1) ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 01/2016 ಕಲಂ. 279, 338, 304(ಎ) ಐ.ಪಿ.ಸಿ ಸಹಿತ
187 ಐ.ಎಂ.ವಿ. ಕಾಯ್ದೆ:.
ದಿನಾಂಕ 02-01-2016 ರಂದು ರಾತ್ರಿ 09-00 ಗಂಟೆಗೆ ಪಿರ್ಯಾಧಿದಾರರಾದ ಅರಿಹಂತ ಮೆಹತಾ ಸಾ:ಬಿಟಿ ಪಾಟೀಲ ನಗರ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೇನಂದರೆ, ಇಂದು ದಿನಾಂಕ 02-01-2016 ರಂದು ಸಾಯಂಕಾಲ ಪಿರ್ಯಾಧಿದಾರರ ಚಿಕ್ಕಪ್ಪನ ಮಕ್ಕಳಾದ 1) ಕುಮಾರಿ ಆಸ್ತಾ, 2) ಕುಮಾರ ಅರಹಂ, ಹಾಗೂ ಅವರ ಮಾವ ವಸಂತ ಮರಲೇಚಾ ಇವರ ಮಕ್ಕಳಾದ 3) ಕುಮಾರಿ ದೀವೀಶಾ 4) ಕುಮಾರಿ ಚೇರಿಸಾ ಇವರುಗಳು ತಮ್ಮ ಕಾರ ನಂ ಕೆ.ಎ-04 ಎಂ.ಎಫ್-5239 ನೇದ್ದರಲ್ಲಿ ಕುಳಿತು ಕೊಪ್ಪಳದಿಂದ ಮುಂಡರಗಿ ಶ್ರೀ ಅನ್ನದಾನೇಶ್ವರ ಮಠಕ್ಕೆ ಅಂತಾ ಹೋಗುತ್ತಿದ್ದಾಗ ಸಾಯಂಕಾಲ 04-10 ಗಂಟೆ ಸುಮಾರಿಗೆ ಕೊಪ್ಪಳ-ಸಿಂದೋಗಿ ರಸ್ತೆಯ ಗುನ್ನಳ್ಳಿ ಕ್ರಾಸ್ ಹತ್ತಿರ ಸದರ್ ಕಾರ್ ಚಾಲಕ ಹಾಗೂ ಎದುರುಗಡೆ ಸಿಂಧೋಗಿ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಂ ಕೆ.ಎ-37 ಎ-2937 ನೇದ್ದರ ಚಾಲಕರುಗಳು ತಮ್ಮ ತಮ್ಮ ವಾಹನಗಳನ್ನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸುತ್ತಾ ತಮ್ಮ ವಾಹನಗಳ ಮೇಲೆ ನಿಯಂತ್ರಣ ಸಾಧಿಸದೇ ಮುಖಾಮುಖಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಕಾರಿನಲ್ಲಿದ್ದ ನಾಲ್ಕು ಮಕ್ಕಳಿಗೆ ತೀವೃ ಗಾಯಗಳು ಹಾಗೂ ಪೆಟ್ಟುಗಳಾಗಿದ್ದು, ಸಾಯಂಕಾಲ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಗಾಯಾಳುಗಳನ್ನು ಕರೆ ತಂದಾಗ 1) ಕುಮಾರಿ ಆಸ್ತಾ, ಹಾಗೂ 2) ಕುಮಾರಿ ದೀವಿಶಾ ಇವರುಗಳು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಟಿಪ್ಪರ ಚಾಲಕ ಹಾಗೂ ಕಾರ್ ಚಾಲಕ ಓಡಿ ಹೋಗಿದ್ದು ಇರುತ್ತದೆ, ಕಾರಣ ಸದರಿ ಕಾರು ಮತ್ತು ಟಿಪ್ಪರ್ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 01/2016 ಕಲಂ. 295(ಎ),
324 ಐ.ಪಿ.ಸಿ.
ದಿನಾಂಕ:02-01-2016 ರಂದು
8-30 ಪಿಎಂಕ್ಕೆ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿರ್ಯಾದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:02-01-2016 ರಂದು 6-00 ಪಿಎಂಕ್ಕೆ ತಳಕಲ್ ಗ್ರಾಮದ ಸೊಸೈಟಿ
ಸರ್ಕಲ್ ಹತ್ತಿರ ದಲಿತ ಸಂಘರ್ಷ ಸಮಿತಿ ವತಿಯಿಂದ ನಿರ್ಮಿಸಿದ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್
ರವರ ಭಾವಚಿತ್ರಕ್ಕೆ ಕಲ್ಲಿನಿಂದ ಒಗೆದು, ಗೀಚಿದ್ದು, ಇದನ್ನು ತಡೆಯಲು ಹೋದ ಪಿರ್ಯಾದಿ ಮತ್ತು ಮರಿಯಪ್ಪ
ಎನ್ನುವವರಿಗೆ ಕಲ್ಲಿನಿಂದ ಒಗೆದು ಗಾಯಗೊಳಿಸಿದ್ದು, ಕಾರಣ, ಸದರಿಯವನ ಮೇಲೆ ಕಾನೂನು ರೀತಿಯ ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 01/2016
ಕಲಂ. 379 ಐ.ಪಿ.ಸಿ.
ದಿನಾಂಕ:
02-01-2016 ರಂದು 5-45 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು
ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾದಿದಾರರು ದಿನಾಂಕ: 26-12-2015 ರಂದು ಗುಜರಾತ ರಾಜ್ಯದ
ಸಾನಂದ ಎಂಬ ಪಟ್ಟಣದಲ್ಲಿ Darcl Lagistics ಎಂಬ ಟ್ರಾನ್ಸಪೋರ್ಟನಲ್ಲಿ 880 ಬಾಕ್ಸ ಕೋಲ್ಗೇಟ ಪೇಸ್ಟ ಅಂ.ಕಿ. 41,79,436-80 ಲೋಡ ಮಾಡಿಕೊಂಡು ಸಾನಂದಾದಿಂದ ಸೊಲ್ಲಾಪೂರ, ಝಳಕಿ, ಬಿಜಾಪೂರ ಮಾರ್ಗವಾಗಿ
ಕೇರಳದ ಅಲಪ್ಪಿ ಎಂಬ ಪಟ್ಟಣಕ್ಕೆ ಹೊರಟಿದ್ದು, ದಿನಾಂಕ: 28-12-2015 ರಂದು ರಾತ್ರಿ 7-00
ಗಂಟೆಯಿಂದ 8-00 ಗಂಟೆಯ ಅವಧಿಯಲ್ಲಿ ಇಲಕಲ್ ಹತ್ತಿರ ಎನ್.ಎಚ್-50 ರಸ್ತೆಯಲ್ಲಿ ಬರುವ ಮಲಿಯಾಳಿ ಹೊಟೆಲ್ ದಲ್ಲಿ ಚಹ ಕುಡಿದು ವಿಶ್ರಾಂತಿ ಮಾಡಿ
ಅಲ್ಲಿಂದ ರಾತ್ರಿ 8-00 ಗಂಟೆಗೆ ಹೊರಟು ರಾತ್ರಿ 9-40 ಗಂಟೆ ಸುಮಾರಿಗೆ ಮುನಿರಾಬಾದ ಹತ್ತಿರ ಇರುವ
ಟೋಲಗೇಟ್ ದಾಟಿದ ನಂತರ ಅಡುಗೆ ಮಾಡಿಕೊಂಡು ಊಟ ಮಾಡುವ ಸಲುವಾಗಿ ಲಾರಿಯನ್ನು ನಿಲ್ಲಿಸಿ ಚೆಕ್ ಮಾಡವ
ಸಮಯದಲ್ಲಿ ಲಾರಿ ಲೋಡಿನಲ್ಲಿ ಕೆಲವು ಬಾಕ್ಸ್ ಕಾಣಲಿಲ್ಲ. ಗಾಭರಿಯಾಗಿ ಲಾರಿ ಮೇಲೆ ಹತ್ತಿ ನೋಡಲಾಗಿ
ಲಾರಿಯಲ್ಲಿದ್ದ ಅಂದಾಜು 5,60,382-00 ರೂ. ಕಿಮ್ಮತ್ತಿನ 118 ಕೋಲಗೇಟ್ ಬಾಕ್ಸಗಳನ್ನು ಇಲಕಲ್ ಹತ್ತಿರ ಎನ್.ಎಚ್.-50
ರಸ್ತೆಯಲ್ಲಿರುವ ಮಲಿಯಾಳಿ ಡಾಬಾದ ಹತ್ತಿರ ಚಹ ಕುಡಿದು ವಿಶ್ರಾಂತಿ ಮಾಡುವ ಸಮಯದಲ್ಲಿ ನನ್ನ ಲಾರಿಯಲ್ಲಿ ಲೋಡ ಮಾಡಿದ್ದ ಲೋಡಗೆ ಹೊದಿಕೆ ಮಾಡಿದ್ದ
ತಾಡಪತ್ರಿಯನ್ನು ಯಾರೋ ಕಳ್ಳರು ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರಬಹುದು. ಕಾರಣ ನನ್ನ
ಲಾರಿಯಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ
ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment