1) ಕನಕಗಿರಿ
ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ. 341, 323, 504, 506(2), 109
ಸಹಿತ 34 ಐ.ಪಿ.ಸಿ:.
ದಿನಾಂಕ 04-01-2016 ರಂದು ಮದ್ಯಾಹ್ನ 4-00 ಗಂಟೆಗೆ ಫಿರ್ಯದಿದಾರನು
ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೆನೆಂದರೆ, ಈ ಹಿಂದೆ ನಡೆದ ಗ್ರಾ.ಪಂ
ಚುನಾವಣೆಯ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮತ್ತು ಅದನ್ನೆ ಸಾಧಿಸುತ್ತಾ, ದಿನಾಂಕ:-03-01-2016
ರಂದು ಮದ್ಯಾನ್ಹ 3-00 ಗಂಟೆಗೆ ಫಿಯರ್ಾದಿದಾರನು ಹಿರೇಡಂಕನಕಲ್ಗೆ ಗುಳಿಗೆ ತರಲು ಔಷದಿ ಅಂಗಡಿಗೆ ಹೊಗಿದ್ದು
ಇದನ್ನು ನೋಡಿದ ಆರೋಪಿತ ರಾಜು ತಂದೆ ಕುಮಾರನಾಯಕ ಪೂಜಾರ ನನ್ನನು ಹಿಂಬಾಲಿಸಿ ಬಂದನು, ಈದನ್ನು ನೋಡಿ
ನಾನು ಗಾಬರಿಗೊಂಡು ಅಲ್ಲಿಯೇ ಇದ್ದ ಪರಿಚಯ ಇರುವ ಕರಿಯಪ್ಪ ತಂದೆ ಚನ್ನಪ್ಪ ಕುರಿ ಈತನ ಮನೆಗೆ ಹೋಗಿ
ನನಗೆ ರಾಜು ನಾಯಕ ಈವನು ಹೊಡೆಯಲು ಬಂದಿದ್ದಾನೆ ಅಂತಾ ಹೇಳಿದೆ, ನಂತರ ಒಂದು ತಾಸು ಬಿಟ್ಟು ಕರಿಯಪ್ಪನನ್ನು
ಕರೆದುಕೊಂಡು ವಾಪಸ್ ನಮ್ಮ ಊರಿಗೆ ಬರುವಾಗ ದಾರಿಯ ಮದ್ಯಾದಲ್ಲಿಯೇ ನನ್ನನ್ನು ತಡೆದು ನಿಲ್ಲಿಸಿ, ಲೇ
ಸೂಳೇ ಮಗನೇ ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಕಡೆಯವರಿಗೆ ಮತ ಹಾಕಲಿಲ್ಲ ಅನ್ನುತ್ತಾ ಕೈಯಿಂದ ನನ್ನ
ಕಪಾಳಕ್ಕೆ ಹೊಡೆದು, ಬೆನ್ನಿಗೆ ಗುದ್ದಿದನು. ಇದನ್ನು ಕಂಡು ನನ್ನ ಜೊತೆಗೆ ಇದ್ದ ಕರಿಯಪ್ಪನು ತಡೆದು,
ಯಾಕೇ ಹೊಡೆಯುತ್ತಾಯ ಅಂತಾ ಕೇಳಿದಾಗ, ನಮ್ಮ ತಂದೆ-ತಾಯಿ
ಬೇಕಾದಷ್ಟು ಗಳಿಸಿ ಇಟ್ಟಾರ ನಿನ್ನ ಹೊಡೆದು ಜೀವ ತೆಗೆದು ಬಾ ಅಂತಾ ಹೇಳಿ ಕಳಿಸ್ಯಾರ ಅಂತಾ ಹೇಳಿ,
ತನ್ನ ಮೋಟಾರ್ ಸೈಕಲ್ ನಲ್ಲಿ ತಂದಿದ್ದ ಮಚ್ಚನ್ನು ತೋರಿಸಿದಾಗ ಅಲ್ಲೇಯೇ ಇದ್ದ ವಿರಪಣ್ಣ ತಂದೆ ಈಶಪ್ಪ
ರಾಠೋಡ, ಮತ್ತು ಶಂಕ್ರಪ್ಪ ತಂದೆ ರಾಮಪ್ಪ ರಾಠೋಡ್ ಇವರು ಬಂದು ಬುದ್ದುವಾದ ಹೇಳಿ ಕಳುಹಿಸಿದ್ದು, ಲೇ
ಸೂಳೇ ಮಗನೇ ಈ ಸಲಾ ಉಳಿದಿಯೇಲೆ ಇನ್ನೊಮ್ಮೆ ಸಿಗು ಇದೇ ಮಚ್ಚಿನಿಂದ ನಿನ್ನನ್ನು ಜೀವಂತ ಉಳಿಸುವದಿಲ್ಲ
ಅಂತಾ ಜೀವದ ಬೆದರಿಕೆ ಹಾಕಿ, ತಾನು ತಂದ ಮಚ್ಚನ್ನು ಅಲ್ಲಿಯೇ ಬಿಸಾಕಿ ಹೋದನು, ಅಂತಾ ಮುಂತಾಗಿ ನೀಡಿದ
ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ. 420 ಸಹಿತ
34 ಐ.ಪಿ.ಸಿ:.
ದಿ:04-01-2016 ರಂದು
ರಾತ್ರಿ 7-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮಾಂಜಿನಿ ಸಾ: ಪಾಪಿನಾಯಕನಹಳ್ಳಿ
ಜಿ: ಬಳ್ಳಾರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೇಂದರೇ, ಕಳೆದ ಎರಡು
ವರ್ಷದಿಂದಾ ಫಿರ್ಯಾದಿದಾರರಿಗೆ ಬಿ. ರಾಘವೇಂದ್ರ ಎಂಬುವವರು ಪರಿಚಯವಾಗಿ ನಂತರ ಫಿರ್ಯಾದಿಗೆ ಜಂಟಿಯಾಗಿ
ಟ್ರಾನ್ಸಪೋರ್ಟ ವ್ಯವಹಾರ ಮಾಡೋಣ ಒಳ್ಳೆಯ ಲಾಭವಿದೆ ಅಂತಾ ಸುಳ್ಳು ಹೇಳಿ ನಂಬಿಸಿ
ಫಿರ್ಯಾದಿದಾರರಿಂದ ರೂ. 1,25,00,000=00 ರೂ. ಗಳನ್ನು
ಪಡೆದುಕೊಂಡು ಆರೋಪಿ ಬಿ. ರಾಘವೇಂದ್ರ ಮತ್ತು ಮಾರುತಿ ಇಲ್ಲೂರ ಹಾಗೂ ರವಿ ಇಲ್ಲೂರ ಇವರು ಮೋಸ
ಮಾಡಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ
ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಸಂಚಾರ ಪೊಲೀಸ್ ಠಾಣೆ ಗುನ್ನೆ
ನಂ. 02/2016 ಕಲಂ. 279, 337 ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ 04-01-2015 ರಂದು ಸಂಜೆ 6-00 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ
ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿತ್ತಿರುವ ಫಿರ್ಯಾದಿಯ ಹೇಳಿಕೆಯನ್ನು
ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 04-01-2016 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿಯ ಮಗ ಆತೀಫ್ 9 ವರ್ಷ ಇತನು ಮನೆಯಿಂದ ಆಟ ಆಡಲು ಓಜನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಗುಜರಿ ಅಂಗಡಿಯ ಹತ್ತಿರ
ಹೋಗಿ ಅಲ್ಲಿ ಆಟ ಆಡಿ ವಾಪಾಸ ಮನೆಗೆ ಬರುತ್ತಿರುವಾಗ ಭಾಗ್ಯನಗರದ ಕಡೆಯಿಂದ ಒಬ್ಬ ಮೋಟಾರ್ ಸೈಕಲ್
ಸವಾರನು ತಾನು ಚಲಾಯಿಸುತ್ತಿರುವ ಮೊಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗನಿಗೆ ಟಕ್ಕರಮಾಡಿ ಅಪಘಾತಮಾಡಿದ್ದು ಇದರಿಂದ ಫಿರ್ಯಾದಿಯ
ಮಗನಿಗೆ ಮುಖಕ್ಕೆ, ಎಡಕೈ ಮೊಣಕೈಗೆ, ಬಲಗಡೆ ಚಪ್ಪೆಗೆ ಒಳಪೆಟ್ಟು ಮತ್ತು ತೆರಚಿದಗಾಯಗಳು ಆಗಿರುತ್ತವೆ
ಮತ್ತು ಅಪಘಾತಮಾಡಿದ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು
ನಿಲ್ಲಿಸದೇ ಹಾಗೇ ಹೊರಟು ಹೋಗಿರುತ್ತಾನೆ. ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment