Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 24, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ: 363, 302, 201 ಐ.ಪಿ.ಸಿ:.
ದಿ:22-03-16 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಚಾಂದುಬಾಯಿ ಗಂಡ ಶೇಖರನಾಯ್ಕ ನಾಯ್ಕ ಸಾ: ಕನಕಾಪುರ ತಾಂಡಾ ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತದ ದೂರಿನ ಸಾರಾಂಶವೇನೆಂದರೇ, ದಿ:21-03-16 ರಂದು ಸಾಯಂಕಾಲ 5-30 ಗಂಟೆಗೆ ತನ್ನ ಮಗ ಮೇಘರಾಜ @ ರಾಜಾ ವಯ: 9 ವರ್ಷ, ಇವನು ಮನೆಯ ಹತ್ತಿರ ಆಟವಾಡುತ್ತಿದ್ದು ವಾಪಾಸ್ ಮನೆಗೆ ಬರದಿದ್ದರಿಂದ ಗಾಭರಿಗೊಂಡು ಹೋಟೇಲ್ ಹತ್ತಿರದ ಎಲ್ಲಾ ಡಾಬಾಗಳಲ್ಲಿ, ಕಲ್ಯಾಣಿ ಗೇಟ್ ಹತ್ತಿರ ಮತ್ತು ಕನಕಾಪುರ ತಾಂಡಾದಲ್ಲಿ, ಗಿಣಗೇರಿ ಮತ್ತು ಇನ್ನಿತರೆ ಕಡೆ ಹುಡುಕಾಡಿದರೂ ಸಹ ಸಿಗಲಿಲ್ಲ. ಅಪ್ರಾಪ್ತ ವಯಸ್ಸಿನ ತನ್ನ ಮಗ ಮೇಘರಾಜ ಇವನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರಬಹುದು. ಕಾರಣ ಅಪಹರಣವಾದ ತನ್ನ ಮಗನಿಗೆ ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 68/2016. ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು. ಮುಂದುವರೆದಂತೆ ಇಂದು ದಿ:23.03.2016 ರಂದು ಬೆಳೆಗ್ಗೆ 10.00 ಗಂಟೆಗೆ ಫಿಯರ್ಾದಿದಾರರಾದ ಶ್ರೀಮತಿ ಚಾಂದುಬಾಯಿ ಗಂಡ ಶೇಖರನಾಯ್ಕ ಸಾ: ಕನಕಾಪುರ ತಾಂಡಾ, ಇವರು ಠಾಣೆಗೆ ಬಂದು ಲಿಖಿತ ವಿನಂತಿಯನ್ನು ನೀಡಿದ್ದು ಅದರಲ್ಲಿ, ಇಂದು ದಿ:21-03-16 ರಂದು ಸಂಜೆ 5-30 ರಿಂದ ಇಂದು ದಿ:23-03-16 ರಂದು ಬೆಳೆಗ್ಗೆ 07.30 ಗಂಟೆ ಸುಮಾರಿಗೆ ನಡುವಿನ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕಾಗಿ ತನ್ನ ಮಗ ಮೇಘರಾಜ ಇವನನ್ನು ಕೊಲೆ ಮಾಡಿ ತಮ್ಮೂರಿನ ಸಮೀಪದ ಕಲ್ಯಾಣಿ ಫ್ಯಾಕ್ಟರಿ ಕಂಪೌಂಡ ಬಾಜು ವೆಸ್ಟ್ ಸ್ಲ್ಯಾಗ್ ಬಿದ್ದಿರುವ ಗುಂಡಿ ನೀರಿನಲ್ಲಿ ಹಾಕಿ ಮೃತ ಶವದ ಮೈಮೇಲೆ ಕಲ್ಲುಗಳನ್ನು ಇಟ್ಟು ಗುರುತು ಸಿಗದಂತೆ ಸಾಕ್ಷಿ ಪುರಾವೆ ನಾಶವಾಗುವಂತೆ ಮಾಡಿದ್ದು ಇರುತ್ತದೆ. ಕಾರಣ ದುಷ್ಕಮರ್ಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ಕೋರಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ-363 ಐಪಿಸಿ ಪ್ರಕರಣದಲ್ಲಿ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಮೇಘರಾಜ ಈತನು ಮೃತಪಟ್ಟಿರುವದರಿಂದ ಸದರ ಪ್ರಕರಣದಲ್ಲಿ ಕಲಂ: 302, 201 ಐ.ಪಿ.ಸಿ ನೇದ್ದವುಗಳನ್ನು ಅಳವಡಿಸಿಕೊಳ್ಳಲು ಮಾನ್ಯ ಘನ ನ್ಯಾಯಾಲಯದಲ್ಲಿ ವಿನಂತಿಸಲಾಗಿದೆ.       
