Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 26, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ:25-02-2016 ರಂದು ಸಾಯಂಕಾಲ 5-30 ಗಂಟೆಯ ಸುಮಾರು ಹಿರೇಬಿಡನಾಳ ಸೀಮಾದಲ್ಲಿ  ರಸ್ತೆ ಅಪಘಾತವಾಗಿ ಇಬ್ಬರೂ ಮೃತಪಟ್ಟ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಶೀಲಿಸಿದ್ದು, ಘಟನಾ ಸ್ಥಳದಲ್ಲಿದ್ದ ಪಿರ್ಯಾದಿದಾರನು ಒಂದು ಲಿಖಿತ ಪಿರ್ಯಾದಿಯನ್ನು  7-00 ಪಿಎಂಕ್ಕೆ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಶ್ರೀಧರ ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ:ಕೆಎ-36 ಇಬಿ-0014 ನೇದ್ದರಲ್ಲಿ ತನ್ನ ಮಗ ಮಲ್ಲೇಶ ಈತನು ಕುಳಿತುಕೊಂಡು ಸರ್ಜಾಪುರದಿಂದ ಕಿನ್ನಾಳಗೆ ಬರುವ ಕುರಿತು ಮುತ್ತಾಳ ದಾಟಿ ಹಿರೇಬಿಡನಾಳ ಕಡೆಗೆ ಹಿರೇಬಿಡನಾಳ ಸೀಮಾದ ಶರಣಪ್ಪಗೌಡ ಇವರ ಹೊಲದ ಹತ್ತಿರ ಬರುತ್ತಿರುವಾಗ ಹಿರೇಬಿಡನಾಳ ಕಡೆಯಿಂದ ಟಿಪ್ಪರ್ ನಂ:ಜಿಎ-09 ಯು-2902 ನೇದ್ದರ ಚಾಲಕ ತನ್ನ ಟಿಪ್ಪರ್ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಮೋಟಾರ್ ಸೈಕಲ್ ನಂ:ಕೆಎ-36 ಇಬಿ-0014 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ದಲ್ಲಿದ್ದ ಶ್ರೀಧರ ಮತ್ತು ಮಲ್ಲೇಶ ಇವರು ಭಾರೀ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು,ಅಪಘಾತಪಡಿಸಿದ ನಂತರ ಟಿಪ್ಪರ್ ಚಾಲಕ ವಾಹನವನ್ನು ಬಿಟ್ಟು ಓಡಿಹೋಗಿರುತ್ತಾನೆ.   ಘಟನೆಯ ವಿಷಯವನ್ನು ಸಾಕ್ಷಿದಾರರಿಂದ ತಿಳಿದು ಬಂದು ನೋಡಿದ್ದು, ಕಾರಣ, ಟಿಪ್ಪರ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 79/2016 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 25-02-2016 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿದಾರನಾದ  ಅಜ್ಮಿರಸಾಬ ತಂದೆ ಬಡೇಸಾಬ ಗುಡಿಮನಿ ವಯಾ: 42 ವರ್ಷ ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ: ಹುಲಗೇರಿ ರವರು ಒಂದು ಗಣಕೃತ ಮಾಡಿಸಿದ  ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ  ಸಾರಾಂಶವೆನೆಂದರೆ ಫಿರ್ಯಾದಿದಾರರು ದಿನಾಂಕ: 23-02-2016 ರಂದು ನಮ್ಮ ಸಂಬಂಧಿಕರಾದ ಹಸನಸಾಬ ದೋಟಿಹಾಳ ರವರ ತಾಯಿಯು ತೀರಿಕೊಂಡಿದ್ದು ಸದರಿಯವರ ಅಂತ್ಯ ಕ್ರಿಯೇಗಾಗಿ ನನಗೆ ಮತ್ತು ನಮ್ಮೂರ ಹುಸೇನಸಾಬ ತಂದೆ ದಸ್ತಗಿರಿಸಾಬ ನಂದವಾಡಗಿ ವಯಾ: 40 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಇಬ್ಬರಿಗೆ ಫೋನ್ ಮುಖಾಂತರ ಮಾಹಿತಿ ತಿಳಿಸಿದ್ದು ನಾನು ಮತ್ತು ಹುಸೇನಸಾಬ ಇಬ್ಬರೂ ಕೂಡಿ ನನ್ನ ಮೋ.ಸೈ. ನಂ: ಕೆ.ಎ-36/ಡಬ್ಲೂ-6009 ಹಿರೋ ಹೊಂಡಾ ಸಿಡಿ ಡಿಲಕ್ಸ ತೆಗೆದುಕೊಂಡು ದೋಟಿಹಾಳ ಗ್ರಾಮಕ್ಕೆ ಹೋಗಿ ಅಂತ್ಯ ಕ್ರಿಯೆ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್ ನಮ್ಮೂರಿಗೆ ಹೋಗಲು ದೋಟಿಹಾಳ- ಕ್ಯಾದಗುಪ್ಪಾ ರಸ್ತೆಯ ಮೇಲೆ ನಾವು ತೊಣಸಿಹಾಳ ಕ್ರಾಸ್ ದಾಟಿ ರಾತ್ರಿ 10-30 ಗಂಟೆ ಸುಮಾರಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಮೋ.ಸೈ. ಸವಾರನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ರಸ್ತೆಯ ಎಡಗಡೆ ಹೋಗುತ್ತಿದ್ದ ನಮಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ನನಗೆ ಬಲಗೈ ಮುಂಗೈ ಹತ್ತಿರ ತೆರಚಿದ ಗಾಯವಾಗಿ ಎಡಗೈ ಮುಂಗೈಗೆ ಭಾರಿ ಒಳಪೆಟ್ಟಾಗಿ ಬಲಗಾಲ ಮೊಣಕಾಲ ಕೆಳಗೆ ಮತ್ತು ಬೆರಳುಗಳಿಗೆ ರಕ್ತ ಗಾಯವಾಗಿದ್ದು ಮತ್ತು ಬಲಗಾಲ ಹಿಮ್ಮಡಕ್ಕೆ ತೆರಚಿದ ಗಾಯವಾಗಿ ಎದೆಯ ಮೇಲೆ ಒಳ ಪೆಟ್ಟಾಗಿರುತ್ತದೆ. ನಮ್ಮ ಮೋ.ಸೈ. ಹಿಂದೆ ಕುಳಿತ ಹುಸೇನಸಾಬನನ್ನು ನೋಡಲು ಇತನಿಗೆ ಬಲಗಾಲ ಮೊಣಕಾಲ ಹತ್ತಿರ ಭಾರಿ ರಕ್ತ ಗಾಯವಾಗಿ ಮುರಿದಂತಾಗಿದ್ದು ಎಡಗೈ ಮುಂಗೈ ಮೇಲೆ ತೆರಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಮೋ.ಸೈ. ನೋಡಲು ಬಜಾಜ ಕಂಪನಿಯ ಹೊಸ ಅವೆಂಜರ್ ಮೋ.ಸೈ. ಆಗಿದ್ದು ಅದರ ಚೆಸ್ಸಿ ನಂ: MD2A85CZOGCK27177 ಮತ್ತು ಇಂಜೀನ ನಂ: PDZCGK13569 ಅಂತಾ ಇದ್ದು ಅದನ್ನು ದೇವೇಂದ್ರ ತಂದೆ ಯಮನಪ್ಪ ನರೇಗಲ್ ವಯಾ: 21 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಗೋತಗಿ ಇತನು ನಡೆಸುತ್ತಿದ್ದು ಇತನಿಗೆ ಎಡಗಡೆ ಭುಜಕ್ಕೆ ಒಳಪೆಟ್ಟಾಗಿ ಎಡಗೈ ಮೊಣಕೈಗೆ ಎಡಗಡೆ ಸೊಂಟಕ್ಕೆ ಮತ್ತು ಬಲಗಾಲು ಹೆಬ್ಬೆರಳಿಗೆ ತೆರಚಿದ ರಕ್ತ ಗಾಯವಾಗಿರುತ್ತದೆ. ಇತನ ಹಿಂದ ಕುಳಿತ ಜಯಪ್ರಕಾಶ ತಂದೆ ರುದ್ರಪ್ಪ ಹಳೆಮನಿ ವಯಾ: 24 ವರ್ಷ ಜಾ: ಹಿಂದೂ ಹಡಪದ ಉ: ಆರ್ಮಿಯಲ್ಲಿ ಕಾನಸ್ಟೇಬಲ್  ಸಾ: ಗೋತಗಿ ಇತನಿಗೆ ಬಲಗಾಲ ಮೊಣಕಾಲ ಕೆಳಗೆ ಭಾರಿ ರಕ್ತ ಗಾಯವಾಗಿ ಮುರಿದಂತಾಗಿರುತ್ತದೆ. ನಂತರ 108 ಅಂಬುಲೇನ್ಸಗೆ ಫೋನ್ ಮಾಡಿ ಅಂಬುಲೇನ್ಸ ಬಂದ ನಂತರ ನಾವೆಲ್ಲರೂ ಚಿಕಿತ್ಸೆ ಕುರಿತು ಕುಷ್ಟಗಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಾಂತೇಶ ಅಕ್ಕಿ ಆಸ್ಪತ್ರೆ ಇಲಕಲಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ ಅಂತಾ ನೀಡಿದ ಪಿರ್ಯಾದಿಯ ಸಾರಾಂಶ ಮೇಲಿಂದ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 32/2016 ಕಲಂ. 