1) ಕೊಪ್ಪಳ ಸಂಚಾರಿ
ಪೊಲೀಸ್ ಠಾಣೆ ಗುನ್ನೆ ನಂ. 01/2016 ಕಲಂ. 279, 337 ಐ.ಪಿ.ಸಿ:.
ದಿನಾಂಕ 03-01-201 ರಂದು ಮದ್ಯಾಹ್ನ 2-30 ಗಂಟೆಗೆ ಕೊಪ್ಪಳದ ಕಿಮ್ಸ
ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,
ಇಂದು ದಿನಾಂಕ 03-01-2016 ರಂದು ಬೆಳಿಗ್ಗೆ 11-20 ಗಂಟೆಗೆ ಫಿರ್ಯಾದಿಯು ತನ್ನ ಮೋಪೆಡ್ ವಾಹನ ನಂಬರ
KA-37/W-6454 ನೆದ್ದರ ಹಿಂದೆ ತಮ್ಮ ಹೆಂಡತಿ ಉಷಾ ಇವರನ್ನು ಕೂಡಿಸಿಕೊಂಡು ತಮ್ಮ ಸಂಭಂದಿಕರ ಮದುವೆಗೆ
ಹೋಗಿ ಮದುವೆ ಮುಗಿಸಿಕೊಂಡು ವಾಪಾಸ ಮನೆಗೆ ಹೋಗಲು ಫಿರ್ಯಾದಿದಾರರು ತಮ್ಮ ಮೋಪೆಡ್ ವಾಹನದ ಹಿಂದೆ ತಮ್ಮ
ಹೆಂಡತಿಯನ್ನು ಕೂಡಿಸಿಕೊಂಡು ಪಾನಘಂಟಿ ಕಲ್ಯಾಣ ಮಂಟಪದ ಮುಂದೆ ಇರುವ ಭಾಗ್ಯನಗರ-ಕೊಪ್ಪಳ ರಸ್ತೆಯ ಮೇಲೆ
ಬಂದಾಗ ಭಾಗ್ಯನಗರ ಕಡೆಯಿಂದ ಮೋಟಾರ್ ಸೈಕಲ್ ನಬರ KA-37/W-0958 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ
ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ
ಮೊಪೆಡ್ ವಾಹನಕ್ಕೆ ಟಕ್ಕರಮಾಡಿ ಅಪಘಾತ,ಮಾಡಿದ್ದರಿಂದ ಫಿರ್ಯಾದಿಯ ಎಡಗೈಗೆ ಮತ್ತು ಅವರ ಹೆಂಡತಿ ಉಷಾ
ಇವರಿಗೆ ಎಡಗಡೆ ಚಪ್ಪೆಗೆ ಒಳಪೆಟ್ಟು ಆಗಿರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 02/2016 ಕಲಂ. 279, 338 ಐ.ಪಿ.ಸಿ:.
ದಿ:03.01.2016 ರಂದು
ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಸಂಗನಬಸಯ್ಯ
ತಂದೆ ಸಂಗಯ್ಯ ಭೂಸನೂರಮಠ, ಸಾ: ಮೆತಗಲ್ಲ, ತಾ:ಜಿ: ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ: 03.01.2016 ರಂದು ಬಳಗಿನ ಜಾವ 02.00 ಗಂಟೆಯ
ಸುಮಾರಿಗೆ ಐಶರ್ ವಾಹನ ನಂ-ಎಂ.ಎಚ್-13-ಎ.ಎಕ್ಸ್-2270 ನೇದ್ದರ ಚಾಲಕ ಗುರುಸಿದ್ದ ತಂದೆ ನೀಲಕಂಠ ವಾಲೆ ಸಾ: ಕುಂಬಾರಿ ತಾ: ಸೊಲಾಪುರ
ದಕ್ಷಿಣ ಈತನು ವಾಹನವನ್ನು ಎನ್.ಹೆಚ್-50 ರಸ್ತೆ
ಯಲ್ಲಿ ಕುಷ್ಟಗಿ ಕಡೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಓಡಿಸುತ್ತಾ ಬಂದು ಮೆತಗಲ್ಲ ಹತ್ತಿರ ರಸ್ತೆ ಬದಿಯ ಸೇತುವೆಗೆ ರಭಸವಾಗಿ ಟಕ್ಕರ
ಕೊಟ್ಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ
ವಾಹನದ ಚಾಲಕ ಗುರುಸಿದ್ದ ಮತ್ತು ಕ್ಲೀನರ್ ಅಮೋಲ ಕಸ್ಬೆ ಇಬ್ಬರಿಗೂ ಭಾರಿ ಸ್ವರೂಪದ ರಕ್ತಗಾಯ
ಮತ್ತು ಒಳಪೆಟ್ಟಾಗಿದ್ದು, ಕಾರಣ ಅಪಘಾತ ಪಡಿಸಿದ ಐಶರ್ ವಾಹನ ಚಾಲಕ ಗುರುಸಿದ್ದ ವಾಲೆ ಈತನ ಮೇಲೆ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ. 341,
504, 506 ಸಹಿತ 34 ಐ.ಪಿ.ಸಿ.
ದಿನಾಂಕ – 03-01-2016
ರಂದು ರಾತ್ರಿ 8-50 ಗಂಟೆಯ
ಸುಮಾರಿಗೆ ಫಿರ್ಯಾದಿದಾರರಾದ ಮಹಿಬೂಬಸಾಬ ತಂದಿ ಮೋದಿನಸಾಬ ಮುಲ್ಲಾ (ಎಮ್.ಡಿ.ಎಸ್) ವಯಾ- 38 ವರ್ಷ, ಜಾ. ಮುಸ್ಲಿಂ ಉ- ವ್ಯಾಪಾರ
ಸಾ. ಸಿದ್ದಾಪೂರ ತಾ- ಗಂಗಾವತಿ. ಇವರು ಠಾಣೆಗೆ
ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಸಿದ್ದಾಪೂರ ಗ್ರಾಮದ
ಆರೋಪಿ 1) ಎಮ್.ಎ ಮಜೀದ್ @ ಮೀನಾಜ್ ತಂದಿ ಎಮ್.ಎ ಹಮೀದ್ ವಯಾ-45 ವರ್ಷ, ಜಾ.
ಮುಸ್ಲಿಂ ಸಾ. ಸಿದ್ದಾಪೂರ ಈತನು ಸಿದ್ದಾಪೂರ ಗ್ರಾಮದ ಐತಿಹಾಸಿಕ ಸೋಸೆಯಂದಿರ
ಭಾವಿಜಾಗೆಯನ್ನು ಅತೀ ಕ್ರಮ ಮಾಡಿ ಮನೆ ಕಟ್ಟಿಕೊಂಡಿರುವುದನ್ನು ಪಿರ್ಯಾದಿದಾರರು ಮತ್ತು
ಅವರ ಸಹಚರರು ತಕರಾರರು ಮಾಡಿ ಈ ಹಿಂದೆ ಧರಣಿ ಮಾಡಿದ್ದು ಪಂಚಾಯಿತಿಯವರು ಆರೋಪಿತನು ಮನೆ ಕಟ್ಟುವುದನ್ನು
ನಿಲ್ಲಿಸಿದ್ದರು ಇದೇ ವಿಷಯವಾಗಿ ಆರೋಪಿತನು ಪಿರ್ಯಾದಿದಾರರ ಮೇಲೆ ದ್ವೇಷ ಸಾದಿಸುತ್ತಾ ಬಂದಿದ್ದನು
ಇಂದು ದಿನಾಂಕ:-03-01-2016 ರಂದು ಭಾನುವಾರ ಪಂಚಾಯಿತಿ ರಜೆ ಇರುವುದನ್ನು ನೋಡಿ ಆರೋಪಿತರು ಸದರಿ
117/16 ನೇದ್ದರಲ್ಲಿ ಕಟ್ಟಿದ್ದ ಕಟ್ಟಡದ ಮೇಲ್ಛಾವಣಿ ನಿರ್ಮಿಸುತ್ತಿರುವಾಗ ನಾವು ಇದನ್ನು ನೋಡಿ ಪೊಲೀಸರಿಗೆ
ಮಾಹಿತಿ ನೀಡಿದ್ದರಿಂದ ಇದೇ ದ್ವೇಷದಿಂದ ಇಂದು ಸಾಯಂಕಾಲ 6-00 ಗಂಟೆಯಿಂದ 6-15 ಗಂಟೆಯ ಅವಧಿಯಲ್ಲಿ
ಪಿರ್ಯಾದಿದಾರರು ಮತ್ತು ತಮ್ಮ ಸಹಚರರು ಸಿದ್ದಾಪೂರದ ಸಾಯಿ ಟಿಫನ್ ಸೆಂಟರ್ ಹತ್ತಿರ
ನಿಂತುಕೊಂಡಿದ್ದಾಗ್ಗೆ ಆರೋಪಿತರಾದ 1) ಎಮ್.ಎ ಮಜೀದ್
@ ಮೀನಾಜ್ ತಂದಿ ಎಮ್.ಎ ಹಮೀದ್ 2) ಎಮ್. ಸಾಧೀಕ್ ತಂದೆ ಉಸ್ಮಾನ್ ಸಾಬ ಮುದಗಲ್ ಸಾ. ಸಿದ್ದಾಪೂರ ಇಬ್ಬರು
ಕೂಡಿ ಬಂದು ಪಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವಚ್ಯವಾಗಿ ಬೈದಾಡಿ, ನಮ್ಮ ಮನೆಯ
ವಿಷಯಕ್ಕೆ ಇನ್ನೊಮ್ಮೆ ಬಂದರೆ ನಿನ್ನನ್ನು ಮತ್ತು ನಿಮ್ಮ ಸಹಚರರನ್ನು ಮುಗಿಸಿ ಅದೇ ಭಾವಿಯಲ್ಲಿ ಹಾಕಿ
ಹುಟ್ಟಿಲ್ಲಾ ಅಂತಾ ಅನಿಸಿಬಿಡುತ್ತೇವೆ ಅಂತಾ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ
ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 06/2016 ಕಲಂ.
457, 380 ಐ.ಪಿ.ಸಿ.
ದಿನಾಂಕ 03-01-2016 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರರಾದ ಕಳಕಪ್ಪ ತಂದೆ ಮಲ್ಲಿಕಾರ್ಜುನಪ್ಪ ರಾಜೂರ ವಯಾ 44 ವರ್ಷ ಜಾ:ಲಿಂಗಾಯತ
ಉ: ನಿವೃತ್ತ ಸೈನಿಕ ಸಾ.ಕುಷ್ಟಗಿ ರವರ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ,
ನಾನು ಮಾಜಿ ಸೈನಿಕನಾಗಿದ್ದು, 30-06-2015 ರಂದು ಸೇನೆಯಿಂದ ನಿವೃತ್ತನಾಗಿರುತ್ತೇನೆ. ನಾನು ಈ ಹಿಂದೆ
20 ತೊಲೆ ಬಂಗಾರವನ್ನು ನನ್ನ ಅಳಿಯಾದ ನಿಂಗಪ್ಪ ತಂದೆ ಸಂಗಪ್ಪ ಗಾಣದಾಳ ತನ ಹೆಸರಿನಲ್ಲಿ ಕುಷ್ಟಗಿಯ
ಮೈಸೂರು ಬ್ಯಾಂಕಿನಲ್ಲಿ ಒತ್ತೆ ಇಟ್ಟಿದ್ದು, ಸದರಿ ಬಂಗಾರವನ್ನು ನನ್ನ ನಿವೃತ್ತಿ ಹಣ ಬಂದ ನಂತರ ಬ್ಯಾಂಕಿನಿಂದ
ಬಿಡಿಸಿಕೊಂಡು ಬಂದು ನನ್ನ ಮನೆಯಲ್ಲಿ ಇಟ್ಟುಕೊಂಡಿದ್ದೆನು ಅಲ್ಲದೇ ನಮ್ಮ ಮನೆಯಲ್ಲಿ 10 ತೋಲೆ ಇದ್ದು,
ಹೀಗೆ ಒಟ್ಟು 30 ತೊಲೆ ಬಂಗಾರ ಮನೆಯಲ್ಲಿ ಇಟ್ಟುಕೊಂಡಿದ್ದೇನು, ಹಾಗೂ ನನ್ನ ನಿವೃತ್ತಿಯ ಇನ್ನುಳಿದ
ಹಣ 3,50,000=00 ರೂ. ಹಣವನ್ನು ಸಹ ನಮ್ಮ ಮನೆಯಲ್ಲಿನ ಅಲಮಾರದಲ್ಲಿ ಇಟ್ಟಿದ್ದೆನು. ನಿನ್ನೆ ದಿವಸ
ಮಧ್ಯಾನ್ಹ 2-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳು ಸೇರಿಕೊಂಡು ಮುರಡಿ ಗ್ರಾಮಕ್ಕೆ
ನಮ್ಮ ಸ್ವಂತ ಕೆಲಸದ ಸಲುವಾಗಿ ಹೋಗಿ ಅಲ್ಲಿಯೇ ವಸ್ತಿ ಇದ್ದೇವು, ನಂತರ ಈ ದಿವಸ ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ
ಮನೆಯವರಾದ ಶಿವಲಿಂಗಪ್ಪ ತಂದೆ ಶರಣಪ್ಪ ಸೂಡಿ ರವರು ನನಗೆ ಫೋನ್ ಮಾಡಿ ನಮ್ಮ ಮನೆ ಕಳ್ಳತನವಾಗಿರುವ
ವಿಷಯ ತಿಳಿಸಿದ ಕೂಡಲೇ ನಾನು ನಮ್ಮ ಮನೆಗೆ ಬಂದು ನೋಡಿದಾಗ ವಿಷಯ ನಿಜ ಇದ್ದು, ನಿನ್ನೆ ರಾತ್ರಿಯ ವೇಳೆಯಲ್ಲಿ
ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿ
ಅಲ್ಮೇರಾದಲ್ಲಿದ್ದ ಒಟ್ಟು 30 ತೊಲೆ ಬಂಗಾರ ಅಂ.ಕಿ 7,50,000=00 ಹಾಗೂ 3,50,000=00 ರೂ. ಹಣವನ್ನು
ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾರಣ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ
ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದೆ.
0 comments:
Post a Comment