Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 23, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 86/2016 ಕಲಂ: 78(3) Karnataka Police Act.
ದಿನಾಂಕ:- 22-02-2016 ರಂದು ಸಂಜೆ 7:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ  ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ಪ್ರಕಾರ ಇದೆ. ಇಂದು ದಿನಾಂಕ:- 22-02-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ  ಜಂಗಮರ ಕಲ್ಗುಡಿ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ  ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 180, 429, 323, ಎ.ಪಿ.ಸಿ. 77 ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಸಂಜೆ 5:00 ಗಂಟೆಗೆ ಹೊರಟು ಜಂಗಮರ ಕಲ್ಗುಡಿ ಗ್ರಾಮದ ಊರ ಮುಂದೆ ಹೋಗಿ ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಬಸ್ ನಿಲ್ದಾಣದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 5:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಶೇಖರಪ್ಪ ತಂದೆ ಕಾಡಸಿದ್ದಯ್ಯ ಹೋಟಲ್, ವಯಸ್ಸ್ಸು 55 ವರ್ಷ, ಜಾತಿ: ರೆಡ್ಡಿ ಉ: ಕೂಲಿ ಕೆಲಸ ಸಾ: ಹುಳ್ಕಿಹಾಳ ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 430/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ನಂತರ ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದನು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 87/2016 ಕಲಂ: 87 Karnataka Police Act.
ದಿನಾಂಕ:-23-02-2016 ರಂದು ಬೆಳಗಿನ ಜಾವ 1:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.. ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಹತ್ತು ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಪ್ರಕಾರ ಇದೆ. ನಿನ್ನೆ ದಿನಾಂಕ: 22-02-2016 ರಂದು ರಾತ್ರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಭಾಪಿರೆಡ್ಡಿಕ್ಯಾಂಪಿನ ತಾಯಮ್ಮನ ದೇವಸ್ಥಾನದ ಮುಂಭಾಗ ಬೀದಿ ಲೈಟಿನ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ನಾನು ಸಿಬ್ಬಂದಿಯವರಾದ ಪಿ.ಸಿ. 131, 180, 118, 358, 323, 86, 429, ಹಾಗೂ ಸರಕಾರಿ ಜೀಪ ನಂ ಕೆ.-37/ ಜಿ-307 ನೇದ್ದರ ಜೀಪ ಚಾಲಕ .ಪಿ.ಸಿ. ಕನಕಪ್ಪ ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ ಗಂಗಾವತಿಯಿಂದ ರಾತ್ರಿ 11:30 ಗಂಟೆಗೆ ಹೊರಟೆವು. ಭಾಪಿರಡ್ಡಿಕ್ಯಾಂಪ್ ಹೊರಗೆ ಜೀಪ ಹಾಗೂ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ತಾಯಮ್ಮನ ದೇವಸ್ಥಾನದ ಸ್ವಲ್ಪ ದೂರದಲ್ಲಿ ನಿಂತು ನೋಡಲು ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಬಿದಿ ಲೈಟಿನ ಕೆಳಗೆ ಸುಮಾರು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಇಂದು ದಿನಾಂಕ: 23-02-2016 ರಂದು ಬೆಳಗಿನ ಜಾವ 0:05 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 10 ಜನರು ಸಿಕ್ಕಿ ಬಿದ್ದಿದ್ದು, ಕೆಲವರು ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರನ್ನು ವಿಚಾರಿಸಲು (1) ಅಶೋಕ ಕುಮಾರ ತಂದೆ ಸೀತರಾಮಡು 24 ವರ್ಷ ಜಾತಿ: ಹಡಪದ, : ಕುಲಕಸಬು ಸಾ: ಭಾಪಿರಡ್ಡಿಕ್ಯಾಂಪ್ (2) ಕೆ. ಸೂರಿಬಾಬು ತಂದೆ ರಾಮಡು 30 ವರ್ಷ ಜಾತಿ: ಕಾಪು, : ಗದ್ದಿಕೆಲಸ ಸಾ: ಭಾಪಿರಡ್ಡಿಕ್ಯಾಂಪ್ (3) ಸಂತೋಷ ಕುಮಾರ ತಂದೆ ನಾಗರಾಜ 23 ವರ್ಷ ಜಾತಿ: ಬಡಿಗೇರ, : ಕಾರಪೆಂಟರ್, ಸಾ: ಭಾಪಿರಡ್ಡಿಕ್ಯಾಂಪ್(4) ಟಿ. ರಾಜು ತಂದೆ ಟಿ. ಗುರುಮೂತರ್ಿ 26 ವರ್ಷ ಜಾತಿ: ಮಡಿವಾಳರ, : ಮೇಸ್ತ್ರಿ ಕೆಲಸ ಸಾ: ಭಾಪಿರಡ್ಡಿಕ್ಯಾಂಪ್ (5) ರಾಘವೇಂದ್ರ ತಂದೆ ಬಾಸ್ಕರ, 29 ವರ್ಷ ಜಾತಿ: ಈಳಿಗೇರ, : ಒಕ್ಕಲತನ ಸಾ: ಭಾಪಿರಡ್ಡಿಕ್ಯಾಂಪ್ (6) ಬಿ. ಶ್ರೀನಿವಾಸ ತಂದೆ ಬಿ. ರಾಮರಾವ್ 30 ವರ್ಷ ಜಾತಿ: ಕಾಪು, : ಕೂಲಿಕೆಲಸ ಸಾ: ಭಾಪಿರಡ್ಡಿಕ್ಯಾಂಪ್ (7) ತಿಮ್ಮಪ್ಪ ತಂದೆ ಗಿಡ್ಡಣ್ಣ 45 ವರ್ಷ ಜಾತಿ: ಮಾದಿಗ, : ಕೂಲಿಕೆಲಸ ಸಾ: ಭಾಪಿರಡ್ಡಿಕ್ಯಾಂಪ್ (8) ವೆಂಕಟೇಶ ತಂದೆ ರಾಮಕೃಷ್ಣ 38 ವರ್ಷ ಜಾತಿ: ಈಳಿಗೇರ, : ಕೂಲಿಕೆಲಸ ಸಾ: ಭಾಪಿರಡ್ಡಿಕ್ಯಾಂಪ್ (9) ಹರೀಶ ತಂದೆ ಯುವರಾಜ 27 ವರ್ಷ ಜಾತಿ: ಕಮ್ಮಾ, : ಒಕ್ಕಲತನ ಸಾ: ಭಾಪಿರಡ್ಡಿಕ್ಯಾಂಪ್ (10) ವಿರುಪಾಕ್ಷಿ ತಂದೆ ಹನುಮಂತ 37 ವರ್ಷ ಜಾತಿ: ಕುರುಬರ, : ಕೂಲಿಕೆಲಸ ಸಾ: ಭಾಪಿರಡ್ಡಿಕ್ಯಾಂಪ್ ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 10,320/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಸ್ಥಳದಲ್ಲಿ ದಾಳಿಯಲ್ಲಿ ಸಿಕ್ಕವರ ಪೈಕಿ 6 ಮೋಟಾರ ಸೈಕಲ್ಗಳು ಸಿಕ್ಕಿದ್ದು ಪರಿಶೀಲಿಸಲು (1) ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ: ಕೆ.-37/ಯು-1932 (2) ಟಿ.ವಿ.ಎಸ್. ಸ್ಟಾರ್ ಸಿಟಿ ಮೋಟಾರ ಸೈಕಲ್ ನಂ: ಕೆ.-37/ಕ್ಯೂ-6705 (3) ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ: ಕೆ.-35/ಡಬ್ಲ್ಯೂ-0368 (4) ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ: ಕೆ.-36/ಎಸ್-0874 (5) ಹಿರೋ ಹೊಂಡಾ ಸಿಡಿ ಡಾನ್ ಮೋಟಾರ ಸೈಕಲ ನಂ: ಕೆ.-37/ಕೆ-2998 ಅಂತಾ ಇದ್ದು ಅವುಗಳನ್ನು ಹಾಜರಿದ್ದ ಪಂಚರ ಸಮಕ್ಷಮ ವಶಕ್ಕೆ ಪಡೆಯಲಾಯಿತು. ಬಗ್ಗೆ ಬೆಳಗಿನ ಜಾವ 00:15 ರಿಂದ 1:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಹಾಗೂ ವಾಹನಗಳೊಂದಿಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸ1ಲ್ಲಿಸಿದ್ದು ಇರುತ್ತದೆ. ಅಂತಾ ಸಾರಾಂಶ ಇರುತ್ತದೆ. ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಬೆಳಗಿನ ಜಾವ 1:45 ಗಂಟೆಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 51/2016 ಕಲಂ: 279, 304(ಎ) ಐ.ಪಿ.ಸಿ:.
ದಿ:22-02-2016 ರಂದು ರಾತ್ರಿ 10-00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು,ಆಸ್ಪತ್ರೆಗೆ ಭೇಟಿ ನೀಡಿ ಮೃತನ ಅಣ್ಣ ರಾಮಪ್ಪ ತಂದೆ ಸಿದ್ದಪ್ಪ ಚಿಲವಾಡಗಿ. ಸಾ: ಲೇಬಗೇರಿ. ಇವರು ತಮ್ಮ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೇ, ದಿ:22-02-16 ರಂದು ರಾತ್ರಿ 8-00 ಗಂಟೆಗೆ ನನ್ನ ತಮ್ಮ ಪ್ರಕಾಶ ತಂದೆ ಸಿದ್ದಪ್ಪ ಚಿಲವಾಡಗಿ ನನ್ನ ಮಾವನಾದ ಹನುಮೇಶ ಕನ್ನೇರಮಡುವುನಿಂದ ನಮ್ಮ ಮನೆಗೆ ಬಂದಿದ್ದು ಆತನ ಬೈಕನ್ನು ನನ್ನ ತಮ್ಮ ಪ್ರಕಾಶ ತನ ಬೈಕನ್ನು ತೆಗೆದುಕೊಂಡು ಕೊಪ್ಪಳಕ್ಕೆ ಹೋಗಿ ಬರುವಾಗ ನಮ್ಮ ಊರಿಗೆ ಬರುವ ರಸ್ತೆ ಮಧ್ಯ ಅಂದರೆ ರಸ್ತೆಯ ಬದಿಯಲ್ಲಿರುವ ಜೋಡಿ ವಿದ್ಯುತ್ ಕಂಬದ ಹತ್ತಿರ ಅಪಘಾತವಾಗಿದೆ. ಅಂದು ನಮ್ಮ ಊರಿನ ಕಡೆಯಿಂದ ಗವಿಸಿದ್ದಪ್ಪ ಯಲ್ಲಪ್ಪ ನಂದ್ಯಾಪೂರ. ಎಂಬುವನು ಬೈಕನು ಹೊಡೆದುಕೊಂಡು ಹೋಗುವಾಗ ರಸ್ತೆ ಮಧ್ಯ ಅಪಘಾತ ಸಂಭವಿಸಿದ್ದು ಇದರಲ್ಲಿ ನನ್ನ ತಮ್ಮ ಪ್ರಕಾಶ ಬಂದಿದ್ದನ್ನು ನೋಡಿ ಅಲ್ಲೇ ತೋಟದಲ್ಲಿರುವ ಭೀರಪ್ಪ ಭೀಮಪ್ಪ ಮೇಟಿ ಎಂಬುವರು ನನಗೆ ಕರೆ ಮಾಡಿ ನಿಮ್ಮ ತಮ್ಮನಿಗೆ ಆಕ್ಸಿಡೆಂಟ ಆಗಿದೆ ಬೇಗನೇ ಬಾ ಎಂದು ಹೇಳಿದನು. ನಾನು ಕೂಡಲೇ ಅಲ್ಲಿಗೆ ಧಾವಿಸಿದೆನು. ನನ್ನೊಂದಿಗೆ ಗವಿಸಿದ್ದಪ್ಪ ಅಣ್ಣನಾದ ಆಂಜನೇಯನು ಬಂದನು. ಆಗ ನಾವೆಲ್ಲರೂ ಬಂದು ನೋಡಿದಾಗ ನಮ್ಮ ತಮ್ಮನಿಗೆ ಗಾಯ ಎದೆ, ಮತ್ತು ಕುತ್ತಿಗೆಯಲ್ಲಿ ಬಾವು ಕಂಡುಬಂದಿತ್ತು, ಕೂಡಲೇ ಆಸ್ಪತ್ರೆಗೆ ಸಾಗಿಸಿದೆವು. ಅವನು ಆಸ್ಪತ್ರೆಯಲ್ಲಿ 20 ನಿಮಿಷಗಳ ಕಾಲ ಬದುಕಿದ್ದು ಕೊನೆಗಳಿಗೆಯಲ್ಲಿ 9-10 ಕ್ಕೆ ಮರಣ ಹೊಂದಿದನು. ಈ ಅನಾವುತಕ್ಕೆ ಗವಿಸಿದ್ದಪ್ಪ ಯಲ್ಲಪ್ಪ ನಂದ್ಯಾಪೂರ. ಎಂಬಾತನೆ ಕಾರಣ ಅವನ ಅತೀವೇಗ & ನಿರ್ಲಕ್ಷ್ಯತನದಿಂದ ವಾಹನವನ್ನು ಚಲಿಸಿದರ ಪರಿಣಾಮ ನನ್ನ ತಮ್ಮ ಮರಣ ಹೊಂದಿದ್ದಾನೆ. ಆಗ್ಗಾಗಿ ದಯವಿಟ್ಟು ಅವನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಪಘಾತ ಮಾಡಿದ ಗವಿಸಿದ್ದಪ್ಪ ಚಲಾಯಿಸುತ್ತಿದ್ದ ಗಾಡಿ ನಂಬರ ಕೆಎ-37ವೈ7522 ಅಂತಾ ಮುಂತಾಗಿ ನೀಡಿದ ದೂರನ್ನು ಇಂದು ದಿ:23-02-2016 ರಂದು 01-00 ಎ.ಎಮ್ ಕ್ಕೆ ಪಡೆದುಕೊಂಡು ವಾಪಾಸ್ ಠಾಣೆಗೆ 01-15 ಎ.ಎಮ್ ಕ್ಕೆ ಬಂದು ಸದರಿ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 85/2016 ಕಲಂ: 279, 338, ಐ.ಪಿ.ಸಿ:.

ದಿನಾಂಕ: 22-02-2016 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀಕಾಂತ ತಂದೆ ತುಳಸಪ್ಪ ಕಲ್ಮನಿ ವಯಸ್ಸು: 27 ವರ್ಷ ಜಾತಿ: ಮೋಚಿ, ಉ: ಬ್ಯಾಂಕ ಉಧ್ಯೋಗಿ, ಸಾ: ಮುಚಿಗೇರ ಓಣಿ 15 ನೇ ವಾರ್ಡ-ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನಮ್ಮ ತಂದೆಯವರಾದ ತುಳಸಪ್ಪ ತಂದೆ ಯಂಕಪ್ಪ ಕಲ್ಮನಿ ವಯಸ್ಸು: 53 ವರ್ಷ ಇವರ ಹೆಸರಿನಲ್ಲಿ ಒಂದು ಮಾರುತಿ ಶೀಫ್ಟ್ ಕಾರ್ ನಂಬರ್ ಕೆ.ಎ-37/ಎಂ-6735 ಅಂತಾ ಇದ್ದು ಅದನ್ನು ಅವರೇ ನಡೆಯಿಸಿಕೊಂಡಿದ್ದರು.  ನಿನ್ನೆ ದಿನಾಂಕ: 21-02-2016 ರಂದು ಬೆಳಿಗ್ಗೆ ನಮ್ಮ ತಂದೆಯವರಾದ ತುಳಸಪ್ಪ ಇವರು ಸದರಿ ಕಾರ್ ತಗೆದುಕೊಂಡು ಕೊಪ್ಪಳ ರೇಲ್ವೆ ಸ್ಟೇಷನ್ ಗೆ ನಮ್ಮ ದೊಡ್ಡಪ್ಪನವರನ್ನು ಬಿಡಲು ಹೋಗಿದ್ದರು. ನಂತರ ಮುಂಜಾನೆ 11:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ತಂದೆಯವರು ಪೋನ್ ಮಾಡಿ ಕೊಪ್ಪಳದಿಂದ ಗಂಗಾವತಿಗೆ ಬರುತ್ತಿರುವಾಗ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಹೇಮಗುಡ್ಡಾ ಸೀಮಾದಲ್ಲಿ ಮುಂದಿನ ಎಡಗಾಲಿ ಬಷ್ಟಾಗಿ ಅಪಘಾತವಾಗಿದೆ ಅಂತಾ ತಿಳಿಸಿದ್ದು ಕೂಡಲೇ ನಾನು ಮತ್ತು ನನ್ನ ಅಣ್ಣನಾದ ಸುನಿಲ ವಯಸ್ಸು: 30 ವರ್ಷ ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಹೇಮಗುಡ್ಡಾ ಸೀಮಾ ಒಂದು ಗದ್ದೆಯಲ್ಲಿ ಕಾರ್ ಜಖಂಗೊಂಡು ನಿಂತಿದ್ದು ಅದರ ಪಕ್ಕದಲ್ಲಿ ನಮ್ಮ ತಂದೆಯವರು ಸಹ ಎಡಗಡೆ ಬುಜಕ್ಕೆ ತೀವ್ರ ಒಳಪೆಟ್ಟಾಗಿ ಹಾಗೂ ಅಲ್ಲಲ್ಲಿ ತೆರಚಿದ ಗಾಯಗಳಾಗಿ ಕುಳಿತುಕೊಂಡಿದ್ದು ನಂತರ ನಾವು 108 ಗೆ ಫೋನ್ ಮಾಡಲಾಗಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ನಮ್ಮ ತಂದೆಯವರನ್ನು ಚಿಕಿತ್ಸೆ ಕುರಿತು ಬಂದು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆವು. ನಮ್ಮ ತಂದೆಯವರಿಗೆ ಚಿಕಿತ್ಸೆ ಮಾಡಿಸಿ ಈ ದಿವಸ ತಡವಾಗಿ ಠಾಣೆಗೆ ಬಂದು ಈ ನನ್ನ ಹೇಳಿಕೆ ದೂರನ್ನು ಕೊಟ್ಟಿರುತ್ತೇನೆ.   ನಮ್ಮ ತಂದೆಯವರು ನಿನ್ನೆ ದಿನಾಂಕ: 21-02-2016 ರಂದು ಮುಂಜಾನೆ 10:30 ಗಂಟೆಯ ಸುಮಾರಿಗೆ ಹೇಮಗುಡ್ಡ ಸೀಮಾ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಕೊಪ್ಪಳ ಕಡೆಯಿಂದ ಕೊಪ್ಪಳ ರಸ್ತೆಯ ಕಡೆಯಿಂದ ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ಮುಂದಿನ ಎಡಗಾಲಿಯು ಬಷ್ಟಾಗಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಬಾಜು ತೆಗ್ಗಿನಲ್ಲಿ ಬಿದ್ದು ಒಂದು ಗಿಡಕ್ಕೆ ಟಕ್ಕರು ಕೊಟ್ಟು ಅಪಘಾತವಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣರಾದ ನಮ್ಮ ತಂದೆ ತುಳಸಪ್ಪ ಕಲ್ಮನಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008