306, 504, 511 ಸಹಿತ 34 ಐ.ಪಿ.ಸಿ:
ದಿನಾಂಕ : 25-02-2016 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ್ದು ಕೊಪ್ಪಳದ ಶ್ರೀನಿವಾಸ ರೆಸಿಡೆನ್ಸಿ ಲಾಡ್ಜಿಂಗ್ ರೂಮ್ ನಂ. 209 ರಲ್ಲಿ ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ವಿಷ ಸೇವನೆ ಮಾಡಿ. ಚಿಕಿತ್ಸೆ ಕುರಿತು ದಾಖಲಾದ ವ್ಯೆಕ್ತಿಗಳನ್ನು ಪರಿಶೀಲಿಸಿ. ಶ್ರೀ ರಾಘವೇಂದ್ರ ಪಾನಘಂಟಿ ಸಾ : ಪಾಪಿನಾಯಕನಹಳ್ಳಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ಆರೋಪಿತರಿಂದ ಬೇಕರಿ ವ್ಯವಹಾರದ ಸಂಬಂಧ ಮತ್ತು ಮನೆಯ ಅಡಚಣೆ ಸಂಬಂಧ ಲಕ್ಷಾಂತರ ರೂಪಾಯಿ ಹಣವನ್ನು  ಕೈಗಡವನ್ನು ಪಡೆದುಕೊಂಡಿದ್ದು, ಸದರಿ ಹಣವನ್ನು ಫಿರ್ಯಾದಿದಾರರು ವ್ಯವಹಾರಕ್ಕೆ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಬಳಸಿ ಲುಕ್ಸಾನ್ ಆಗಿದ್ದರಿಂದ ಆರೋಪಿತರು ಫಿರ್ಯಾದಿದಾರರ ಮನೆಯ ಹತ್ತಿರ ಹೋಗಿ ತಾವು ಕೊಟ್ಟ ಹಣವನ್ನು ಕೊಡುವಂತೆ ಮಾನಸಿಕವಾಗಿ ಹಾಗೂ ಪದೇ ಪದೇ ಸತ್ತು ಹೋಗು ಅಂತಾ ಪ್ರಚೋದನೆ ನೀಡಿದ್ದರಿಂದ ಫಿರ್ಯಾದಿದಾರರು ಹಾಗೂ ಅವರ ಹೆಂಡತಿ ಶ್ರೀಮತಿ ಸಂಧ್ಯಾ ಇವರು ಇಂದು ದಿನಾಂಕ : 25-02-2016 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಕೊಪ್ಪಳದ ಶ್ರೀನಿವಾಸ ರೆಸಿಡೆನ್ಸಿ ಲಾಡ್ಜಿಂಗ್ ರೂಮ್ ನಂ. 209 ನೇದ್ದರಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆರೋಪಿತರ ಕಿರುಕುಳ ತಾಳಲಾರದೆ ಅವರ ಪ್ರಚೋದನೆಯಿಂದ ವಿಷ ಸೇವನೆ ಮಾಡಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 77/2016 ಕಲಂ. 457, 380 ಐ.ಪಿ.ಸಿ:

ದಿನಾಂಕ 25-02-2016 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ರಾಜೇಶ ತಂದೆ ಹನಮಂತಪ್ಪ ಪತ್ತಾರ ವಯಾ: 38 ವರ್ಷ ಜಾ: ಬೈಲ ಪತ್ತಾರ ಸಾ: ಬಿ.ಬಿ. ನಗರ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಪ್ರತಿ ದಿನದಂತೆ ನಿನ್ನೆ ರಾತ್ರಿ 9.30 ಗಂಟೆಗೆ ಅಂಗಡಿ ಮುಚ್ಚಿ ಕೀಲಿ ಹಾಕಿಕೊಂಡು ಮನೆಗೆ ಹೋದೆನು. ಈ ದಿವಸ ಬೆಳಿಗ್ಗೆ ಖಾಸಗಿ ಕೆಲಸ ನಿಮೀತ್ಯ ಗಜೇಂದ್ರಗಡಕ್ಕೆ ಹೋಗಬೇಕು ಅಂತಾ ನಮ್ಮ ಅಂಗಡಿಯ ಹತ್ತಿರ ಬಂದೆನು ನೋಡಲಾಗಿ ನನ್ನ ಅಂಗಡಿಯ ಮುಂದಿನ ಬಾಗಿಲ ಕೀಲಿ ಪತ್ತಾ ಮುರಿದು ಬಿದಿದ್ದು ನಾನು ಗಾಬರಿಯಾಗಿ ಒಳಗೆ ಪ್ರವೇಶಿಸಿ ನೋಡಲು ಜನರು ರಿಪೇರಿ ಕುರಿತು ಕೊಟ್ಟಿದ 2 ತೊಲೆ ಬಂಗಾರದ ಸಾಮಾನುಗಳು ಕಾಣಲಿಲ್ಲ ಅವುಗಳ ವಿವರ 1 ಜೊತೆ ರವಿ ಬೆಂಡೋಲೆ 3 ಗ್ರಾಂ 1 ಫಿಸ್ ಡ್ರಾಸ್ಪ್ 500 ಮೀಲಿ, 1 ಜೊತೆ ಡ್ರಾಪ್ಸ 1 ಗ್ರಾಂ 1 ಜಾಲರಿ 2 ಗ್ರಾಂ 1 ಸಿಂಗಲ್ ಜಾಲರಿ 1 ಗ್ರಾಂ 1 ಜೊತೆ ಬುಗಡಿ ಕಡ್ಡಿ 3 ಗ್ರಾಂ ಹ್ಯಾಂಗಿಂಗ್ಸ 1 ಗ್ರಾಂ 500 ಮೀಲಿ 1 ಜೊತೆ ಬೆಂಡೊಲೆ 2 ಗ್ರಾಂ 500 ಮೀಲಿ, 1 ಸಿಂಗಲ್ ಬಾವಲಿ ಕಡ್ಡಿ 500 ಮೀಲಿ, 5 ಗ್ರಾಂ ನ ಹರಳಿನ ರಿಂಗ್ ಮತ್ತು ಡ್ರಾದಲ್ಲಿಟ್ಟಿದ್ದ ಸುಮಾರು 3 ಕೆ.ಜಿ. ಬೆಳ್ಳಿಯ ಸಾಮಾನುಗಳು ಅಂದರೆ ಆರತಿ ತಾಟುಗಳು, ಸಮೆ, ಕುಂಕುಮ ಭರಣಿಗಳು, ಮತ್ತು ದೇವರ ಮೂರ್ತಿ ಸಾಮಾನುಗಳು ಸಹ ಇರಲಿಲ್ಲ ನಾನು ಆ ಕಡೆ ಈ ಕಡೆ ಹುಡುಕಾಡಲು ಎಲ್ಲಿಯೂ ಸಿಗಲಿಲ್ಲ ನಿನ್ನೆ ರಾತ್ರಿ 9.30 ಗಂಟೆಗೆ ಅಂಗಡಿ ಬಂದ್ ಮಾಡಿಕೊಂಡು ಹೊದ ನಂತರ ಯಾರೋ ಕಳ್ಳರು ನಮ್ಮ ಅಂಗಡಿಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸುಮಾರು 3 ಕೆ.ಜಿ ಬೆಳ್ಳಿ ಸಾಮಾನುಗಳು ಅಂ.ಕಿಂ 1.00,000=00 ಮತ್ತು 2 ತೋಲೆ ಬಂಗಾರದ ಸಾಮಾನುಗಳು ಅಂ.ಕಿಂ. 50,000=00 ರಷ್ಟು ಆಭರಣಗಳನ್ನು ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿದ್ದು ಕಂಡುಬರುತ್ತದೆ ಕಳುವಾದ ಸಾಮಾನುಗಳ ಒಟ್ಟು ಅಂ.ಕಿಂ 1,50,000=00 ಗಳಾಗಬಹುದು. ದಿನಾಂಕ 24-02-2016 ರಂದು ರಾತ್ರಿ 9.30 ಗಂಟೆಯಿಂದ ಈ ದಿನ ಬೆಳಗಿನ 6.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ 3 ಕೆ.ಜಿ. ಬೆಳ್ಳಿ ಸಾಮಾನುಗಳು ಅಂ. ಕಿ. 1,00,000=00 ಹಾಗೂ 2 ತೋಲೆ ಬಂಗಾರದ ಸಾಮಾನುಗಳು ರಿಪೇರಿಗಾಗಿ ಬಂದವುಗಳು ಅಂ.ಕಿಂ 50,000=00 ಹೀಗೆ 1,50,000=00 ಬೆಲೆ ಬಾಳುವ ಬಂಗಾರ ಬೆಳ್ಳಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಸಾಮಾನುಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ವಿನಂತಿ ಇರುತ್ತದೆ ಅಂತಾ ಮುಂತಾಗಿ  ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದೆ.

0 comments:

 
Will Smith Visitors
Since 01/02/2008