Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, January 9, 2016

ದಿನಾಂಕ:- 08-01-2016 ರಂದು ಸಂಜೆ 5:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.ಇಂದು ದಿನಾಂಕ:- 08-01-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಬಾಗಿಲು ಸೀಮಾದಲ್ಲಿ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 86, 131, 323, 180, 429, 361, 358 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಳಲ್ಲಿ ಠಾಣೆಯಿಂದ ಮಧ್ಯಾಹ್ನ 3:30 ಗಂಟೆಗೆ ಹೊರಟು ಕಡೇಬಾಗಿಲು ಹತ್ತಿರ  ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ನಾಗೇಶ ತಂದೆ ಸಣ್ಣ ಈರಣ್ಣ, ಇಡ್ಲೂರು, ವಯಸ್ಸು 36 ವರ್ಷ, ಜಾತಿ: ಹಡಪದ ಉ: ಮೋಟಾರ ವೈಂಡಿಂಗ್ ಕೆಲಸ ಸಾ: ಮಹಾವೀರ ಸರ್ಕಲ್, ಡೈಲಿ ಮಾಕರ್ೆಟ್ ಹತ್ತಿರ, ಗಂಗಾವತಿ (2) ಸೈದಪ್ಪ ತಂದೆ ಮುದಿಯಪ್ಪ ಜಾತಿ: ಮಡಿವಾಳ, ವಯಸ್ಸು 29 ವರ್ಷ, ಉ: ಡೆಕೋರೇಟರ ಸಪ್ಲಾಯರ್ ಸಾ: 1ನೇ ವಾರ್ಡ, ಮಳಿಯಮ್ಮ ದೇವಸ್ಥಾನದ ಹತ್ತಿರ, ಬಸಾಪಟ್ಟಣ (3) ಗುಂಡಿ ಈರಪ್ಪ ತಂದೆ ಹುಲಗಪ್ಪ, ವಯಸ್ಸು 40 ವರ್ಷ, ಜಾತಿ: ಗಂಗಾಮತ ಉ: ಕೂಲಿ ಕೆಲಸ ಸಾ: ಆನೇಗುಂದಿ. (4) ಪಂಪಾಪತಿ ತಂದೆ ದ್ಯಾವಣ್ಣ, ವಯಸ್ಸು 33 ವರ್ಷ, ಜಾತಿ: ಉಪ್ಪಾರ ಉ: ಕೂಲಿ ಕೆಲಸ ಸಾ: ಹಿರೇಜಂತಕಲ್-ಗಂಗಾವತಿ. (5) ಸಂಗಪ್ಪ ತಂದೆ ಚೆನ್ನಪ್ಪ ಗದಗ, ವಯಸ್ಸು 52 ವರ್ಷ, ಲಿಂಗಾಯತ ಉ: ನೆಲ್ಲು ವ್ಯಾಪಾರ ಸಾ: ವಡ್ಡರಹಟ್ಟಿ ತಾ: ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,800/- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 4:00 ರಿಂದ 5:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 5:30 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ  ಸಾರಾಂಶ ಇದ್ದು ಕಲಂ: 87 ಕೆ.ಪಿ. ಕಾಯ್ದೆ ಅಡಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಕಾರಣ  5 ಜನರ ವಿರುದ್ದ  ಪ್ರಕರಣ ದಾಖಲು ಮಾಡಿದ್ದು ಇರುತ್ತದೆ
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ. 78(3) Karnataka Police Act
ದಿನಾಂಕ: 08-01-2016 ರಂದು ರಾತ್ರಿ 9:30 ಗಂಟೆಗೆ ಶ್ರೀ ಸಾಬಯ್ಯ. ಪಿ.ಎಸ್.ಐ. ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 08-01-2016 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಟಾಟ ನೆಡೆಯುತ್ತಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ.ಸಾಹೇಬರು ಮಾರ್ಗದರ್ಶನದಂತೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ 100, 287, ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪ್ ನಂ: ಕೆಎ-37/ಜಿ-357 ನೇದ್ದರಲ್ಲಿ ಜೀಪ್ ಚಾಲಕ ಎ.ಪಿ.ಸಿ. 94 ಶಾಂತವೀರಗೌಡ ರವರೊಂದಿಗೆ ಗಂಗಾವತಿಯಿಂದ ಇಸ್ಲಾಂಪೂರ ಮುಖಾಂತರ ಹೊರಟು ದಾಸನಾಳ ಬ್ರಡ್ಜ್  ಸಮೀಪ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿ ನಡೆದುಕೊಂಡು ರಾತ್ರಿ 7:30 ಗಂಟೆಗೆ ಹೋಗಿ ನೋಡಲಾಗಿ ದಾಸನಾಳ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸೇರಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ನಸಿಬದ ಮಟಕಾ ಜೂಜಾಟ ಅಂತಾ ಕೂಗುತ್ತಾ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದು, ಇನ್ನೊಬ್ಬನು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಕೂಡಲೇ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರೆಲ್ಲರೂ ಅಲ್ಲಿಂದ ಓಡಿ ಹೋಗಿದ್ದು, ಸಿಕ್ಕಿಬಿದ್ದವನನ್ನು ವಿಚಾರಿಸಲು ಅವನು ತನ್ನ ಹೆಸರು ಸೈಯದ್ ಶಬ್ಬೀರ್ ತಂದೆ ಸೈಯದ್ ಜಲಾಲಸಾಬ ಮಾನವಿ ವಯಸ್ಸು: 24 ವರ್ಷ ಜಾತಿ: ಮುಸ್ಲಿಂ, ಉ: ವ್ಯಾಪಾರ ಸಾ: ದಾಸನಾಳ ಮೇನ ರಸ್ತೆಯ ಹತ್ತಿರ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 760-00 ರೂ, 01 ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅಲ್ಲಿಂದ ಓಡಿ ಹೋಗಿದ್ದ ಹಸನಸಾಬ ಸಾ: ಅಂಬೇಡ್ಕರ ನಗರ-ಗಂಗಾವತಿ ಎಂಬುವವನಿಗೆ ಕೊಡುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 7:30 ಗಂಟೆಯಿಂದ 8:30 ಗಂಟೆಯವರಗೆ ಸ್ಥಳದಲ್ಲಿಯೇ ನಿರ್ವಹಿಸಿ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಕಲಂ: 78(3) ಕೆಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ.ಅಂತಾ ಮುಂತಾಗಿ ಸಾರಾಂಶ ಇದ್ದು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ರಾತ್ರಿ 10:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 05/2016 ಕಲಂ 78(iii) ಕೆ.ಪಿ. ಕಾಯ್ದೆ ಅಡಿ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  
3) ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ. 279, 338, ಐ.ಪಿ.ಸಿ:.
ದಿನಾಂಕ:08-01-2016 ರಂದು ಸಾಯಂಕಾಲ 06-00 ಗಂಟೆಗೆ ಇಲಕಲದಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಇಲಕಲ ಕಠಾರೆ ಆಸ್ಪತ್ರೆಗೆ ಬೇಟಿ ನೀಡಿ  ಗಾಯಾಳು ದಾದೇಸಾಬ ಸಾ:ಹೂಲಗೇರಿ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ 09-15 ಪಿ.ಎಂ. ಗಂಟೆಗೆ ಬಂದು ಸದರ ಪಿರ್ಯಾದಿಯ ಸಾರಾಂಶ ವೆನೆಂದರೆ. ಇಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ತಮ್ಮ ಮೋಟಾರ ಸೈಕಲ್ ನಂ: ಕೆ.ಎ-37 ಎಸ್-2024  ಹಿರೋ ಪ್ಯಾಷನ್ ಪ್ರೋ ಮೋಟಾರ ಸೈಕಲ್ ತೆಗೆದುಕೊಂಡು  ಶ್ರೀ ಮಂಜುನಾಥ ಧರ್ಮಸ್ಥಳ ಟ್ರಸ್ಟ ಕುಷ್ಟಗಿ ಆಪೀಸ್ ಕೆಲಸಕ್ಕಾಗಿ ಹೋರಟು. ಮುಂಜಾನೆ 11-00 ಗಂಟೆಯ ಸುಮಾರಿಗೆ ಹನಮಸಾಗರ-ಕುಷ್ಟಗಿ ರಸ್ತೆಯ ಮೇಲೆ ಮಲಕಾಪೂರ ಕ್ರಾಶ ಹತ್ತಿರ ಹೋಗುತ್ತಿರುವಾಗ ಮಲಕಾಪೂರ ಕಡೆಯಿಂದ ಒಂದು ಟಂ.ಟಂ. ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ತಿರುವನ್ನು ಲೆಕ್ಕಿಸದೇ ಮೇನ್ ರೋಡಿನಲ್ಲಿ ಹಾಗೇಯೇ ಬಂದು ನನ್ನ ಮೋಟಾರ ಸೈಕಲ್ ಗೆ ಟಕ್ಕರಕೊಟ್ಟು ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ನನಗೆ ಎಡಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಂತಾಗಿರುತ್ತದೆ ಹಾಗೂ ಎಡಗಾಲು ಹಿಂಬಡದ ಹತ್ತಿರ ತೆರೆಚಿದ ಗಾಯವಾಗಿರುತ್ತದೆ. ನಂತರ ಟಂ. ಟಂ. ವಾಹನದ ನಂಬರನ್ನು ನೋಡಲು ಕೆ.ಎ-37-9616 ಅಂತಾ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಮಹೇಶ ತಂದೆ ರಾಜಪ್ಪ ಹಡಪದ ಸಾ: ಹಿರೇಮನ್ನಾಪೂರ ಅಂತಾ ಗೊತ್ತಾಯಿತು. ನಂತರ ಅಲ್ಲಿಗೆ ತಮ್ಮ ಮೋ.ಸೈ. ಮೇಲೆ ಬಂದ ನಮ್ಮೂರ ಶಂಕರ ತಂದೆ ಗುರುಲಿಂಗಪ್ಪ ಹೊರಪೇಟ ಮತ್ತು ಮಲ್ಲಪ್ಪ ತಂದೆ ಬಸವಂತಪ್ಪ ಹೊರಪೇಟ ರವರು ಬಂದು ನನ್ನನ್ನು 108 ಅಂಬುಲೆನ್ಸಗೆ ಪೋನ್ ಮಾಡಿ ಚಿಕಿತ್ಸೆ ಕುರಿತು ಇಲಕಲ್ ಕಠಾರೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನನ್ನ ಮೋಟಾರ ಸೈಕಲ್ ನಂ: ಕೆ.ಎ-37-ಎಸ್-2024 ನೇದ್ದಕ್ಕೆ ಟಕ್ಕರಕೊಟ್ಟು ಅಪಘಾತಪಡಿಸಿ ನನಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳನ್ನುಂಟು ಮಾಡಿದ ಟಂ.ಟಂ. ನಂ: ಕೆ.ಎ-37/9616 ನೇದ್ದರ ಚಾಲಕನಾದ ಮಹೇಶ ತಂದೆ ರಾಜಪ್ಪ ಹಡಪದ ಸಾ: ಹಿರೇಮನ್ನಾಪೂರ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 06/2016 ಕಲಂ. 279, 337, ಐ.ಪಿ.ಸಿ:.
ದಿ:08-01-2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಮಲ್ಲನಗೌಡ ಪಾಟೀಲ. ಸಾ: ಡೋಮನಾಳ. ತಾ:ಜಿ: ವಿಜಯಪುರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ಡಾವಣಗೇರಿಯಲ್ಲಿ ನಡೆಯುವ ರೈತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ನಾನು ಮತ್ತು ನಮ್ಮೂರಿನ ರೈತರು ಕೂಡಿಕೊಂಡು ಇಂದು ದಿ:08-01-16 ರಂದು ಬೆಳಗಿನಜಾವ 03-00 ಗಂಟೆಯ ಸುಮಾರಿಗೆ ಕ್ರೂಷರ ನಂ: ಕೆಎ-24/3774 ನೇದ್ದರಲ್ಲಿ ಕುಳಿತು ಕುಷ್ಟಗಿ ಹೊಸಪೇಟೆ ಎನ್.ಹೆಚ್-50 ರಸ್ತೆಯ ಮೆತಗಲ್ ಕ್ರಾಸ್ ಸಮೀಪ ಹೊರಟಿದ್ದಾಗ ನಮ್ಮ ವಾಹನದ ಚಾಲಕನು ರೋಡ ಹಂಪ್ಸ ದಾಟಿಸುತ್ತಾ ನಿಧಾನಕ್ಕೆ ಹೊರಟಿದ್ದಾಗ ಅದೇವೇಳೆಗೆ ನಮ್ಮ ಹಿಂದಿನಿಂದ ಅಂದರೆ ಕುಷ್ಟಗಿ ಕಡೆಯಿಂದ ಖಾಸಗಿ ಬಸ್ ನಂ: ಕೆಎ-51/ಸಿ-3173 ನೇದ್ದರ ಚಾಲಕನು ತನ್ನ ಬಸ್  ನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮುಂದೆ ಹೊರಟಿದ್ದ ನಮ್ಮ ವಾಹನದ ನಿಗದಿತ ಅಂತರ ಕಾಪಾಡದೇ ಓಡಿಸುತ್ತಾ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಕ್ರೂಷರ ವಾಹನದಲ್ಲಿದ್ದ ರಮೇಶ, ಖಾಜೀರಪ್ಪ, ಹಾಗೂ ಚಿದಾನಂದ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಕಾರಣ ಸದರಿ ಖಾಸಗಿ ಬಸ್ ನಂ: ಕೆಎ-51/ಸಿ-3173 ನೇದ್ದರ ಚಾಲಕ ಸಹದೇವ ಜಾಧವ ಸಾ: ನವನಗರ ಧಾರವಾಡ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 06/2016 ಕಲಂ. 279, 337, ಐ.ಪಿ.ಸಿ:.
ದಿ:08-01-2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಮಲ್ಲನಗೌಡ ಪಾಟೀಲ. ಸಾ: ಡೋಮನಾಳ. ತಾ:ಜಿ: ವಿಜಯಪುರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ಡಾವಣಗೇರಿಯಲ್ಲಿ ನಡೆಯುವ ರೈತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ನಾನು ಮತ್ತು ನಮ್ಮೂರಿನ ರೈತರು ಕೂಡಿಕೊಂಡು ಇಂದು ದಿ:08-01-16 ರಂದು ಬೆಳಗಿನಜಾವ 03-00 ಗಂಟೆಯ ಸುಮಾರಿಗೆ ಕ್ರೂಷರ ನಂ: ಕೆಎ-24/3774 ನೇದ್ದರಲ್ಲಿ ಕುಳಿತು ಕುಷ್ಟಗಿ ಹೊಸಪೇಟೆ ಎನ್.ಹೆಚ್-50 ರಸ್ತೆಯ ಮೆತಗಲ್ ಕ್ರಾಸ್ ಸಮೀಪ ಹೊರಟಿದ್ದಾಗ ನಮ್ಮ ವಾಹನದ ಚಾಲಕನು ರೋಡ ಹಂಪ್ಸ ದಾಟಿಸುತ್ತಾ ನಿಧಾನಕ್ಕೆ ಹೊರಟಿದ್ದಾಗ ಅದೇವೇಳೆಗೆ ನಮ್ಮ ಹಿಂದಿನಿಂದ ಅಂದರೆ ಕುಷ್ಟಗಿ ಕಡೆಯಿಂದ ಖಾಸಗಿ ಬಸ್ ನಂ: ಕೆಎ-51/ಸಿ-3173 ನೇದ್ದರ ಚಾಲಕನು ತನ್ನ ಬಸ್  ನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮುಂದೆ ಹೊರಟಿದ್ದ ನಮ್ಮ ವಾಹನದ ನಿಗದಿತ ಅಂತರ ಕಾಪಾಡದೇ ಓಡಿಸುತ್ತಾ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಕ್ರೂಷರ ವಾಹನದಲ್ಲಿದ್ದ ರಮೇಶ, ಖಾಜೀರಪ್ಪ, ಹಾಗೂ ಚಿದಾನಂದ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಕಾರಣ ಸದರಿ ಖಾಸಗಿ ಬಸ್ ನಂ: ಕೆಎ-51/ಸಿ-3173 ನೇದ್ದರ ಚಾಲಕ ಸಹದೇವ ಜಾಧವ ಸಾ: ನವನಗರ ಧಾರವಾಡ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 10/2016 ಕಲಂ. 143, 498 (ಎ), 323, 504, 506, ಸಹಿತ 149 ಐ.ಪಿ.ಸಿ:.


ದಿನಾಂಕ 08-01-2016 ರಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ಶ್ರೀಮತಿ ಸರ್ವಮಂಗಳ @ ಮಂಜುಳಾ ಗಂಡ ಮಂಜುನಾಥ ಅಕ್ಕಸಾಲಿ ವಯ.26 ವರ್ಷ ಜಾ.ಅಕ್ಕಸಾಲಿ ಸಾ.ಕನಕಗಿರಿ ತಾ : ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿಯನ್ನು ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾಧಿ ಶ್ರೀಮತಿ ಸರ್ವಮಂಗಳ @ ಮಂಜುಳಾ ಇವರಿಗೆ ಸುಮಾರು 08 ವರ್ಷಗಳ ಹಿಂದೆ ಕನಕಗಿರಿ ಗ್ರಾಮದ ಮಂಜುನಾಥ ತಂದೆ ದುರುಗಪ್ಪ ಅಕ್ಕಸಾಲಿ 36 ವರ್ಷ ಬೈಲಪತ್ತಾರ ಇವನೊಂದಿಗೆ ಮದುವೆ ಆಗಿದ್ದು, ಸಧ್ಯ ತನಗೆ ಮೂರು ಜನ ಮಕ್ಕಳಿರುವುದಾಗಿ ಈಗ್ಗೇ ಅಂ. 02-03 ವರ್ಷಗಳಿಂದ ತನ್ನ ಗಂಡನ ಮನೆಯಲ್ಲಿ ಗಂಡ ಮತ್ತು ಆತನ ಮನೆಯವರು ಕೂಡಿಕೊಂಡು ನಿನಗೆ ಕೆಲಸ ಮಾಡಲು ಬರುವುದಿಲ್ಲ ಅಂಥಾ ಸೂಳೆ ಇಂಥಾ ಸೂಳೆ ಅಂತಾ ಆಗಾಗ ಬೈಯುತ್ತಿದ್ದು ಇರುತ್ತದೆ. ದಿನಾಂಕ 08-01-2016 ರಂದು ಮುಂಜಾನೆ 7-30 ಗಂಟೆಯ ಸುಮಾರಿಗೆ ಫಿರ್ಯಾಧಿದಾರಳು ಮನೆಯಲ್ಲಿದ್ದಾಗ ಆಕೆಯ ಗಂಡ ಮಂಜುನಾಥನು ಯಾಕಲೇ ಜಾಸ್ತಿ ತವರು ಮನೆಗೆ ಹೋಗುತ್ತೀ ನಿಮ್ಮ ಅಣ್ಣ ಊರಾಗಿಲ್ಲದ ಮಾಲೆ ಹಾಕ್ಯಾನೆನು ಭೋಸುಡಿ ಅಂತಾ ಬೈಯುತ್ತಾ ತನ್ನ ತುಟಿಗೆ ಕೈಯಿಂದ ಹೊಡೆದಿದ್ದು ಹಾಗೂ ಸಿರೇಯನ್ನು ಕುತ್ತಿಗೆಗೆ ಸುತ್ತಿ ಎತ್ತಿದನು ಮತ್ತು ಅಲ್ಲೆ ಇದ್ದ ತನ್ನ ಮಾವ ದುರುಗಪ್ಪ ಅತ್ತೆ ಯಮುನಮ್ಮ ದೊಡ್ಡ ಭಾವ ಚಂದ್ರಪ್ಪ ಮೈದುನ ಶಿವು ತನ್ನ ಗಂಡನ ಅಣ್ಣನ ಹೆಣಂಡತಿಯಾದ ಈರಮ್ಮ ನೆಗೆಣ್ಣಿಯಾದ ಪಾರ್ವತೆಮ್ಮ ಇವರೆಲ್ಲರೂ ಕೂಡಿಕೊಂಡು ಈ ಸೂಳೆಯನ್ನು ಬಿಡಬ್ಯಾಡರಿ ಜೀವಂತ ಉಳಿಸುವುದು ಬ್ಯಾಡ ಅಂತಾ ಅನ್ನುತ್ತಾ ಬೈದಾಡಿದ್ದು ಈ ಸುದ್ದಿ ಕೇಳಿ ನನ್ನ ಅಣ್ಣ ಭೀಮಣ್ಣ ಮತ್ತು ಮನೆಯ ಆಜುಬಾಜಿನ ಜನರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿನಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008