Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 13, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 89/2016 ಕಲಂ: 78(3) Karnataka Police Act.
ದಿನಾಂಕ: 12-03-2016 ರಂದು 2-30 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಮದ್ಯಾಹ್ನ 1-00 ಗಂಟೆಗೆ ಕುಷ್ಟಗಿ ಪಟ್ಟಣದ ಎನ್ ಹೆಚ್ 50 ರಸ್ತೆಯ ಮಹಾದೇವ ಡಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ರವಿಕುಮಾರ ತಂದೆ ನಾಗಪ್ಪ ಹಿರೇಮನಿ ವಯ: 25 ವರ್ಷ, ಜಾ: ಮಾದಿಗ ಉ: ಕೂಲಿಕೆಲಸ ಸಾ: ಗಾಂಧಿನಗರ ಕುಷ್ಟಗಿ  2] ಯಮನೂರಪ್ಪ ತಂದೆ ರಾಮಣ್ಣ ವಡ್ಡರ ವಯ: 26 ವರ್ಷ, ಜಾ: ಭೋವಿ, : ಗೌಂಡಿ ಕೆಲಸ ಸಾ: ಗಾಂಧಿನಗರ ಕುಷ್ಟಗಿ  ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಪುಂಡಲಿಕಪ್ಪ ,ಹೆಚ್.ಸಿ-63, ಪಿ.ಸಿ-117,161,24 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 1-15 ಪಿ.ಎಂ ಗೆ ಕುಷ್ಟಗಿ ಪಟ್ಟಣದ ಎನ್ ಹೆಚ್ 50 ರಸ್ತೆಯ ಮಹಾದೇವ ಡಾಬಾದ ಮುಂದೆ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಹಿರಾರಾಮ್ ತಂದೆ ದೂಪರಾಮ್ ಚೌದರಿ ವಯ:29 ವರ್ಷ, ಜಾ: ಚೌದರಿ ಉ: ಡಾಬಾದಲ್ಲಿ ಸಪ್ಲೈಯರ್ ಸಾ: ಗೂಲಿಯಾರ್ ತಾ: ಗೂಡುಮಾಲರ್ ಜಿ: ಬಾಡಮಾರ್ ರಾ: ರಾಜಸ್ಥಾನ್ ಹಾ:: ರಾಮದೇವ ಡಾಬಾ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಬರೆದ ಮಟಕಾ ಚೀಟಿಗಳನ್ನು ಮಹೆಬೂಬ ತಂದೆ ಬಂದಿಗಿಸಾಬ ಕಾಯ್ ಗಡ್ಡಿ ವಯ: 28 ವರ್ಷ, ಜಾ: ಮುಸ್ಲಿಂ, ಸಾ: ಮುಲ್ಲಾರ ಓಣಿ ಕುಷ್ಟಗಿ ಇವರಿಗೆ ಕೊಡುವದಾಗಿ ತಿಳಿಸಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1850-00 ರೂಪಾಯಿ ನಗದು ಹಣ, ಒಂದು ವಿವೋ ಕಂಪನಿಯ ಮೊಬೈಲ್ ಅಂ ಕಿ. 650-00 ರೂ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 90/2016 ಕಲಂ: 78(3) Karnataka Police Act.
ದಿನಾಂಕ: 12-03-2016 ರಂದು 4-30 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಮದ್ಯಾಹ್ನ 2-35 ಗಂಟೆಗೆ ಕುಷ್ಟಗಿ ಠಾಣಾ ವ್ಯಾಪ್ತಿಯ ಬಿಜಕಲ್ ಗ್ರಾಮದ ಗ್ರಾಮಪಂಚಾಯತ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ರವಿಕುಮಾರ ತಂದೆ ನಾಗಪ್ಪ ಹಿರೇಮನಿ ವಯ: 25 ವರ್ಷ, ಜಾ: ಮಾದಿಗ ಉ: ಕೂಲಿಕೆಲಸ ಸಾ: ಗಾಂಧಿನಗರ ಕುಷ್ಟಗಿ  2] ಯಮನೂರಪ್ಪ ತಂದೆ ರಾಮಣ್ಣ ವಡ್ಡರ ವಯ: 26 ವರ್ಷ, ಜಾ: ಭೋವಿ, : ಗೌಂಡಿ ಕೆಲಸ ಸಾ: ಗಾಂಧಿನಗರ ಕುಷ್ಟಗಿ  ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಪುಂಡಲಿಕಪ್ಪ,ಹೆಚ್.ಸಿ-63, ಪಿ.ಸಿ-117,161 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 3-05 ಪಿ.ಎಂ ಗೆ ಬಿಜಕಲ್ ಗ್ರಾಮದ ಗ್ರಾಮಪಂಚಾಯತ್ ಹತ್ತಿರ ಮುಂದೆ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಕುಂಟೆಪ್ಪ ತಂದೆ ಯಮನಪ್ಪ ತಳವಾರ ವಯ:30 ವರ್ಷ, ಜಾ: ವಾಲ್ಮೀಕಿ, ಸಾ: ಬಿಜಕಲ್ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು.  ಹಾಗೂ ತಾನು ಬರೆದ ಮಟಕಾ ಚೀಟಿಗಳನ್ನು ಮಹೆಬೂಬ ತಂದೆ ಬಂದಿಗಿಸಾಬ ಕಾಯ್ ಗಡ್ಡಿ ವಯ: 28 ವರ್ಷ, ಜಾ: ಮುಸ್ಲಿಂ, ಸಾ: ಮುಲ್ಲಾರ ಓಣಿ ಕುಷ್ಟಗಿ ಇವರಿಗೆ ಕೊಡುವದಾಗಿ ತಿಳಿಸಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1950-00 ರೂಪಾಯಿ ನಗದು ಹಣ, ಒಂದು ಶ್ಯಾಮಸಂಗ್ ಕಂಪನಿಯ ಮೊಬೈಲ್ ಅಂ ಕಿ. 500-00 ರೂ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ. 95/2016 ಕಲಂ:  376 ಐ.ಪಿ.ಸಿ ಮತ್ತು 4 ಲೈಂಗಿಕ ಅಪರಾದಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ಮತ್ತು 3(1)(10) ಎಸ್.ಸಿ/ಎಸ್.ಟಿ. ಪಿ.ಎ. ಕಾಯ್ದೆ 1989.