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ: 87 Karnataka Police Act:.
ದಿನಾಂಕ 23-03-2016 ರಂದು ರಾತ್ರಿ 9-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕಲಾಲಬಂಡಿ ಗ್ರಾಮದಲ್ಲಿನ ಮಸೀದೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-63 ಪಿ.ಸಿ-109, 116,117,161, 24, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 1870-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 279, 283, 337, 338 ಐ.ಪಿ.ಸಿ:.
ದಿನಾಂಕ: 23-03-2016 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ  ಸೋಮಣ್ಣ ತಂದೆ ನರಸಪ್ಪ ರಾಠೋಡ ವಯಾ 40 ವರ್ಷ ಜಾ: ಲಮಾಣಿ ಉ: ಒಕ್ಕಲುತನ ಸಾ: ನಡುಲಕೊಪ್ಪ ತಾ:ಕುಷ್ಟಗಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 6-15 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರರ ಹೊಲವು ನಡಲಕೊಪ್ಪ ಸೀಮಾದ NH ರಸ್ತೆಗೆ ಹೊಂದಿಕೊಂಡು ಇರುತ್ತದೆ. ನಾನು ಹೊಲದಲ್ಲಿಯೇ ಮನೆಯನ್ನು ಮಾಡಿಕೊಂಡು ಇರುತ್ತೇವೆ. ಮೊನ್ನೆ ದಿನಾಂಕ: 21-03-2016 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಹೊಲದಲ್ಲಿನ ನಮ್ಮ ಮನೆಯ ಮುಂದೆ ಮಲಗಿದ್ದಾಗ NH ರಸ್ತೆಯ ಕಡೆಯಿಂದ ದಡಲ್ ಅಂತಾ ಜೋರಾಗಿ ಶಬ್ದ ಕೇಳಿ ಬಂದಿದ್ದು. ಆಗ ನಾನು ಎದ್ದು  ಹೋಗಿ ನೋಡಲು ಹೆದ್ದಾರಿ ರಸ್ತೆಯಲ್ಲಿ  ಒಂದು ಟ್ರ್ಯಾಕ್ಟರ ಮತ್ತು ಒಂದು ಕಾರು ಅಪಘಾತವಾಗಿದ್ದು ಒಂದು ಟ್ರ್ಯಾಕ್ಟರ ಕುಷ್ಟಗಿ ಕಡೆಗೆ ಮುಖವಾಗಿ ನಿಂತಿದ್ದು ಮತ್ತು ಒಂದು ಕಾರು ಇಲಕಲ್ ಕಡೆಯಿಮದ ಕುಷ್ಟಗಿ ಕಡೆಗೆ ಬಂದು ಟ್ರ್ಯಾಕ್ಟರಗೆ ಡಿಕ್ಕಿಯಾಗಿ ನಿಂತಿದ್ದು, ಕಾರಿನಲ್ಲಿ ಇದ್ದ ಜನರಿಗೆ ಅಪಘಾತದಿಂದ ಗಾಯಗಳಾಗಿದ್ದು  ಆಗ ನಾನು ಕಾರನಲ್ಲಿ ಇದ್ದವರ ಹೆಸರು  ವಿಚಾರಿಸಲಾಗಿ ಕಾರಿನ ಚಾಲಕನ ಹೆಸರು ನಾಗೇಶ ತಂದೆ ಲಕ್ಷ್ಮಯ್ಯ ವಯಾ 28 ವರ್ಷ ಜಾ:ಹಿಂದೂ ಪಟ್ರ ಸಾ: :ಚಿಕ್ಕದಿಬ್ಬರಹಳ್ಳಿ ತಾ:ಶಿಡ್ಲಗಟ್ಟ ಜಿ:ಚಿಕ್ಕಬಳ್ಳಾಪೂರ ಈತನಿಗೆ ಬಲಗಾಲು ತೊಡೆಯಿಂದ ಮೊಣಕಾಲಗೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಮೊಣಕೈಗೆ ರಕ್ತಗಾಯವಾಗಿದ್ದು, ಕಾರಿನಲ್ಲಿದ್ದ ಮತ್ತೊಬ್ಬನ ಹೆಸರು ರಾಮಚಂದ್ರಪ್ಪ ತಂದೆ ಗೋವಿಂದಪ್ಪ ವಯಾ 43 ವರ್ಷ ಜಾ:ಬಜೇಂತ್ರಿ ಉ: ಕಂಟ್ರ್ಯಾಕ್ಟರ ಸಾ:ಚಿಕ್ಕದಿಬ್ಬರಹಳ್ಳಿ ತಾ:ಶಿಡ್ಲಗಟ್ಟ ಜಿ:ಚಿಕ್ಕಬಳ್ಳಾಪೂರ ಅಂತಾ ತಿಳಿಸಿದ್ದು ಈತನಿಗೆ ಎಡಗಾಲು ಪಾದದ ಬೆರಳಿಗೆ ಭಾರಿ ರಕ್ತಗಾಯವಾಗಿದ್ದು , ಎಡಗಣ್ಣಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಬಲಗಡೆ ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಸದರಿಯವರು ಎನ್.ಹೆಚ್. ಅಂಬುಲೇನ್ಸಗೆ ಫೋನ ಮಾಡಿ ಹೇಳಿದ್ದು ಅಂಬುಲೇನ್ಸ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು  ಇಲಕಲ್  ಕಡೆಗೆ ಹೋದರು.  ನಂತರ ನೋಡಲಾಗಿ ಅಪಘಾತವಾದ ಟ್ರ್ಯಾಕ್ಟರ್  ಚಾಲಕನನ್ನು ವಿಚಾರಿಸಲಾಗಿ ಆತನ  ಹೆಸರು  ಶಿವಯ್ಯ ತಂದೆ ಉಳವಯ್ಯ  ಬನ್ನಿಗೋಳಮಠ ಸಾ: ಕಲಕೇರಿ ಅಂತಾ ಹೇಳಿದ್ದು ಆತನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ. ಟ್ರ್ಯಾಕ್ಟರ ನೋಡಲಾಗಿ ಇಂಜೀನ ನಂಬರ  KA-37/TA-9029 ಇದ್ದು ಟ್ರ್ಯಾಲಿಗೆ ನಂಬರ ಬರೆಯಿಸಿರುವದಿಲ್ಲ ಅದರ ಚೆಸ್ಸಿ ನಂ: 21 ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ರೋಡಿನ ಮದ್ಯದಲ್ಲಿ ಟ್ರ್ಯಾಕ್ಟರನ್ನು ಯಾವುದೇ ಸಿಗ್ನಲ್ ಲೈಟ್ ಹಾಕದೇ, ಮುಂಜಾಗೃತಾ ಕ್ರಮವಾಗಿ ಯಾವುದೇ ನಿಶಾನೆ ವಗೈರೆ ಇಡಲಾರದೇ ನಿರ್ಲಕ್ಷ್ಯತನದಿಂದ ರಸ್ತೆಯ ಮದ್ಯದಲ್ಲಿ ಟ್ರ್ಯಾಕ್ಟರ ನಿಲ್ಲಿಸಿದ್ದು ಹಾಗೂ  ಕಾರ ಚಾಲಕನು ಸಹ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ತನ್ನ ಕಾರನ್ನು ನಡೆಯಿಸಿಕೊಂಡು  ಬಂದು ಟ್ರ್ಯಾಕ್ಟರ ಟ್ರ್ಯಾಲಿಗೆ ಡಿಕ್ಕಿ ಮಾಡಿದ್ದರಿಂದ  ಅಪಘಾತ ನಡೆದಿದ್ದು   ಟ್ರ್ಯಾಕ್ಟರ ಮತ್ತು ಕಾರಿನ ಚಾಲಕರು ಇಬ್ಬರೂ ಸದರಿ ಅಪಘಾತಕ್ಕೆ ಹೊಣೆಗಾರರಾಗಿರುತ್ತಾರೆ ಈ ದಿವಸ ತಾವು ಸ್ಥಳಕ್ಕೆ ಬಂದಾಗ ನಾನು ಅಲ್ಲಿಗೆ ಬಂದು ನಿಮ್ಮ ಮುಂದೆ ನಡೆದ ಘಟನೆಯ ಬಗ್ಗೆ ಹೇಳಿದ್ದು ಇರುತ್ತದೆ ಅಂತಾ  ಪಿರ್ಯಾದಿಯ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 32/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 23-03-2016 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳು ನೂರು ಜಾನ್ ಬೀ ನಧಾಪ್, ಹಾಗೂ ಲಕ್ಷ್ಮವ್ವ ಕವಳಕೇರಿ ಸಾ- ಕಲ್ಲೂರು ಈ ಮೂರು ಜನರು ಅಪೇ ಪ್ಯಾಸೇಂಜರ ವಾಹನ ಸಂಖ್ಯೆ ಕೆಎ-37/ಎ-1511 ನೇದ್ದರಲ್ಲಿ ಹತ್ತಿಕೊಂಡು ಯಲಬುರ್ಗಾಕ್ಕೆ ಕಲ್ಲೂರು- ಯಲಬುರ್ಗಾ ರಸ್ತೆ ಮೇಲೆ ಕಲ್ಲೂರು ಸೀಮಾದಲ್ಲಿ ಬರುವ ಕಲ್ಲೇಶ ಮಾಲೀ ಪಾಟೀಲ ಇವರ ಹೊಲದ ಹತ್ತಿರ ಮುಂಜಾನೆ 11-30 ಗಂಟೆಯ ಸುಮಾರಿಗೆ ಬರುತ್ತಿರುವಾಗ ಸದರಿ ಅಪೇ ಪ್ಯಾಸೇಂಜರ ವಾಹನ ಸಂಖ್ಯೆ ಕೆಎ-37/ಎ-1511 ನೇದ್ದರ ಚಾಲಕನಾದ ಹನಮೇಶ ರಾಂಪೂರು ಸಾ- ಕಲ್ಲೂರು ಇತನು ತಾನು ನಡೆಸುತ್ತಿದ್ದ ಅಪೇ ಪ್ಯಾಸೇಂಜರ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಬಲಗಡೆ ವಾಹನ ಪಲ್ಟಿ ಮಾಡಿದ್ದರಿಂದ ವಾಹನದಲ್ಲಿ ಪಿರ್ಯಾದಿಗೆ ಬಲಕಣ್ಣಿನ ಮೇಲೆ ಭಾರಿ ಸ್ವರೂಪದ ಪೆಟ್ಟು ಬಿದ್ದು ರಕ್ತಗಾಯ, ಎಡಗೈ ಮತ್ತು ಬಲಗೈ ರಟ್ಟೆಗೆ ಒಳಪೆಟ್ಟು ಬಲಸೊಂಟಕ್ಕೆ ಒಳಪೆಟ್ಟು, ಎಡಗಾಲ ಮೋಣಕಾಲಿಗೆ ತೆರಚಿದ ಗಾಯ ಮತ್ತು ಒಳಪೆಟ್ಟು ಗಾಯಾಳು ನೂರು ಜಾನ್ ಬೀ ನಧಾಫ್ ಇವರಿಗೆ ತಲೆಯ ಹಿಂಬಾಗ ಒಳಪೆಟ್ಟು, ಲಕ್ಷ್ಮವ್ವ ಕವಳಕೇರಿ ಇವರಿಗೆ ಯಾವುದೇ ಗಾಯಗಳಾಗಿರುವದಿಲ್ಲಾ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ  ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 75/2016 ಕಲಂ: 341, 323, 355, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:-23-03-2016 ರಂದು ಸಾಯಂಕಾಲ 7-15 ಗಂಟೆಗೆ ಪಿರ್ಯಾದಿದಾರರಾದ ನರಸಪ್ಪ ತಂದಿ ಈರಪ್ಪ ಅಗಸಿಮುಂದಿನ ವಯಾ-44 ವರ್ಷ ಜಾ. ಕುರಬರು - ಒಕ್ಕಲುತನ ಸಾ. ಬರುಗೂರು ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೆನಂದರೆ , ಬರಗೂರು ಸೀಮಾ ಸರ್ವೆ ನಂ 56 ನೆದ್ದರಲ್ಲಿ ಪಿರ್ಯಾದಿದಾರರ 6 ಎಕರೆ 5 ಗುಂಟೆ ಜಮೀನು ಇದ್ದು ಜಮೀನಿನಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಕುಡಿಯುವ ನೀರಿನ ಸಲುವಾಗಿ ವಿಧ್ಯೂತ್ತ ಮೋಟಾರ್ ಕುಡಿಸಿದ್ದು ಪಿರ್ಯಾದಿದಾರರ ಜಮೀನಿನ ಸಮೀಪದಲ್ಲಿ   ಯಂಕಪ್ಪ ತಂದಿ ಗ್ಯಾನಪ್ಪ  ವಯಾ- 34 ವರ್ಷ ಜಾ- ಕುರಬರ - ಒಕ್ಕಲುತನ ಸಾ-ಬರಗೂರ್ ಈತನ ಜಮೀನು ಇದ್ದು ಇತನು ತನ್ನ ಹೊಲಕ್ಕೆ ನೀರು ಬಿಟ್ಟುಕೊಳ್ಳುವ ಸಲುವಾಗಿ ಪಿರ್ಯಾದಿದಾರರ ಹೊಲದಲ್ಲಿ ಇದ್ದ ವಿಧ್ಯೂತ್ ಮೋಟಾರ್ ಕ್ಕೆ ವಿಧ್ಯತ್ ಸಂಪರ್ಕ ಹಾಕಿದ್ದರಿಂದ ಹಿಂದೆ ಒಬ್ಬ ಓವರ್ ಲೋಡ್ ಆಗಿ ಗ್ರಾಮ ಪಂಚಾಯಿತಿ ಮೋಟಾರ್ ಸುಟ್ಟು ಹೋಗಿದ್ದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಸದರಿ ಯಂಕಪ್ಪನಿಗೆ ಕರೆಯಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾಗಿನಿಂದ ಬಿಟ್ಟಿದ್ದನು ನಂತರ ದಿನಾಂಕ:-22-03-2016 ರಂದು ಮತ್ತೆ ಸದರಿ ಯಂಕಪ್ಪ ಈತನು ತನ್ನ ಹೊಲಕ್ಕೆ ನೀರು ಬಿಡುವ ಸಲುವಾಗಿ ಮತ್ತೆ ವಿಧ್ಯುತ್ ಸಂಪರ್ಕ ಕೊಟ್ಟಿದ್ದರಿಂದ ಪಿರ್ಯಾದಿದಾರರು ಪಂಚಾಯಿತಿ ಗ್ರಾಮ ಸದಸ್ಯರಿಗೆ ವಿಷಯ ತಿಳಿಸಿದ್ದರಿಂದ ಸದರಿಯವರು ಕೆ..ಬಿಯವರಿಗೆ ಮಾಹಿತಿ ನೀಡಿ ರಾತ್ರಿ 9-00 ಗಂಟೆಯ ಸುಮಾರಿಗೆ ನಾನು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ಪ, ಮರಿಯಪ್ಪ ತಿಡಿಗೋಳ, ಲಿಂಗಪ್ಪ ಗೌರಿಪೂರ ಇವರು ಗ್ರಾಮ ಪಂಚಾಯಿತಿ ವಿಧ್ಯತ್ ಕೆಲಸ ಮಾಡುವ ಹೊನ್ನೂರ ಸಾಬ ಇವರು ಬಂದು ಯಂಕಪ್ಪ ಈತನು ಹಾಕಿದ್ದ ವಿಧ್ಯತ್ ಸಂಪರ್ಕವನ್ನು ಕಟ್ ಮಾಡಿಸಿದ ವಿಷಯ ತಿಳಿದು ಯಂಕಪ್ಪ ಈತನೊಂದಿಗೆ ಮರಿಯಪ್ಪ ಜಂತಕಲ್, ಕೊಂಚಗೇರೆಪ್ಪ ಕುರಿ ಎಲ್ಲರೂ ಕೂಡಾ ಬಂದು ಲೇ ಸೂಳೆ ಮಕ್ಕಳೆ ಅಂತಾ ಅವಚ್ಯವಾಗಿ ಬೈದಾಡಿದನು ಆಗ ಪಿರ್ಯಾದಿದಾರರು ರೀತಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವಚ್ಯವಾಗಿ ಬೈದಾಡಿದರೆ ಹೇಗೆ ಅಂತಾ ಕೇಳಿದಕ್ಕೆ ಯಂಕಪ್ಪ ಈತನು ತನ್ನ ಎಡಗಾಲಿನ ಚಪ್ಪಲಿ ತೆಗದುಕೊಂಡು ಎಡ ಕಪಾಳಕ್ಕೆ ಹೊಡೆದರು ಮರಿಯಪ್ಪ ಮತ್ತು ಕೊಂಚಗೇರಿ ಇವರು ಬಂದು ಕೈಯಿಂದ ಕಪಾಳಕ್ಕೆ, ಕಾಲಿನಿಂದ ಒದೆಯ ಹತ್ತಿದರು, ಸೂಳೆ ಮಗ ಅಂತಾ ಅವಚ್ಯವಾಗಿ ಬೈದಾಡಿ, ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   

0 comments:

 
Will Smith Visitors
Since 01/02/2008