Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 24, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 51/2016 ಕಲಂ: 279, 304(ಎ) ಐ.ಪಿ.ಸಿ:
ದಿ:22-02-2016 ರಂದು ರಾತ್ರಿ 10-00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು,ಆಸ್ಪತ್ರೆಗೆ ಭೇಟಿ ನೀಡಿ ಮೃತನ ಅಣ್ಣ ರಾಮಪ್ಪ ತಂದೆ ಸಿದ್ದಪ್ಪ ಚಿಲವಾಡಗಿ. ಸಾ: ಲೇಬಗೇರಿ. ಇವರು ತಮ್ಮ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೇ, ದಿ:22-02-16 ರಂದು ರಾತ್ರಿ 8-00 ಗಂಟೆಗೆ ನನ್ನ ತಮ್ಮ ಪ್ರಕಾಶ ತಂದೆ ಸಿದ್ದಪ್ಪ ಚಿಲವಾಡಗಿ ನನ್ನ ಮಾವನಾದ ಹನುಮೇಶ ಕನ್ನೇರಮಡುವುನಿಂದ ನಮ್ಮ ಮನೆಗೆ ಬಂದಿದ್ದು ಆತನ ಬೈಕನ್ನು ನನ್ನ ತಮ್ಮ ಪ್ರಕಾಶ ತನ ಬೈಕನ್ನು ತೆಗೆದುಕೊಂಡು ಕೊಪ್ಪಳಕ್ಕೆ ಹೋಗಿ ಬರುವಾಗ ನಮ್ಮ ಊರಿಗೆ ಬರುವ ರಸ್ತೆ ಮಧ್ಯ ಅಂದರೆ ರಸ್ತೆಯ ಬದಿಯಲ್ಲಿರುವ ಜೋಡಿ ವಿದ್ಯುತ್ ಕಂಬದ ಹತ್ತಿರ ಅಪಘಾತವಾಗಿದೆ. ಅಂದು ನಮ್ಮ ಊರಿನ ಕಡೆಯಿಂದ ಗವಿಸಿದ್ದಪ್ಪ ಯಲ್ಲಪ್ಪ ನಂದ್ಯಾಪೂರ. ಎಂಬುವನು ಬೈಕನು ಹೊಡೆದುಕೊಂಡು ಹೋಗುವಾಗ ರಸ್ತೆ ಮಧ್ಯ ಅಪಘಾತ ಸಂಭವಿಸಿದ್ದು ಇದರಲ್ಲಿ ನನ್ನ ತಮ್ಮ ಪ್ರಕಾಶ ಬಂದಿದ್ದನ್ನು ನೋಡಿ ಅಲ್ಲೇ ತೋಟದಲ್ಲಿರುವ ಭೀರಪ್ಪ ಭೀಮಪ್ಪ ಮೇಟಿ ಎಂಬುವರು ನನಗೆ ಕರೆ ಮಾಡಿ ನಿಮ್ಮ ತಮ್ಮನಿಗೆ ಆಕ್ಸಿಡೆಂಟ ಆಗಿದೆ ಬೇಗನೇ ಬಾ ಎಂದು ಹೇಳಿದನು. ನಾನು ಕೂಡಲೇ ಅಲ್ಲಿಗೆ ಧಾವಿಸಿದೆನು. ನನ್ನೊಂದಿಗೆ ಗವಿಸಿದ್ದಪ್ಪ ಅಣ್ಣನಾದ ಆಂಜನೇಯನು ಬಂದನು. ಆಗ ನಾವೆಲ್ಲರೂ ಬಂದು ನೋಡಿದಾಗ ನಮ್ಮ ತಮ್ಮನಿಗೆ ಗಾಯ ಎದೆ, ಮತ್ತು ಕುತ್ತಿಗೆಯಲ್ಲಿ ಬಾವು ಕಂಡುಬಂದಿತ್ತು, ಕೂಡಲೇ ಆಸ್ಪತ್ರೆಗೆ ಸಾಗಿಸಿದೆವು. ಅವನು ಆಸ್ಪತ್ರೆಯಲ್ಲಿ 20 ನಿಮಿಷಗಳ ಕಾಲ ಬದುಕಿದ್ದು ಕೊನೆಗಳಿಗೆಯಲ್ಲಿ 9-10 ಕ್ಕೆ ಮರಣ ಹೊಂದಿದನು. ಈ ಅನಾವುತಕ್ಕೆ ಗವಿಸಿದ್ದಪ್ಪ ಯಲ್ಲಪ್ಪ ನಂದ್ಯಾಪೂರ. ಎಂಬಾತನೆ ಕಾರಣ ಅವನ ಅತೀವೇಗ & ನಿರ್ಲಕ್ಷ್ಯತನದಿಂದ ವಾಹನವನ್ನು ಚಲಿಸಿದರ ಪರಿಣಾಮ ನನ್ನ ತಮ್ಮ ಮರಣ ಹೊಂದಿದ್ದಾನೆ. ಆಗ್ಗಾಗಿ ದಯವಿಟ್ಟು ಅವನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಪಘಾತ ಮಾಡಿದ ಗವಿಸಿದ್ದಪ್ಪ ಚಲಾಯಿಸುತ್ತಿದ್ದ ಗಾಡಿ ನಂಬರ ಕೆಎ-37ವೈ7522 ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 52/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿ:23-02-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ತುಕಾರಾಮಪ್ಪ ತಂದೆ ದುರುಗಪ್ಪ ಪೂಜಾರಿ. ಸಾ:ನರೇಗಲ್. ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:23-02-16 ರಂದು ಸಾಯಂಕಾಲ 6-45 ಗಂಟೆಗೆ ನನ್ನ ಮಗ ಹುಲುಗಪ್ಪ @ ಹುಲ್ಲೇಶ ಇತನು ಕೊಪ್ಪಳದಲ್ಲಿ ತನ್ನ ಕೆಲಸ ಮುಗಿಸಿಕೊಂಡು ವಾಪಾಸ್ ಊರಿಗೆ ಅಂತಾ ತನ್ನ ಮೋಟಾರ ಸೈಕಲ್ ನಂ: ಕೆಎ-37/ಕ್ಯೂ-2416 ನೇದ್ದನ್ನು ಓಡಿಸಿಕೊಂಡು ಯತ್ನಟ್ಟಿ ಕ್ರಾಸ್ ಹಾಗೂ ಹುಚ್ಚೇಶ್ವರ ಕ್ಯಾಂಪ್ ನಡುವೆ ರಸ್ತೆಯಲ್ಲಿ ಬರುತ್ತಿದ್ದಾಗ ಎದುರುಗಡೆ ಅಂದರೆ  ಹುಚ್ಚೇಶ್ವರ ಕ್ಯಾಂಪ್ ಕಡೆಯಿಂದ ಟಾಟಾ ಎಸಿ ನಂ: ಕೆಎ-37/ಎ-6246 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ನನ್ನ ಮಗನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನನ್ನ ಮಗನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟಾಟಾ ಎಸಿ ಚಾಲಕನು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ವಾಹನದ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 75/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 23-02-2016 ರಂದು ಸಂಜೆ 6-30 ಗಂಟೆಗೆ ಸರ್ಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕನಕಪ್ಪ ತಂದೆ ತಿಪ್ಪಣ್ಣ ಭೋವಿ ಸಾ: ಬಿಜಕಲ್ ಇವರ ಹೇಳಿಕೆಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 7-30 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರರು ಇಂದು ಮದ್ಯಾಹ್ನ ತನ್ನ ವ್ಯಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಬಂದು ವಾಪಾಸ್ ಊರಿಗೆ ತನ್ನ ಹೊಸ ಬಜಾಜ ಕಂಪನಿಯ  ಸಿಟಿ 100 ಮೋಟರ್ ಸೈಕಲ್ ಇಂಜಿನ ನಂ: DUZWWFF26234 ಚೆಸ್ಸಿ ನಂ: MD2A18AZ9FWF12744 ನೇದ್ದನ್ನು ನಡೆಸಿಕೊಂಡು ಕುಷ್ಟಗಿಯಿಂದ ದೋಟಿಹಾಳ ಕ್ರಾಸ್ ಹತ್ತಿರ ಸಾಯಂಕಾಲ 6-15 ಗಂಟೆ ಸುಮಾರಿಗೆ ಬಿಜಕಲ್ ಗೆ ಹೋಗುತ್ತಿರುವಾಗ ಇಲಕಲ್ ಕಡೆಯಿಂದ ಒಂದು ಲಾರಿ ಅತೀ ವೇಗ ಮತ್ತು ಅಲಕ್ಷ್ಯತನದಿಂದ ತನ್ನ ವಾಹನವನ್ನು ನಡೆಯಿಸಿಕೊಂಡು ಬಂದು ಫಿರ್ಯಾದಿ ಮೋಟರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ  ಎಡಗಡೆ ಹಣೆಗೆ ಮತ್ತು ಬಲಗಣ್ಣಿನ ಹತ್ತಿರ ರಕ್ತ ಗಾಯವಾಗಿದ್ದು, ಎಡ ತೊಡೆಗೆ ಭಾರಿ ಒಲಪೆಟ್ಟಾಗಿ ಮುರಿದಂತಾಗಿರುತ್ತದೆ. ನಂತರ ಅಪಘಾತಪಡಿಸಿದ ಲಾರಿಯ ನಂಬರ ನೋಡಲು ಎಂ.