Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 21, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 53/2016 ಕಲಂ: 143, 147, 341, 323, 307 354, 504,506 ಸಹಿತ 149 ಐ.ಪಿ.ಸಿ:
ದಿನಾಂಕ 20-02-2016  ರಂದು ರಾತ್ರಿ  11    ಗಂಟೆಯ ಸುಮಾರಿಗೆ ಸುಮಾರಿಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್.ಸಿ ಮಾಹಿತಿ ಬಂದಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ಜಗಳದಲ್ಲಿ ದುಖಃಪಾತಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದ ಪಿರ್ಯಾದಿ ಮುತ್ತಣ್ಣ ತಂದಿ ಗಿರಿಮಲ್ಲಪ್ಪ ಕುರಟ್ಟಿ ವಯಾ-35 ವರ್ಷ ಜಾ. ಕುರಬರು ಉ- ಆಟೋ ಚಾಲಕ ಸಾ. ಹುಳ್ಕಿಹಾಳ ಕ್ಯಾಂಪ್ ತಾ. ಗಂಗಾವತಿ ಈತನಿಗೆ ವಿಚಾರಿಸಿದ್ದು ಸದರಿಯವರು ಒಂದು ಲಿಖಿತ ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ  ನಾನು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೆನೆ. ಮಾಹೇ 2016 ನೇ ಸಾಲಿನ ತಾಲೂಕ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಕಾಂಗ್ರೇಷ ಪಕ್ಷದ ಕಾರ್ಯಕರ್ತನಿದ್ದು ನನಗೆ ನಮ್ಮೂರಿನ ಜನರೆಲ್ಲರ ಪರಿಚಯವಿರುತ್ತದೆ. ನನ್ನಂತೆಯ ನಮ್ಮೂರಿನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ನಮ್ಮೂರಿನ ನೆಕ್ಕಂಟಿ ಸುರೇಶ , ನೆಕ್ಕಂಟಿ ರವಿ, ಮಧು ತಂದಿ ನಾರಾಯಣ , ನೆಕ್ಕಂಟಿ ನಾಗರಾಜ , ರಾಮಮೂರ್ತಿ ವರು ಇರುತ್ತಾರೆ ದಿನಾಂಕ;-20-02-2016 ರಂದು ಜಿಲ್ಲಾ ,ಮತ್ತು ತಾಲೂಕ ಪಂಚಾಯಿತಿ ಚುನಾವಣೆ ಇದ್ದುದರಿಂದ ನಾನು ಮತ್ತು ನಮ್ಮ ಅಳಿಯ ಮಂಜುನಾಥ ನಮ್ಮೂರಿನ ಮತಗಟ್ಟೆಯಿರುವ ನಮ್ಮೂರಿನ ಶಾಲೆಯ  ಹತ್ತಿರ ಹೋಗಿದ್ದೇನು ಬಿ.ಜೆ.ಪಿ ಕಾರ್ಯಾಕರ್ತರು ಕೂಡಾ ಬಂದಿದ್ದರು ನಾವು ಕಾಂಗ್ರೇಷ ಪಕ್ಷದ ವತಿಯಿಂದ ಪೂಲಿಂಗ್ ಏಜಂಟನಾಗಿ ಬಸವರಾಜನಿಗೆ ಕಳುಹಿಸಿಕೊಟ್ಟಿದ್ದೇವು ಅದರಂತೆ ಬಿಜೆಪಿ ಪಕ್ಷದಿಂದ  ನೆಕ್ಕಂಟಿ ರವಿ ಮತ್ತು ಮಧು ಇವರು ಹೋಗಿದ್ದರು ಮತಗಟ್ಟೆಯಲ್ಲಿ ಸದರಿ ರವಿ ಮತ್ತು ಮಧು ಇವರು ನಮ್ಮ ಬಸವರಾಜನಿಗೆ ಜೀವ ಬೇದರಿಕೆ ಹಾಕುತ್ತಿದ್ದರು ನೀನು ಇಲ್ಲಿ ಇರಬೇಡ ಹೋರಗಡೆ ಹೋಗು, ನೀನು ಹೊರಗಡೆ ಹೋಗದಿದ್ದರೆ ನಿನಗೆ ಬಡಿಯುತ್ತೇವೆ ಅಂತಾ ಹೆದರಿಕೆ ಹಾಕಿದ್ದರಿಂದ ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ನಮ್ಮ ಬಸವರಾಜ ಈತನು ರೂಮಿನಿಂದ ಹೊರಗಡೆ ಬಂದು ನಮಗೆ ವಿಷಯ ತಿಳಿಸಿದ್ದರಿಂದ ನಾವು ಬಿಜೆಪಿ ಕಾರ್ಯಕರ್ತಗೆ ತಿಳಿಸಬೇಕೆಂದು ಅಲ್ಲಿ ಇದ್ದ ನೆಕ್ಕಂಟಿ ಸುರೇಶ. ನೆಕ್ಕಂಟಿ ನಾಗರಾಜ , ರಾಮಮೂರ್ತಿ ಇವರಿಗೆ ತಿಳಿಸಲು ಹೋದಾಗ್ಗೆ ಸದರಿಯವರು ಲೇ ಮುತ್ಯ ಸೂಲೆ ಮಗಲೆ ನಮಗೆ ನಮಗೆನು ಸೆಂಟ ಕೇಳುತ್ತಿರಿಲೇ ಬೊಸುಡಿ ಮಕ್ಕಳೆ , ಅಂತಾ ಜೋರಾಗಿ ನಮ್ಮೊಂದಿಗೆ ಬಾಯಿ ಮಾಡಿದ್ದರಿಂದ ಮತಗಟ್ಟೆಯಲ್ಲಿದ್ದ ರವಿ ಮತ್ತು ಮಧು ಇವರು ಅಲ್ಲಿದ್ದ ಒಡಿ ಬರುತ್ತಾ ಆ ಸೂಳೆ ಮಕ್ಕಳನ್ನು ಸಾಯಿಸಿಬಿಡೋಣ ಹಿಡಿದುಕೊಳ್ಳರಿ ಅಂತಾ ಅನ್ನುತ್ತಾ ಬಂದು ಇಬ್ಬರು ಕೂಡಿ ನನಗೆ ಕಾಲಿನಿಂದ ಒದ್ದು ನೆಲಕ್ಕೆ ಹಾಕಿದನು ನೆಕ್ಕಂಟಿ ಸುರೇಶನು ತನ್ನ ಕಾಲಿನಿಂದ ನನ್ನ ಕುತ್ತಿಗೆಯ ಮೇಲಿಟ್ಟು ಒತ್ತಿ ಕೊಲೆ ಪ್ರಯತ್ನ ಮಾಡುತ್ತಿದ್ದಾಗ್ಗೆ ನಮ್ಮ ಅಳಿಯ ಬಸವರಾಜನು ಬಂದು ಬಿಡಿಸದನು ಆಗ ರಾಮಮೂರ್ತಿ ಮತ್ತು ಅಲ್ಲಿ ಇದ್ದ ಸತ್ಯನಾರಾಯಣ ಇವರು ಬಿಡಿಸಲು ಬಂದಿದ್ದ ಮಂಜುನಾಥನಿಗೆ ಮತ್ತು ಬಸವರಾಜನಿಗೆ ಹಿಡಿದುಕೊಂಡು ಕೈಯಿಂದ ಬಡಿದು ಕಾಲಿನಂದ ಒದ್ದರು ನಮ್ಮ ತಾಯಿ ನಮಗೆ ಬಿಡಿಸಿಕೊಳ್ಳಲು ಬಂದಾಗ್ಗೆ ನಮ್ಮ ತಾಯಿ ಶಾಂತಮ್ಮಳಿಗೆ ನೆಕ್ಕಂಟಿ ನಾಗರಾಜ ಈತನು ಆಕೆಯ ಹೆಗಲ ಮೇಲೆ ಇದ್ದ ಸಿರಿಯನ್ನು ಹಿಡಿದುಕೊಂಡು ಕಪಾಳಕ್ಕೆ ಹೊಡೆದನುಅಷ್ಟರಲ್ಲಿ ಅಲ್ಲಿ ಇದ್ದ ಜಗಳವನ್ನು ನೋಡಿದ ಸಂಗಪ್ಪ ದಳಪತಿ, ಶ್ರೀನಿವಾಸ ಜಿ., ಶಿವಪುತ್ರಪ್ಪ ಮತ್ತು ನಮ್ಮ ತಂದೆ ಗಿರಿಮಲ್ಲಪ್ಪ ಓಟು ಹಾಕಲು ಬಂದಿದ್ದ ನಮ್ಮೂರಿ ಈತರೆ ಜನರು ಮತ್ತು ಹುಳ್ಕಿಹಾಳ ಗ್ರಾಮದವರು ಬಂದು ಬಿಡಿಸಿಕೊಂಡಿರು ಅಷ್ಟಾದರೂ ಅವರು ಸುಮ್ಮನೆ ಹೋಗದೆ ಇನ್ನೊಮ್ಮೆ ಎಲಕ್ಷನ್ ಅಂತಾ ಬಂದರೆ ಮಕ್ಕಳೆ ನಿಮ್ಮನ್ನು ಜಿವಂತ ಸುಟ್ಟು ಹಾಕಿಬಿಡುತ್ತೇವೆ ಅಂತಾ ಜೀವ ಬೇದರಿಕೆ ಹಾಕಿ ಹೊಗಿರುತ್ತಾರೆ ಈ ಘಟನೆಯು ಮದ್ಯಾಹ್ನ 3-45 ಗಂಟೆಯಿಂದ 4-05 ಗಂಟೆಯ ಅವಧಿಯಲ್ಲಿ ಸಂಭವಿಸಿದ್ದು ನಂತರ ನನಗೆ ಗಾಯಗಳಾಗಿದ್ದರಿಂದ ನನಗೆ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 75/2016 ಕಲಂ: 143 147 148 341 323 326 354 355 504 506 ಸಹಿತ 149 ಐ.ಪಿ.ಸಿ.
ದಿನಾಂಕ 20-02-2016 ರಂದು ಸಂಜೆ 6-00 ಗಂಟೆಗೆ ಫಿರ್ಯಾಧಿದಾರ ಶ್ರೀ ವಿರೇಶ ತಂದೆ ಛತ್ರಪ್ಪ ಭಂಗಿ ಸಾ : ಚಿಕ್ಕಖೇಡಾ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ನಾನು ಈಗ್ಗೆ ಸುಮಾರು 3 ವರ್ಷದಿಂದ ಹಿರೇಖೇಡಾ ಗ್ರಾಮದ ಗಂಗಮ್ಮ ಗಂಡ ಬಸವರಾಜ ಗಾಣದಾಳ ಇವಳನ್ನು ಪ್ರೀತಿಸುತ್ತಿದ್ದರಿಂದ ಈ ವಿಷಯವು ದಿನಾಂಕ 01-01-2016 ರಂದು ಹಿರೇಖೇಡಾ ಗ್ರಾಮದ ಗುರು-ಹಿರಿಯರು ತಿಳಿದಿದ್ದು, ಹಿರೇಖೇಡಾ & ಚಿಕ್ಕಖೇಡಾ ಗ್ರಾಮದ ಗುರು-ಹಿರಿಯರು ಕೂಡಿಕೊಂಡು ನನ್ನೊಂದಿಗೆ ಗಂಗಮ್ಮಳನ್ನು ಮದುವೆ ಮಾಡಿಸಿದ್ದರು. ಗಂಗಮ್ಮಳು ಗಂಡನ ಮನೆಯವರು ನನ್ನ ಮೇಲೆ ಸಿಟ್ಟಾಗಿ ದ್ವೇಶ ಇಟ್ಟುಕೊಂಡಿದ್ದರು. ನಾನು, ನನ್ನ ಹೆಂಡತಿ ಗಂಗಮ್ಮಳನ್ನು ಮದುವೆಯಾದ ನಂತರ ಅವರಿಗೆ ಅಂಜಿ ಊರು ಬಿಟ್ಟು ಬೇರೆ ಊರಿಗೆ ಕೂಲಿ ಮಾಡಲು ಹೋಗಿದ್ದೆನು. ಅವರಿಂದ ನಮಗೆ ಜೀವ ಬೆದರಿಕೆ ಇರುತ್ತದೆ. ಇಂದು ದಿನಾಂಕ 20-02-2016 ರಂದು ಸಂಜೆ  4-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗಂಗಮ್ಮಳೊಂದಿಗೆ ಟಿಪಿ & ಜೆಡ್ ಪಿ ಚುನಾವಣೆಯ ನಿಮಿತ್ಯ ಮತ ಹಾಕಿ ವಾಪಸ್ ನಮ್ಮ ಮನೆಗೆ ನಮ್ಮೂರ ಅಯ್ಯಪ್ಪ ಹರಿಜನ ಇವರ ಮನೆಯ ಹಿಂದೆ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆ ಸಮಯದಲ್ಲಿ ನಮ್ಮ ಕುಲಸ್ಥರಾದ ಮೇಲ್ಕಂಡ 15 ಜನರು ಕೂಡಿಕೊಂಡು ಹಳೆ ದ್ವೇಶ ಇಟ್ಟುಕೊಂಡು ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ಏನಲೇ ಸೂಳೇ ಮಗನೇ, ನಮ್ಮ ಮನೆಯ ಹೆಂಡತಿಯನ್ನಾ ಹೆಂಗಾ ಲವ್ ಮಾಡಿದೀ ಮದುವೆ ಆದೆಲೇ ಸೂಳೇ ಮಗನಾ ಅಂತಾ ಅನ್ನುತ್ತಾ ಸೋಮಣ್ಣ, ನಿಂಗಪ್ಪ ಇವರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಗ್ಯಾನಪ್ಪನು ಅಲ್ಲಿಯೇ ಇದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ನನ್ನ ಬಲಗಡೆ ಕಪಾಳಕ್ಕೆ ಜೋರಾಗಿ ಹೊಡೆದನು. ಇದರಿಂದ ನನ್ನ ಬಲಗಡೆ ಕಣ್ಣಿಗೆೆ ಭಾವು ಬಂದು ಕಣ್ಣು ಮುಚ್ಚಿರುತ್ತದೆ. ಮತ್ತು ಬಲಗಡೆ ಹಲ್ಲಿಗೆ ಭಾರಿ ಪೆಟ್ಟಾಗಿರುತ್ತದೆ. ಪರಸಪ್ಪನು ಕೊಡಲಿ ಕಾವಿನಿಂದ ನನ್ನ ಬೆನ್ನಿಗೆ ಹೊಡೆದನು. ಅಯ್ಯಪ್ಪನು ಕೊಡಲಿ ಕಾವಿನಿಂದ ಎಡಗೈ ಹೊಡೆದು ಒಳ ಪೆಟ್ಟು ಮಾಡಿದನು. ಲಕ್ಷ್ಮಿ ಇವಳು ಚಪ್ಪಲಿಯಿಂದ ನನ್ನ ಕಪಾಳಕ್ಕೆ, ಮೂಗಿಗೆ ಹೊಡೆದಳು. ಇದರಿಂದ ನನ್ನ ಮೂಗಿನಿಂದ ರಕ್ತ ಬಂದಿರುತ್ತದೆ. ಬಡಿಸಲು ಹೋದ ನನಗೆ ಹನುಮಗೌಡ, ಇವನು ನನ್ನ ಕಪಾಳಕ್ಕೆ ಹೊಡೆದನು. ಮುದಿಯಪ್ಪ @ ನಾಗಪ್ಪ ಇವರು ಸೀರೆ ಹಿಡಿದು ಎಳೆದಾಡಿದರು. ಹುಲಿಗೆಮ್ಮಳು ನನ್ನ ಬೆನ್ನಿಗೆ ಗುದ್ದಿದಳು. ಈ ಜಗಳವನ್ನು ನೋಡಿ ಅಲ್ಲಿಯೇ ಓಟು ಬಂದಿದ್ದ ಛತ್ರಪ್ಪ ತಂದೆ ಹನುಮಂತಪ್ಪ ಭಂಗಿ, ಚಿದಾನಂದಮೂತರ್ ತಂದೆ ದುರಗಪ್ಪ ಭಂಗಿ, ಮುದಿಯಪ್ಪ ತಂದೆ ವಿರುಪಣ್ಣ ಕಲಿಕೇರಿ, ಉಮೇಶ ತಂದೆ ರಾಮಪ್ಪ ಕುರುಬರು, ರಾಮಣ್ಣ ಹರಿಜನ, ರಾಜಸಾಬ ಕಲಿಕೇರಿ ಇವರು ಬಂದು ಜಗಳ ಬಿಡಿಸಿ ಕಳುಹಿಸುವಾಗ ಈ ಸಲಾ ಉಳಿದಿಯೇರಲೇ ವಿರೇಶ ಇನ್ನೊಮ್ಮೆ ಎಲ್ಲಿಯಾದರೂ ಸಿಗು ನಿನ್ನ ಮತ್ತು ನಿನ್ನ ಹೆಂಡತಿ ಗಂಗಮ್ಮಳ ಜೀವ ತೆಗೆಯದೇ ಬಿಡಲಾರದೇ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಇದರಿಂದ ನನಗೆ ಮಾತ್ರ ಗಾಯವಾಗಿದ್ದು, ನನ್ನ ಹೆಂಡತಿಗೆ ಯಾವುದೇ ಗಾಯ ಇರುವದಿಲ್ಲ.  ಕಾರಣ ನನಗೆ ಮತ್ತು ನನ್ನ ಹೆಂಡತಿಗೆ ಹಳೆ ದ್ವೇಶ ಇಟ್ಟುಕೊಂಡು ಬಡಿದ 15 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 17/2016 ಕಲಂ: 32, 34 Karnataka Excise Act:
ದಿನಾಂಕ: 20-02-2016 ರಂದು 07-00 ಗಂಟೆಗೆ ಪಿರ್ಯಾದಿದಾರರು ಅನಧೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿತನನ್ನು ಮತ್ತು ಮದ್ಯದ ಬಾಟಲಿಗಳನ್ನು ಹಾಗೂ ಪಂಚನಾಮೆಯನ್ನು ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 20-02-2016 ರಂದು ಬೆಳಿಗ್ಗೆ 05-00 ಗಂಟೆಗೆ ನಾನು ಜಿಲ್ಲಾ ಪಂಚಾಯತಿ ಮತ್ತು ತಾಲೂಕ ಪಂಚಾಯತಿ ಚುನಾವಣೆ ನಿಮಿತ್ಯ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಆರೋಪಿತನು ಕಿಲಾರಹಟ್ಟಿ ತಾಂಡಾದ ಸಾರ್ವಜನಿಕ ಸ್ಥಳದ ಬೇವಿನಗಿಡದ ಕೆಳಗೆ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಬೆಂಗಳೂರು ಮಾಲ್ಟ್ ಕಂಪನಿಯ ವಿಸ್ಕಿ ಬಾಟಲಿಗಳು 180 ಎಮ್.ಎಲ್ ಅಳತೆಯ ಒಟ್ಟು 30 ಬಾಟಲಿಗಳು ಪ್ರತಿಯೊಂದಕ್ಕೆ ರೂ: 42.37=00 ರಂತೆ ಒಟ್ಟು ಅಂ.ಕಿ.ರೂ: 1271=00 ಬೆಲೆ ಬಾಳುವ ಮದ್ಯದ ಬಾಟಲಿಗಳು ಹಾಗೂ ಮದ್ಯ ಮಾರಾಟದ ಹಣ 165=00 ರೂಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತನ ಮೇಲೆ ಕಲಂ: 32, 34 ಕೆ.ಇ. ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ ಸಾರಾಂಶದದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 50/2016 ಕಲಂ: 323,324,326,504,506 ಐ.ಪಿ.ಸಿ:.
