Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 1, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 35/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:

ದಿನಾಂಕ:-31-01-2016 ರಂದು ರಾತ್ರಿ 9-30 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಗಂಗಾವತಿ ಸರಕಾರಿ ಆಸ್ಪತ್ರೆಗೆ ಹೊಗಿ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುವನ್ನು ವಿಚಾರಿಸಿ ಗಾಯಾಳು .ಟಿ. ರಾಮಕೃಷ್ಣ ತಂದಿ ಗೋಪಾಲಪ್ಪ ತಮ್ಮಿನಿಡಿ ವಯಾ- 40 ವರ್ಷ ಜಾ- ಕಮ್ಮಾ ಉ- ಒಕ್ಕಲುತನ ಸಾ- ಬರಗೂರ ಕ್ಯಾಂಪ್ ಮಾವಿನಗಿಡ ತೋಟ ತಾ- ಗಂಗಾವತಿ ಇವರು ಹಾಜರುಪಡಿಸಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,  ನನಗೆ 1) ನಾಗದುರ್ಗಪ್ರಸನ್ನ ಮತ್ತು ಶಿವಶ್ರೀನಿವಾಸ ವಯ 15 ವರ್ಷದ ಇಬ್ಬರೂ ಮಕ್ಕಳು ಇರುತ್ತಾರೆ. ನನ್ನದು ಒಂದು ಮೋಟಾರ್ ಸೈಕಲ್ ನಂ ಕೆಎ-06/ಕ್ಯೂ-1085 ನೇದ್ದು ಮೋಟಾರ್ ಸೈಕಲ್ ಇರುತ್ತದೆ.  ಈ ದಿನ ದಿನಾಂಕ 31-01-2016 ರಂದು ಸಾಯಂಕಾಲ ನಾನು ಮತ್ತು ನನ್ನ ಮಗ ಶಿವಶ್ರೀನಿವಾಸ ಇಬ್ಬರೂ ಕೂಡಿಕೊಂಡು ನಮ್ಮ ಮೋಟಾರ್ ಸೈಕಲ್, ನಂ ಕೆಎ-06/ಕ್ಯೂ-1085 ನೇದ್ದನ್ನು ತಗೆದುಕೊಂಡು ದೇಸಾಯಿ ಕ್ಯಾಂಪ್ ಗೆ ಹಾಲು ಕೊಟ್ಟು ಬರಲೆಂದು ಹೋಗಿದ್ದು ಹಾಲು ಕೊಟ್ಟು ವಾಪಸ್ ನಮ್ಮೂರಿಗೆ ಬರಲೆಂದು ನಮ್ಮಮೋಟಾರ್ ಸೈಕಲ್ ಮೇಲೆ ಗಂಗಾವತಿ-ಸಿಂದನೂರ ರಸ್ತೆಯ ಮೇಲೆ ಬರಗೂರ ಕ್ರಾಸ್ ಹತ್ತಿರ ರಾತ್ರಿ 07-00 ಗಂಟೆಗೆ ಬಂದು ರಸ್ತೆಯ ಎಡಬದಿಯಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿ ಹೋಗಿ ಬರುವ ವಾಹನಗಳನ್ನು ನೋಡಿ ನಮ್ಮೂರ ಕಡೆಗೆ ಹೋಗಬೇಕೆಂದು ಮೋಟಾರ್ ಸೈಕಲ್ ಮೇಲೆ ನಿಂತುಕೊಂಡಿದ್ದಾಗ ದೇಸಾಯಿ ಕ್ಯಾಂಪ್ ಕಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ತಿರುವು ಇದೆ ಅಂತಾ ಗೊತ್ತಿದ್ದರೂ ಸಹ ವಾಹನವನ್ನು ಯರ್ರಾಬಿರ್ರಿಯಾಗಿ ಓಡಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ನನ್ನ ಮೋಟಾರ್ ಸೈಕಲ್ ಹಿಂಭಾಗಕ್ಕೆ ಠಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ನನಗೆ ಮೈ, ಕೈಗೆ ಪೆಟ್ಟಾಗಿದ್ದು ಅಲ್ಲದೆ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ನನ್ನ ಮಗ ಶಿವಶ್ರೀನಿವಾಸಗೆ ತಲೆಗೆ ಮತ್ತು ಹೊಟ್ಟೆಗೆ ಭಾರಿ ಹೊಡೆತ ಬಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಅಪಘಾತಪಸಿಡಿದ ನಂತರ ಟ್ರ್ಯಾಕ್ಟರ್ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅದರ ನಂಬರ್ ನೋಡಲು ಅದು ಕೆಎ- ಅಂತಾ  ರುತ್ತದೆ. ನಂತರ ಚಿಕಿತ್ಸೆ ಕುರಿತು ನಮ್ಮನ್ನು ಘಟನೆಯನ್ನು ನೋಡಿದ ಶಿರಡಿ ತಂದೆ ಕುಂದುರಾಜ್ ಇವರು ಗಂಗಾವತಿ ಸರಕಾರಿ ಆಸ್ಪತ್ರೆಗೆ ಯಾವುದೋ ಒಂದು ಖಾಸಗಿ ವಾಹನದಲ್ಲಿ ತಂದು ಸೇರಿಕೆ ಮಾಡುವಷಗ್ಟರಲ್ಲಿ ನನ್ನ ಮಗ ಶಿವಶ್ರೀನಿವಾಸ ಈತನು ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಘಟನೆಗೆ ಕಾರಣನಾದ ಟ್ರ್ಯಾಕ್ಟರ್ ನಂಬರ್ ಕೆಎ -36/ಟಿ.ಎ-5539   ನೇದ್ದರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ದ್ದ ಲಿಖಿತ ಫಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 31/2016 ಕಲಂ: 87 Karnataka Police Act.

ದಿನಾಂಕಃ- 31-01-2016 ರಂದು ಸಂಜೆ 05-00 ಗಂಟೆಗೆ ಠಾಣಾ ವ್ಯಾಪ್ತಿಯ ಸಿದ್ದಾಫೂರ ಗ್ರಾಂದ ಬಸ್ ನಿಲ್ದಾಣದ ಸಾರ್ಜಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್. ಐ.ಸಾಹೇಬರು ಸಿಬ್ಬಂದಿಗಳು, ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಲು 10 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ ಒಟ್ಟು ನಗದು ಹಣ ರೂ.15270/- ಮತ್ತು 52 ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 24/2016 ಕಲಂ: 143, 147, 148, 324, 354, 504, 506 ಸಹಿತ 149 ಐ.ಪಿ.ಸಿ:
ದಿ:31-01-16 ರಂದು ಸಾಯಂಕಾಲ 5-45 ಗಂಟೆಗೆ ಫಿರ್ಯಾದಿದಾರರಾದ ಮುದುಕಪ್ಪ ಹೊಸಮನಿ ಸಾ: ನರೇಗಲ್ ಇವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ: 31-01-16 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ನರೇಗಲ್ ಸೀಮಾದ ತಮ್ಮ ಹೊಲದಲ್ಲಿ ಮೆಕ್ಕೆಜೋಳದ ತೆನೆ ಮುರಿಯುವ ಕೆಲಸದಲ್ಲಿದ್ದಾಗ, ಆರೋಪಿತರಾದ, ಯಮನೂರಪ್ಪ ಪೂಜಾರ ಹಾಗೂ ಇತರೆ 07 ಜನರು ಗುಂಪು ಕಟ್ಟಿಕೊಂಡು ಬಂದು ಕೈಯಲ್ಲಿ ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು ನೀವು ನಮ್ಮ ಹೊಲದಲ್ಲಿ ಏನು ಕೆಲಸ ಮಾಡುತ್ತಿರಿ ಬಿಟ್ಟು ಹೋಗ್ರಿ ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಫಿರ್ಯಾದಿದಾರನ ಅತ್ತಿಗೆ ಶಾಂತಮ್ಮ ಇವರಿಗೆ ಆರೋಪಿ ಮಂಜುನಾಥ, ಚನ್ನಬಸವ, ಲಕ್ಷ್ಮಪ್ಪ, ಶಿವಶಂಕರ ಇವರು ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 11/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:31-01-2016 ರಂದು 9-30 ಎಎಂಕ್ಕೆ ಪಿರ್ಯಾದಿದಾರರಾದ ಶರಣಪ್ಪರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ  ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ಇಟಿಗಿಯಿಂದ ತನ್ನ ವೈಯುಕ್ತಿಕ ಕೆಲಸದ ನಿಮಿತ್ಯ ಹಳ್ಳಿಕೇರಿಗೆ ಹೋಗಿ ವಾಪಾಸ್ಸು ತನ್ನ ಸ್ನೇಹಿತನೊಂದಿಗೆ ಇಟಿಗಿಗೆ ಬರುವಾಗ ತನ್ನ ಅಣ್ಣನ ಮಗ ರವಿಕುಮಾರ ಇಟಗಿಯಿಂದ ಲಕ್ಕುಂಡಿಗೆ ತನ್ನ ಸ್ನೇಹಿತನನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದವನು ವಾಪಾಸ್ಸು ಇಟಿಗಿಗೆ ಬರುವಾಗ ಬನ್ನಿಕೊಪ್ಪ ಸೀಮಾದಲ್ಲಿ  ಗದಗ ಕೊಪ್ಪಳ ರಸ್ತೆಯಲ್ಲಿ ತನ್ನ ಮುಂದೆ ಹೊರಟ ಕಾರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿ ತನ್ನ ಮುಂದೆ ಹೊರಟ ಮೋಟಾರ ಸೈಕಲ್ ನ್ನು ಲೆಕ್ಕಿಸದೇ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು ಅಪಘಾತ ನೋಡಿದ ಫಿರ್ಯಾದಿ ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ ನೋಡಿದಾಗ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ತನ್ನ ಅಣ್ಣನ ಮಗನಿದ್ದು ಸಾದಾ ಮತ್ತು ತೀರ್ವ ಸ್ವರೂಪದ ಗಾಯವಾಗಿದ್ದು ತನ್ನ ಅಣ್ಣನ ಮಗ ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ. ಕೆ.ಎ.29 ಯು.390 ಅಂತಾ ಇದ್ದು, ಮೋಟಾರ್ ಸೈಕಲ್ ಗೆ ಟಕ್ಕರು ಕೊಟ್ಟ ಕಾರ ನೋಡಲಾಗಿ ಮಾರುತಿ ಸ್ವೀಪ್ಟ್ ಕಾರ ಇದ್ದು ಅದರ ನಂ.ಎ.ಪಿ.23 ಆರ್. 6449 ಅಂತಾ ಇದ್ದು ಅದರ ಚಾಲಕನಿಗೆ ವಿಚಾರಿಸಿದಾಗ ತನ್ನ ಹೆಸರು ಶ್ರವಣಕುಮಾರ ತಂ.ಸುಂಕಂ ಶ್ರೀಶೈಲಂ, ಸಾ: ಪದ್ಮನಗರ, ನಿಜಾಮಾಬಾದ್ ರಾಜ್ಯ ಆಂದ್ರಪ್ರದೇಶ  ಅಂತಾ ಹೇಳಿದ್ದು, ಸದರಿಯವರನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಅಣ್ಣನ ಮಗನಿಗೆ ಟಕ್ಕರು ಕೊಟ್ಟು ಅಪಘಾತ ಮಾಡಿ ಸಾದಾ ಹಾಗೂ ತೀವ್ರ ಸ್ವರೂಪದ ಗಾಯ ಉಂಟು ಮಾಡಿದ್ದು ನಂತರ ತಾನು ಗಾಯಾಳುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಂತರ ಅಲ್ಲಿಂದ ಗದಗ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಬಂದು ಫೀರ್ಯಾದಿ ಕೊಟ್ಟಿದ್ದು ಇದೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 33/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ 31-01-2016 ರಂದು ಮದ್ಯಾನ 01-30 ಪಿ.ಎಂ.ಸುಮಾರಿಗೆ ಪಿರ್ಯಾದುದಾರರು ಮತ್ತು ಅವರ ತಾಯಿ ಅನ್ನಮ್ಮ ಮುನಿರಾಬಾದ ಹೊಸಪೇಟೆ ರಸ್ತೆಯ ಮೇಲೆ ವಿಶ್ವೇಶ್ವರಯ್ಯ ಸರ್ಕಲ್ ಹತ್ತಿರ ನಡೆದುಕೊಂಡು  ಹೋಗುತ್ತಿರುವಾಗ ಆರೋಪತನು ತನ್ನ ಮೋ,ಸೈ.ನಂ.ಕೆ.ಎ37/ ವಾಯ್ 7864 ನೇದ್ದನ್ನು ಅತೀವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಾಯಿ ಅನ್ನಮ್ಮಳಿಗೆ ಡಿಕ್ಕಿಕೊಟ್ಟುಅಪಘಾತ ಮಾಡಿದ್ದರಿಂದ ಅನ್ನಮ್ಮಳಿಗೆ ತಲೆಯ ಹಿಂದೆ ಮತ್ತು ಮುಖದ ಮೇಲೆ ಗಾಯ ಮತ್ತು ಒಳಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
6) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 30/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 31-01-2016 ರಂದು ಮದ್ಯಾಹ್ನ 2-30  ಗಂಟೆಗೆ ಪಿರ್ಯಾದಿದಾರರಾದ ನೀಲಕಂಠೇಶ ತಂದೆ ಮಲ್ಲಿಕಾರ್ಜುನ ಕಂದಗಲ್ ವಯಾ 43 ವರ್ಷ ಜಾ:  ಲಿಂಗಾಯತ ಉ: ಒಕ್ಕಲುತನ ಸಾ: ನಾಯಕವಾಡಿ ಓಣಿ ಕುಷ್ಟಗಿ  ಇವರು  ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ  ದಿನಾಂಕ:29-01-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರ ತಮ್ಮನಾದ ನಾಗಬಸಪ್ಪ @ ಮುತ್ತಣ್ಣ ಮತ್ತು ಆತನ ಸ್ನೇಹಿತನಾದ ವೀರೇಶ ಸಣ್ಣಪೂರ ಇಬ್ಬರೂ ಕೂಡಿ ಎನ್.