Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 19, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 84/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:- 18-02-2016 ರಂದು ರಾತ್ರಿ 8:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿಷ್ಣುತೀರ್ಥ ಗೋಗಿ ತಂದೆ ಪ್ರಕಾಶ ಗೋಗಿ, ವಯಸ್ಸು: 19 ವರ್ಷ ಜಾತಿ: ಬ್ರಾಹ್ಮಣ, ಉ: ವಿದ್ಯಾಭ್ಯಾಸ ಸಾ: ವಿಜಯನಗರ ಕಾಲೋನಿ-ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ಗಂಗಾವತಿ ನಗರದ ನಿವಾಸಿ ಇದ್ದು, ಬೆಂಗಳೂರಿನಲ್ಲಿ ಬಿ.ಕಾಂ.ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ  ಮಾಡಿಕೊಂಡಿರುತ್ತೇನೆ. ಕಳೆದ ರವಿವಾರ ದಿವಸದಂದು ನನ್ನ ತಂದೆಯವರು ತೀರಿಕೊಂಡಿದ್ದರಿಂದ ಅವರ ಕ್ರೀಯಾ ಕರ್ಮಗಳನ್ನು ಮಾಡುವ ಸಲುವಾಗಿ ನಿನ್ನೆ ದಿವಸ ರಾತ್ರಿ ನಾನು ಹಾಗೂ ನನ್ನ ತಾಯಿ ವಂದನಾ ಗೋಗಿ ವಯಸ್ಸು 45 ವರ್ಷ, ನನ್ನ ದೊಡ್ಡಪ್ಪನಾದ ರಘೋತ್ತಮ @ ರಘು ಗೋಗಿ ತಂದೆ ಲಕ್ಷ್ಮಣರಾವ್ ಗೋಗಿ61 ವರ್ಷ, ನನ್ನ ದೊಡ್ಡಮ್ಮ ಪ್ರೇಮಾ ಗೋಗಿ ಗಂಡ ರಘೋತ್ತಮ @ ರಘು ಗೋಗಿ ವಯಸ್ಸು 53 ವರ್ಷ, ನನ್ನ ಅಣ್ಣ ಲಕ್ಷ್ಮಣ ಗೋಗಿ ವಯಸ್ಸು 24 ವರ್ಷ, ನನ್ನ ಅತ್ತೆ ಸೀತಾ ಮುತಾಲಿಕ ಗಂಡ ಗುರು ರಾವ್ ಮುತಾಲಿಕ್ ವಯಸ್ಸು 55 ವರ್ಷ ಸಾ: ಬೆಂಗಳೂರು, ನನ್ನ ಇನ್ನೊಬ್ಬ ಅತ್ತೆ ಜಿ. ಲಕ್ಷ್ಮೀ ಗಂಡ ಜಿ. ಲಕ್ಷ್ಮೀಕಾಂತ-50 ವರ್ಷ ಸಾ: ಕಲಬುರ್ಗಿ ಇವರುಗಳು ಕೂಡಿಕೊಂಡು ಸೀತಾಮುತಾಲಿಕ ಇವರ ಮಗನಾದ ಆನಂದ ಮುತಾಲಿಕ ಇವರ ಇನ್ನೋವಾ ಕಾರ್ ನಂಬರ್: ಕೆ.ಎ-03/ಎಂ.ಎಸ್-7658 ನೇದ್ದರಲ್ಲಿ ಬೆಂಗಳೂರಿನಿಂದ ಹೊರಟು ಗಂಗಾವತಿಗೆ ಬರುತ್ತಿದ್ದೆವು. ಕಾರನ್ನು ನನ್ನ ಅಣ್ಣ ಲಕ್ಷ್ಮಣ ಗೋಗಿ ಈತನು ನಡೆಯಿಸುತ್ತಿದ್ದನು. ನಾವು ಹೊಸಪೇಟೆ ಮೂಲಕ ಗಂಗಾವತಿಗೆ ಬರುತ್ತಿರುವಾಗ ಇಂದು ದಿನಾಂಕ:- 18-02-2016 ರಂದು ಬೆಳಿಗ್ಗೆ 06:30 ಗಂಟೆಯ ಸುಮಾರಿಗೆ ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯ ಚಿಕ್ಕಬೆಣಕಲ್ ಸೀಮಾದಲ್ಲಿ ನನ್ನ ಅಣ್ಣ ಲಕ್ಷ್ಮಣ ಗೋಗಿ ಈತನು ಕಾರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ಒಮ್ಮೆಲೇ ಒಂದು ಆಕಳು ಅಡ್ಡ ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ಒಮ್ಮೆಲೆ ವಾಹನವನ್ನು ತಿರುಗಿಸಿಕೊಂಡಿದ್ದರಿಂದ ವಾಹನವು ರಸ್ತೆಯ ಎಡಗಡೆ ಪಲ್ಟಿಯಾಗಿ ಉರುಳಿ ಬಿದ್ದು ಅಪಘಾತವಾಯಿತು. ನಂತರ ಕಾರನಿಂದ ಹೊರಗಡೆ ಬಂದು ನೋಡಿಕೊಳ್ಳಲಾಗಿ ನನ್ನ ಬಲಗೈಗೆ ಒಳಪೆಟ್ಟಾಗಿತ್ತು. ನನ್ನ ಸಂಗಡ ಇದ್ದ ಜಿ. ಲಕ್ಷ್ಮೀ ಇವರಿಗೆ ಎಡಗೈ ಎಲುಬು ಮುರಿದು, ತೆರೆಚಿದ ಗಾಯವಾಗಿತ್ತು. ಲಕ್ಷ್ಮಣನಿಗ ಬಲಗೈ ಮುಂಗೈಗೆ ತೀವ್ರ ಒಳಪೆಟ್ಟಾಗಿತ್ತು. ಉಳಿದವರಿಗೂ ಸಹ ಒಳಪೆಟ್ಟುಗಳು ಮತ್ತು ತೆರೆಚಿದ ಗಾಯಗಳಾಗಿದ್ದವು. ನಂತರ ನಾವು 108 ಗೆ ಫೋನ್ ಮಾಡಲಾಗಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ನಾವುಗಳು ಬಂದು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮನಲ್ಲಿ ದಾಖಲಾದೆವು. ನಾನು ಚಿಕಿತ್ಸೆ ಪಡೆದುಕೊಂಡು ಉಳಿದವರಿಗೂ ಸಹ ಚಿಕಿತ್ಸೆ ಕೊಡಿಸುವುದರಲ್ಲಿ ನಿರತನಾಗಿ ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ  ಈ ಅಪಘಾತಕ್ಕೆ ಕಾರಣನಾದ ನನ್ನ ಅಣ್ಣ ಲಕ್ಷ್ಮಣ ಗೋಗಿ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 49/2016 ಕಲಂ: 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿ-18.02.16 ರಂದು ರಾತ್ರಿ 11.30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ  ಗಾಯಾಳುಗಳು ದಾಖಲಾದ ಬಗ್ಗೆ ಮಾಹಿತಿಯು ಬಂದಿದ್ದರಿಂದ, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಂಜುನಾಥ ತಂದೆ ಮುದುಕಪ್ಪ ಸಾ: ಕುಷ್ಟಗಿ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ, ಇಂದು ದಿ-18.02.2016 ರಂದು ಸಂಜೆ 04.30 ಗಂಟೆ ಸುಮಾರಿಗೆ ಟ್ರ್ಯಾಕ್ಸ್ ನಂ-ಕೆಎ-37/ಎ-3903 ನೇದ್ದರಲ್ಲಿ ಕೊಪ್ಪಳ ಕುಷ್ಟಗಿ ರಸ್ತೆಯಲ್ಲಿ ಕೊಪ್ಪಳ ಕಡೆ ಬರುತ್ತಿರುವಾಗ ಟನಕನಕಲ್ಲ ಸಮೀಪ ಮರಾರ್ಜಿ ದೇಸಾಯಿ ಶಾಲೆಯ ಹತ್ತಿರ ಟ್ರ್ಯಾಕ್ಸ್ ಚಾಲಕನು ಟ್ರ್ಯಾಕ್ಸ್ ನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿದ್ದರಿಂದ ಟ್ರ್ಯಾಕ್ಸ್ ನಿಯಂತ್ರಣ ಸಾದಿಸದೇ ಅಡ್ಡಾದಿಡ್ಡಿಯಾಗಿ ಓಡಿಸಿ ಪಲ್ಟಿ ಮಾಡಿದ್ದರಿಂದ  ವಾಹನ ರಸ್ತೆಬದಿ ತಿರುವಿ ಬಿದ್ದಿದ್ದು, ಇದರಿಂದ ಟ್ರ್ಯಾಕ್ಸ್ ದಲ್ಲಿದ್ದವರಿಗೆ ಸಾದಾ ಮತ್ತು  ಭಾರಿ ಸ್ವರೂಪದ ಗಾಯಗಳಾಗಿದ್ದು, ಅಪಘಾತಪಡಿಸಿ ಟ್ರ್ಯಾಕ್ಸ್ ಚಾಲಕನು ಅಪಘಾತಪಡಿಸಿದ ಮೇಲೆ ತನ್ನ ಮಾಹಿತಿಯನ್ನು ತಿಳಿಸದೇ ಓಡಿ ಹೋಗಿದ್ದು  ಇರುತ್ತದೆ. ಕಾರಣ ಅಪಘಾತ ಪಡಿಸಿ ಓಡಿ ಹೋದ ಟ್ರ್ಯಾಕ್ಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ನೀಡಿದ್ದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 74/2016 ಕಲಂ: 279, 338  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 18-02-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರ ಶ್ರೀ ಸತ್ಯನಾರಾಯಣ ತಂದೆ ವೆಂಕಟರಾವ್ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು,  ಅದರ ಸಾರಾಂಶವೇನೆಂದರೆ,   ಇಂದು ದಿನಾಂಕ 18-02-2016 ರಂದು ತಮ್ಮ ವ್ಯವಹಾರದ ಕೆಲಸದ ಮೇಲೆ ನಾನು ಮತ್ತು ನನ್ನ ಗೆಳೆಯ ಎಮ. ಪಾಪಾರಾವು ತಂದೆ ಸತ್ಯನಾರಾಯಣ ಮೇಡಿಶೆಟ್ಟಿ ಈತನೊಂದಿಗೆ ನಮ್ಮ ಯುನಿಕೋರ ಮೋಟಾರ ಸೈಕಲ್ ನಂ.ಕೆಎ-34/ಇಎ-1289 ನೇದ್ದನ್ನು ತೆಗೆದುಕೊಂಡು ಗಂಗಾವತಿಯಿಂದ ತಾವರಗೇರಾ ಕ್ಕೆ ಹೋಗಿ ಅಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಕೆಲವನ್ನು ಮುಗಿಸಿಕೊಂಡು ಸಂಜೆ 7-00 ಗಮಟೆಯ ಸುಮಾರಿಗೆ ಅಲ್ಲಿಂದ ಹೊರಟಿದು, ಮೋ.ಸೈನ್ನು ನಾನು ಚಾಲಯಿಸುತ್ತಿದ್ದು, ನನ್ನ ಹಿಂದೆ ಎಂ.ಪಾಪುರಾವು ಈತನು ಕುಳಿತುಕೊಂಡಿದ್ದನು. ಸಂಜೆ 7-30 ಗಂಟೆಯ ಸುಮಾರಿಗೆ ನಾವು ಕನಕಗಿರಿ ನವಲಿ ವೃತ್ತವನ್ನು ಹಾಯ್ದು ಹೋಗುತ್ತಿರುವಾಗ ಅದೇ ಸಮಯಕ್ಕೆ ಗಂಗಾವತಿ ಕಡೆಯಿಂದ ಒಚಿಥಿ ಈಜಡಿರಣಠಟಿ ಟ್ರಾಕ್ಟರ್ (ಇಂಜಿನ್) ನಂ.ಕೆಎ-35/ಟಿಎ-523 ರ ಚಾಲಕ ಮುದಕಪ್ಪ ತಂದೆ ಹೇಮಪ್ಪ ಹರಿಜನ ಸಾ : ನವಲಿ ಈತನು ಟ್ರಾಕ್ಟರಿಯನ್ನು ಗಂಗಾವತಿ ಕಡೆಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ನವಲಿ ವೃತ್ತದಲ್ಲಿ ಯಾವುದೇ ಕೈ ಸನ್ನೆ ಮಾಡದೇ ನವಲಿ ಕಡೆ ಟ್ರಾಕ್ಟರಿಯನ್ನು ಒಮ್ಮಿಂದೊಮ್ಮೇಲೆ ಕಟ್ ಮಾಡಿ ನನ್ನ ಮೋ.ಸೈ.ಗೆ ಟಕ್ಕರ್ ಕೊಟ್ಟು ಸ್ಥಳದಲ್ಲಿ ಟ್ರಾಕ್ಟರಿಯನ್ನು ಬಿಟ್ಟು ಚಾಲಕನು ಓಡಿ ಹೋದನು. ಈ ಅಪಘಾತದಿಂದ ನನ್ನ ಮೊ.ಸೈ.ನ ಹಿಂದೆ ಕುಳಿತ ಪಾಪುರಾವ ಈತನ ಬಲಗಾಲು ಮೊಣಕಾಲ ಕೆಳಗೆ ಭಾರಿ ಪೆಟ್ಟಾಗಿ ಕಾಲು ಮುರಿದಿದಂತೆ ಕಂಡು ಬಂದಿದ್ದು, ಕೂಡಲೇ ನಾನು ಮತ್ತು ಅಲ್ಲಿ ಸೇರಿದ ಜನರೊಂದಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ಕನಕಗಿರಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಮಲ್ಲನಗೌಡ ಆಸ್ಪತ್ರೆಗೆ ಕಳುಹಿಸಿಕೊಟ್ಟೆನು. ಕಾರಣ ಒಚಿಥಿ ಈಜಡಿರಣಠಟಿ ಟ್ರಾಕ್ಟರ್ (ಇಂಜಿನ್) ನಂ.ಕೆಎ-35/ಟಿಎ-523 ರ ಚಾಲಕ ಮುದಕಪ್ಪ ತಂದೆ ಹೇಮಪ್ಪ ಹರಿಜನ ಸಾ : ನವಲಿ ಈತನ ಮೇಲೆ ಕೇಸ್ ಮಾಡಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 73/2016 ಕಲಂ: 448, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:18-02-2016 ರಂದು ಸಂಜೆ 06-30 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಖಾಸಗಿ ಫಿರ್ಯಾದಿ ಸಂಖ್ಯೆ 54/2015 ನೇದ್ದು ಅದರ ಸಂಗಡ ಸಂಗಪ್ಪ ತಂದೆ ಚನ್ನಮಲ್ಲಪ್ಪ ಕಂದಕೂರು  ಸಾ: ತಳವಗೇರಾ ರವರ ಮನೆಯ ಹತ್ತಿರ ಆರೋಪಿತರಾದ ಬಸವ್ವ ಗಂಡ ಸಂಗಪ್ಪ ಕಂದಕೂರು ವ: 48 ವರ್ಷ ಉ: ಮನೆಗೆಲಸ ಸಾ: ನಿಡಗುಂದಿಕೊಪ್ಪ ತಾ: ರೋಣ ಹಾಗೂ ಇತರೇ 7 ಜನರು ಸೇರಿ ಬಂದು ಲೇ ಬೋಸುಡಿ ಮಗನೇ ಮನೆ ಖಾಲಿ ಮಾಡದಿದ್ದರೇ ಕುತ್ತಿಗೆ ಹಿಚುಕಿ ಸಾಯಿಸುತ್ತೇನೆ ನೀನು ಏನು ಸೆಂಟಾ ಅರಕೊತ್ತಿದಿ ಅಂತಾ ಬೈದು ಪಿರ್ಯಾದಿದಾರರ ಮನೆಯಲ್ಲಿ ಹೊಕ್ಕು ಕುತ್ತಿಗೆ ಹಿಡಿದು ಎಳೆದು ತಂದು ಅಂಗಿ ಹಿಡಿದು ಒದ್ದು ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಫಿರ್ಯಾದಿದಾರ ಸಂಗಪ್ಪ ಇತನಿಗೆ ಆರೋಪಿ ಅ.ನಂ: 01 ಬಸವ್ವ ಇಕೆಯು ಹೆಂಡತಿ ಇದ್ದು ಅವರವರಲ್ಲಿ ಮನೆತನದ ವಿಷಯವಾಗಿ ವೈಮನಸ್ಸು ಉಂಟಾಗಿ ಈ ಘಟನೆ ಜರುಗಿರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 48/2016 ಕಲಂ: 126 (ಸಿ) ಸಿ.ಆರ್.ಪಿ.ಸಿ:.
ದಿ:18-02-16 ರಂದು 4-00 ಪಿ.ಎಮ್ ಕ್ಕೆ. ಫಿರ್ಯಾದಿದಾರರಾದ ಶ್ರೀ ನಾಗೇಶ. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಕೇಂದ್ರ, ಕೊಪ್ಪಳ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ದಿ: 18-02-16 ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ ಕಿಡದಾಳ ಗ್ರಾಮದಲ್ಲಿ ಟೆಂಪೋ ಟ್ರ್ಯಾಕ್ಸ ನಂ: ಕೆಎ-37/5652 ನೇದ್ದರ ಚಾಲಕನು ತನ್ನ ವಾಹನಕ್ಕೆ ಕಾಂಗ್ರೆಸ್ ಧ್ವಜ ಮತ್ತು ಮೈಕ್ ಕಟ್ಟಿ ಕಾಂಗ್ರೇಸ್ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇರುತ್ತದೆ. ಅಂತಾ ನೀಡಿದ ದೂರು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಪ್ರಕರಣವನ್ನು ದಾಖಲಿಸಲು ಮಾನ್ಯ  ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡು ರಾತ್ರಿ 11-10 ಗಂಟೆಗೆ ಸದರಿ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008