1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 08/2016
ಕಲಂ. 78(3) Karnataka Police Act.
ದಿನಾಂಕ 12-01-2016 ರಂದು 5-00 ಪಿ.ಎಂ ಕ್ಕೆ ಶ್ರೀ ನಾರಾಯಣ ದಂಡೀನ್, ಪಿ.ಎಸ್.ಐ. ಡಿಸಿಐಬಿ ಘಟಕ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ
ಪಿರ್ಯಾಧಿಯನ್ನು ಮತ್ತು ಮಟಕಾ ಜೂಜಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ, ಜಪ್ತಿ ಪಂಚನಾಮೆ ಮತ್ತು ವರದಿಯನ್ನು
ಮತ್ತು ಮುದ್ದೆಮಾಲಿನೊಂದಿಗೆ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಜರು ಪಡಿಸಿದ್ದು ಅದರ
ಸಾರಾಂಶವೇನೆಂದರೆ, ಇಂದು ದಿನಾಂಕ 12-01-2016 ರಂದು 2-30 ಗಂಟೆಗೆ ಆರೋಪಿತನಾದ ರಾಘವೇಂದ್ರ ತಂದೆ ನೀಲಕಂಠಪ್ಪ
ರೋಡ್ಡಾ ಸಾ: ಅಣ್ಣೂರ ಗೌರಮ್ಮ ಕ್ಯಾಂಪ್
ಗಂಗಾವತಿ. ಇವನು ಗಂಗಾವತಿ ನಗರದ ಹಿರೇಜಂತಕಲ್ ದ ನ್ಯೂ ಜೀನ್ಸ್ ಟೇಲರ್ ಅಂಗಡಿ
ಮುಂದಿನ ಸಾರ್ವಜನಿಕ ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು
ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ
ಪಂಚರ ಸಮಕ್ಷಮ 2-30 ಪಿ.ಎಂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 3110-00 (02) 3 ಮಟಕ ನಂಬರ ಬರೆದ ಚೀಟಿಗಳು, (03) ಒಂದು ಬಾಲ ಪೆನ್ನುನ್ನು ಜಪ್ತಿ ಪಡಿಸಿ ಈ ಬಗ್ಗೆ ಪಂಚರ ಸಮಕ್ಷಮ 2-30 ಪಿ.ಎಂ
ದಿಂದ 3-30 ಪಿ.ಎಂ ದವರಗೆ
ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಸದರಿ ಮಟಕಾ ಪಟ್ಟಿಯನ್ನು
ಖಾಸೀಂ ಕಡದಾಳ ಇವನಿಗೆ ಕೊಡುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿ ವರದಿ ನೀಡಿದ್ದು, ವರದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 09/2016
ಕಲಂ. 78(3) Karnataka Police Act.
ದಿನಾಂಕ: 12-01-2016 19-30 ಗಂಟೆಗೆ ಶ್ರೀ ರಾಮಣ್ಣ ನಾಯ್ಕ, ಪಿ.ಎಸ್.ಐ. (ಅ.ವಿ) ನಗರ ಪೊಲೀಸ್ ಠಾಣೆ ಗಂಗಾವತಿ
ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು, ಮಟಕ ದಾಳಿ ಪಂಚನಾಮೆ ಹಾಗೂ ಮುದ್ದೇಮಾಲನ್ನು
ಹಾಜರುಪಡಿಸಿ ಅವರ ಮೇಲೆ ಕ್ರಮ ಜರುಗಿಸಲು ಒಂದು ವರದಿ
ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 12-01-2016 ರಂದು ಸಾಯಂಕಾಲ 6-00
ಗಂಟೆಗೆ ಆರೋಪಿತರಾದ (01) ಸಾಬಣ್ಣ ತಂದೆ ಶಾಮೀದಸಾಬ ಮತ್ತು (02) ಮೋದಿನಸಾಬ ತಂದೆ
ರಾಜಾಸಾಬ ಸಾ: ಗಂಗಾವತಿ ರವರು ಗಂಗಾವತಿ ನಗರದ ಸಂತೇಬಯಲಿನಲ್ಲಿ ಆಂಜನೇಯ ದೇವಸ್ಥಾನದ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ
ಜೂಜಾಟದ ಅಂಕಿ-ಸಂಖ್ಯೆಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ
ಪಿ.ಎಸ್ಐ.(ಅ.ವಿ) ರವರು ಪಂಚರ ಸಮಕ್ಷಮ 6-00 ಪಿ.ಎಂ.ಕ್ಕೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ
ಹಿಡಿದು ಆರೋಪಿ ಸಾಬಣ್ಣ ಇತನಿಂದ (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ.
490-00, (02) ಒಂದು ಲಾವಾ ಕಂಪನಿಯ ಮೊಬೈಲ್, (03) ಒಂದು ಬಾಲ್ ಪೆನ್ನು ಹಾಗೂ (03) ಒಂದು ಮಟಕ
ನಂಬರ ಬರೆದ ಪಟ್ಟಿ ದೊರೆತಿದ್ದು ಅದರಂತೆ ಆರೋಪಿ ಮೋದಿನಸಾಬ ಇತನಿಂದ (01) ಮಟಕ ಜೂಜಾಟದಿಂದ
ಸಂಗ್ರಹಿಸಿ ನಗದು ಹಣ ರೂ. 1,845-00, (02) ಒಂದು ವ್ಯಾಮ ಕಂಪನಿಯ ಮೊಬೈಲ್, (03) ಒಂದು ಬಾಲ್
ಪೆನ್ನು ಮತ್ತು (03) ಒಂದು ಮಟಕ ನಂಬರ ಬರೆದ ಪಟ್ಟಿ ದೊರೆತಿದ್ದು, ಹಾಗೂ ಆರೋಪಿ ಅನ್ವರ್ @ ಹೊನ್ನೂರಸಾಬ ಸಾ:
ಪಿಂಜಾರ ಓಣಿ, ಗಂಗಾವತಿ ಇತನು ಮಟಕ ಪಟ್ಟಿಗಳನ್ನು ತೆಗೆದುಕೊಳ್ಳುವವನಾಗಿರುತ್ತಾನೆ.
ಆರೋಪಿತರಿಬ್ಬರಿಂದ ಜಪ್ತಿ ಪಡಿಸಿದ ಮುದ್ದೇಮಾಲಿನ ಬಗ್ಗೆ ಪಂಚರ ಸಮಕ್ಷಮ 18-00 ಗಂಟೆಯಿಂದ 19-00
ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪ್ರತ್ಯೇಕವಾಗಿ ಜಪ್ತಿ ಪಂಚನಾಮೆ
ಬರೆದುಕೊಂಡಿರುತ್ತಾರೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 05/2016
ಕಲಂ 279, 337, 338 ಐ.ಪಿ.ಸಿ:.
ದಿನಾಂಕ: 12-01-2016 ರಂದು ಮುಂಜಾನೆ 0900 ಗಂಟೆಯ ಸುಮಾರಿಗೆ
ಆರೋಪಿತನು ತಾನು ನಡೆಯಿಸುತ್ತಿದ್ದ 3 ಗಾಲಿಯ ಟಂ. ಟಂ. ವಾಹನ ಸಂಖ್ಯೆ: ಟಿ.ಪಿ- ಕೆ.ಎ-26/ಜಡ್ಡ ಈ-0306
ನೇದ್ದನ್ನು ಮಾಟರಂಗಿ-ಹಿರೇಅರಳಿಹಳ್ಳಿ ರಸ್ತೆಯ ಮೇಲೆ ಮಾಟರಂಗಿ ಗ್ರಾಮದ ಕಡೆಯಿಂದ
ಹಿರೇಅರಳಿಹಳ್ಳಿ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ
ಹಿರೇಅರಳಿಹಳ್ಳಿ ಗ್ರಾಮದ ಸೀಮಾದಲ್ಲಿ ರಾಮಣ್ಣ ಜಗ್ಗಲ್ ಇವರ ಹೊಲದ ಹತ್ತಿರ ಇರುವ ರಸ್ತೆಯ
ತಿರುವನ್ನು ಲೇಕ್ಕಿಸದೇ ಸದರಿ ವಾಹನವನ್ನು ಬಲಗಡೆ ತಿರುಗಿಸಿದ್ದರಿಂದ ಅದರಲ್ಲಿ ಕುಳಿತುಕೊಂಡಿದ್ದ
1 ರಿಂದ 10 ರ ಮಾಹಿತಿ ಅಂಕಣ 9 ರಲ್ಲಿ ನಮೂದಿಸಿದ ಅನುಕ್ರಮ ನಂ: 1 ರಿಂದ 5 ನೇದ್ದವರು ಪುಟಿದು
ರಸ್ತೆಯ ಮೇಲೆ ಬಿದ್ದಿದ್ದರಿಂದ ಅವರ ತಲೆಗೆ ಕೈ ಕಾಲುಗಳಿಗೆ ಸಾಧಾ ಹಾಗೂ ಭಾರಿ ಸ್ವರೂಪದ
ಗಾಯಗಳಾಗಿದ್ದು ಮತ್ತು ಅದರಲ್ಲಿ ಕುಳಿತುಕೊಂಡಿದ್ದ ಅನುಕ್ರಮ ನಂ: 6 ಮತ್ತು 7 ನೇದ್ದವರಿಗೆ ಸಾಧಾ
ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 07/2016 ಕಲಂ 279, 337, 338 ಐ.ಪಿ.ಸಿ:.
ದಿ:13-01-16
ರಂದು 01-00 ಎ.ಎಮ್ ಕ್ಕೆ ಫಿರ್ಯಾದಿದಾರರಾದ ವಿರುಪಾಕ್ಷಪ್ಪ ನಂದ್ಯಾಪೂರ ಸಾ: ಲೇಬಗೇರಿ ತಾ:
ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೇ, ನಿನ್ನೆ
ದಿ:12-01-16 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಾನು ಲೇಬಗೇರಿ ಗ್ರಾಮದ ಕ್ರಾಸ್ ಹತ್ತಿರ
ಊರಿಗೆ ಹೋಗಲು ಗಾಡಿಗಾಗಿ ಕಾಯುತ್ತಿದ್ದಾಗ, ಅದೇವೇಳೆಗೆ ಕೊಪ್ಪಳ-ಕುಷ್ಟಗಿ ರಸ್ತೆಯ ಇರಕಲ್
ಗಡಾ ಕಡೆಯಿಂದ ಮೋಟಾರ ಸೈಕಲ್ ನಂ: ಕೆಎ-03/ಹೆಚ್.ಸಿ-8717 ನೇದ್ದರ ಚಾಲಕ ಶರಣಪ್ಪ ಇತನು ತನ್ನ
ಮೋಟಾರ ಸೈಕಲ್ ನ್ನು ಮಾನವ ಜೀವಕ್ಕೆ ಅಪಾಯ ವಾಗುವ ರೀತಿಯಲ್ಲಿ ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಓಡಿಸಿಕೊಂಡು ಕೊಪ್ಪಳ ಕಡೆಗೆ ಹೋಗುವಾಗ ಲೇಬಗೇರಿ ಕ್ರಾಸ್ ಹತ್ತಿರ ರಸ್ತೆಯ
ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಚಾರಿ ಪಂಪಣ್ಣ ಇತನಿಗೆ ಟಕ್ಕರ ಕೊಟ್ಟು ಅಪಘಾತ
ಮಾಡಿದ್ದರಿಂದ ಪಂಪಣ್ಣನಿಗೆ ಭಾರಿ ಪೆಟ್ಟುಗಳಾಗಿದ್ದು, ಅಲ್ಲದೇ ಅಪಘಾತ
ಮಾಡಿದ ಮೋಟಾರ ಸೈಕಲ್ ಸವಾರ ನಿಗೆ ಸಹ ಸಾದಾ ಸ್ವರೂಪದ ಗಾಯಗಳಾಗಿವೆ. ಕಾರಣ ಅಪಘಾತ ಮಾಡಿದ ಮೋಟಾರ
ಸೈಕಲ್ ಸವಾರ ಶರಣಪ್ಪ ಕುಂಬಾರ. ಸಾ: ಇಂದರಗಿ ಹಾವ: ನಂದಿನಗರ ಕೊಪ್ಪಳ ಇವರ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment