Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 2, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 43/2016 ಕಲಂ: 78(3) Karnataka Police Act:.

ದಿನಾಂಕ_:-01-02-2016 ರಂದು ರಾತ್ರಿ  9-05 ಗಂಟೆಗೆ ಶ್ರೀ ನಿಂಗಪ್ಪ  ಎನ್.ಆರ್. ಪಿ.ಎಸ್.. ರವರು ಠಾಣೆಗೆ ಹಾಜರಾಗಿ ಒಂದು ವರದಿ ಮೂಲ ಪಂಚನಾಮೆ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ತಂದು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ ಇಂದು ದಿನಾಂಕ:-01-02-2016 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಕಾರಟಗಿ ರಾಮನಗರದ ವೆಲ್ ಕಮ್ ಬೋರ್ಡ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ -1 ಅಂಬರೇಶ  ತಂದಿ ಅಂಬರಪ್ಪ  ಹೊನ್ನಲ್ಳಿ ಸಾ- ರಾಮನಗರ ಕಾರಟಗಿ ಈತನು ಮತ್ತು -2 ರಮೇಶ ತಂದಿ ಹನಮಂತಪ್ಪ ಈಡಿಗೇರ ಸಾ- ಕಾರಟಗಿ  ಇವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್. ರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ- 10  ಪಿ.ಸಿ, 51, 413,  76 .ಪಿ.ಸಿ- 179  ರವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಆರೋಪಿತರ ಕಡೆಯಿಂದ ರೂ.1520=00 ನಗದು ಹಣ ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದರ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 10-30 ಗಂಟೆಗೆ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 45/2016 ಕಲಂ: 353, 504, 506 ಸಹಿತ 149 ಐ.ಪಿ.ಸಿ ಮತ್ತು 42, 44(1)(2) KMC Rule 1994.

ದಿನಾಂಕ: 01-02-2016 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದೊಡ್ಡಬಸಜ್ಜ, ಗ್ರಾಮ ಲೆಕ್ಕಾಧಿಕಾರಿಗಳುಆನೇಗುಂದಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಸನ್ 2012 ನೇ ಸಾಲಿನಿಂದ ಆನೇಗುಂದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ:- 29-01-2016 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಯಮನಪ್ಪ ವಾಲ್ಮೀಕಿ ಸಾ: ಬಸವನದುರ್ಗ ಇವರು ನನಗೆ ಕರೆ ಮಾಡಿ  ಬಸವನದುರ್ಗ ಸೀಮಾದ ಕಾಯ್ದಿಟ್ಟ ಅರಣ್ಯ ಹಾಗೂ ಸರಕಾರಿ ಪರಂಫೋಕ್ ಜಮೀನು ಸರ್ವೆ ನಂ: 39/9 ರಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸಲಾಗುತ್ತಿದೆ ಅಂತಾ ತಿಳಿಸಿದ್ದರಿಂದ ಕೂಡಲೇ ನಾನು ಮತ್ತು ನಮ್ಮ ಗ್ರಾಮ ಸಹಾಯಕರಾದ ಹನುಮೇಶ ತಂದೆ ನಿಂಗಪ್ಪ, ವೀರೇಶ ತಂದೆ ನಿಂಗಪ್ಪ ಇವರುಗಳೊಂದಿಗೆ ಬೆಳಿಗ್ಗೆ 11:00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಲಾಗಿ ಸ್ಥಳದಲ್ಲಿ (1) ಅಂಜಿನಿಗೌಡ ತಂದೆ ಬಸನಗೌಡ ಸಾ: ಮಲ್ಲಾಪೂರು (2) ಆನಂದ ಗೊಲ್ಲರು ಸಾ: ಮಲ್ಲಾಪೂರು (3) ರಾಜಪ್ಪ ಸಾ: ಮಲ್ಲಾಪೂರು (4) ಮಲ್ಲೇಶ ತಂದೆ ಶೇಖರಪ್ಪ ಸಾ: ಗಂಗಾವತಿ (ಜಿ.ಸಿ.ಬಿ. ಚಾಲಕ) ಇವರುಗಳು ಇದ್ದು, ಜೆ.ಸಿ.ಬಿ. ವಾಹನ ನಂಬರ್: ಕೆ.ಎ-37/ ಎ-835 ನೇದ್ದರಿಂದ ಮಣ್ಣನ್ನು ಅಗೆಯುತ್ತಿದ್ದು, ಟ್ರ್ಯಾಕ್ಟರ್ ನಂಬರ್: ಕೆ.ಎ-37/ ಟಿ.ಎ-7158 ಮತ್ತು ಟ್ರಾಲಿ ನಂಬರ್: ಕೆ.ಎ-37/ ಟಿ-1763 ನೇದ್ದರಲ್ಲಿ ಮಣ್ಣನ್ನು ಸಾಗಿಸಲು ತುಂಬುತ್ತಿದ್ದು, ಅವುಗಳನ್ನು ನಿಲ್ಲಿಸಿ ಪರವಾನಿಗೆ ಪಡೆದ ಬಗ್ಗೆ ವಿಚಾರಿಸಿದಾಗ ಮೇಲ್ಕಂಡವರು ತಮ್ಮ ಹತ್ತಿರ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದರು. ಇದರಿಂದ ವಾಹನಗಳನ್ನು ವಶಕ್ಕೆ ಪಡೆದು ಅವುಗಳನ್ನು ತಹಶೀಲ್ ಕಾರ್ಯಾಲಯಕ್ಕೆ ತೆಗೆದುಕೊಂಡು ಬರುವಂತೆ ತಿಳಿಸಿದಾಗ ಅವರಲ್ಲಿ ಆನಂದ ಗೊಲ್ಲರ ಈತನ ಮೊಬೈಲ ನ್ನು ನನಗೆ ನೀಡಿ  ಮಲ್ಲಾಪೂರು ಗ್ರಾಮದ ಅಮರೇಶ ನಾಯಕ ತಂದೆ ದುರಗಪ್ಪ ಬಂಡಿ ಸಾ: ಮಲ್ಲಾಪೂರು ಇವರು ಮಾತನಾಡುತ್ತಿದ್ದಾರೆ ಅಂತಾ ಹೇಳಿ ನನಗೆ ಕೊಟ್ಟರು. ನಾನು ಅವರೊಂದಿಗೆ ಮಾತನಾಡಿದಾಗ ಆತನು ನನಗೆ  ನೀನು ವಾಹನಗಳನ್ನು ಅಲ್ಲಿಯೇ ಬಿಟ್ಟು ಹೋಗು, ಅಂತಾ ಹೇಳಿದ್ದು, ನಾನು ಬಿಡಲು ಆಗುವುದಿಲ್ಲಾ ಅಂತಾ ಹೇಳಿದ್ದಕ್ಕೆ ನೀನು ಸುರಕ್ಷಿತವಾಗಿ ನೌಕರಿ ಮಾಡಬೇಕಾದರೆ ವಾಹನಗಳನ್ನು ಬಿಟ್ಟು ಹೋಗು ಇಲ್ಲವಾದಲ್ಲಿ ಜೀವ ಸಹಿತ ಉಳಿಸುವುದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿದರು. ನಂತರ ಅಲ್ಲಿದ್ದ ಅಂಜಿನಿಗೌಡ ಹಾಗೂ ಉಳಿದವರು ನನಗೆ ಸರಕಾರಿ ಕೆಲಸವನ್ನು ಮಾಡಲು ಬಿಡದೇ ಕರ್ತವ್ಯಕ್ಕೆ ಅಡ್ಡಿ ಮಾಡಿ ನನಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ವಾಹನಗಳನ್ನು ದೌರ್ಜನ್ಯದಿಂದ ಅಲ್ಲಿಂದ ತೆಗೆದುಕೊಂಡು ಹೊರಟು ಹೋದರು. ಇದರಿಂದ ನಾನು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ಹೇಳಿದ್ದರಿಂದ ನಂತರ (1) ಅಮರೇಶ ಹಾಗೂ ಆತನೊಂದಿಗೆ (2) ಹನುಮನಗೌಡ ತಂದೆ ಮುದುಕನಗೌಡ ಸಾ: ಮಲ್ಲಾಪೂರು (3) ಗಂಗಾಧರ ತಂದೆ ಆರ್. ಕೆ. ಪ್ರಕಾಶ ಸಾ: ಮಲ್ಲಾಪೂರು ಇವರುಗಳು ನನಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸದಂತೆ ಬೆದರಿಕೆ ಹಾಕಿದರು.  ಅಲ್ಲದೇ ನನಗೆ ನನ್ನ ಸರಕಾರಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿ ಮಾಡಿದರು.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 34/2016 ಕಲಂ: 197, 199, 420, 420(ಬಿ)  ಐ.ಪಿ.ಸಿ:
ಫೀರ್ಯಾದಿದಾರಳಾದ ಗಿರಿಜಮ್ಮ ಇವಳು ಆರೋಪಿತನಾದ ಸಣ್ಣ ಬಸಯ್ಯ ಇವನಿಗೆ ತನ್ನ ಮಗಳು ಹಂಪಮ್ಮಳನ್ನು ಕೊಟ್ಟು ದಿನಾಂಕ. 02-12-2012 ರಂದು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಸದರ ಫೀರ್ಯಾದಿದಾರರ ಮಗಳು ದಿನಾಂಕ. 30-05-2013 ರಂದು ಅಪಘಾತದಲ್ಲಿ ಮೃತ ಪಟ್ಟಿದ್ದು ಆರೋಪಿತನು ಫಿರ್ಯಾಧಿದಾರಳ ಹೆಸರು ತೋರಿಸದೆ ಅಪಘಾತದ ನಷ್ಟ ಪರಿಹಾರ ಪಡೆದುಕೊಂಡು ಫಿರ್ಯಾದಿದಾರಳಿಗೆ ಪರಿಹಾರದ ಹಣವನ್ನು ಕೊಡದೆ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿದ್ದ ಖಾಸಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 07/2016 ಕಲಂ: 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 01-02-2016 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಿದ್ರಾಮಪ್ಪ ತಾಯಿ ಮರಚವ್ವ ಹೊಸಮನಿ ವಯ. 40 ಜಾತಿ. ಹರಿಜನ ಉ. ವ್ಯಾಪಾರ ಸಾ. ನಂದಿನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 01-02-2016 ರಂದು ಮಧ್ಯರಾತ್ರಿ 12-20 ಗಂಟೆಗೆ ಫಿರ್ಯಾದಿ ತಮ್ಮ ಮನೆಯಿಂದ ಮೂತ್ರ ವಿಸರ್ಜನೆ ಮಾಡಲು ಹೊರಗಡೆ ಬಂದಾಗ ಗವಿಮಠದ ಆವರಣದ ಸಾರ್ವಜನಿಕ ಪಾರ್ಕಿಂಗ್ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಿದಿದ್ದು ಆತನ ಹಣೆಗೆ, ಗದ್ದಕ್ಕೆ, ಬಲಗಡೆ ಕೊರಳಿನ ಹತ್ತಿರ ಬಾರಿ ಒಳಪೆಟ್ಟಾಗಿದ್ದು ಆತನ ಮೂಗು ಮತ್ತು ಬಾಯಿಂದ ರಕ್ತ ಸೋರಿದ್ದು ಮತ್ತು ಎರಡೂ ಮೊಣಕಾಲಿಗೆ ತೆರಚಿದಗಾಯಗಳು ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಂತರ ಸದರಿ ಮೃತ ವ್ಯಕ್ತಿಗೆ ಆದ ಗಾಯಗಳನ್ನು ಪರಿಶೀಲಿಸಿ ನೋಡಲು ಈ ಘಟನೆಯು ಜಾತ್ರೆಗೆ ಬಂದ ಯಾವುದೋ ಒಂದು ಸರಕು-ಸಾಗಾಣಿಕೆ ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಹಿಂದೆಕ್ಕೆ ಚಲಾಯಿಸಿ ಮೃತ ಅಪರಿಚತ ವ್ಯಕ್ತಿಗೆ ಟಕ್ಕರಕೊಟ್ಟು ಅಪಘಾತಮಾಡಿ ವಾಹನವನ್ನು ನಿಲ್ಲಿಸದೇ ಹಾಗೇ ಹೊರಟು ಹೊಗಿರುತ್ತಾನೆ. ಈ ಘಟನೆಯು ನಿನ್ನೆ ದಿನಾಂಕ. 31-01-2016 ರಂದು ರಾತ್ರಿ 11-00 ಗಂಟೆಯಿಂದ 11-30 ಗಂಟೆಯ ಅವದಿಯಲ್ಲಿ ಜರುಗಿರುತ್ತದೆ. ನಂತರ ಫಿರ್ಯಾದಿದಾರರು ಮೃತನ ಹೆಸರು ಮತ್ತು ವಿಳಾಸವನ್ನು ಪತ್ತೆಮಾಡಲು ಜಾತ್ರಯಲ್ಲಿರುವ ಎಲ್ಲಾ ಅಂಗಡಿ ಮಾಲಿಕರಿಗೆ ಭಾವಚಿತ್ರವನ್ನು ತೋರಿಸಿ ನಂತರ ಫಿರ್ಯಾದಿ ಮತ್ತು ತನ್ನ ಸ್ನೇಹಿತ ರಾಜು ಬೆಲ್ಲದ ಇಬ್ಬರೂ ಬೆಳಗಿನ ಜಾವ ಶವವನ್ನು ಕೊಪ್ಪಳದ ಕಿಮ್ಸ ಆಸ್ಪತ್ರೆಯ ಶವಾಗಾರದಲ್ಲಿ ಹಾಕಿರರುತ್ತೆವೆ ಅಂತಾ ಮುಂತಾಗಿದ್ದ ಗಣಕೀಕರಣ  ಹೇಳಿಕೆಯ ಫಿರ್ಯಾಧಿಯ ಸಾರಾಂಶದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 17/2016 ಕಲಂ: 363 ಐ.ಪಿ.ಸಿ:.
ದಿ: 01-02-2016 ರಂದು ಮಧ್ಯಾಹ್ನ 03-15 ಗಂಟೆಗೆ ಪಿರ್ಯಾದಿ ವೀರಭದ್ರಪ್ಪ ಪಾಟೀಲ ಸಂಯೋಜಕರು ಮಕ್ಕಳಿಗಾಗಿ ತೆರೆದ ತಂಗುದಾಣ ಕೊಪ್ಪಳ ಇವರು ಠಾಣೆಗೆ ಹಾಜಾರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 18-12-2015 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಕೊಪ್ಪಳ ರವರು ಅಪ್ರಾಪ್ತ ಬಾಲಕ ಅಲ್ತಾಫ್ ತಂದೆ ದಾವಲಸಾಬ ಸಯ್ಯದ ವಯಾ: 13 ವರ್ಷ ಈತನಿಗೆ ಪೋಷಣೆಗಾಗಿ ತಂಗುದಾಣದಲ್ಲಿ ಹಾಜರುಪಡಿಸಿದ್ದು, ಬಾಲಕ ತೆರೆದ ತಂಗುದಾಣದಲ್ಲಿ ಇದ್ದನು. ದಿನಾಂಕ: 20-01-2016 ರಂದು ಬೆಳಗ್ಗೆ 7-00 ಗಂಟೆ ಸುಮಾರಿಗೆ ಕಿನ್ನಾಳ ರಸ್ತೆಯಲ್ಲಿರುವ ಮಕ್ಕಳಿಗಾಗಿ ತೆರೆದ ತಂಗುದಾಣದಿಂದ ಅಪ್ರಾಪ್ತ ಬಾಲಕ ಅಲ್ತಾಫ್ ತಂದೆ ದಾವಲಸಾಬ ಸಯ್ಯದ ವಯಾ: 13 ವರ್ಷ ಈತನಿಗೆ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಬಂದಿದ್ದು, ಕಾರಣ ಸದರಿ ಬಾಲಕ ಅಲ್ತಾಫ್ ಈತನಿಗೆ ಪತ್ತೆ ಮಾಡಿ, ಅಪಹರಣ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 17/2016 ಕಲಂ: 363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 36/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ :01-02-2016 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರಿ ಅಪ್ಪಾರಾವ್ ತಂದಿ ವಿ.ಮುಸುಲಾರಡ್ಡಿ ವೆಂಪಾಟಿ ವಯಾ- 38 ವರ್ಷ ಜಾ- ರಡ್ಡಿ ಉ-ವ್ಯಾಪಾರ ಸಾ- ದೇವಿಕ್ಯಾಂಪ್ ತಾ- ಗಂಗಾವತಿ ಜಿ- ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ನಾನು ವ್ಯಾಪಾರ ಮಾಡಿಕೊಂಡು ಉಪಜೀವನ ಮಾಡುತ್ತೆನೆ. ನಮ್ಮ ಅಳಿಯನಾದ ಜಲ್ಲಿ ಪ್ರಸಾದ ತಂದಿ ಜಲ್ಲಿ ಅಪ್ಪಾರಾವ್ ವಯಾ-35 ವರ್ಷ ಉ- ಪಿಟ್ಟರ್ ಕೆಲಸ ಸಾ- ದೇವಿಕ್ಯಾಂಪ್ ಹಾ.ವ. ಮರ್ಲಾನಹಳ್ಳಿ ಈತನು ರೈಸ್ ಮಿಲ್ಲಿನಲ್ಲಿ ಪಿಟ್ಟರ್ ಕೆಲಸ ಮಾಡಿಕೊಂಡಿದ್ದು ಸದರಿಯವನು ದಿನಾಂಕ : 29-01-2016 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನಾನು ಐ ಎಲ್. ಸಿ.ಮಿಲ್ಲ ಹತ್ತಿರ ನಿಂತುಕೊಂಡಿದ್ದಾಗ್ಗೆ ರವಿನಗರ ಕಡೆಯಿಂದ ಒಬ್ಬ ಲಾರಿಯ ಚಾಲಕ ತನ್ನ ಲಾರಿ ನಂಬರ್ ಕೆ.ಎ- 21 / 0312 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಲಪ್ಷ್ಫ್ತನದಿಂದ ಓಡಿಸಿಕೊಂಡು ಬಂದು ಯಾವುದೇ ಸಿಗ್ನಲ್ ಕೊಡದೆ ಒಮ್ಮಿಂದೊಮ್ಮೆಲೆ ಸಡನ್ ಆಗಿ ಬ್ರೆಕ್ ಹಾಕಿ ನಿಲ್ಲಿಸಿದ್ದರಿಂದ ಹಿಂದುಗಡೆಯಿಂದ ಮೊಟಾರ್ ಸೈಕಲ್ ನಂಬರ್ ಕೆ.ಎ-36 / ಎಸ್- 2695 ನೇದ್ದರ ಮೇಲೆ ಬರುತ್ತಿದ್ದ ಜಲ್ಲಿ ಪ್ರಸಾದ ಇತನಿಗೆಲಾರಿಯ ಹಿಂಬಾಗ ಟಚ್ ಆಗಿ ಆಪಘಾತವಾಗಿದ್ದರಿಂದ ನಾನು ಆತನ ಹತ್ತಿರ ಹೊಗಿ ನೋಡಲು ಜಲ್ಲಿ ಪ್ರಸಾದ ಇತನುಮೊಟಾರ್ ಸೈಕಲ್ ಸಮೇತ ಕೆಳಗೆಬಿದ್ದಿದ್ದರಿಂದ ಆತನ ತಲೆಗೆ ಹಾಗೂ ಕೈ ಕಾಲುಗಳಿಗೆ ಭಾರೀ ರಕ್ತಘಾಯ ಹಾಗೂ ಮೂಳೆ ಮುರಿತವಾಗಿದ್ದರಿಂದ ಆತನು ಅರೇ ಪ್ರಜ್ನಾಹೀನ ಸ್ಥಿತಿಯಲ್ಲಿದ್ದರಿಂದ ಆತನಿಗೆ ನಾನು ಮತ್ತು ಲಾರಿಯ ಚಾಲಕ ರವಿಂದ್ರ ಎನ್. ತಂದಿ ನಾಗರಾಜು ಸಾ- ಮಂಡ್ಯಾ ಕೂಡಿಕೊಂಡು ಕಾರಟಿಗಿ ಆಸ್ಪತ್ರೆಗೆ ಕರೆದುಕೊಂಡು ನಂತರ ಆತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಕರೆದುಕೊಂಡು ಹೊಗಿ ದಾಖಲು ಮಾಡಿದ್ದು ಇರುತ್ತದೆ ನಾವು ನಮ್ಮ ಜಲ್ಲಿ ಪ್ರಸಾದ ಇತನ ಚಿಕಿತ್ಸೆಗೆ ಆದ್ಯತೆ ಕೊಟ್ಟು ಆತನಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿ ಈಗ ತಮ್ಮಲ್ಲಿಗೆ ಬಂದು ಫಿರ್ಯಾದಿ ನೀಡುವಲ್ಲಿ ವಿಳಂಬವಾಗಿರುತ್ತದೆ ಕಾರಣ ಈ ಘಟನೆಗೆ ಕಾರಣನಾದ ಲಾರಿಯ ಚಾಲಕ ರವಿಂದ್ರ ಸಾ- ಮಂಡ್ಯ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008