Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 22, 2016

ATM Machine stolen.

ಎ.ಟಿ.ಎಂ. ಮಷಿನ್ ಕಳವು ಪ್ರಕರಣ:

ದಿನಾಂಕ – 22-03-2016  ರಂದು ಬೆಳಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಿದ್ದಲಿಂಗಯ್ಯ ತಂದಿ ಮಲ್ಲಯ್ಯ ಹಿರೇಮಠ ವಯಾ- 25 ವರ್ಷ ಜಾ- ಜಂಗಮ – ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್. ಕ್ಯಾಶ್  ಮ್ಯಾನೇಜ್ಮೆಂಟ್  ಕೆಲಸ ಸಾ- ವಡ್ಡರಹಟ್ಟಿ ತಾ- ಗಂಗಾವತಿ  ಇವರು ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ಒಂದು ವರ್ಷದಿಂದ ಮರ್ಲಾನಹಳ್ಳಿಯಲ್ಲಿ ರಾಯಚೂರ್- ಗಂಗಾವತಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ  ಸಿ.ಜಯರಾಮ ತಂದಿ ನಾರಾಯಣಪ್ಪ ಇವರ ಬಿಲ್ಡಿಂಗ್ ದಲ್ಲಿ  ಟಾಟಾ ಇಂಡಿಕ್ಯಾಶ್  ಎ.ಟಿ.ಎಮ್. ಯಂತ್ರವನ್ನು ಅಳವಡಿಸಲಾಗಿದೆ. ಸದರ್ ಎ.ಟಿ.ಎಮ್. ಯಂತ್ರದ  ಐ.ಡಿ. ನಂ-0387 ಅಂತಾ ಇರುತ್ತದೆ.  ಸದರ ಎ.ಟಿ.ಎಮ್.ಗೆ  ದಿನಾಂಕ : 21-03-2016 ರಂದು  ನಮ್ಮ ಹೆಡ್ ಆಫೀಸಿನಿಂದ  ಮರ್ಲಾನಹಳ್ಳಿಯ .ಎ.ಟಿ.ಎಮ್.ಗೆ  500=00 ರೂ.  ಮುಖ ಬೆಲೆಯ  ಒಂದು ಲಕ್ಷ ರೂಪಾಯಿಗಳನ್ನು  ಎಕ್ಸಸ್ ಬ್ಯಾಂಕಿನಿಂದ ಪಡೆದು  ಹಣ ಹಾಕುವಂತೆ ತಿಳಿಸಿದ್ದರಿಂದ  ನಾವು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಬಂದು ಹಣವನ್ನು ಬಂದು ಸಂದಾಯ ಮಾಡಿದ್ದೇವು. ಈ ಮೊದಲು ಎ.ಟಿ.ಎಮ್.ದಲ್ಲಿ  500 ರೂ. ಮುಖಬೆಲೆಯ 1,55,500=00. ಹಾಗೂ 100 ರೂ. ಮುಖಬೆಲೆಯ 41,000=00 ಎರಡೂ ಸೇರಿ 1,96,500=00 ಹಾಗೂ ದಿನಾಂಕ : 21-03-2016 ರಂದು ಸಂದಾಯ ಮಾಡಿದ ಹಣ ಸೇರಿ ಒಟ್ಟು 2,96,500=00 ರೂ.ಗಳನ್ನು ಜಮಾ ಇದ್ದ ಬಗ್ಗೆ ನಮ್ಮ ಹೆಡ್ ಆಫೀಸಿಗೆ ವರದಿ ಮಾಡಿ ಸಂದೇಶ ಕಳುಹಿಸಿದೇವು.ಇಂದು ದಿನಾಂಕ : 22-03-2016 ರಂದು  ಬೆಳಗ್ಗೆ 9-00 ಗಂಟೆಯ ಸುಮಾರಿಗೆ ಮರ್ಲಾನಹಳ್ಳಿ ಜನರು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಮರ್ಲಾನಹಳ್ಳಿಯ ನಮ್ಮ ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್.ಯಂತ್ರ ಹಣ ಸಮೇತ ಕಳ್ಳತನವಾಗಿರುತ್ತದೆ.  ಯಾರೋ ಕಳ್ಳರು ದಿನಾಂಕ : 21-03-2016 ರಂದು ರಾತ್ರಿ 12-30 ರಿಂದಾ ದಿನಾಂಕ : 22-03-2016 ರಂದು 04-00 ಎ.ಎಮ್. ನಡುವಿನ ಅವದಿಯಲ್ಲಿ ಮರ್ಲಾನಹಳ್ಳಿಯ ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್.ದಲ್ಲಿಯ ಒಳಗಿನ ಸಿ.ಸಿ.ಕ್ಯಾಮರ್ ಝಖಂಗೊಳಿಸಿ ಎ.ಟಿ.ಎಮ. ಮಷಿನ್ ಸಮೇತ ಹಾಗೂ ರೂ. 2,66,500=00 ಕಳವುಮಾಡಿಕೊಂಡು ಹೋಗಿರುತ್ತಾರೆ. ಈ ಸ್ಥಳಕ್ಕೆ ಎಸ್.ಪಿ. ಕೊಪ್ಪಳರವರು ಭೇಟಿನೀಡಿ ಅಪರಾಧಿಗಳನ್ನು ಪತ್ತೇ ಹಚ್ಚುವ ಕುರಿತು ಸಿ.ಪಿ.ಐ. ಗಂಗಾವತಿ ಗ್ರಾಮೀಣ ನೇತೃತ್ವದಲ್ಲಿ  ವಿಶೇಷ ತನಿಖಾ ತಂಡವನ್ನು ರಿಚಿಸಿರುತ್ತಾರೆ.

0 comments:

 
Will Smith Visitors
Since 01/02/2008