ಹೆಚ್-04/ಎಫ್.ಡಿ-3764 ಅಂತಾ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಬಸಪ್ಪ ತಂದೆ ರಂಗಪ್ಪ ತಳಗ್ಯಾಳ ವಯಾ: 25 ವರ್ಷ ಜಾತಿ: ಲಿಂಗಾಯತ ಸಾ: ಶಿರೂರು ತಾ: ಜಿ: ಬಾಗಲಕೋಟ ಅಂತಾ ತಿಳಿಸಿದನು. ನಂತರ ತಮ್ಮೂರ ಮುತ್ತಣ್ಣ ತಂದೆ ಹುಲಗಪ್ಪ ಬಜೇಂತ್ರಿ ವಯಾ: 30 ವರ್ಷ ಜಾ: ಬಜೇಂತ್ರಿ ಉ: ಒಕ್ಕಲುತನ ಇತನು ಬಂದಿದ್ದು ನಂತರ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಫಿರ್ಯಾದಿದಾರನನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಆತನಿಗೆ  ಅಪಘಾತಪಡಿಸಿ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳನ್ನುಂಟು ಮಾಡಿದ ಲಾರಿ ನಂ: ಎಂ.ಹೆಚ್-04/ಎಫ್.ಡಿ-3764 ನೇದ್ದರ ಚಾಲಕನಾದ ವಿಚಾರಿಸಲು ಬಸಪ್ಪ ತಂದೆ ರಂಗಪ್ಪ ತಳಗ್ಯಾಳ ವಯಾ: 25 ವರ್ಷ ಜಾತಿ: ಲಿಂಗಾಯತ ಸಾ: ಶಿರೂರು ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 21/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 23-02-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಪಿರ್ಯಾದಿದಾರಳು ತನ್ನ ಮೊಮ್ಮಗನಾದ ಮಂಜಪ್ಪ ತಂದೆ ಈಶಪ್ಪ ಕಮತರ ವಯ-05 ವರ್ಷ ಇತನನ್ನು ತನ್ನ ಸಂಗಡ ಕರೆದುಕೊಂಡು ಕಲ್ಲೂರು ಸೀಮಾದಲ್ಲಿ ಬರುವ ತನ್ನ ಹೊಲಕ್ಕೆ ಹೋಗಿ ಬುತ್ತಿ ಕೊಟ್ಟು ಬರುವ ಸಲುವಾಗಿ ಕಲ್ಲೂರು- ಬಳಗೇರಿ ರಸ್ತೆ ಮೇಲೆ ಕಲ್ಲೂರು ಸೀಮಾದಲ್ಲಿ ಬರುವ ಕಲ್ಲಯ್ಯ ಜಾರಗಡ್ಡಿ ಇವರ ಹೊಲದ ಹತ್ತಿರ ರಸ್ತೆಯ ಎಡಮಗ್ಗಲು ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಅವರ ಹಿಂದಿನಿಂದ ಅಂದರೆ ಕಲ್ಲೂರು ಗ್ರಾಮದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿ ನಡೆಯಿಸಿಕೊಂಡು ಬಂದು ಪಿರ್ಯಾದಿದಾರಳ ಮೊಮ್ಮಗನಿಗೆ ಹಿಂದಿನಿಂದ ಜೋರಾ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿಯ ಮೊಮ್ಮಗ ಮಂಜಪ್ಪ ಕಮತರ ವಯ-05 ವರ್ಷ ಇತನಿಗೆ ಬಲಹಣೆಗೆ ರಕ್ತಗಾಯ, ಬಲಕಪಾಳಕ್ಕೆ ಭಾರಿಸ್ವರೂಪದ ರಕ್ತಗಾಯ, ಬಲಕಣ್ಣಿನ ಹತ್ತಿರ, ಬಲಮೂಗಿಗೆ ಮತ್ತು ಬಲತೊಡೆಗೆ ರಕ್ತಗಾಯ ಗಾಯ, ಬಲಗಾಲ ಮೋಣಕಾಲಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008