ದಿನಾಂಕ:- 12-03-2016 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ವಯಸ್ಸು 48 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಆಗೋಲಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನನ್ನ ಕಿರಿಯ ಮಗಳು ಇವಳು ಕಳೆದ ವರ್ಷ 10 ನೇ ತರಗತಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲಿಯೇ ಇರುತ್ತಿದ್ದಳು. ಈಗ್ಗೆ ಸುಮಾರು ಒಂದು ವರ್ಷದಿಂದ ನಮ್ಮೂರ ಸುರೇಶ ತಂದೆ ವಿರುಪಣ್ಣ ಭೀಮನೂರು, 22 ವರ್ಷ ಜಾತಿ: ಕುರುಬರು ಸಾ: ಆಗೋಲಿ ಈತನು ನನ್ನ ಮಗಳು ಶಾಲೆಗೆ ಹೋಗುವಾಗ, ಊರಲ್ಲಿ ನೀರು ತರಲು, ಬಟ್ಟೆ ಒಗೆಯಲು ಹೋದಾಗ ಅವಳೊಂದಿಗೆ ಮಾತನಾಡುವದು, ಅವಳ ಹಿಂದೆ ತಿರುಗಾಡುವುದು, ಚುಡಾಯಿಸುವುದು  ಮಾಡುತ್ತಿದ್ದನು. ಇದನ್ನು ಕಂಡು ನಾನು ಮತ್ತು ನನ್ನ ಮಗ ದುರಗಪ್ಪ, ಮತ್ತು ಸಂಬಂಧಿಕರು ಕೂಡಿ ಆತನಿಗೆ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿದ್ದೆವು. ಅವರ ಮನೆಯವರಿಗೂ ಸಹ ವಿಷಯವನ್ನು ತಿಳಿಸಿದ್ದೆವು. ಆದಾಗ್ಯೂ ಸಹ ಅವನು ನನ್ನ ಮಗಳನ್ನು ಹಿಂಬಾಲಿಸುವುದು ಬಿಡಲಿಲ್ಲಾ.   ದಿನಾಂಕ:- 10-03-2016 ರಂದು ನನ್ನ ಮಗಳು ನನ್ನ ತಂಗಿಯ ಮಗಳ ಮದುವೆಗೆಂದು ಇರಕಲ್ ಗಡಾಕ್ಕೆ ಹೋಗಿದ್ದಳು.  ಆ ಸಮಯದಲ್ಲಿ ಅಂದು ರಾತ್ರಿ 10:00 ಗಂಟೆಯ ಸುಮಾರಿಗೆ ಸುರೇಶನು ಅಲ್ಲಿಗೆ ಹೋಗಿ ನನ್ನ ಮಗಳನ್ನು ಸಂಗಡ ಬರುವಂತೆ ಒತ್ತಾಯ ಮಾಡುತ್ತಿರುವಾಗ ಇದನ್ನು ಕಂಡು ಅಲ್ಲಿದ್ದ ನಮ್ಮ ಚಿಗಪ್ಪನ ಮಗನಾದ ಬಸವರಾಜ ತಂದೆ ಧರ್ಮಣ್ಣ ಆಗೋಲಿ ಮತ್ತು ನನ್ನ ಮೈದುನನಾಗುವ ಅಯ್ಯನಗೌಡ ತಂದೆ ಬಸನಗೌಡ ಆಗೋಲಿ ಇವರುಗಳು ಅವನಿಗೆ ಬೈದು ಅವನನ್ನು ಹಿಡಿದುಕೊಂಡು ಆಗೋಲಿಗೆ ಕರೆದುಕೊಂಡು ಬಂದರು. ನಿನ್ನೆ ದಿವಸ ನಾನು ನನ್ನ ಮಗಳಿಗೆ ವಿಚಾರ ಮಾಡಿದಾಗ ಸುರೇಶನು ತನ್ನನ್ನು ಹಿಂಬಾಲಿಸುತ್ತಾ, ನನ್ನ ಮನವೊಲಿಸಿ ಭಾರತ ಹುಣ್ಣಿಮೆಯ ದಿವಸ ಅಂದರೆ ದಿನಾಂಕ:- 22-02-2016 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಸುರೇಶನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಂಭೋಗ ಮಾಡಿರುತ್ತಾನೆ ಅಂತಾ ತಿಳಿಸಿದಳು.   ನಾವು ಜಾತಿಯಿಂದ ನಾಯಕ ಇದ್ದು, ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ 16 ವರ್ಷ ಇವಳನ್ನು ಸುರೇಶ ತಂದೆ ವಿರುಪಣ್ಣ ಭೀಮನೂರು, 22 ವರ್ಷ ಜಾತಿ: ಕುರುಬರು ಸಾ: ಆಗೋಲಿ ಇವನು ಅವಳನ್ನು ಹಿಂಬಾಲಿಸುತ್ತಾ, ಅವಳ ಮನವೊಲಿಸಿ ಸಂಭೋಗ ಮಾಡಿದ್ದು, ಕಾರಣ ಅವನ  ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ನಾವು ಮನೆಯವರು ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ." ಅಂತಾ ಇದ್ದ ದೂರಿನ ಆಧಾರದ   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008