ದಿನಾಂಕ 26-02-2016 ರಂದು 18-00 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ,
ಗಂಗಾವತಿರವರ ಪತ್ರ ಸಂ. 508/2016 ದಿನಾಂಕ 18-02-2015 ನೇದ್ದು ಕಲಂ. 156(3) ಸಿ.ಆರ್.ಪಿ.ಸಿ.
ನೇದ್ದರ ಪ್ರಕಾರ ಕ್ರಮ ಜರುಗಿಸುವ ಕುರಿತು ಸ್ವೀಕೃತವಾಗಿರುತ್ತದೆ. ಸದರಿ ಖಾಸಗಿ ಫಿರ್ಯಾದಿಯನ್ನು
ಶ್ರೀಮತಿ ರತ್ನಮ್ಮ ಅಮ್ದಿಹಾಳ ಗಂಡ ದೇವಪ್ಪ ವಯಸ್ಸು 43 ವರ್ಷ
ಉ: ಮನೆಗೆಲಸ ಸಾ: ವಾರ್ಡ ನಂ. 20 ಚಲುವಾದಿ ಓಣಿ, ಗಂಗಾವತಿ ರವರು ಮಾಡಿದ್ದು ಇರುತ್ತದೆ.
ಸದರಿ ಫಿರ್ಯಾದಿ ಸಾರಂಶವೇನೆಂದರೆ, ಫಿರ್ಯಾದಿದಾರಳು ಆರೋಪಿ ನಂ. 01 ಶಾಮೀದ ಮನಿಯಾರ ತಂದೆ
ಮೆಹಬೂಬಸಾಬ ವಯ 45 ವರ್ಷ ಉ: ಮಾಜಿ ನಗರಸಭೆ ಅಧ್ಯಕ್ಷರು ಸಾ: ವಾರ್ಡ ನಂ. 19 ಗಂಗಾವತಿ. ನೇದ್ದವರಿಗೆ
ಗಂಗಾವತಿ ನಗರದಲ್ಲಿ ವಾಸಿಸಲು ಒಂದು ಪ್ಲಾಟನ್ನು ಕೊಡಿಸಲು ಕೇಳಿದಾಗ ಆರೋಪಿ ನಂ. 01, 02 &
04 ನೇದ್ದವರು ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ 30 X 40 ವಿಸ್ತೀರ್ಣದ
ಒಂದು ಪ್ಲಾಟನ್ನು ತೋರಿಸಿ ಅದು ಆರೋಪಿ ನಂ. 02 ನೇದ್ದವರ ಮಾಲೀಕತ್ವದ ಪ್ಲಾಟ್ ಅಂತಾ ಹೇಳಿ 05 ಲಕ್ಷ
ರೂಪಾಯಿ ಕೊಡಬೇಕೆಂದು ಇದರಲ್ಲಿ ಪ್ಲಾಟಿನ ಕಿಮ್ಮತ್ತು, ನೊಂದಣಿ ಖರ್ಚು ಮತ್ತು ನಗರಸಭೆಯಲ್ಲಿ
ವರ್ಗ ಮಾಡಿಸುವ ಸಂಪೂರ್ಣ ವೆಚ್ಚ ಒಳಗೊಂಡಿರುತ್ತದೆ ಅಂತಾ ಹೇಳಿದ್ದರಿಂದ ಫಿರ್ಯಾದಿದಾರಳು ದಿನಾಂಕ
01-03-2012 ರಂದು ರೂ. 05 ಲಕ್ಷ ಗಳನ್ನು ಆರೋಪಿ ನಂ. 01 ನೇದ್ದವರಿಗೆ ಕೊಟ್ಟಿದ್ದು, ಸದರಿ
ಪ್ಲಾಟನ್ನು ಆರೋಪಿತರು ಫಿರ್ಯಾದಿದಾರಳ ಹೆಸರಿಗೆ ನೊಂದಣಿ ಮಾಡಿಸಿಕೊಟ್ಟಿದ್ದು ಇರುತ್ತದೆ.
ಸದರಿ ಪ್ಲಾಟ್ ಸರಕಾರಿ ಅಭಿಯೋಜಕರಿಗಾಗಿ ಕಾಯ್ದಿರಿಸಿದ ಪ್ಲಾಟ್ ಆಗಿದ್ದು ಆರೋಪಿ ನಂ. 01
ನೇದ್ದವರು ತನ್ನ ಸಹೋದರರಾದ ಆರೋಪಿ ನಂ. 05 & 06 ಹಾಗೂ ಮಿತ್ರರಾದ ಆರೋಪಿ ನಂ. 03 &
04 ನೇದ್ದವರ ಜೊತೆಗೂಡಿ ಸಮಾನ ಉದ್ದೇಶದಿಂದ ಫಿರ್ಯಾದಿಗೆ ನಂಬಿಕೆ ದ್ರೋಸ ಮಾಡಿ ನಗರಸಭೆ
ಅಧಿಕಾರಿಯಾದ ಆರೋಪಿ ನಂ. 02 ರವರೊಂದಿಗೆ ಸೇರಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ
ನಿವೇಶನವನ್ನು ತೋರಿಸಿ ಅದನ್ನು ಫಿರ್ಯಾದಿದಾರಳಿಗೆ ಮಾರಾಟ ಮಾಡಿಸಿ ವಂಚನೆ ಮಾಡಿ ಈ ಬಗ್ಗೆ
ಫಿರ್ಯಾದಿ ಸಲ್ಲಿಸದಂತೆ ಧಮಕಿ ಹಾಕಿ ಜೀವದ ಬೆದರಿಕೆ ಹಾಕಿರುತ್ತಾರೆಂದು ವಗೈರೆ ಫಿರ್ಯಾದಿ
ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 45/2016 ಕಲಂ: 323, 326, 308, 504, 506 ಸಹಿತ 34 ಐ.ಪಿ.ಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿನಾಂಕ 26-02-2016 ರಂದು 18-30 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ, ಗಂಗಾವತಿರವರ ಪತ್ರ ಸಂ. 514/2016 ದಿನಾಂಕ 24-02-2015 ನೇದ್ದು ಕಲಂ. 156(3) ಸಿ.ಆರ್.ಪಿ.ಸಿ.
ನೇದ್ದರ ಪ್ರಕಾರ ಕ್ರಮ ಜರುಗಿಸುವ ಕುರಿತು ಸ್ವೀಕೃತವಾಗಿರುತ್ತದೆ. ಸದರಿ ಖಾಸಗಿ ಫಿರ್ಯಾದಿಯನ್ನು
ಶ್ರೀಮತಿ ಉಮಾದೇವಿ @ ಗಂಗಮ್ಮ ಗಂಡ
ಯು.ರಾಘವೇಂದ್ರ 24 ವರ್ಷ ಉ: ಮನೆಗೆಲಸ ಸಾ: ಹಿರೇಜಂತಕಲ್, ಗಂಗಾವತಿ ರವರು ಮಾಡಿದ್ದು ಇರುತ್ತದೆ.
ಸದರಿ ಫಿರ್ಯಾದಿ ಸಾರಂಶವೇನೆಂದರೆ, ಫಿರ್ಯಾದಿದಾರಳ ಮದುವೆಯು ಆರೋಪಿ ಯು.ರಾಘವೇಂದ್ರ ತಂದೆ ಯು.ದೇವಪ್ಪ ವಯ 32 ವರ್ಷ ಉ:
ವ್ಯವಸಾಯ ಮತ್ತು ಹೋಟಲ್ ವ್ಯಾಪಾರ. ನೇದ್ದವನೊಂದಿಗೆ ದಿನಾಂಕ 25-05-2006 ರಂದು
ಆಗಿರುತ್ತದೆ. ಫಿರ್ಯಾದಿದಾರಳ ಮದುವೆ ನಂತರ ಗಂಡನೊಂದಿಗೆ ಸಂಸಾರ ಮಾಡಲು ಮರಿಯಮ್ಮನಹಳ್ಳಿ
ಗ್ರಾಮಕ್ಕೆ ಹೋಗಿದ್ದು, ಮದುವೆ ಆದ 02 ತಿಂಗಳವರೆಗೆ ಆರೋಪಿತರು ಫಿರ್ಯಾದಿದಾರಳನ್ನು
ಚೆನ್ನಾಗಿ ನೋಡಿಕೊಂಡಿದ್ದು ನಂತರದಿಂದ ಆರೋಪಿತರು ಹೆಚ್ಚಿನ ವರದಕ್ಷೀಣೆಯಾಗಿ 40,000-00 ರೂ. ಹಣ
ಮತ್ತು 02 ತೊಲೆ ಬಂಗಾರ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಹೊಡಿ-ಬಡಿ ಮಾಡುತ್ತಿದ್ದು
ಅಲ್ಲದೇ ಮರಿಯಮ್ಮನಹಳ್ಳಿಯಲ್ಲಿರುವಾಗ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದು ಫಿರ್ಯಾದಿದಾರಳಿಗೆ
ಆರೋಪಿತರು ಅವಾಚ್ಯ ಶಬ್ದಗಳಿಂದ ತಿಂದು ತಿಂದು ಹಂದಿಯ ಹಾಗೆ ಆಗಿದ್ದೀಯಾ, ನೀನು ಕರ್ರಗೆ
ಇದ್ದೀಯಾ ದಿನಕ್ಕೆ ಎಷ್ಟು ಸಲ ತಿಂತಿಯಾ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ
ವರದಕ್ಷೀಣೆ ತರುವಂತೆ ತೊಂದರೆ ನೀಡುತ್ತಿದ್ದು ಅಲ್ಲದೇ ಫಿರ್ಯಾದಿದಾರಳು ಗಂಗಾವತಿಯ ಹಿರೇಜಂತಕಲ್
ದಲ್ಲಿರುವ ತನ್ನ ಮನೆಯಲ್ಲಿರುವಾಗ ದಿನಾಂಕ 01-12-2015 ರಂದು ಆರೋಪಿತರು ಗಂಗಾವತಿಯಲ್ಲಿರುವ
ಫಿರ್ಯಾದಿದಾರರ ಮನೆಗೆ ಬಂದು ಬಂದು ಫಿರ್ಯಾದಿಗೆ ಲೇ ಸೂಳೆ ಗಂಡನ ಜೊತೆ ಬಾಳುವೆ ಮಾಡುವುದು
ಬಿಟ್ಟು ತವರು ಮನೆ ಸೇರಿಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡಿ-ಬಡಿ
ಮಾಡಿರುತ್ತಾರೆ. ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳಿಗೆ ವರದಕ್ಷೀಣೆಯ ಸಲುವಾಗಿ ತೊಂದರೆ
ನೀಡಿ ಹೊಡಿ-ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ
ಫಿರ್ಯಾದಿ ಸಾರಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment