Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 16, 2016

1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 47/2016 ಕಲಂ: 279, 337, 338 ಐ.ಪಿ.ಸಿ:
ದಿ-15.02.16 ರಂದು ಸಂಜೆ 19.30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ  ಗಾಯಾಳುಗಳು ದಾಖಲಾದ ಬಗ್ಗೆ ಮಾಹಿತಿಯು ಬಂದಿದ್ದರಿಂದ, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಸಂತ ಪೊಲೀಸ್ ಪಾಟೀಲ್ ಸಾ: ಮಿಟ್ಟಲಕೋಡ ತಾ; ಕುಷ್ಟಗಿ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ, ಇಂದು ದಿ-15.02.2016 ರಂದು ಸಂಜೆ 06.30 ಗಂಟೆ ಸುಮಾರಿಗೆ ನಾನು ನನ್ನ ತಂಗಿ ಮದುವೆ ಕಾರ್ಡ ಹಂಚಿ ವಾಪಸ್ ಕುಷ್ಟಗಿ ಕಡೆಯಿಂದ ಕೊಪ್ಪಳ ಕಡೆಗೆ ಶ್ರೀ ಗಾಳೆಮ್ಮ ಗುಡಿಯ ಹತ್ತಿರ ಬರುತ್ತಿದ್ದಾಗ ಎದುರುಗಡೆ ಅಂದರೆ ಕೊಪ್ಪಳ ಕಡೆಯಿಂದ ಹೊಂಡಾ ಮೋಟಾರ್ ಸೈಕಲ್ ಚೆಸ್ಸಿ ನಂಬರ್ ಎಂಇ4ಜೆಸಿ589ಡಿಇಟಿ131821 ನೇದ್ದನ್ನು ಅದರ ಚಾಲಕ ಪ್ರಭು ತಂದೆ ರುದ್ರಪ್ಪ ಕನಕಗಿರಿ ಸಾ:ರಾವಣಕಿ ಈತನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ನನ್ನ ಮೋಟಾರ್ ನಂ-ಕೆ.ಎ-37-ಆರ್-2587 ನೇದ್ದಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಅಪಘಾತದಲ್ಲಿ ನನಗೆ ಒಳಪೆಟ್ಟು ಮತ್ತು ರಕ್ತಗಾಯಗಳಾಗಿದ್ದುಅಪಘಾತಪಡಿಸಿದ ಪ್ರಭು ಈತನಿಗೆ ತಲೆ, ಹಣೆಗೆ, ಎಡಕಣ್ಣಿನ ಕೆಳಗಡೆ ರಕ್ತಗಾಯಗಳಾಗಿದ್ದು, ಈತನ ಗಾಡಿಯ ಹಿಂಬದಿ ಕುಳಿತುಕೊಂಡು ಬಂದಿದ್ದ ಗವಿಸಿದ್ದಪ್ಪ ಹಟ್ಟಿ ಈತನಿಗೆ ಬಲಗೈ ಮುಂಗೈ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಮತ್ತು ಅಲ್ಲಲ್ಲಿ ತೆರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಪಡಿಸಿದ ಮೊ.ಸೈಕಲ್ ಸವಾರ ಪ್ರಭು ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ನೀಡಿದ್ದ ದೂರನ್ನು ಪಡೆದುಕೊಂಡುವಾಪಸ್ ಠಾಣೆಗೆ ರಾತ್ರಿ 9.00  ಗಂಟೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:47/2016. ಕಲಂ-279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 28/2016 ಕಲಂ: 454, 457, 380 ಐ.ಪಿ.ಸಿ:
ದಿನಾಂಕ: 15-02-2016 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ನಿಂಗನಗೌಡ ತಂದೆ ಮೈಲಾರಗೌಡ ಗೌಡ್ರ ಸಾ: ಗಣೇಶ ತೆಗ್ಗು ಕೊಪ್ಪಳ, ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ ದಿನಾಂಕ: 11-02-2016 ರಂದು ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ: 15-02-2016 ರಂದು ಮದ್ಯಾಹ್ನ 2-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರು ಮತ್ತು ಅವರ ತಾಯಿ ಹಾಗೂ ಎಲ್ಲರೂ ಯಲಬುರ್ಗಾದಲ್ಲಿರುವ ತಮ್ಮ ಅಣ್ಣನ ಮನೆಯ ಪ್ರವೇಶ ಕಾರ್ಯಕ್ರಮ ಕುರಿತು ಹೋಗಿದ್ದಾಗಿ ಯಾರೋ ಕಳ್ಳರು ಫಿರ್ಯಾಧಿದಾರರ ತಾಯಿಯ ಮನೆಯ ಬೀಗ ಮುರಿದು ಮನೆಯ ಬೆಡ್ ರೂಮ್ನಲ್ಲಿದ್ದ ಅಲ್ಮಾರವನ್ನು ಮೀಟಿ ತೆರೆದು ಅಲ್ಮರದಲ್ಲಿದ್ದ ಅಂದಾಜು ತೂಕ 26 ಗ್ರಾಂ ಬಂಗಾರದ ಆಭರಣಗಳು ಹಾಗೂ ಅಂದಾಜು 10 ತೋಲೆ ತೂಕದ ಬೆಳ್ಳಿ ಆಭರಣಗಳು ಸೇರಿ ಒಟ್ಟು ಅಂ.ಕಿ.ರೂ: 24,100=00 ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನ ಪತ್ತೇ ಮಾಡಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ: 28/2016 ಕಲಂ: 454,457,380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.


0 comments:

 
Will Smith Visitors
Since 01/02/2008