ಹೆಚ್-50 ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಸುಲೇಮಾನ ಚಡಚಡ ರವರ ಕಂಕರ ಮಶೀನ್ ಹತ್ತಿರ ರಸ್ತೆಯ ಮೇಲೆ ತಮ್ಮ ಮೋಟಾರ ಸೈಕಲ್ ನಂ: ಕೆ.ಎ-37-ಕ್ಯೂ-2688 ಸುಪರ ಸ್ಪ್ಲೆಂಡರ ವಾಹನವನ್ನು ಅವರ ಸ್ನೇಹಿತನಾದ ವೀರೇಶ ತಂದೆ ವೀರಪ್ಪ ಸಣ್ಣಾಪೂರ ಈತನು ಎಡಗಡೆಯ ರಸ್ತೆಯ ಮೇಲೆ ನಡೆಯಿಸಿಕೊಂಡು ಹೋಗುತ್ತಿದ್ದಾಗ ಎದುರಗಡೆಯಿಂದ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಅವರ ವಾಹನಕ್ಕೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ನಾಗಬಸಪ್ಪ @ ಮುತ್ತಣ್ಣ ಇತನ ತಲೆಯ ಹಿಂದೆಲೆಗೆ ಭಾರಿ ರಕ್ತಗಾಯವಾಗಿ ಬಲಗಣ್ಣು ಬಾಹು ಬಂದಿದ್ದು ಕಣ್ಣಿನ ಕೆಳಗಡೆ ರಕ್ತಗಾಯವಾಗಿದ್ದು, ಎಡಕಿವಿಯಲ್ಲಿ ರಕ್ತ ಹೊರಬಂದಂತೆ ಕಂಡು ಬಂದಿದ್ದು ಇರುತ್ತದೆ. ಅವರ  ಮೋಟಾರ ನಂ: ಕೆ.ಎ-37-ಕ್ಯೂ-2688 ನೇದ್ದನ್ನು ನಡೆಸುತ್ತಿದ್ದ  ವೀರೇಶ ತಂದೆ ವೀರಪ್ಪ ಸಣ್ಣಾಪೂರ ಈತನಿಗೆ ಬಲಗಾಲು ಮೊಣಗಾಲು ಹತ್ತಿರ ರಕ್ತಗಾಯವಾಗಿ ಒಳಪೆಟ್ಟಾಗಿರುತ್ತದೆ. ನಂತರ ಅವರ ವಾಹನಕ್ಕೆ ಅಪಘಾತ ಪಡಿಸಿದ ಮೋಟಾರ ಸೈಕಲ್ ನಂಬರ ನೋಡಲು ಕೆ.ಎ-37-ಇಎ-2215 ನೇದ್ದು ಇದ್ದು ಅದರ ಸವಾರನ ಹೆಸರು ವಿಚಾರಿಸಲು ತನ್ನ ಹೆಸರು ಶ್ರೀಕಾಂತ ತಂದೆ ಯಂಕೋಬ ಹಿರೇಮನಿ ಸಾ: ಅಂಬೇಡ್ಕರ ನಗರ ಕುಷ್ಟಗಿ ಅಂತಾ ತಿಳಿಸಿದ್ದು ಸದರಿಯವರಿಗೆ ಬಲಕಣ್ಣಿನ ಹತ್ತಿರ, ಬಲಗಾಲು ಮೊಣಕಾಲಿಗೆ ತೆರಚಿದ ಗಾಯವಾಗಿದ್ದು ನಂತರ ಫಿರ್ಯಾದಿದಾರರು ಬಾಗಲಕೋಟ ಕೆರುಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ನಿನ್ನೆ ದಿನಾಂಕ:30-01-2016 ರಂದು ಅವರ ತಮ್ಮನ ತಲೆಯ ಭಾಗ ಅಪರೇಷನ ಮಾಡಿಸಿ ಇಂದು ತಡವಾಗಿ ಬಂದು ಪಿರ್ಯಾಧಿ ನೀಡಿದ್ದು ಕಾರಣ ನಾಗಬಸಪ್ಪ @ ಮುತ್ತಣ್ಣ ಮತ್ತು ಆತನ ಸ್ನೇಹಿತನಾದ ವೀರೇಶ ಸಣ್ಣಪೂರ ರವರಿಗೆ ಅಪಘಾತ ಪಡಸಿದ ಮೋಟಾರ ಸೈಕಲ್ ನಂ: ಕೆ.ಎ-37-ಇಎ-2215 ನೇದ್ದರ ಸವಾರನಾದ ಶ್ರೀಕಾಂತ ತಂದೆ ಯಂಕೋಬ ಹಿರೇಮನಿ ಸಾ: ಅಂಬೇಡ್ಕರನಗರ ಕುಷ್ಟಗಿ ರವರ ವಿರುದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.

0 comments:

 
Will Smith Visitors
Since 01/02/2008