Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 8, 2016

1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 01/2016 ಕಲಂ. 279, 337, 338, 304(ಎ) ಐ.ಪಿ.ಸಿ:.
ದಿನಾಂಕ 07-01-2016 ರಂದು ರಾತ್ರಿ 11-00 ಗಂಟೆಗೆ ಸುಮಾರಿಗೆ ಮುತ್ತು ತಂದೆ ಪರಶುರಾಮ ಇತನು ಮೋ/ಸೈ ನಂ ಕೆ.ಎ. 36-ಡಬ್ಲೂ 6191  ನೇದ್ದರ ಹಿಂದೆ ಫಿರ್ಯಾಧಿದಾರನನ್ನು ಮತ್ತು ವಿನಾಯಕ ಕೊಡಿಸಿಕೊಂಡು ಗಂಗಾವತಿ ಎಪಿಎಂಸಿ ಕಡೆಯಿಂದ ದೇಸಾಯಿ ಕ್ಯಾಂಪ್ ಕಡೆಗೆ ಹೋರಟಿರುವಾಗ ರಾಯಚೂರು ಸರ್ಕಲ್ನಲ್ಲಿ ಅಂದರೆ ರಾಣಾ ಪ್ರತಾಪ ಸಿಂಹ ಸರ್ಕಲ್ನ ಹತ್ತಿರ ವಿದ್ಯಾನಗರ ಕಡೆಯಿಂದ ಲಾರಿ ನಂ ಎಡಿಟಿ 8526 ನೇದ್ದರ ಚಾಲಕ  ತನ್ನ ಲಾರಿಯನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದವನೇ ವೇಗದಲ್ಲಿದ್ದ ಲಾರಿಯು ನಿಯಂತ್ರಣ ಗೊಳ್ಳದೇ  ಮೋಟಾರು ಸೈಕಲ್ಲ ಕಡೆಗೆ ತಿರುವಿ ಮೋಟಾರು ಸೈಕಲ್ಲಗೆ ಮುಂದಿನಿಂದ ಟಕ್ಕರಕೊಟ್ಟು ಅಪಘಾತ ಮಾಡಿದ್ದು ನಂತರ ಮೂವರು ಮೋಟಾರು ಸೈಕಲ್ಲ ಸಮೇತ ರಸ್ತೆ ಮೇಲೆ ಬಿದ್ದಾಗ ಫೀರ್ಯಾದಿದಾರನಿಗೆ ಬಲ ಕಪಾಳಕ್ಕೆ ರಕ್ತಗಾಯವಾಗಿದ್ದು, ಮೈಕೈಗೆ ತೆರೆಚಿದಗಾಯಗಳಾಗಿದ್ದು, ವಿನಾಯಕ ಇತನಿಗೆ  ಬಲ ಹಣೆಯ ಮೇಲೆ ಮತ್ತು ಬಲ ತಲೆಗೆ ರಕ್ತಗಾಯ, ಮತ್ತು ಬಲಬುಜಕ್ಕೆ ಒಳಪೆಟ್ಟಾಗಿದ್ದು ಮತ್ತು  ಮುತ್ತು ತಂದೆ ಪರಶುರಾಮ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 01/2016 ಕಲಂ. 279, 337, 338 ಐ.ಪಿ.ಸಿ:.
 ದಿನಾಂಕ: 07-01-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಾದ ಹೇಮರಡ್ಡಿ ತಂದೆ ಬಸಪ್ಪ ನಾಗರಳ್ಳಿ, ವಯ: 42 ವರ್ಷ ಜಾತಿ: ರಡ್ಡಿ ಉ: ಒಕ್ಕಲಿತನ ಸಾ: ಬೆಟಗೇರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಅದರ ಸಾರಾಂಶವೆನೆಂದರೆ,  ಇಂದು ದಿನಾಂಕ: 07-01-2015 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೆಟಗೇರಿ-ತಿಗರಿ ರಸ್ತೆಗೆ ಹೊಂದಿಕೊಂಡಿರುವ ತಮ್ಮೂರಿನ ಶ್ರೀ ಅನ್ನದಾನೇಸ್ವರ ಶಾಲೆಯ ಹತ್ತಿರ ಇದ್ದಾಗ, ಆರೋಪಿ ನಂ: 01 ಈತನು ನಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ-4978 ನೇದ್ದನ್ನು ಬೆಟಗೇರಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿಯಾಗಿ ಆರೋಪಿ ನಂ: 02 ಈತನು ತಾನು ನಡೆಸಿಕೊಂಡು ಬರುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-16 ಕ್ಯೂ-8719 ನೇದ್ದನ್ನು ತಿಗರಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ಒಬ್ಬರಿಗೊಬ್ಬರು ಸೈಡ್ ಕೊಡದೇ ಮುಖಾಮುಖಿಯಾಗಿ ಟಕ್ಕರ್ ಕೊಟ್ಟು ಅಫಘಾತ ಮಾಡಿಕೊಂಡು, ರಸ್ತೆ ಮೇಲೆ ಬಿದ್ದ ಪರಿಣಾಮ ಆರೋಪಿ ನಂ:01 ಈತನಿಗೆ ಬಲಗಡೆಯ ಹಣೆಗೆ, ಬಲ ಕಪಾಳಕ್ಕೆ, ಬಾಯಿಗೆ ಭಾರಿ ರಕ್ತಗಾಯವಾಗಿದ್ದು, ಅದೇ ರೀತಿಯಾಗಿ ಆರೋಪಿ ನಂ: 02 ಈತನಿಗೆ ಬಲಗಾಲ ಪಾದದ ಮೇಲೆ, ಬೆನ್ನಿಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಅಲ್ಲಲ್ಲಿ ರಕ್ತಗಾಯವಾಗಿದ್ದು ಇರುತ್ತದೆ. ತಾವು ನಡೆಸುತ್ತಿದ್ದ ಮೋಟರ್ ಸೈಕಲ್ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ ಕೊಡದೇ ಮುಖಾಮುಖಿಯಾಗಿ ಅಫಘಾತ ಮಾಡಿಕೊಂಡು ಗಾಯಗೊಂಡಿರುವ ಮೋಟರ್ ಸೈಕಲ್ ಸವಾರರಾದ ಅರುಣ ತಂದೆ ಶೇಖಪ್ಪ ಚೆನ್ನದಾಸರ, ಸಾ: ಹನಕುಂಟಿ ಹಾಗೂ ದೇವೆಂದ್ರಪ್ಪ ಶಿಕ್ಷಕರು ಸಾ: ಬೆಟಗೇರಿ ಇವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ. 3, 4 & 5 ಸ್ಪೋಟಕ ವಸ್ತುಗಳ ಕಾಯ್ದೆ 1908 ಮತ್ತು 338 ಸಹಿತ 34ಐ.ಪಿ.ಸಿ:.

ದಿನಾಂಕ:- 07-01-2016 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರರಾದ ಅಂಬರೀಶ ತಂದೆ ಶಿವಪ್ಪ ವಾಲೇಕಾರ, ವಯಸ್ಸು 32 ವರ್ಷ, ಜಾತಿ: ಕುರುಬರು ಉ: ಜಯಶ್ರೀ ಸ್ಟೋನ್ ಕ್ರಷರನಲ್ಲಿ ಕೆಲಸ ಸಾ: ವೆಂಕಟಗಿರಿ. ತಾ: ಗಂಗಾವತಿ. ಇವರು ಠಾಣೆಗ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ವೆಂಕಟಗಿರಿ ಗ್ರಾಮದ ನಿವಾಸಿ ಇದ್ದು, ವೆಂಕಟಗಿರಿಯಲ್ಲಿರುವ ಜಯಶ್ರೀ ಸ್ಟೋನ್ ಕ್ರಷರನಲ್ಲಿ ಸುಮಾರು 2 ವರ್ಷಗಳಿಂದ ಕೆಲಸ ಮಾಡಿಕೊಂಡಿರುತ್ತೇನೆ.  ಕೆ. ಶೇಷಾರಾವ್  ಸಾ: ಜಂಗಮರ ಕಲ್ಗುಡಿ ಇವರು ಈ ಸ್ಟೋನ್ ಕ್ರಷರನ ಮಾಲೀಕರು ಇರುತ್ತಾರೆ. ಸ್ಟೋನ ಕ್ರಷರನ ಕ್ವಾರಿಯಲ್ಲಿ ಚಂದ್ರಕಾಂತ ಸಾ: ಬಸವನಬಾಗೇವಾಡಿ ಜಿ: ಬಿಜಾಪೂರು ಹಾಲಿವಸ್ತಿ: ಹಿರೇಬೆಣಕಲ್ ಈತನು ಕಲ್ಲು ಕ್ವಾರಿಯಲ್ಲಿ ಕಲ್ಲು ಬಂಡೆಗಳನ್ನು ಒಡೆಯುವ ಡ್ರಿಲ್ಲಿಂಗ್ ಕೆಲಸವನ್ನು ಮಾಡುತ್ತಾನೆ. ಬಸವರಾಜ ತಂದೆ ಫಕೀರಪ್ಪ ಚಳ್ಳಾರಿ, ವಯಸ್ಸು 35 ವರ್ಷ, ಜಾತಿ: ನಾಯಕ ಸಾ: ಹಿರೇಬೆಣಕಲ್ ಇವನು ಸುಮಾರು 5-6 ತಿಂಗಳಿನಿಂದ ಕ್ರಷರನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ:- 07-01-2016 ರಂದು ಸಂಜೆ 5:30 ಗಂಟೆಯ ಸುಮಾರಿಗೆ ವೆಂಕಟಗಿರಿ ಸೀಮಾ ಸರ್ವೆ ನಂ: 77 ರ ಗುಡ್ಡದ ಕ್ವಾರಿಯಲ್ಲಿ ಹೋದ ಸಮಯದಲ್ಲಿ ಕ್ರಷರಗೆ ಬೇಕಾದಂತಹ ಕಲ್ಲುಗಳನ್ನು ಒಡೆಯಲು ಚಂದ್ರಕಾಂತ ಈತನು ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಬಸವರಾಜನು ಸಹ ಕೆಲಸ ಮಾಡುತ್ತಿದ್ದನು. ನಾನು ಅವರ ಕಡೆಗೆ ಹೋಗುವಷ್ಟರಲ್ಲಿ ಗುಡ್ಡದಲ್ಲಿ ಕಲ್ಲು ಬಂಡೆಯನ್ನು ಒಡೆಯಲು ಚಂದ್ರಕಾಂತನು ಸುರಕ್ಷತೆಯನ್ನು ಕೈಗೊಳ್ಳದೇ ಸ್ಪೋಟಕ ವಸ್ತುಗಳನ್ನು ಬಳಸಿ ಡ್ರಿಲ್ಲಿಂಗ್ ಕೆಲಸ ಮಾಡುವಾಗ ಒಮ್ಮೆಲೇ ಕಲ್ಲು ಸ್ಪೋಟಗೊಂಡು ಸಿಡಿದಿದ್ದರಿಂದ ಬಸವರಾಜನ ಎಡಭಾಗದ ಮುಖಕ್ಕೆ ಭಾರಿ ಗಾಯವಾಗಿದ್ದು, ಚಂದ್ರಕಾಂತನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದವು. ನಂತರ ಕ್ರಷರನಲ್ಲಿ ಕೆಲಸ ಮಾಡುವಂತಹ ದಾವಲಸಾಬ ತಂದೆ ಮೌಲಾಸಾಬ ಸಾ: ಗಂಗಾವತಿ ಈತನಿಗೆ ಫೋನ್ ಮಾಡಿ ಕ್ರಷರನಲ್ಲಿರುವಂತಹ ಟಾಟಾ ಏಸ್ ವಾಹನವನ್ನು ತರುವಂತೆ ವಿಷಯ ತಿಳಿಸಿದ್ದು, ನಂತರ ಆತನು ಡ್ರೈವರ ಶಿವಕುಮಾರ ಸ್ವಾಮಿಯೊಂದಿಗೆ ಟಾಟಾ ಏಸ್ ವಾಹನ ನಂ: ಕೆ.ಎ-37/ 4333 ನೇದ್ದನ್ನು ತೆಗೆದುಕೊಂಡು ಬಂದಿದ್ದು, ನಂತರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಬಂದಿದ್ದು, ಬಸವರಾಜನನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ, ನಂತರ ಚಂದ್ರಕಾಂತನನ್ನು ಚಿನಿವಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ನಂತರ ವಿಷಯವನ್ನು ಬಸವರಾಜನ ಹೆಂಡತಿ ಹುಲಿಗೆಮ್ಮಳಿಗೆ ತಿಳಿಸಿದ್ದು, ಅವಳು ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಸವರಾಜನನ್ನು ಅವರೊಂದಿಗೆ ಬಳ್ಳಾರಿಗೆ ಕಳುಹಿಸಿಕೊಡಲಾಯಿತು.  ಜಯಶ್ರೀ ಸ್ಟೋನ್ ಕ್ರಷರ್ ಮಾಲೀಕರಾದ ಕೆ. ಶೇಷಾರಾವ್ ಇವರುಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಡ್ರಿಲ್ಲಿಂಗ್ ಕೆಲಸ ಮಾಡುವ ಚಂದ್ರಕಾಂತನಿಂದ ಕಲ್ಲು ಬಂಡೆಗಳನ್ನು ಒಡೆಯಲು ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಯಾವುದೇ ಸುರಕ್ಷತೆಯನ್ನು ಕೈಗೊಳ್ಳದೇ ತೀವ್ರ ನಿರ್ಲಕ್ಷ್ಯತನವಹಿಸಿ ಬಂಡೆ ಒಡೆಯುವ ಕಾಲಕ್ಕೆ ಏಕಾಏಕಿ ಸ್ಪೋಟಗೊಂಡು ಸ್ಥಳದಲ್ಲಿದ್ದ ಕೂಲಿ ಕೆಲಸಗಾರ ಬಸವರಾಜನು ತೀವ್ರವಾಗಿ ಗಾಯಗೊಂಡಿದ್ದು, ಚಂದ್ರಕಾಂತನಿಗೂ ಸಹ ಗಾಯಗಳಾಗಿದ್ದು ಇರುತ್ತದೆ. ಈ ಘಟನೆಗೆ ಕೆ. ಶೇಷಾರಾವ್ ಮತ್ತು ಚಂದ್ರಕಾಂತ ಇವರು ಕಾರಣರಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಗಾಯಾಳುವಿಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ." ಅಂತಾ ನೀಡಿದ ಹೇಳೀಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

0 comments:

 
Will Smith Visitors
Since 01/02/2008