1) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ. 78(3) Karnataka Police
Act.
ದಿನಾಂಕ: 05-01-2016 ರಾತ್ರಿ 10-00 ಗಂಟೆಗೆ ಶ್ರೀ ಆಂಜನೇಯ .ಡಿ ಎಸ್ ಪೊಲೀಸ್ ಸಬ್ ಇನ್ಸಪೆಕ್ಟರ್ ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಹಾಗೂ ಮುದ್ದೇಮಾಲನ್ನು ಹಾಜರುಪಡಿಸಿ ಅವರ ಮೇಲೆ ಕ್ರಮ
ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 05-01-2016 ರಂದು ರಾತ್ರಿ 7-30 ಗಂಟೆಗೆ ಆರೋಪಿತನಾದ ಮಹಾಂತೇಶ ತಂದೆ ರಾಮಣ್ಣ
ಅಳ್ಳಳಿ, ವಯಾ: 32 ವರ್ಷ, ಜಾ: ಹರಿಜನ, ಉ: ಕೂಲಿ ಕೆಲಸ, ಸಾ: ಅಂಬೇಡ್ಕರ್ ನಗರ ಗಂಗಾವತಿ. ಈತನು
ಗಂಗಾವತಿಯ ಅಂಬೇಡ್ಕರ ನಗರದಲ್ಲಿ ಇರುವ
ರೆಡ್ಡಿ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ
ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವರ
ಮೇಲೆ ಪಂಚರ ಸಮಕ್ಷಮ ರಾತ್ರಿ 7-30 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ
ಹಿಡಿದು ಸದರಿಯವನಿಂದ 1] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 1370-00-
2] ಒಂದು ಮಟಕ ನಂಬರ ಬರೆದ ಚೀಟಿ. 3] ಒಂದು ಬಾಲ ಪೆನ್ , ನೇದ್ದವುಗಳನ್ನು ಪಂಚರ ಸಮಕ್ಷಮ ರಾತ್ರಿ
7-30 ಗಂಟೆಯಿಂದ 8-30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು, ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು
ಇರುತ್ತದೆ. ಹಾಗೂ ಸದರಿ ವ್ಯಕ್ತಿಯು
ಮಟಕಾ ಪಟ್ಟಿಗಳನ್ನು ದಾಳಿ ಕಾಲಕ್ಕೆ ಓಡಿ ಹೋದ ಖಾಸಿಂಸಾಬ ತೌಡ, (ಘಟ್ ದಾಲ್) ಸಾ: ಜಂತಕಲ್, ಗಂಗಾವತಿ, ಎಂಬಾತನಿಗೆ ಕೊಡುವದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿ ನೀಡಿದ್ದು, ವರಧಿ ಸಾರಾಂಶವು ಎನ್ ಸಿ ಸ್ವರೂಪದ್ದಾಗಿದ್ದರಿಂದ ಮಾನ್ಯ ನ್ಯಾಯಾಲಯದ
ಅನುಮತಿ ಪಡೆದುಕೊಂಡು ರಾತ್ರಿ 11-00 ಗಂಟೆಗೆ ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ. 454, 457,
380 ಐ.ಪಿ.ಸಿ:.
ದಿ:05-01-2016
ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಲಕ್ಷ್ಮಪ್ಪ ತಂದೆ ಗುಬ್ಬಪ್ಪ ಲಮಾಣಿ, ಮುಖ್ಯೋಪಾಧ್ಯಾಯರು, ಸರಕಾರಿ
ಹಿರಿಯ ಪ್ರಾಥಮಿಕ ಶಾಲೆ, ಚಳ್ಳಾರಿ, ತಾ :ಜಿ : ಕೊಪ್ಪಳ ಸಾ : ಹಾಲವರ್ತಿ, ಹಾ.ವ:
ನೆಲಜೇರಿ, ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿ
: 04-01-2016 ರಂದು ಸಾಯಂಕಾಲ 5-00 ಗಂಟೆಯಿಂದ ಇಂದು ದಿ 05-01-2016 ರಂದು ಬೆಳಿಗ್ಗೆ 09-20
ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಚಳ್ಳಾರಿ ಸ.ಹಿ.ಪ್ರಾಥಮಿಕ ಶಾಲೆಯ ಬಿಸಿಯೂಟ ಸಾಮಗ್ರಿ ಕೊಠಡಿಯ
ಬೀಗ ಮುರಿದು ಒಳಗಡೆ ಪ್ರವೇಶ ಮಾಡಿ ಕೊಠಡಿಯಲ್ಲಿ ಬಿಸಿ ಊಟಕ್ಕೆ ಇಡಲಾಗಿದ್ದ, 50 ಕೆಜಿ
ತೂಕದ ಒಂದು ಪಾಕೇಟ್ ತೊಗರಿಬೇಳೆ. ಅಂ.ಕಿ 9,000=00. ರೂ.
ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ
ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮಾಲನ್ನು ಪತ್ತೆ ಮಾಡುವಂತೆ ಮುಂತಾಗಿ ನೀಡಿದ
ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ : 05/2016. ಕಲಂ : 454,457,380 ಐಪಿಸಿ
ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 01/2016
ಕಲಂ. 279, 338 ಐ.ಪಿ.ಸಿ.
ದಿನಾಂಕ:- 04-01-2016 ರಂದು
ರಾತ್ರಿ 8:00 ಗಂಟೆಗೆ ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್
ಹೋಮದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು
ಶ್ರೀ ರಾಜು ಎಂಬುವರನ್ನು ವಿಚಾರಣೆ ಮಾಡಲಾಗಿ ನಂತರ ದೂರು ನೀಡುವದಾಗಿ ತಿಳಿಸಿದ್ದರಿಂದ ವಾಪಸ್ಸು ಬಂದಿದ್ದು
ಪುನ: ಇಂದು ದಿನಾಂಕ: 05-01-2016 ರಂದು ರಾತ್ರಿ 7:30 ಗಂಟೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು
ಶ್ರೀ ರಾಜು ತಂದೆ ಕೊಟ್ರೇಶ ಯಾದವ, ವಯಸ್ಸು: 37 ವರ್ಷ ಸಾ: 3ನೇ ವಾರ್ಡ ಶ್ರೀರಾಮನಗರ ತಾ: ಗಂಗಾವತಿ ಇವರ
ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.
" ನಿನ್ನೆ ದಿನಾಂಕ: 04-01-2016 ರಂದು ಮುಂಜಾನೆ 11:30 ಗಂಟೆಯ ಸುಮಾರಿಗೆ
ನಾನು ಮತ್ತು ಪಕ್ಕದಲ್ಲಿ ಟೈರ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ನನ್ನ ತಮ್ಮ ವಿರೇಶ 22 ವರ್ಷ
