Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 14, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 64/2016 ಕಲಂ: 279, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:-14-03-2016 ರಂದು  02-15 .ಎಮ್. ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಬಾಬು ತ್ರಿನೇತ್ರ ತಂದಿ ಸತ್ಯನಾರಾಯಣ ವಯಾ- 38 ವರ್ಷ ಜಾ- ಕಮ್ಮಾ - ಒಕ್ಕಲುತನ ಸಾ- ಗುಂಡೂರ್ ಕ್ರಾಸ್ ತಾ- ಗಂಗಾವತಿ ಜಿ- ಕೊಪ್ಪಳ ಇವರು ಠಾಣೆಗೆ ಹಾಜರಾಗಿ  ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ದಿನಾಂಕ : 13-03-2016 ರಂದು  ನಾನು ರಾತ್ರಿ ಊಟ ಮಾಡಿ ನಮ್ಮೂರ ಕ್ರಾಸ್ ಹತ್ತಿರ  ನಾನು ಮತ್ತು ಸಿದ್ದಾಪೂರ ನಾಗೇಶ ಮತ್ತು ಬಸವರಾಜ ಕೂಡಿ ಮಾತನಾಡುತ್ತಾ ನಿಂತುಕೊಂಡಿದ್ದೇವು. ಯಾರೋ ಹಾದಿಯಲ್ಲಿ ಹೊಗುವ ಜನರು ಅಪಘಾತವಾದ ಸುದ್ದಿಯನ್ನು ತಿಳಿಸಿ ಹೊಗಿದ್ದರಿಂದ ನಾನು ಮತ್ತು ನಾಗೇಶ  ಹಾಗೂ ಇತರರು ಕೂಡಿ ಬಂದು  ನೋಡಲು ಸಿದ್ದಾಪೂರ ಶ್ರೀರಾಮನಗರ ರಸ್ತೆಯ ಮೇಲೆ ಕೃಷ್ಣಾಪೂರ  ಸಮೀಪ  ಸೋಮನಗೌಡ ವರ ಗದ್ದೆಯ ಹತ್ತಿರ ಯಾರೋ ಒಬ್ಬ ವ್ಯಕ್ತಿ ಯಥಾರೀತಿಯಲ್ಲಿ ದಿನಾಂಕ : 13-03-30216 ರಂದು ರಾತ್ರಿ 10-30 ರಿಂದಾ 11-00 ಪಿ.ಎಮ್. ಅವದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ್ಗೆ ಯಾವುದೋ  ವಾಹನ  ಅಪಘಾತಪಡಿಸಿ  ಆತನ ತಲೆಯ ಮೇಲೆ  ಹಾಗೂ ಮುಖ ಮತ್ತು ಹೊಟ್ಟೆಯ ಮೇಲೆ  ಹಾಯ್ದುಹೊಗಿದ್ದರಿಂದ  ಮಾಂಸಖಂಡ ಹೊರಬದಂದು  ಸ್ಥಳದಲ್ಲಿಯೇ ಮೃತಪಟ್ಟಿದ್ದು  ಸದರ್ ವ್ಯಕ್ತಿ ಅಂದಾಜ 30 ರಿಂದಾ 35 ವರ್ಷ ವಯಸ್ಸಿ ವ್ಯಕ್ತಿ ಇದ್ದು  ಅವನ  ಮೈಮೇಲೆ  ಮಾಸಿದ ಕಪ್ಪು ಬಿಳಿ – ಬೂದ ಕಲರಿನ ಚಕ್ಸ ಶರ್ಟ  ಹಾಗೂ ನಾಶಿಕಲರಿನ ಪ್ಯಾಂಟ್ ಇದ್ದು  ಸದರ್ ವ್ಯಕ್ತಿಯು ಯಥಾರಿತಿಯಾಗಿ ತಿರುಗಾಡುತ್ತಿದ್ದವನಿದ್ದು ಅವನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ.  ಹಾಗೂ ಅವನಿಗೆ ಅಪಘಾತಪಡಿಸಿ ಹೊದ ವಾಹನ ಕೂಡಾ ಯಾವುದು  ಅಂತಾ ತಿಳಿದು ಬಂದಿರುವದಿಲ್ಲ. ಕಾರಣ  ರೀತಿ ಅತೀ ವೇಗ ಹಾಗೂ ಅಲಕ್ಷತನದಿಂದ  ವಾಹನ ನಡೆಸಿ  ಅಪರಿಚಿತ ವ್ಯಕ್ತಿಗೆ ಟಕ್ಕ್ರ್ ಕೊಟ್ಟು ಆತನ ಸಾವಿಗೆ ಕಾರಣವಾದ ವಾಹನ ಮತ್ತು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಮೃತ ವ್ಯಕ್ತಿಯು ಯಾರು ಅಂಬುದರ ಬಗ್ಗೆ ವಿಚಾರಿಸಿದ್ದು  ಅವನ ಹೆಸರು ವಿಳಾಸ ಸಿಗದ ಕಾರಣ ಬಂದು ಈ ಫಿರ್ಯಾದಿಯನ್ನು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 23/2016 ಕಲಂ: 279, 337, 338 ಐ.ಪಿ.ಸಿ.:.
ದಿನಾಂಕ: 13-03-2016 ರಂದು ಬೆಳಿಗ್ಗೆ 8-45 ಗಂಟೆಗೆ ತಾವರಗೇರಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಹೋಗಿ ಇಲಾಜು ಪಡೆಯುತ್ತಿದ್ದ ಗಾಯಾಳು ಫಿರ್ಯಾದಿದಾರರಾದ ಶ್ರೀ ಮಂಜುನಾಥ ತಂದೆ ಯಮನಪ್ಪ ಸುಣಗಾರ ವಯ: 24 ವರ್ಷ, ಜಾತಿ: ಗಂಗಾಮತ, : ಗೌಂಡಿಕೆಲಸ, ಸಾ: ಸುಣಗಾರ ಓಣಿ ತಾವರಗೇರಾ. ರವರ ಹೇಳಿಕೆ ಫಿಯರ್ಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ಗೌಂಡಿಕೆಲಸದ ನಿಮಿತ್ಯ ನವಲಹಳ್ಳಿ ಗ್ರಾಮಕ್ಕೆ ಹೋಗಿದ್ದು ಅಲ್ಲಿ ಕೆಲಸ ಇರದೇ ಇದ್ದುದರಿಂದ ವಾಪಾಸು ತಾವರಗೇರಾಕ್ಕೆ ಬರಲು ಬಸ್ಗಾಗಿ ಕಾಯುತ್ತಿದ್ದಾಗ ಫಿರ್ಯಾದಿದಾರರಿಗೆ ಪರಿಚಾಯದ ತಾವರಗೇರಾ ಗ್ರಾಮದ ಶ್ಯಾಮೂತರ್ಿ ನಾರಿನಾಳ ಈತನು ಒಂದು ಹಿರೋ ಹೆಚ್.ಎಫ್. ಡಿಲಕ್ಸ್ ಮೋಟಾರು ಸೈಕಲ್ ನಂ: ಕೆ.-37/ಡಬ್ಲೂ-5247 ನೇದ್ದರ ಮೇಲೆ ಇಬ್ಬರೂ ಕೂಡಿಕೊಂಡು ತಾವರಗೇರಾಕ್ಕೆ ಬರುತ್ತಿರುವಾಗ ತಾವರಗೇರಾದ ಈದ್ಗಾ ಮೈದಾನ ಹತ್ತಿರ ರಸ್ತೆಯ ತಿರವಿನಲ್ಲಿ ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸದರಿ ಮೋಟಾರು ಸೈಕಲ್ನ್ನು ಶ್ಯಾಮೂತರ್ಿ ನಾರಿನಾಳ ಈತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರು ಸೈಕಲ್ನ್ನು ರಸ್ತೆಯ ಎಡಭಾಗಕ್ಕೆ ಹೋಗಿ ಸ್ಕಿಡ್ ಮಾಡಿ ಕೆಡವಿದ್ದು ಇದರಿಂದ ಫಿರ್ಯಾದಿದಾರರಿಗೆ ಬಲಗಾಲ ತೊಡೆಗೆ ಒಳಪೆಟ್ಟು, ಬಲಗಾಲ ಮೀನಖಂಡದ ಕೆಳಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು ಅಲ್ಲದೇ ತಲೆಗೆ, ಬಲಗಾಲ ಬೆರಳುಗಳಿಗೆ ರಕ್ತಗಾಯಗಳಾಗಿದ್ದು ಮತ್ತು ಎದೆಗೆ ಮತ್ತು ಹೊಟ್ಟೆಗೆ ಒಳಪೆಟ್ಟುಗಳಾಗಿದ್ದು ಮತ್ತು ಶ್ಯಾಮೂತರ್ಿ ನಾರಿನಾಳ ಈತನಿಗೂ ಕೂಡ ಬಲಗಡೆ ಭುಜಕ್ಕೆ ಹಾಗೂ ಎದೆಗೆ. ಹೊಟ್ಟೆಗೆ ಒಳಪೆಟ್ಟುಗಳಾಗಿದ್ದು ನಂತರ ಫಿರ್ಯಾದಿದಾರರು 108 ಅಂಬ್ಯಲೇನ್ಸ್ ವಾಹನದಲ್ಲಿ ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕಾರಣ ಸದರಿ ಮೋಟಾರು ಸೈಕಲ್ ಚಾಲಕ ಶ್ಯಾಮೂತಿರ ನಾರಿನಾಳ ಈತನ ವಿರುದ್ಧ ಸೂಕ್ತ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸು ಠಾಣೆಗೆ ಇಂದು ಬೆಳಿಗ್ಗೆ 9-30 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ತಾವರಗೇರಾ ಠಾಣೆ ಗುನ್ನೆ ನಂ: 23/2016 ಕಲಂ: 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 28/2016 ಕಲಂ: 87 Karnataka Police Act.
ದಿನಾಂಕ: 13-03-2016 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಹಿರೇಮ್ಯಾಗೇರಿ ಸೀಮಾದ ಶರಣಪ್ಪ ತಂದೆ ಬಸವಂತಪ್ಪ ಉಳ್ಳಾಗಡ್ಡಿ ಈವರ ಹೊಲದ ಹತ್ತಿರ ಸಾರ್ವಜನಿಕ ನಾಲಾದಲ್ಲಿ (ಸರುವು) ನಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 2 ಜನರು ಸಿಕ್ಕಿ ಬಿದ್ದಿದ್ದು 12 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,740=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಠಾಣಾ ಗುನ್ನೆ ನಂ : 28/2016 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 94/2016 ಕಲಂ: 78(6) Karnataka Police Act.

ದಿನಾಂಕ 13-03-2016 ರಂದು ಸಂಜೆ 4-30 ಗಂಟೆಗೆ ಶ್ರೀ ಉದಯ ರವಿ,  ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆ ರವರು ಸ್ವಂತ ವರದಿಯನ್ನು ಪಂಚನಾಮೆ, ಆರೋಪಿ ಮತ್ತು ಮಾಲಿನೊಂದಿಗೆ ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ಈ ದಿವಸ ದಿನಾಂಕ 13-03-2016 ರಂದು ಮದ್ಯಾಹ್ನ 3-00 ಗಂಟೆಗೆ ಅರಳಹಳ್ಳಿ ಸೀಮಾದ ಸಿರಗೇರಿ ರವರ ತೋಟದ ಪಕ್ಕದಲ್ಲಿರುವ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರ.ವ.ವರದಿ ಕಾಲಂ ನಂ.9 ನೇದ್ದರಲ್ಲಿ ನಮೂದಿಸಿದ ಆರೋಪಿತರು 2 ಹುಂಜಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟದ ಕೋಳಿ ಪಂದ್ಯಾಟದ ಜೂಜಾಟದ ತೊಡಗಿದ ಸಮಯದಲ್ಲಿ ಪಂಚರ ಮತ್ತು ಸಿಬ್ಬಂದಿರವರೊಂದಿಗೆ ದಾಳಿ ಮಾಡಿ ಅವರಿಂದ ನಗದು ಹಣ ರೂ.1600/- ಮತ್ತು ಅವರ ಕೈಯಲ್ಲಿ ಪಂದ್ಯಾಟದ ಸಲುವಾಗಿ ತಂದಿದ್ದ 4 ಹುಂಜುಗಳನ್ನು ಮತ್ತು ಪಂದ್ಯಾಟಕ್ಕೆ ಬಳಸಿದ 2 ಹುಂಜಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ ಈ ಬಗ್ಗೆ ವಿವರವಾದ ದಾಳಿ ಪಂಚನಾಮೆಯನ್ನು ಮಾಡಿದ್ದು ಇರುತ್ತದೆ. ಸದರ ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

0 comments:

 
Will Smith Visitors
Since 01/02/2008