: : ಪತ್ರಿಕಾ ಪ್ರಕಟಣೆ : :
ಇಂದು ದಿನಾಂಕ: 13-01-2016 ರಂದು ಬೆಳಗ್ಗೆ 07-30 ಗಂಟೆಗೆ ಪಿರ್ಯಾಧಿದಾರರಾದ ಫಕೀರಪ್ಪ ತಂದೆ ಬನ್ನೆಪ್ಪ ಮನ್ನಾಪೂರ, ವಯ: 30 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಹಂದ್ರಾಳ ಹಾ: ವ: ಕಾಳಿದಾಸ ನಗರ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿರ್ಯಾಧಿಯನ್ನು ಹಾಜರು ಪಡಿಸಿದ್ದು, ಸದರಿ ಪಿರ್ಯಾಧಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲು ಸದರಿ ಪಿರ್ಯಾಧಿಯ ಸಾರಾಂಶವೆನೆಂದರೆ, ಪಿರ್ಯಾಧಿದಾರಿಗೆ ಅವರ ಮಾವನವರ ಹತ್ತಿರ ಕೈಗಡ ಕೊಟ್ಟ ಹಣವನ್ನು ಇಸಿದುಕೊಂಡು ಬರುವ ಸಲುವಾಗಿ ಇಂದು ದಿನಾಂಕ: 13-01-2016 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಪಿರ್ಯಾಧಿದಾರರು ಡಂಬ್ರಳ್ಳಿ ಸೀಮಾದಲ್ಲಿ ಅವರ ಮಾವ ಮಾಡುತ್ತಿರುವ ಹೊಲಕ್ಕೆ ಹೋಗಿ ನೋಡಲು ಅವರ ಮಾವ ಹೊಲದಲ್ಲಿ ಇರಲಿಲ್ಲ. ನಂತರ ಅವರ ಹೊಲದ ಹತ್ತಿರ ಆರೋಪಿತನಾದ ವಾಸನಗೌಡ ತಂದೆ ನಂದನಗೌಡ ನಂದೆಪ್ಪಗೌಡ್ರ ಸಾ: ಡಂಬ್ರಳ್ಳಿ ಇವರು ಹಾಗೂ ಇತರೆ 7 ಜನರು ಕೂಡಿಕೊಂಡು, ಹೊಲದಲ್ಲಿ ಭೂಮಿಯನ್ನು ಪೂಜೆ-ಪುನಸ್ಕಾರ ಮಾಡಿ, ಭೂಮಿಯನ್ನು ತೋಡುತ್ತಿದ್ದದ್ದು ಇರುತ್ತದೆ. ಸದರಿಯವರೆಲ್ಲರೂ ಕೂಡಿಕೊಂಡು ಭೂಮಿಯಲ್ಲಿರುವ ನಿಧಿಯನ್ನು ತೆಗೆದು ಮಾರಾಟ ಮಾಡಿ, ಲಾಭ ಗಳಿಸುವ ಉದ್ಧೇಶದಿಂದ ವಾಸನಗೌಡ ಇವರ ಹೊಲದ ಭೂಮಿಯಲ್ಲಿರುವ ಸರಕಾರದ ಸಂಪತ್ತನ್ನು ಶೋಧನೆ ಮಾಡಲು ಪ್ರಯತ್ನ ಪಡುತ್ತಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 04/2016 ಕಲಂ: 143, 511, ಸಹಿತ 149 ಐ.ಪಿ.ಸಿ. ಹಾಗೂ Sec-20. Indian Treasure Trove Act-1878. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಕೂಡಲೇ ಅಳವಂಡಿ ಪೊಲೀಸ್ ಠಾಣೆಯ ಶ್ರೀ ಪ್ರಕಾಶ ಮಾಳಿ ರವರು ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಜಿಲ್ಲಾ ಉಪಾಧೀಕ್ಷರು, ಕೊಪ್ಪಳ ಉಪ-ವಿಭಾಗ ಕೊಪ್ಪಳರವರ ಹಾಗೂ ಸಿ.ಪಿ.ಐ. ಕೊಪ್ಪಳ ಗ್ರಾಮೀಣ ವೃತ್ತರವರ ಮಾರ್ಗದರ್ಶನದಲ್ಲಿ ತಮ್ಮ ಠಾಣೆಯ ಸಿಬ್ಬಂದಿಯವರಾದ ಬಸಪ್ಪ ಎ.ಎಸ್.ಐ., ಭೀಮಪ್ಪ ಹೆಚ್.ಸಿ-116, ಪಿಸಿಗಳಾದ-377, 256, 237,
427, 384 ರವರನ್ನು ಕರೆದುಕೊಂಡು, ತನಿಖೆಯನ್ನು ಮುಂದುವರೆಸುತ್ತಾ, ಘಟನಾ ಸ್ಥಳಕ್ಕೆ ಬೇಟಿ ನೀಡಿ, ಗುನ್ನೆ ಜಾಗೆ ಪಂಚನಾಮೆಯನ್ನು ಪಂಚರ ಸಮಕ್ಷಮ ಮಾಡಿಕೊಂಡು, ಆರೋಪಿತರ ಪತ್ತೆ ಕುರಿತು ತಂಡ ರಚನೆ ಮಾಡಿ, ಡಂಬ್ರಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಆರೋಪಿತನಾದ ವಾಸನಗೌಡ ತಂದೆ ನಂದಪ್ಪಗೌಡ ನಂದನಗೌಡ್ರ ಇವರ ಮನೆಗೆ ಬೇಟಿ ನೀಡಿ, ಮನೆಯಲ್ಲಿದ್ದ ಅವರಿಗೆ ವಿಚಾರಣೆ ಮಾಡಿ, ಮತ್ತು ಅವರೊಂದಿಗೆ ಅವರ ಮನೆಯಲ್ಲಿದ್ದ ಇನ್ನೂಳಿದ 1] ಶರಣಬಸವ 2] ಹನುಮಂತ 3] ಮಾಹಾಂತೇಶ 4] ಯಲ್ಲಪ್ಪ 5] ಕರಿಯಪ್ಪ 6] ಬಸವರಾಜ 7] ಬಸವರಾಜ ಇವರನ್ನು ವಿಚಾರಣೆ ಕುರಿತು ಠಾಣೆಗೆ ಕರೆದುಕೊಂಡು ಬಂದು, ಅವರಿಗೆ ಪ್ರಕರಣದ ಬಗ್ಗೆ ಪ್ರಶ್ನಾವಳಿ ಮಾಡಲಾಗಿ ಸದರಿಯವನು ತಾನು ತಮ್ಮ ಹೊಲದಲ್ಲಿ ನಿಧಿಯನ್ನು ತೆಗೆದು, ಅದನ್ನು ಮಾರಾಟ ಮಾಡಿ, ಲಾಭಗಳಿಸುವ ಉದ್ಧೇಶದಿಂದ ತಮ್ಮ ಹೊಲದಲ್ಲಿ ನಿಧಿಯನ್ನು ತೆಗೆಯುವ ಸಲುವಾಗಿ ತೆಗ್ಗು ತೋಡಿದ್ದು ಇರುತ್ತದೆ. ಆದರೆ ನಿಧಿ ಸಿಗದಿದ್ದರಿಂದ, ಮತ್ತು ಬೆಳಗಾಗಿದ್ದರಿಂದ ಮತ್ತೆ ನಾಳೆ ನಿಧಿಯನ್ನು ತೆಗೆಯುವ ಕೆಲಸ ಮುಂದುವರೆಸಿದರಾಯಿತು ಅಂತಾ ತಿಳಿದು, ಕೆಲಸವನ್ನು ಅಲ್ಲಿಗೆ ಬಿಟ್ಟು ವಾಪಸ್ ಮನೆಗೆ ಬಂದು, ನಮ್ಮ ಮನೆಯಲ್ಲಿ ಇದ್ದೇವು. ಅಂತಾ ಮುಂತಾಗಿ ತಮ್ಮ ಸ್ವಖುಷಿ ಹೇಳಿಕೆ ನೀಡಿದ್ದು ಇರುತ್ತದೆ. ಸದರಿ ಆರೋಪಿತರಿಂದ ನಿಧಿಯನ್ನು ತೆಗೆಯಲು ಉಪಯೋಗಿಸಿದ ಸಾಮಗ್ರಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಇಂದು ದಿನಾಂಕ; 13-01-2015 ರಂದು ಈ ಮೇಲ್ಕಂಡ ಆರೋಪಿತರನ್ನು ಬಂಧಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದು ಇರುತ್ತದೆ
0 comments:
Post a Comment