ಇಬ್ಬರೂ ಕೂಡಿ ಮಾತನಾಡುತ್ತಾ ರಸ್ತೆಯ ಎಡಬಾಜು ನಿಂತಿರುವಾಗ ಗಂಗಾವತಿ ಕಡೆಯಿಂದ ಒಬ್ಬ ಮೋಟಾರ ಸೈಕಲ
ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು
ನನಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದನು. ಇದರಿಂದಾಗಿ ನಾನು ಪುಟಿದು ರಸ್ತೆಯಲ್ಲಿ ಬಿದ್ದೆನು. ಇದರಿಂದಾಗಿ
ನನಗೆ ಎಡಗಾಲು ಮೊಣಕಾಲು ಕೆಳಗೆ ಎಲಬು ಮುರಿದು ತೀವ್ರ ಒಳಪೆಟ್ಟಾಗಿ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು
ಇದೆ. ನಂತರ ಅಪಘಾತ ಪಡಿಸಿದ ಮೋಟಾರ ಸೈಕಲ್ ನಂಬರ್ ನೋಡಲಾಗಿ ಕೆ.ಎ-37/ಡಬ್ಲ್ಯೂ-7065 ಬಜಾಜ ಡಿಸ್ಕವರಿ
ಮೋಟಾರ ಸೈಕಲ ಇದ್ದು ಅದರ ಚಾಲಕನನ್ನು ವಿಚಾರಿಸಲು ಅಬ್ದುಲ್ ತಂದೆ ರಾಜಾಸಾಬ ಸಾ: ಇಸ್ಲಾಂಪೂರ ಗಂಗಾವತಿ
ಅಂತಾ ತಿಳಿಸಿದನು. ಕೂಡಲೇ ತೀವ್ರವಾಗಿ ಗಾಯಗೊಂಡ ನನ್ನನ್ನು ಸಂಗಡ ಇದ್ದ ವಿರೇಶ ಮತ್ತು ಅಪಘಾತ ಪಡಿಸಿದ
ಮೋಟಾರ ಸೈಕಲ ಸವಾರ ಇಬ್ಬರೂ ಸೇರಿ ಟೋಲಗೇಟ್ ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಕುರಿತು ಗಂಗಾವತಿಯ
ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಅಪಘಾತ ಪಡಿಸಿದ ಚಾಲಕನು ತನ್ನ
ಮೋಟಾರ ಸೈಕಲ ಮಾಲಿಕರು ಕೇಸು ಮಾಡುವದು ಬೇಡ ಚಿಕಿತ್ಸೆ ಖರ್ಚು ಕೊಡುವದಾಗಿ ಹೇಳಿದ್ದರಿಂದ ಇಲ್ಲಿಯವರಗೆ
ಅವರು ಯಾವುದೇ ಚಿಕಿತ್ಸೆಯ ಹಣ ನೀಡದೇ ಇದ್ದುದರಿಂದ ಈ ದಿವಸ ತಡವಾಗಿ ಈ ನನ್ನ ಹೇಳಿಕೆ ದೂರನ್ನು ಸಲ್ಲಿಸಿರುತ್ತೇನೆ.
ಕಾರಣ ಈ ಬಗ್ಗೆ ಅಪಘಾತ ಪಡಿಸಿದ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ: ಕೆ.ಎ-37/ಡಬ್ಲ್ಯೂ-7065 ನೇದ್ದರ
ಚಾಲಕ ಅಬ್ದುಲ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ
ನೀಡಿದ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 01/2016
ಕಲಂ. 143, 147, 148, 109, 323, 504, 506(2), 307 ಸಹಿತ 149 ಐ.ಪಿ.ಸಿ.
ದಿನಾಂಕ: 05-01-2016 ರಂದು ರಾತ್ರಿ 22-30 ಗಂಟೆಗೆ ಫಿರ್ಯಾದಿದಾರರಾದ ಕಳಕಪ್ಪ ಶೆಟ್ಟರ ಸಾ: ಪುರ್ತಗೇರಿ ಹಾ/ವ: ಬಾಗಲಕೋಟ
ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ತಮ್ಮ ಪುರ್ತಗೇರಿ
ಗ್ರಾಮದ ಶ್ರೀ ಸೋಮೇಶ್ವರ ಮತ್ತು ತ್ರೀಕೂಟಾಚಲ ದೇವಸ್ಥಾನಗಳ ಹತ್ತಿರ ಆರೋಪಿತರು ವಾಸದ ಕಟ್ಟಡ ಮಾಡಿದ್ದು,
ಈ ಬಗ್ಗೆ ಫಿರ್ಯಾದಿದಾರರು ಪುರಾತತ್ವ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಲ್ಲಿ ಅರ್ಜಿ ಮಾಡಿದ್ದು, ಈ ಕುರಿತು
ಇಂದು ತಹಶಿಲ್ದಾರ ಕುಷ್ಟಗಿರವರು ಸ್ಥಳ ಪರಿಶೀಲನೆ ಮಾಡುವ ಕುರಿತು ಪುರ್ತಗೇರಿಗೆ ಹೋಗಿದ್ದು, ಈ ಬಗ್ಗೆ
ಫಿರ್ಯಾದಿದಾರರಿಗೆ ನೋಟೀಸ್ ಕೂಡ ಜಾರಿ ಮಾಡಿದ್ದು ಇರುತ್ತದೆ. ಫಿರ್ಯಾದಿದಾರರು ತಾವು ಹಾಗೂ ತಮ್ಮ
ಸಂಗಡ ವಕೀಲರು ಬಂದಾಗ ಇಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಆರೋಪಿತರೆಲ್ಲ ಅಕ್ರಮ ಕೂಟ ರಚಿಸಿಕೊಂಡು
ಕೈಯಲ್ಲಿ ಹಾಗೂ ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದವರೆ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಬೆಂಕಿ
ಹಚ್ಚಿದ ಕಟ್ಟಿಗೆಯಿಂದ ನಾಗರಾಜ ಈತನು ಫಿರ್ಯಾದಿಯ ಮುಖಕ್ಕೆ ಹೊಡೆಯಲು ಹೋದಾಗ ಅವರು ಎಡಗೈಯಿಂದ ಕಟ್ಟಿಗೆಯನ್ನು
ಹಿಡಿದಾಗ ಅಂಗೈ ಸುಟ್ಟಿದ್ದು, ಹಾಗೂ ಮಹಿಳಾ ಆರೋಪಿತರು ಬಡಿಗೆಯಿಂದ ಎಡಗೈ ರಟ್ಟೆಗೆ ಹಾಗೂ ಬುಜಕ್ಕೆ
ಹೊಡೆದಿದ್ದು, ಉಳಿದ ಆರೋಪಿತರು ಫಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಚುಕಲು
ಪ್ರಯತ್ನಿಸಿದ್ದು, ಗುರುಪಾದಯ್ಯ ಇವರು ಆ ಮಗನ್ನ ಬಿಡಬ್ಯಾಡರಿ ಬಹಳ ಸೊಕ್ಕು ಆಗೈದ ಕೊಲೆ ಮಾಡಿಬಿಡರಿ
ಮುಂದೆ ಬಂದಿದ್ದು ನೋಡ್ಕೊಂತಿನ ಅಂತಾ ಪ್ರಚೋದನೆ ಮಾಡಿದ್ದು, ಆಗ ಹಾಜರಿದ್ದವರು ಬಿಡಿಸಿದ್ದು ಫಿರ್ಯಾದಿಯ
ಸಹೋದರನಾದ ಸಂಗಪ್ಪ ರವರು ಬಿಡಿಸಿಕೊಂಡಿದ್ದು ಮಲ್ಲೇಶಪ್ಪ ಈತನಿಗೆ ಆರೋಪಿಗಳು ಕೈಯಿಂದ ಮತ್ತು ಬಡಿಗೆಯಿಂದ
ಬಡಿದಿರುತ್ತಾರೆ, ಗಾಯವಾಗಿರುತ್ತವೆ. ಮತ್ತು ಅಂಟರಠಾಣಾಕ್ಕೆ ಹೊರಟಾಗ ಕಲ್ಲಿನಿಂದ ಫಿರ್ಯಾದಿದಾರರಿಗೆ
ಹೊಗೆದಾಗ ತಪ್ಪಿಸಿಕೊಂಡಿದ್ದು, ಮತ್ತು ಆರೋಪಿತರು ಫಿರ್ಯಾದಿಗೆ ಅವಾಚ್ಯ ಬೈದು, ಇವತ್ತು ನಿನ್ನ ಟೈಮ್
ಚೊಲೊ ಐತಿ ನಮ್ಮ ಕೈಯಿಂದ ಉಳಿದುಕೊಂಡಿರಿ ಇಲ್ಲದಿದ್ದರ ಕೊಲೆ ಮಾಡುತ್ತಿದ್ದೆವು ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿದಾರರ ಮನಸ್ಸಿಗೆ
ಆಘಾತವಾಗಿರುತ್ತದೆ ಕಾರಣ ಈ ಮೇಲಿನವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ
ಇರುತ್ತದೆ.
0 comments:
Post a Comment