Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 17, 2016

1)  ಯಲಬುರ್ಗಾ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 16-02-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ಮೋಟಾರ ಸೈಕಲ ನಂ. KA 37/ V-7230 ನೇದ್ದನ್ನು ಚಲಾಯಿಸಿಕೊಂಡು ಮುರಡಿ-ಗೆದಗೇರಿ ರಸ್ತೆಯ ಮೇಲೆ ಗೆದಗೇರಿ ಸೀಮಾದಲ್ಲಿ ಬರುವ ಸರ್ಕಾರಿ ಪ್ರೌಢಶಾಲೆಯ ಮುಂದೆ ಗೆದಗೇರಿ ಗ್ರಾಮದ ಕಡೆಗೆ ಬರುತ್ತಿರುವಾಗ ಅದೇ ಸಮಯಕ್ಕೆ ಅವನ ಎದುರುಗಡೆಯಿಂದ ಅಂದರೆ ಗೆದಗೇರಿ ಗ್ರಾಮದ ಕಡೆಯಿಂದ ಮುರಡಿ ಗ್ರಾಮದ ಕಡೆಗೆ ಆರೋಪಿತನಾದ ಶಿವಕುಮಾರ ತಂದೆ ಬಸಪ್ಪ ಹುನಗುಂದ ಸಾ: ಯಲಬುರ್ಗಾ ಈತನು ಮೋಟಾರ ಸೈಕಲ ನಂ. KA 37/ R-9561 ನೇದ್ದರ ಹಿಂದುಗಡೆ ಕುಮಾರಗೌಡ ಪಾಟಿಲ ಸಾ: ಯಲಬುರ್ಗ ಈತನನ್ನು ಕೂಡಿಸಿಕೊಂಡು ಸದರಿ ಮೋಟಾರ ಸೈಕಲನ್ನು ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಪಿರ್ಯಾದಿದಾರನ ಮೋಟಾರ ಸೈಕಲಗೆ ಮತ್ತು ಅವನಿಗೆ ಜೋರಾಗಿ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರನ ಬಲಗಡೆಯ ಕಣ್ಣಿಗೆ ಪೆಟ್ಟು ಬಿದ್ದಿದ್ದು,ಬಲಗೈ ಮುಂಗೈ ಚಿಪ್ಪಿನ ಮೇಲ್ಭಾಗದಲ್ಲಿ ಭಾರಿ ಸ್ವರೂಪದ ಪೆಟ್ಟು ಬಿದ್ದು ಮುರಿದಿದ್ದು, ಬಲಗಾಲ ಮೊಣಕಾಲ ಕೆಳಗೆ ಭಾರಿ ಸ್ವರೂಪದ ಪೆಟ್ಟು ಬಿದ್ದು ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ.ಆರೋಪಿತನಿಗೂ ಮತ್ತು ಅವನ ಹಿಂದುಗಡೆ ಕುಳಿತುಕೊಂಡಿದ್ದ ಕುಮಾರಗೌಡ ಪಾಟೀಲ ಇವರಿಗೆ ಕಣ್ಣಿಗೆ,ಕೈಗಳಿಗೆ,ಮೊಣಕಾಲಿಗೆ,ಬಲಗಾಲ ಪಾದಕ್ಕೆ ಸಾದ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಸದರಿ ಆರೋಪಿತನು ಅಪಘಾತ ಮಾಡಿದ ನಂತರ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಯಲಬುರ್ಗಾ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 17-02-2016 ರಂದು ರೋಣ ತಾಲೂಕಿನ ದಿಂಡೂರು ಗ್ರಾಮದಲ್ಲಿ ಶ್ರೀ ದುಗ್ಗಮ್ಮ ದೇವಿಯ ಜಾತ್ರೆ ಜರುಗುತಿದ್ದು, ಸದರಿ ದೇವಿಯ ಜಾತ್ರೆಯಲ್ಲಿ ಪಿರ್ಯಾದಿದಾರನ ಅಜ್ಜಿ ದೀಡನಮಸ್ಕಾರ ಹಾಕುತಿದ್ದು, ಅದರ ಪ್ರಯುಕ್ತ ದಿನಾಂಕ: 16-02-2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ಚಿಕ್ಕಪ್ಪನ ಮಗನಾದ ಮಲ್ಲಪ್ಪ, ಕುಲಸ್ಥರಾದ ಮಂಜಪ್ಪ ತಂದೆ ಹನುಮಪ್ಪ ಜಾಲಿಹಾಳ, ಬಸನಗೌಡ ತಂದೆ ಹನುಮಗೌಡ ಜಮಾಲಿಪಾಟೀಲ ಹಾಗೂ ಪರಿಚಯಸ್ಥರಾದ ಪ್ರಕಾಶ ಗಂಜಿಹಾಳ, ಮಹಾಂತಪ್ಪ ಗಂಜಿಹಾಳ ಇವರೆಲ್ಲರನ್ನೂ  ತನ್ನ ಜೋಡೆತ್ತಿನ ಬಂಡಿಯಲ್ಲಿ ಕರೆದುಕೊಂಡು ದಿಂಡೂರಿಗೆ ಕಾತ್ರಾಳ-ಗಜೇಂದ್ರಗಡ ಮಾರ್ಗದ ರಸ್ತೆಯ ಮೇಲೆ ಕಾತ್ರಾಳ ಸೀಮಾದಲ್ಲಿಯ ಕಳಕಪ್ಪ ಸಂಗಳದ ಇವರ ಹೋಲದ ಹತ್ತಿರ ಹೋಗುತಿದ್ದಾಗ ರಾತ್ರಿ 9-15 ಗಂಟೆ ಸುಮಾರಿಗೆ ಗಜೇಂದ್ರಗಡ ಕಡೆಯಿಂದ ಆರೋಪಿತನು ಮೋಟಾರ್ ಸೈಕಲ್ ನಂ. ಕೆಎ-26/ಯು-5694 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಬಂಡಿಯ ಬಲಭಾಗಕ್ಕೆ ಇರುವ ಎತ್ತಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ. ಇದರಿಂದ ಸುಮಾರು 30,000/-ರೂ. ಬೆಲೆಬಾಳುವ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಕಾಲಂ ನಂ. 07 ರಲ್ಲಿ ನಮೂದಿಸಿದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ  ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008