ದಿ:20-02-16 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ದ್ಯಾಮಪ್ಪ ತಂದೆ ನಿಂಗಪ್ಪ ಮ್ಯಾದನೇರಿ. ಸಾ:ಗೋಸಲದೊಡ್ಡಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:20-02-16 ರಂದು ಮದ್ಯಾಹ್ನ ನಾನು ನಮ್ಮೂರು ಸೀಮಾದ ಹೊಲದಲ್ಲಿ ನಮ್ಮ ಕುರಿಗಳನ್ನು ಮೇಯಿಸಲು ಹೋಗಿದ್ದೆನು. ನಮ್ಮ ಕೆಲವು ಕುರಿಗಳು ಪಕ್ಕದ ನಾಗಪ್ಪನ ಬೀಳು ಮೇವು ಹೊಲದಲ್ಲಿ ಮೇಯಲು ಹೋಗಿದ್ದಕ್ಕೆ ನಾಗಪ್ಪನು ಬಂದು ಒಮ್ಮಿಂದೊಮ್ಮಲೆ ಸಿಟ್ಟಿಗೆ ಎದ್ದು ಅವಾಚ್ಯ ಶಬ್ದಗಳಿಂದ ಬೈಯ್ದು, ತೆಕ್ಕೆಮುಕ್ಕೆ ಬಿದ್ದು ನೆಲಕ್ಕೆ ಕೆಡವಿ ಕಲ್ಲಿನಿಂದ ತಲೆಗೆ ಜಜ್ಜಿ ರಕ್ತಗಾಯಗೊಳಿಸಿದ್ದು ಆಗ ನಾನು ಸತ್ತೆನಪ್ಪೋ ಅಂತಾ ಚೀರಾಡುವಾಗ ನಮ್ಮ ಗುಂಪಿನಲ್ಲಿರುವ ಕುರಿಗಳ ಕುರಿಗಾರ ವೀರಣ್ಣ ಪೂಜಾರಿ ಬಂದು ಜಗಳ ಬಿಡಿಸುವಾಗ ಆತನಿಗೆ ಸಹ ನಾಗಪ್ಪನು ನನ್ನಲ್ಲಿದ್ದ ಕೊಡ್ಲಿ ಕಾವಿನಿಂದ ಕಾಲಿಗೆ ಹೊಡೆದನು. ಅಲ್ಲದೇ ನನಗೆ ಕೈಗಳಿಂದ ಮೈ ಕೈ ಗೆ ಹೊಡೆದನು. ನಂತರ ನನಗೆ ವೀರಣ್ಣನು ಊರಾಕ ಮನೆಗೆ ಕರೆದುಕೊಂಡು ಬರುವಾಗ ಚಿಲಕಮುಖಿ ರೋಡಿನಲ್ಲಿ ನನ್ನ ಮಗ ಗವಿಸಿದ್ದಪ್ಪನು ಬಂದು ಏನಾಗಿದೆ ಅಂತಾ ಕೇಳುವಾಗ ನಮ್ಮ ಹಿಂದೆ ಬಂದ ನಾಗಪ್ಪನು ಮತ್ತೆ ನಮ್ಮೊಂದಿಗೆ ಜಗಳ ತೆಗೆದು ತೆಕ್ಕೆ ಬಿದ್ದು ತನ್ನ ಬಾಯಿಯಿಂದ ನನ್ನ ಬಲಕಿವಿಗೆ ಕಚ್ಚಿದ್ದರಿಂದ ಭಾರಿ ರಕ್ತಗಾಯವಾಯಿತು. ನೋಡಿಕೊಳ್ಳಲು ನಾಗಪ್ಪನು ಕಿವಿಯನ್ನು ಬಾಯಿಯಿಂದ ತುಂಡರಿಸಿ ಉಗುಳಿದನು. ಬಿಡಿಸಲು ಬಂದ ನನ್ನ ಮಗ ಗವಿಸಿದ್ದಪ್ಪನಿಗೆ ಸಹ ಎದೆಗೆ, ಬಲಕಪಾಳಕ್ಕೆ, ಬಲ ಮೊಣಕೈ ಗೆ ಬಾಯಿಯಿಂದ ಕಚ್ಚಿ ರಕ್ತಗಾಯಗೊಳಿಸಿರುತ್ತಾನೆ. ನಂತರ ಎಲ್ಲರೂ ಊರಲ್ಲಿ ಬಂದು ಶ್ರೀ ಹನುಮಂತ ದೇವರ ಗುಡಿಯ ಹತ್ತಿರ ಹಿರಿಯರಿಗೆ ಕರೆಯಿಸಿ ವಿಷಯ ತಿಳಿಸಿದಾಗ ಹಿರಿಯರು ನಾಗಪ್ಪನಿಗೆ ಬುದ್ದಿ ಹೇಳುವಾಗ ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಮತ್ತೆ ನನಗೆ ತೆಕ್ಕೆ ಬಡಿದು ಜಗಳ ತೆಗೆದು ನನ್ನ ಎಡಗೈ ಮುಂಗೈ ಗೆ ತನ್ನ ಬಾಯಿಯಿಂದ ಕಚ್ಚಿದನು. ಅಲ್ಲದೇ ಬಿಡಿಸಲು ಬಂದ ದುರುಗಪ್ಪ ಮ್ಯಾದನೇರಿ ಇತನಿಗೆ ಸಹ ಬಲಗೈ ಉಂಗುರು ಬೆರಳಿಗೆ ತನ್ನ ಬಾಯಿಯಿಂದ ಕಚ್ಚಿ ರಕ್ತಗಾಯಗೊಳಿಸಿದನು. ಹಿರಿಯರು ನಡುವೆ ಬಂದು ಜಗಳ ಬಿಡಿಸಿದರು. ಆಗ ನಾಗಪ್ಪನು ನಮಗೆ ಲೇ ಸೂಳೇಮಕ್ಕಳೆ ಊರಾಗ ಬಂದಿದ್ದಕ್ಕೆ ಉಳಿದಿರಿ ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಹೊಲದಲ್ಲಿ ಹೊಡೆದು ಸಾಯಿಸುತ್ತಿದ್ದೆ ಅಂತಾ ಪ್ರಾಣದ ಬೆದರಿಕೆ ಹಾಕಿ ಹೋದನು. ಕಾರಣ ಹೊಲದಲ್ಲಿ ನಮ್ಮ ಕುರಿಗಳು ಆಕಸ್ಮಿಕವಾಗಿ ಮೇಯಲು ಹೋಗಿದ್ದಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕಲ್ಲಿನಿಂದ ಮತ್ತು ಕೊಡ್ಲಿಯಿಂದ ಹೊಡೆದು ರಕ್ತಗಾಯಗೊಳಿಸಿ, ಅಲ್ಲದೇ  ಬಾಯಿಯಿಂದ ಕಚ್ಚಿ ಭಾರಿ ರಕ್ತಗಾಯಗೊಳಿಸಿ ಪ್ರಾಣದ ಬೆದರಿಕೆ ಹಾಕಿದ ನಾಗಪ್ಪ ತಂದೆ ಕರಿಯಪ್ಪ ಮ್ಯಾದನೇರಿ ಸಾ: ಗೋಸಲದೊಡ್ಡಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
5) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 20/2016 ಕಲಂ: 323, 341, 504 R/W 34 IPC.
ದಿನಾಂಕ: 20-02-2016 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಪಿರ್ಯಾದಿದಾರ ಮತ್ತು ಪಿರ್ಯಾದಿದಾರನ ತಾಯಿ ಗಾಯಾಳು ಶಿವವ್ವ ಹಾಗೂ ಪಿರ್ಯಾದಿದಾರನ ಅಣ್ಣ ಕೃಷ್ಣಪ್ಪ ಹಾಗೂ ಪಿರ್ಯಾದಿದಾರನ ಅತ್ತಿಗೆಯಂದಿರಾದ ಆರೋಪಿತರಿಬ್ಬರೂ ಕೂಡಿಕೊಂಡು ಯಲ್ಲಮ್ಮನ ಜಾತ್ರೆಗೆ ಹೋಗುವ ಬಗ್ಗೆ ಮಾತನಾಡುತಿದ್ದಾಗ ಪಿರ್ಯಾದಿದಾರನು ಸುಮಾರು 4-5 ವರ್ಷಗಳ ಹಿಂದೆ ಮೃತಪಟ್ಟ ತನ್ನ ಅಣ್ಣ ಶರಣಪ್ಪನ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣದ ಬಗ್ಗೆ ಕೇಳಿದ್ದು, ಆಗ ಆರೋಪಿತರು ಪಿರ್ಯಾದಿದಾರನೊಂದಿಗೆ ಜಗಳ ಮಾಡುತಿದ್ದಾಗ ಗಾಯಾಳು ಶಿವವ್ವಳು ಜಗಳ ಬಿಡಿಸಿಕೊಳ್ಳಲು ಹೋದಾಗ ಆರೋಪಿತರಿಬ್ಬರೂ ಶಿವವ್ವಳನ್ನು ಹಿಡಿದು ನಿಲ್ಲಿಸಿ ಅವಾಚ್ಯವಾಗಿ ಬೈದು ಜೋರಾಗಿ ನೂಕಿದ್ದರಿಂದ ಆಕೆಯ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008