದ ವಿರುಪಾಪೂರ ಕಡೆಗೆ ಬರುತ್ತಿರುವಾಗ
ಆರೋಪಿತನು ತನ್ನ ಆಟೋ ನಂ ಕೆಎ19ಎ8715 ನೇದ್ದನ್ನು ವಿರುಪಾಪುರ ಕಡೆಯಿಂದ ಅತಿಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು
ರಾಂಗ್ ಸೈಡ್ ಬಲಕ್ಕೆ ಬಂದು ರಸ್ತೆಯ ಎಡಗಡೆ ಹೋರಟಿದ್ದ ಫಿರ್ಯಾಧಿದಾರನ ತಂದೆಯ ಮೋ/ಸೈಗೆ
ಎದುರುಗಡೆಯಿಂದ ಟಕ್ಕರ್ ಕೊಟ್ಟಿದ್ದರಿಂದ ನಾಗೇಶಪ್ಪ ಇತನ ಎಡಕಾಪಳಕ್ಕೆ ಭಾರಿ ರಕ್ತಗಾಯವಾಗಿದ್ದು
ಮತ್ತು ಎಡಗಾಲಿನ ಮೊಣಕಾಲಕೆಳಗೆ ಭಾರಿ ಒಳಪೆಟ್ಟಾಗಿ ಮತ್ತು ಗಾಯವಾಗಿದ್ದು ಮತ್ತು ರಕ್ತಶ್ರಾವವಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಕಾರಣ ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದೆ.
0 comments:
Post a Comment